ಆಸೀಸ್ ಮಾಸ್ಟರ್ ಚೆಫ್ ಬಾಯಲ್ಲಿ ಕನ್ನಡ ನುಡಿ
ಕಸ್ತೂರಿ ಕನ್ನಡ ನುಡಿ ವಿಶ್ವದೆಲ್ಲೆಡೆ ತನ್ನ ಕಂಪು ಮತ್ತೊಮ್ಮೆ ಬೀರುತ್ತಿದೆ. ಬ್ರಿಟಿಷ್- ಆಸ್ಟ್ರೇಲಿಯಾದ 'ಆಹಾರ' ಪತ್ರಕರ್ತ, ರೆಸ್ಟೋರೆಂಟ್ ವಿಮರ್ಶಕ ಮ್ಯಾಟ್ ಪ್ರೆಸ್ಟನ್ ಅವರ ಬಾಯಲ್ಲಿ ಕನ್ನಡ ನುಡಿ ಹೊರ ಬಿದ್ದಿದೆ. ಹಲವು ವರ್ಷಗಳ ಹಿಂದೆ ಮಾಸ್ಟರ್ ಚೆಫ್ ಆಫ್ ಆಸ್ಟ್ರೇಲಿಯಾ ರಿಯಾಲಿಟಿ ಶೋನ ಪ್ರಮೋಷನಲ್ ವಿಡಿಯೋದಲ್ಲಿ ಪ್ರೆಸ್ಟನ್ ಕನ್ನಡದಲ್ಲಿ ಮಾತನಾಡಿದ್ದಾರೆ. ಈ ವಿಡಿಯೊ ತುಣುಕು ಈಗ ಎಲ್ಲೆಡೆ ಜನಪ್ರಿಯತೆ ಗಳಿಸುತ್ತಿದೆ.
ಮಾಸ್ಟರ್ ಚೆಫ್ ಆಫ್ ಆಸ್ಟ್ರೇಲಿಯಾದ ಮೂರನೇ ಕಂತಿನ ಪ್ರಚಾರಕ್ಕಾಗಿ ವಿಡಿಯೋ ಚಿತ್ರೀಕರಿಸಲಾಗಿತ್ತು. 2011ರಲ್ಲಿ ಚಿತ್ರೀಕರಿಸಿದ್ದ ಈ ಪ್ರೋಮೋದಲ್ಲಿ ಪ್ರೆಸ್ಟನ್ ಅವರು ದಕ್ಷಿಣ ಭಾರತೀಯ ಭಾಷೆ, ವಿಶ್ವದ ಪುರಾತನ ಭಾಷೆಗಳಲ್ಲಿ ಒಂದಾದ ಕನ್ನಡದಲ್ಲಿ 'ಆರ್ಡರ್' ಮಾಡುತ್ತಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಮತ್ತೊಮ್ಮೆ ಕಿಚ್ಚು ಎಬ್ಬಿಸುತ್ತಿದೆ. ಕನ್ನಡ ಪ್ರೇಮಿಗಳು ಹೆಮ್ಮೆಯಿಂದ ಈ ವಿಡಿಯೋ ತುಣುಕು ಹಂಚುತ್ತಿದ್ದಾರೆ.

ಇಷ್ಟಕ್ಕೂ ವಿಡಿಯೋದಲ್ಲಿ ಏನಿದೆ?: ವಿಡಿಯೋದಲ್ಲಿ ಸೂಟ್ ಧಾರಿ ಮ್ಯಾಟ್ ಪ್ರೆಸ್ಟನ್ ಸ್ಥಳೀಯ ಹೋಟೆಲ್ (ಇದು ಯಾವ ಹೋಟೆಲ್ ಎಂಬುದು ಇನ್ನೂ ಚರ್ಚೆಯಲ್ಲಿದೆ?) ಗೆ ಬಂದು ಮಾಣಿಯನ್ನು ಕಂಡು 'ನಂಗೆ ಒಮ್ದು ದೋಸಾ ಬೇಕು' ಎಂದು ಆರ್ಡರ್ ಮಾಡುತ್ತಾರೆ. ವಿದೇಶಿಯೊಬ್ಬನ ಬಾಯಿಂದ ಕನ್ನಡ ಮಾತು ಕೇಳಿ ಮಾಣಿ ಶಾಕ್ ಆಗಿ ಕೈಲಿದ್ದ ಪ್ಲೇಟ್ ಕೆಳಗೆ ಬೀಳಿಸುತ್ತಾನೆ.
ನಂತರ ಪ್ರೆಸ್ಟನ್ that's the real dosa. Love for good foods knows no boundaries." ಎಂದು ಹೇಳುತ್ತಾರೆ. ಪ್ರೆಸ್ಟನ್ ಮಾತು ನಿಜ ಅಲ್ಲವೇ.
<center><iframe width="640" height="480" src="//www.youtube.com/embed/HpBCIdaefbY" frameborder="0" allowfullscreen></iframe></center>
ಇದರ ಜೊತೆಗೆ ಇನ್ನೊಂದು ಚರ್ಚೆ ಆರಂಭವಾಗಿದೆ. ವಿಡಿಯೋ ಕಾಮೆಂಟ್ ಹಾಕಿರುವ ಅಭಿಮಾನಿಗಳು ಇದು 'ದೋಸೆ', ದೋಸಾ ಅಲ್ಲ ಎಂದು ವಾದಿಸಿದ್ದಾರೆ. ಕೆಲವರು ಸಮರ್ಥನೆ ಕೊಟ್ಟಿದ್ದು, ಕನ್ನಡದಲ್ಲಿ 'ದೋಸೆ', ತಮಿಳಿನಲ್ಲಿ 'ದೋಸೈ', ಮಲೆಯಾಳಂನಲ್ಲಿ 'ದೋಶಾ' ಹಾಗೆ ಇಂಗ್ಲೀಷ್ ನಲ್ಲಿ 'ದೋಸಾ' ಹೀಗಾಗಿ ಪ್ರೆಸ್ಟನ್ ಉಚ್ಚಾರಣೆ ಸರಿಯಾಗೇ ಇದೆ ಎಂದಿದ್ದಾರೆ. ಯಾವುದಕ್ಕೂ ವಿಡಿಯೋ ತುಣುಕು ಒಮ್ಮೆ ನೋಡಿ
ಭಾರತದಲ್ಲೂ ಸ್ಟಾರ್ ಪ್ಲಸ್ ನಲ್ಲಿ ಮಾಸ್ಟರ್ ಚೆಫ್ ಇಂಡಿಯಾ ಕಾರ್ಯಕ್ರಮ ಈ ಹಿಂದೆ ಯಶಸ್ವಿಯಾಗಿತ್ತು, ನಟ ಅಕ್ಷಯ್ ಕುಮಾರ್ ನಿರೂಪಕ, ಜಡ್ಜ್ ಆಗಿ ಕಾರ್ಯನಿರ್ವಹಿಸಿದ್ದರು.


Click it and Unblock the Notifications











