ಧರ್ಮಸ್ಥಳದಲ್ಲಿ ಎಷ್ಟು ಕಾರುಗಳಿವೆ? : ಬೆರಗುಗೊಳಿಸುತ್ತದೆ ಶ್ರೀಗಳ ಕಾರ್ ಜ್ಞಾನ
Recommended Video
ಸಾಮಾನ್ಯವಾಗಿ ಸ್ಟಾರ್ ಗಳಿಗೆ ಕಾರ್ ಕ್ರೇಜ್ ಇರುವುದನ್ನು ನೋಡಿದ್ದೇವೆ. ಆದರೆ, ಅದೇ ರೀತಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗಡೆ ಅವರಿಗೂ ಕಾರ್ ಗಳು ಅಂದರೆ ಬಹಳ ಇಷ್ಟ.
ವಿರೇಂದ್ರ ಹೆಗಡೆ ರವರು ಅಂದರೆ ಪೂಜೆ, ದೇವಸ್ಥಾನ, ಭಕ್ತಿ, ದಾನ, ಧರ್ಮ ಇಷ್ಟೇ ಎಂದುಕೊಂಡಿದ್ದ ಎಷ್ಟೋ ಜನಕ್ಕೆ 'ವಿಕೇಂಡ್ ವಿತ್ ರಮೇಶ್' ಸಂಚಿಕೆ ಹೊಸ ಹೊಸ ವಿಷಯಗಳನ್ನು ತಿಳಿಸಿದೆ. ಅದರಲ್ಲಿ ಒಂದು ಶ್ರೀಗಳು ಕಾರ್ ಜ್ಞಾನ.
ಒಂದು ಕಾರ್ ನೋಡಿದರೆ ಸಾಕು, ಇದು ಯಾವ ದೇಶದ ಕಾರು, ಇದರ ಹಾರ್ಸ್ ಪವರ್ ಎಷ್ಟು, ಅದರ ವಿಶೇಷಗಳು ಏನು ಹೀಗೆ ಎಲ್ಲವನ್ನು ಪಟ್ಟ ಪಟ್ಟ ಎಂದು ವಿರೇಂದ್ರ ಹೆಗಡೆಯವರು ಕೇಳಿ ಬಿಡುತ್ತಾರೆ. ಧರ್ಮಸ್ಥಳದ ಕಾರುಗಳು ಹಾಗೂ ವಿರೇಂದ್ರ ಹೆಗಡೆಯವರ ಕಾರ್ ಜ್ಞಾನ ಕಾರ್ಯಕ್ರಮದ ವೀಕ್ಷಕರನ್ನು ಬೆರಗುಗೊಳಿಸಿತು. ಮುಂದೆ ಓದಿ...

ಧರ್ಮಸ್ಥಳ ಟು ಬಾಂಬೆ
ಚಿಕ್ಕ ವಯಸ್ಸಿನಿಂದ ಕಾರ್ ಗಳ ಬಗ್ಗೆ ವಿರೇಂದ್ರ ಹೆಗಡೆಯವರಿಗೆ ಆಸಕ್ತಿ ಜಾಸ್ತಿ. ಕಾಲೇಜಿನಲ್ಲಿ ಇರುವಾಗಲೇ ಅವರು ಕಾರ್ ಓಡಿಸಲು ಕಲಿತಿದ್ದರು. 19ನೇ ವಯಸ್ಸಿನಲ್ಲಿಯೇ ಅವರು ತಮ್ಮ ತಂದೆಯನ್ನು ಧರ್ಮಸ್ಥಳದಿಂದ ಬಾಂಬೆಗೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಎರಡೂ ಕಡೆಯ ಪ್ರಯಾಣದಲ್ಲಿ ಕಾರ್ ಅನ್ನು ಅವರೇ ಡ್ರೈವ್ ಮಾಡಿದ್ದರು.

5 ಗಂಟೆಗಳಲ್ಲಿ ಧರ್ಮಸ್ಥಳದಿಂದ ಬೆಂಗಳೂರಿಗೆ
ಯುವಕರಾಗಿದ್ದಾಗ ವಿರೇಂದ್ರ ಹೆಗಡೆಯವರಿಗೆ ವೇಗವಾಗಿ ಕಾರ್ ಓಡಿಸುವುದು ಬಹಳ ಇಷ್ಟ ಆಗುತ್ತಿತಂತೆ. ಧರ್ಮಸ್ಥಳದಿಂದ ಬೆಂಗಳೂರಿಗೆ ಕೇವಲ 5 ಗಂಟೆಗಳಲ್ಲಿ ಬರುತ್ತಿದ್ದರಂತೆ. ಆ ಕಾಲದ ರಸ್ತೆಗಳಲ್ಲಿ 298 ಕಿಲೋ ಮೀಟರ್ ಗಳನ್ನು ಐದು ಗಂಟೆಗಳಲ್ಲಿ ಕ್ರಮಿಸುತ್ತಿದ್ದರಂತೆ. ಎಲ್ಲರೂ ವಯಸ್ಸಿನಲ್ಲಿ ಈ ರೀತಿ ಸ್ವೀಡ್ ಆಗಿ ಕಾರ್ ಓಡಿಸುತ್ತಾರೆ ಎಂದು ನಕ್ಕರು ವಿರೇಂದ್ರ ಹೆಗಡೆ.

ಧರ್ಮಸ್ಥಳದಲ್ಲಿ 80 ಕಾರುಗಳು ಇವೆ
ಧರ್ಮಸ್ಥಳದಲ್ಲಿ ಸುಮಾರು 80 ಕಾರುಗಳು ಇವೆಯಂತೆ. ಬೇರೆ ಬೇರೆ ದೇಶದ ವಿಧ ವಿಧವಾದ ಕಾರ್ ಗಳು ಅಲ್ಲಿವೆ. ಅಲ್ಲಿನ ಕಾರ್ ಸಂಗ್ರಹಾಲಯವನ್ನು ಜನರು ಕೂಡ ನೋಡಬಹುದಾಗಿದೆ. ಜನರ ವೀಕ್ಷಣೆಗಾಗಿ ಇಟ್ಟಿರುವ ಈ ಕಾರುಗಳು, ನೋಡಲು ಮಾತ್ರವಲ್ಲ ರನ್ನಿಂಗ್ ಕಂಡಿಷನ್ ನಲ್ಲಿ ಇವೆ.

ವಿರೇಂದ್ರ ಹೆಗಡೆ ಅವರ ಕಾರಿನ ಜ್ಞಾನ
ವಿರೇಂದ್ರ ಹೆಗಡೆ ಅವರ ಕಾರಿನ ಜ್ಞಾನ ನಿಜಕ್ಕೂ ಬೆರಗು ಗೊಳಿಸುತ್ತದೆ. ಕಾರ್ ಗಳ ಚಿತ್ರ ನೋಡಿ ಅದರ ಪೂರ್ಣ ವಿವರವನ್ನು ನೀಡುತ್ತಾರೆ. 'ವಿಕೇಂಡ್ ವಿತ್ ರಮೇಶ್'ನಲ್ಲಿಯೂ ಕೆಲ ಕಾರುಗಳ ಚಿತ್ರಗಳನ್ನು ತೋರಿಸಿದ್ದು, ಅವರ ಬಗ್ಗೆ ಶ್ರೀಗಳು ವಿವರ ನೀಡಿದರು. ಬೇರೆ ಬೇರೆ ದೇಶದ ಕಾರುಗಳು ಮತ್ತು ತಂತ್ರಜ್ಙಾನದ ಬದಲಾವಣೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ಮೈಸೂರು ಮಹಾರಾಜರಿಂದ ಖರೀದಿ ಮಾಡಿದ್ದ ಕಾರು
ಇಂಗ್ಲೆಂಡ್ ರಾಣಿಯ ಕಾರನ್ನು ಮೈಸೂರು ಮಹಾರಾಜರು ಖರೀದಿ ಮಾಡಿದ್ದರಂತೆ. ಆ ಕಾರನ್ನು ಅವರು ಮಾರುವ ವೇಳೆ ವಿರೇಂದ್ರ ಹೆಗಡೆಯವರು ಕೊಂಡುಕೊಂಡಿದ್ದರಂತೆ. ಆ ಕಾಲದಲ್ಲಿಯೇ ಕಾರಿಗೆ 40 ಸಾವಿರ ರೂಪಾಯಿ ಆಗಿತಂತೆ. ಆ ಕಾರಿನಲ್ಲಿ ಧರ್ಮಸ್ಥಳದಿಂದ ಬೆಂಗಳೂರಿಗೆ ಬರಲು 400 ಲೀಟರ್ ಪೆಟ್ರೋಲ್ ಬೇಕಾಗುತ್ತದೆಯಂತೆ

ಕಾರ್ಯಕ್ರಮದಲ್ಲಿ ಕಾರ್ ಓಡಿಸಿದ ವಿರೇಂದ್ರ ಹೆಗಡೆ
'ವಿಕೇಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಅತಿಥಿಗಳಿಗೆ ಸೆಟ್ ನಿಂದ ಹೊರಗೆ ಕರೆದುಕೊಂದು ಹೋಗಿ ಸರ್ಪೈಸ್ ನೀಡಲಾಗಿತ್ತು. ರಮೇಶ್ ರನ್ನು ಕೂರಿಸಿಕೊಂಡು ವಿರೇಂದ್ರ ಹೆಗಡೆ ರವರು ಒಂದು ರೌಂಡ್ ಕಾರ್ ಓಡಿಸಿದರು. ಕಾರ್ ನ ಬಾಹ್ಯ ಸೌಂದರ್ಯ ಮಾತ್ರವಲ್ಲದೆ ಅದರ ಒಳಗಿನ ಯಂತ್ರೋಪಕರಣ ಬಗ್ಗೆ ತಿಳಿದುಕೊಂಡವನೇ ನಿಜವಾದ ಕಾರ್ ಪ್ರೇಮಿ ಎಂದರು ವಿರೇಂದ್ರ ಹೆಗಡೆ.


Click it and Unblock the Notifications











