ಡಾ ವಿಷ್ಣುವರ್ಧನ್ ಭಕ್ತಿ ಬಗ್ಗೆ ವೀರೇಂದ್ರ ಹೆಗ್ಗಡೆ ಹೇಳಿದ ಕಥೆ ಕೇಳಿ

Recommended Video

Weekend with Ramesh Season 4: ಡಾ ವಿಷ್ಣುವರ್ಧನ್ ಹಾಗು ಡಾ ರಾಜ್ ಕುಮಾರ್ ಬಗ್ಗೆ ಮಾತನಾಡಿದ ಡಾ ವೀರೇಂದ್ರ ಹೆಗಡೆ

ಧರ್ಮಸ್ಥಳಕ್ಕೂ ಸಿನಿಮಾರಂಗದವರಿಗೂ ಅವಿನಾಭಾವ ಸಂಬಂಧ. ಡಾ ರಾಜ್ ಕುಮಾರ್, ವಿಷ್ಣುವರ್ಧನ್ ಅವರಿಂದ ಹಿಡಿದು, ಇಂದಿನ ನಟರವರೆಗೂ ಎಲ್ಲರೂ ಆ ಕ್ಷೇತ್ರಕ್ಕೆ ಭಕ್ತರೇ. ಅದರಲ್ಲೂ ಅಣ್ಣಾವ್ರು ಮತ್ತು ವಿಷ್ಣುವರ್ಧನ್ ಅವರಿಗೆ ಈ ಕ್ಷೇತ್ರದ ಮೇಲೆ ಹೆಚ್ಚು ಅಭಿಮಾನವಿತ್ತು.

ಈ ಬಗ್ಗೆ ಸ್ವತಃ ವೀರೇಂದ್ರ ಹೆಗ್ಗಡೆ ಅವರೇ ಹೇಳಿದ್ದಾರೆ. 'ರಾಜ್ ಕುಮಾರ್ ಅವರು ಧರ್ಮಸ್ಥಳಕ್ಕೆ ಬಹಳ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು. ಅವರ ಸಿನಿಮಾವೊಂದು ಕೂಡ ಅಲ್ಲಿ ಚಿತ್ರೀಕರಣ ಆಗಿದೆ' ಎಂದು ರಾಜ್ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು, ರಾಜ್ ಮತ್ತು ವಿಷ್ಣು ಅವರ ಭಕ್ತಿ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಯಶ್, ಪುನೀತ್, ರಾಘಣ್ಣ ಹೆಗ್ಗಡೆ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗಿದ್ರೆ, ವಿಷ್ಣು ಬಗ್ಗೆ ಹೆಗ್ಗಡೆ ಹೇಳಿದ ಕಥೆ ಏನು? ಮುಂದೆ ಓದಿ...

ಕಾಲ ಬಳಿ ಕೂರುತ್ತಿದ್ದ ವಿಷ್ಣುವರ್ಧನ್

ಕಾಲ ಬಳಿ ಕೂರುತ್ತಿದ್ದ ವಿಷ್ಣುವರ್ಧನ್

ವಿಷ್ಣುವರ್ಧನ್ ಅವರ ಬಗ್ಗೆ ಹೇಳುತ್ತಾ 'ವಿಷ್ಣುವರ್ಧನ್ ಬಹಳ ಗೌರವ ಕೊಡುತ್ತಿದ್ದರು. ಎಲ್ಲಿಯವರೆಗೂ ಅಂದ್ರೆ ಅವರು ಬಂದಾಗ 'ನೀವು ಕುರ್ಚಿಯಲ್ಲಿ ಕುಳಿತುಕೊಳ್ಳಿ ಅಂದ್ರೆ ಇಲ್ಲ ಇಲ್ಲ ಎಂದು ಕಾಲು ಬಳಿಯೇ ಕೂರುತ್ತಿದ್ದರು'' ಎಂದು ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ

ಊಟಕ್ಕೂ ಹೋಗುತ್ತಿರಲಿಲ್ಲ

ಊಟಕ್ಕೂ ಹೋಗುತ್ತಿರಲಿಲ್ಲ

ಹೀಗೆ ಮಾತನಾಡುತ್ತಾ ಕೂರುತ್ತಿದ್ದ ವಿಷ್ಣುವರ್ಧನ್, 'ಆಮೇಲೆ ನಿಮಗೆ ಸಮಯ ಆಯ್ತು, ಊಟಕ್ಕೆ ಹೋಗಿ ಅಂದ್ರೆ ಇಲ್ಲ ಗುರುಗಳೇ ನೀವು ಮಾತಾಡಿ, ನಾನು ಕೇಳ್ತಾ ಇರ್ತಿನಿ' ಅಂತ ಇರ್ತಿದ್ರು' ಎಂದು ಅವರ ಭಕ್ತಿಯ ಬಗ್ಗೆ ವಿವರಿಸಿದರು.

ಸಿನಿಮಾರಂಗದವರು ಪ್ರದರ್ಶನ ಮಾಡಲ್ಲ

ಸಿನಿಮಾರಂಗದವರು ಪ್ರದರ್ಶನ ಮಾಡಲ್ಲ

''ಸಿನಿಮಾದವರು ತುಂಬಾ ಜನರ ಬರ್ತಾರೆ, ಆದ್ರೆ ಇಲ್ಲಿ ಬಂದು ಯಾರೂ ಪ್ರದರ್ಶನ ಮಾಡಲ್ಲ. ಬಹಳ ಸಂಯಮದಿಂದ, ಸೌಜನ್ಯದಿಂದ ಬಂದು ದರ್ಶನ ಮಾಡಿಕೊಂಡಿ ಹೋಗ್ತಾರೆ'' ಎಂದು ವೀರೇಂದ್ರ ಹೆಗ್ಗಡೆ ಅವರು ಹೇಳಿದರು.

ಸ್ಟಾರ್ ನಟರು ಮೆಚ್ಚುಗೆ

ಸ್ಟಾರ್ ನಟರು ಮೆಚ್ಚುಗೆ

ಇನ್ನು ವೀಕೆಂಡ್ ವಿತ್ ರಮೇಶ್ ಸಾಧಕರ ಕುರ್ಚಿಯಲ್ಲಿ ಕೂತಿದ್ದ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಮಾತನಾಡಿದ ನಟ ಯಶ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಎಲ್ಲರೂ ಧರ್ಮಸ್ಥಳದ ಪುಣ್ಯ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

More from Filmibeat

English summary
Dharmasthala dharmadhikari veerendra heggade spoke about kannada legendary actor dr vishnuvardhan and dr rajkumar in weekend with ramesh 4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X