ಥಾಯ್ಲೆಂಡ್‌ನಲ್ಲಿ ಆಯಿತು ಕಿರುತೆರೆ ನಟ-ನಟಿಯ ಲವ್ವಿ ಡವ್ವಿ ಬಹಿರಂಗ ; ಕಿಸ್ಸಿಂಗ್ ವಿಡಿಯೋ ವೈರಲ್...!

ಈಗ ಕಾಲ ಬದಲಾಗಿದೆ. ಜನಪ್ರಿಯತೆಯ ಮಾನದಂಡಕ್ಕೆ ಬೆಳ್ಳಿತೆರೆ, ಕಿರುತೆರೆ ಎಂಬ ಭೇದ ಅಳಿಯುತ್ತ ಬಂದಿದೆ. ಸಿನೆಮಾ ಹೀರೋಗಳಿಗೆ ಇರುವಷ್ಟೇ, ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ಅಭಿಮಾನಿಗಳು ಕಿರುತೆರೆಯ ಸ್ಟಾರ್‌ಗಳಿಗೆ ಇದ್ದಾರೆ. ಇದಕ್ಕೆ ಹಿಂದಿ ಕಿರುತೆರೆಯ ಕುಶಾಲ್ ಟಂಡನ್ ಹಾಗೂ ನಟಿ ಶಿವಾಂಗಿ ಜೋಶಿ ಅತ್ಯುತ್ತಮ ಉದಾಹರಣೆ.

ಹೌದು.. ಬರ್ಸಾತೇ ಮೌಸಮ್ ಪ್ಯಾರ್ ಕಾ ಧಾರಾವಾಹಿಯಲ್ಲಿ ಜೋಡಿಯಾಗಿ ಕಾಣಿಸಿಕೊಂಡು ಮೋಡಿ ಮಾಡಿದ್ದವರು ಕುಶಾಲ್ ಟಂಡನ್ ಮತ್ತು ಶಿವಾಂಗಿ ಜೋಶಿ. ಆ ನಂತರ ಬಿಗ್‌ಬಾಸ್ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ಇವರಿಬ್ಬರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಅನ್ನುವ ಅನುಮಾನ ಅನೇಕರಲ್ಲಿದೆ. ಆದರೆ.. ಕಾಲ..ಕಾಲಕ್ಕೆ.. ಈ ಅನುಮಾನ ದೂರ ಮಾಡುವ ಪ್ರಯತ್ನ ಮಾಡ್ತಾನೇ ಬಂದಿರುವ ಇಬ್ಬರು, ನಾವೂ ಜಸ್ಟ್ ಫ್ರೆಂಡ್ಸ್‌ ಅಷ್ಟೇ ಎಂದು ಹೇಳುತ್ತಾ ಬಂದಿದ್ದಾರೆ.

video-of-kushal-tandon-kissing-shivangi-joshi-goes-viral-amidst-dating-rumors

ಆದರೆ ಈಗ ಇವರಿಬ್ಬರ ಪ್ರೇಮದ ಕುರುಹು ಥಾಯ್ಲೆಂಡ್‌ನಲ್ಲಿ ಪತ್ತೆಯಾಗಿದೆ. ಹೀಗೊಂದು ಸುದ್ದಿ ತೇಲಿ ಬಂದಿದೆ. ಇಬ್ಬರ ಹೆಸರಿನಲ್ಲಿ ಥಾಯ್ಲೆಂಡ್‌ನಿಂದ ಬಂದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಥಾಯ್ಲೆಂಡ್‌ನಲ್ಲಿ ನಡೆದ ಬಾಕ್ಸಿಂಗ್ ಪಂದ್ಯವನ್ನ ಕಣ್ತುಂಬಿಕೊಂಡಿರುವ ಇಬ್ಬರು ಇದೇ ಸಮಯದಲ್ಲಿ ಚುಂಬಿಸಿದ್ದಾರೆ. ಚುಂಬನದ ದೃಶ್ಯವನ್ನ ಅಲ್ಲಿಯೇ ಇದ್ದ ಇವರ ಅಭಿಮಾನಿಯೊಬ್ಬರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಮೇಲೆ ಲೈಕ್, ಕಮೆಂಟ್ ಮತ್ತು ಶೇರ್‌ಗಳ ಸುರಿಮಳೆಯಾಗ್ತಿದೆ.

video-of-kushal-tandon-kissing-shivangi-joshi-goes-viral-amidst-dating-rumors

ಇನ್ನೂ ವಿಡಿಯೋ ವೈರಲ್ ಆಗ್ತಿದ್ದಂತೆಯೇ ಕೆಲವರು ಕಿಸ್ ಮಾಡ್ತಿರುವ ಈ ಜೋಡಿ ಕುಶಾಲ್ ಟಂಡನ್ ಹಾಗೂ ನಟಿ ಶಿವಾಂಗಿ ಜೋಶಿಯಲ್ಲ ಅನ್ನುವ ವಾದವನ್ನ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದೇ ಥಾಯ್ಲೆಂಡ್‌ನಿಂದ ಕೆಲ ದಿನದ ವೈರಲ್ ಆದ ಫೋಟೋಗಳನ್ನ ಈ ವಿಡಿಯೋ ಜೊತೆ ಹೋಲಿಸಿ ಇಲ್ಲಿ ಮುದ್ದಾಡಿದವರು ಇವರೇ ಅನ್ನುವ ಅಭಿಪ್ರಾಯವನ್ನೂ ಕೂಡ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋ ಸ್ಪಷ್ಟವಿರದ ಕಾರಣ ಇನ್ನೂ ಕೆಲವರಿಗೆ ಗೊಂದಲ ಕಾಡುತ್ತಿದೆ. ಅಂದ್ಹಾಗೇ ಕೆಲ ದಿನದ ಹಿಂದೆ ಇದೇ ಬಾಕ್ಸಿಂಗ್ ಅಖಾಡದಿಂದ ಈ ಜೋಡಿಯ ಫೋಟೋ ಒಂದು ವೈರಲ್ ಆಗಿತ್ತು. ಈಗ ವಿಡಿಯೋ ಸರದಿ

ಒಟ್ನಲ್ಲಿ ಊಹಾಪೋಹಗಳು, ಗಾಳಿಸುದ್ದಿಗಳು ಗ್ಲಾಮರ್ ಜಗತ್ತಿನಲ್ಲಿ ಮತ್ತು ಸೆಲೆಬ್ರೆಟಿಗಳ ಜೀವನದಲ್ಲಿ ಕಾಮನ್ನೋ ಕಾಮನ್ನು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಹೀಗಿದ್ದಾಗ ಎಷ್ಟು ದಿನ ಅಂತ ಕದ್ದು ಮುಚ್ಚಿ ಹಾಲು ಕುಡಿಯಲು ಸಾಧ್ಯ. ಪ್ರೇಮವನ್ನ ಮುಚ್ಚಿಡಲು ಸಾಧ್ಯ. ಇದಕ್ಕೆ ಕುಶಾಲ್ ಟಂಡನ್ ಹಾಗೂ ಶಿವಾಂಗಿ ಜೋಶಿ ಅತ್ಯುತ್ತಮ ಸಾಕ್ಷಿ

More from Filmibeat

English summary
Barsatein Mausam Pyaar Ka Actors Kushal Tandon And Shivangi Joshi Spark Dating Rumours Once Again As Kissing Video Surfaces Online
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X