twitter
    For Quick Alerts
    ALLOW NOTIFICATIONS  
    For Daily Alerts

    ಸರಳ ಪ್ರಶ್ನೆಗೆ ಕನ್ ಪ್ಯೂಸ್ ಮಾಡಿಕೊಂಡು ಆಟದಿಂದ ಹೊರಬಿದ್ದ ಸ್ಪರ್ಧಿ

    By Bharath Kumar
    |

    Recommended Video

    Kannadada Kotyadhipathi Season 3 | episode 12 | Sujatha to win one croe..!| FIlmibeat Kannada

    'ಕನ್ನಡದ ಕೋಟ್ಯಧಿಪತಿ' ಮೂರನೇ ಆವೃತ್ತಿಯ ಮಂಗಳವಾರದ ಸಂಚಿಕೆಯಲ್ಲಿ ವಿದ್ಯಾರಾಣಿ ಎಂಬ ಸ್ಪರ್ಧಿ ಹಾಟ್ ಸೀಟ್ ನಲ್ಲಿ ಕೂತು ಆಟವಾಡಿದರು. ವೃತ್ತಿಯಲ್ಲಿ ಆರ್ಯುವೇದ ವೈದ್ಯೆ ಆಗಿದ್ದ ಅವರು ತುಂಬಾ ಚೆನ್ನಾಗಿ ಆಟ ಆರಂಭಿಸಿದ್ದರು.

    ಮೊದಲ ಐದು ಪ್ರಶ್ನೆಗಳಿಗೆ ತುಂಬಾ ಕಾನ್ಫಿಡೆಂಟ್ ಆಗಿ, ತುಂಬಾ ಸುಲಭವಾಗಿ ಉತ್ತರ ಕೊಟ್ಟು ಥ್ರಿಲ್ ಹೆಚ್ಚಿಸಿದ್ದರು. ಯಾವುದು ಲೈಫ್ ಲೈನ್ ಕೂಡ ಬಳಸಿಕೊಂಡಿರಲಿಲ್ಲ. ಆದ್ರೆ, ಆರನೇ ಪ್ರಶ್ನೆ ಕೇಳಿದಾಗ ಇದಕ್ಕೂ ಇವರು ಉತ್ತರ ಕೊಡ್ತಾರೆ ಬಿಡಿ ಎಂದುಕೊಂಡಿದ್ದರು ಪ್ರೇಕ್ಷಕರು.

    ಆದ್ರೆ, ಅಲ್ಲಿ ಆಗಿದ್ದೇ ಬೇರೆ. ಸುಲಭ ಪ್ರಶ್ನೆಯನ್ನ ಕನ್ ಫ್ಯೂಸ್ ಮಾಡಿಕೊಂಡ ವಿದ್ಯಾರಾಣಿ ಅವರು ಲೈಫ್ ಲೈನ್ ಇದ್ದರೂ, ಹಿಂದೂ ಮುಂದೂ ಯೋಚನೆ ಮಾಡದೆ ತಪ್ಪು ಉತ್ತರ ಕೊಟ್ಟು ಹೊರನಡೆದರು. ಹಾಗಿದ್ರೆ, ವಿದ್ಯಾರಾಣಿಗೆ ಕೈಕೊಟ್ಟ ಆ ಪ್ರಶ್ನೆ ಯಾವುದು.? ಮುಂದೆ ಓದಿ...

    'ಫಾಸ್ಟೆಸ್ಟ್ ಫಿಂಗರ್ ಫಸ್ಟ್' ಪ್ರಶ್ನೆ

    'ಫಾಸ್ಟೆಸ್ಟ್ ಫಿಂಗರ್ ಫಸ್ಟ್' ಪ್ರಶ್ನೆ

    ಮೊದಲಿನಿಂದ ಆರಂಭಿಸಿ, 100 ಮೀಟರ್ ಓಟದ ಪಂದ್ಯದಲ್ಲಿ ಅನುಸರಿಸುವ ಈ ಹಂತಗಳನ್ನು ಸರಿಯಾದ ಕ್ರಮವನ್ನ ಜೋಡಿಸಿ.?
    A ಕೊನೆಯ ಗೆರೆಯನ್ನ ತಲುಪುವುದು
    B ಓಡಲು ಅಣಿಯಾಗಿ ಕರೆ
    C ಆರಂಭಿಕ ಹಂತಕ್ಕೆ ಬರುವುದು
    D ಗುಂಡಿನ ಸದ್ದು

    25 ಲಕ್ಷದ ಪ್ರಶ್ನೆ ನೋಡಿ ಆಟ ಕೈಬಿಟ್ಟ ಮಂಜುಳಾ: ಯಾವುದು ಆ ಪ್ರಶ್ನೆ.?25 ಲಕ್ಷದ ಪ್ರಶ್ನೆ ನೋಡಿ ಆಟ ಕೈಬಿಟ್ಟ ಮಂಜುಳಾ: ಯಾವುದು ಆ ಪ್ರಶ್ನೆ.?

    ಅತಿ ವೇಗವಾಗಿ ಕೊಟ್ಟಿದ್ದು

    ಅತಿ ವೇಗವಾಗಿ ಕೊಟ್ಟಿದ್ದು

    'ಫಾಸ್ಟೆಸ್ಟ್ ಫಿಂಗರ್ ಫಸ್ಟ್' ಪ್ರಶ್ನೆಗೆ ಸರಿಯಾಗಿ ಮತ್ತು ವೇಗವಾಗಿ ಕೊಟ್ಟಿದ್ದು ವಿದ್ಯಾರಾಣಿ.
    C ಆರಂಭಿಕ ಹಂತಕ್ಕೆ ಬರುವುದು
    B ಓಡಲು ಅಣಿಯಾಗಿ ಕರೆ
    D ಗುಂಡಿನ ಸದ್ದು
    A ಕೊನೆಯ ಗೆರೆಯನ್ನ ತಲುಪುವುದು

    ಒಂದೇ ಒಂದು 'ಲೈಫ್ ಲೈನ್' ಬಳಸದೇ ಹಿಮಾನಿ ಗಳಿಸಿದ್ದೆಷ್ಟು.?ಒಂದೇ ಒಂದು 'ಲೈಫ್ ಲೈನ್' ಬಳಸದೇ ಹಿಮಾನಿ ಗಳಿಸಿದ್ದೆಷ್ಟು.?

    ಮೊದಲು ಐದು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ

    ಮೊದಲು ಐದು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ

    ತುಂಬಾ ಆತ್ಮವಿಶ್ವಾಸದಿಂದ ಆಟವಾಡಿ ವಿದ್ಯಾರಾಣಿ ಅವರು ಮೊದಲ ಐದು ಪ್ರಶ್ನೆಗಳಿಗೆ ಸರಿಯಾಗಿ, ಸುಲಭವಾಗಿ, ಸ್ಪಷ್ಟವಾಗಿ ಉತ್ತರ ನೀಡಿದರು. ಯಾವುದೇ ಲೈಫ್ ಲೈನ್ ಬಳಸಿಕೊಂಡಿಲ್ಲ. ಮೊದಲ ಜಗಲಿಕಟ್ಟೆ ದಾಟಿದ ಇವರು 10 ಸಾವಿರ ಖಚಿತ ಮಾಡಿಕೊಂಡರು.

    ಅತಿಯಾದ ಆತ್ಮವಿಶ್ವಾಸದಿಂದ ತಪ್ಪು

    ಅತಿಯಾದ ಆತ್ಮವಿಶ್ವಾಸದಿಂದ ತಪ್ಪು

    ಅತಿಯಾದ ಆತ್ಮವಿಶ್ವಾಸದಿಂದ ಆಟವಾಡುತ್ತಿದ್ದ ವಿದ್ಯಾರಾಣಿ ಅವರು ಆರನೇ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟರು. ಸ್ವಲ್ಪ ಸಮಮಯ ತಗೆದುಕೊಂಡು ಯೋಚನೆ ಮಾಡಿದ್ದರೆ ಬಹುಶಃ ಸರಿ ಉತ್ತರ ಕೊಡುತ್ತಿದ್ದರೋ ಏನೋ. ಅಥವಾ ಲೈಫ್ ಲೈನ್ ಬಳಸಬಹುದಿತ್ತು. ಆದ್ರೆ, ತುಂಬಾ ಕಾನ್ಫಿಡೆಂಟ್ ಆಗಿದ್ದ ಅವರು ಅದೇ ಸರಿ ಎಂದು ನಂಬಿದರು. ಆದ್ರೆ, ಅದು ತಪ್ಪಾಗಿತ್ತು.

    ಯಾವುದಾಗಿತ್ತು ಆ ಪ್ರಶ್ನೆ

    ಯಾವುದಾಗಿತ್ತು ಆ ಪ್ರಶ್ನೆ

    ಮಹಾಭಾರತದ ಪ್ರಕಾರ, ಪಾಂಡವರ ರಾಜಧಾನಿ ಯಾವುದು.?
    A ಇಂದ್ರಪ್ರಸ್ಥ
    B ಹಸ್ತಿನಾಪುರ
    C ಕುರುಕ್ಷೇತ್ರ
    D ಅಂಗ
    ವಿದ್ಯಾರಾಣಿ ಕೊಟ್ಟ ಉತ್ತರ : B ಹಸ್ತಿನಾಪುರ
    ಸರಿ ಉತ್ತರ : A ಇಂದ್ರಪ್ರಸ್ಥ

    ಹಾಟ್ ಸೀಟ್ ನಲ್ಲಿ ಸುಜಾತ

    ಹಾಟ್ ಸೀಟ್ ನಲ್ಲಿ ಸುಜಾತ

    ಇನ್ನು ಕೇವಲ 10 ಸಾವಿರ ಗೆದ್ದು ಆಟದಿಂದ ನಿರ್ಗಮನವಾದ ವಿದ್ಯಾರಾಣಿ ಬಳಿಕ ಸುಜಾತ ಎಂಬುವರು ಕನ್ನಡದ ಕೋಟ್ಯಧಿಪತಿಯ ಹಾಟ್ ಸೀಟ್ ನಲ್ಲಿ ಕೂತರು. ಏಳು ಪ್ರಶ್ನೆಗಳಿಗೆ ಉತ್ತರ ಕೊಟ್ಟಿರುವ ಇವರು ಇಂದಿಗೆ ಆಟ ಕಾಯ್ದುಕೊಂಡಿದ್ದಾರೆ.

    1 ಕೋಟಿ ರೂಪಾಯಿಯ ಪ್ರಶ್ನೆ ಎದುರಿಸಿದ ಸುಜಾತ.!1 ಕೋಟಿ ರೂಪಾಯಿಯ ಪ್ರಶ್ನೆ ಎದುರಿಸಿದ ಸುಜಾತ.!

    English summary
    'Kannadada Kotyadhipathi season 3' contestant Vidyarani has won 10 thousand rupees only.
    Wednesday, July 11, 2018, 13:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X