ಚಂದನ್ ಶೆಟ್ಟಿ ಆಯ್ಕೆ ಬಗ್ಗೆ ಶುರುವಾಯ್ತು ಪರ ವಿರೋಧ ಚರ್ಚೆ !

By Naveen

Recommended Video

ಮಾಸ್ಟರ್ ಡ್ಯಾನ್ಸರ್ ಷೋನಲ್ಲಿ ಚಂದನ್ ಶೆಟ್ಟಿ ಜಡ್ಜ್ | ವೀಕ್ಷಕರು ಗರಂ | Filmibeat Kannada

Rapper ಚಂದನ್ ಶೆಟ್ಟಿ ಈ ಬಾರಿಯ 'ಬಿಗ್ ಬಾಸ್' ಗೆದ್ದಿದ್ದಾರೆ. ಗೆದ್ದ ತಕ್ಷಣ ಅವರಿಗೆ ಮತ್ತೊಂದು ದೊಡ್ಡ ಅವಕಾಶ ಸಿಕ್ಕಿದೆ. ಕಲರ್ಸ್ ಸೂಪರ್ ವಾಹಿನಿಯ ಒಂದು ಹೊಸ ಕಾರ್ಯಕ್ರಮಕ್ಕೆ ಅವರು ತೀರ್ಪುಗಾರರಾಗಿ ಹೋಗಿದ್ದಾರೆ.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಈಗ 'ಮಾಸ್ಟರ್ ಡ್ಯಾನ್ಸರ್' ಎಂಬ ಹೊಸ ಡ್ಯಾನ್ಸ್ ಶೋ ಶುರುವಾಗಿದೆ. ಈ ಕಾರ್ಯಕ್ರಮದ ತೀರ್ಪುಗಾರರಾಗಿ ಮಯೂರಿ, ಶೃತಿ ಹರಿಹರನ್ ಮತ್ತು ಚಂದನ್ ಶೆಟ್ಟಿ ಇದ್ದಾರೆ. ಇಂದಿನಿಂದ ಈ ಕಾರ್ಯಕ್ರಮ ಪ್ರಸಾರ ಆಗಲಿದೆ.

ಆದರೆ ಪಕ್ಕಾ ಡ್ಯಾನ್ಸ್ ಶೋ ಇದಾಗಿದ್ದು, ಇಂತಹ ಕಾರ್ಯಕ್ರಮಕ್ಕೆ ಸಿಂಗರ್ ಆಗಿರುವ ಚಂದನ್ ಶೆಟ್ಟಿ ಯಾಕೆ ಹೋದರು ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಖಾತೆಯಲ್ಲಿ ಹಾಕಿರುವ 'ಮಾಸ್ಟರ್ ಡ್ಯಾನ್ಸರ್' ಕಾರ್ಯಕ್ರಮ ಪೋಸ್ಟ್ ಗಳಿಗೆ ಅನೇಕರು ತಮ್ಮ ಕಮೆಂಟ್ ಮೂಲಕ ಅವರವರ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಚಂದನ್ ಶೆಟ್ಟಿ ಯಾಕೆ?

ಚಂದನ್ ಶೆಟ್ಟಿ ಯಾಕೆ?

''ಮಯೂರಿ ಮತ್ತು ಶೃತಿ ಹರಿಹರನ್ ಒಳ್ಳೆಯ ಡ್ಯಾನ್ಸರ್ಸ್ ಅವರು ಕಾರ್ಯಕ್ರಮಕ್ಕೆ ಓಕೆ. ಆದರೆ ಇಲ್ಲಿ ಚಂದನ್ ಶೆಟ್ಟಿ ಯಾಕೆ ಇದ್ದಾರೆ?'' ಎನ್ನುವುದು ಅನೇಕರಿಗೆ ಮೂಡಿದ ಪ್ರಶ್ನೆ ಆಗಿದೆ.

ಡಾಕ್ಟರ್ ಬದಲು ಲಾಯರ್

ಡಾಕ್ಟರ್ ಬದಲು ಲಾಯರ್

''ಚಂದನ್ ಶೆಟ್ಟಿ ಡ್ಯಾನ್ಸ್ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಮಾಡಿರುವುದು ಒಬ್ಬ ರೋಗಿಯ ಚಿಕಿತ್ಸೆಗಾಗಿ ಡಾಕ್ಟರ್ ಬದಲು ಲಾಯರ್ ಅವರನ್ನು ನೇಮಕ ಮಾಡಿದಂತೆ'' ಎಂದು ಗೇಲಿ ಮಾಡಿದ್ದಾರೆ.

ಡ್ಯಾನ್ಸ್ ಜಡ್ಜ್ ಗೆ ಕೊರತೆ ಇತ್ತ?

ಡ್ಯಾನ್ಸ್ ಜಡ್ಜ್ ಗೆ ಕೊರತೆ ಇತ್ತ?

''ಒಬ್ಬ ಸಿಂಗರ್ ಅನ್ನು ಡ್ಯಾನ್ಸ್ ಶೋಗೆ ತೆಗೆದುಕೊಂಡಿದ್ದಾರಲ್ಲ.. ಕರ್ನಾಟಕದಲ್ಲಿ ಡ್ಯಾನ್ಸಿಂಗ್ ಜಡ್ಜ್ ಗೆ ಬರ ಇತ್ತ?'' ಎಂದು ಕೆಲವರು ಗರಂ ಆಗಿದ್ದಾರೆ.

ಟಿ ಆರ್ ಪಿ

ಟಿ ಆರ್ ಪಿ

''ಚಂದನ್ ಶೆಟ್ಟಿಗೆ ಸದ್ಯ ಸ್ಟಾರ್ ಪಟ್ಟ ಇದ್ದು ಅದನ್ನು ಟಿ ಆರ್ ಪಿ ಗಾಗಿ ಬಳಸಿಕೊಳ್ಳಲು ಈ ರೀತಿ ಮಾಡಿದ್ದಾರೆ'' ಎಂದು ವೀಕ್ಷಕರೊಬ್ಬರು ಕಮೆಂಟ್ ಮಾಡಿದ್ದಾರೆ.

ಕಾರ್ಯಕ್ರಮ ಸಕ್ಸಸ್ ಆಗುತ್ತೆ

ಕಾರ್ಯಕ್ರಮ ಸಕ್ಸಸ್ ಆಗುತ್ತೆ

''ಚಂದನ್ ಶೆಟ್ಟಿ ಈ ಕಾರ್ಯಕ್ರಮ ಜಡ್ಜ್ ಆಗಿರುವುದರಿಂದ ಕಾರ್ಯಕ್ರಮ ಖಂಡಿತ ಯಶಸ್ವಿ ಆಗುತ್ತದೆ'' ಎಂದು ಚಂದನ್ ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ.

ಚಂದನ್ ಶೆಟ್ಟಿಗಾಗಿ ನೋಡುತ್ತೇವೆ

ಚಂದನ್ ಶೆಟ್ಟಿಗಾಗಿ ನೋಡುತ್ತೇವೆ

ಅನೇಕರು ''ಚಂದನ್ ಶೆಟ್ಟಿ ಇರುವ ಕಾರಣಕ್ಕಾಗಿ 'ಮಾಸ್ಟರ್ ಡ್ಯಾನ್ಸರ್' ಈ ಕಾರ್ಯಕ್ರಮ ನೋಡುತ್ತೇವೆ'' ಎಂದು ಹೇಳಿದ್ದಾರೆ.

ಅಭಿಮಾನಿಗಳ ಶುಭಾಶಯ

ಅಭಿಮಾನಿಗಳ ಶುಭಾಶಯ

ಚಂದನ್ ಶೆಟ್ಟಿ ಬಗ್ಗೆ ಪರ ವಿರೋಧ ಕಮೆಂಟ್ ಗಳು ಇದ್ದರೂ ಹೆಚ್ಚಿನ ಸಂಖ್ಯೆಯ ಜನರು ಅವರ ಈ ಹೆಜ್ಜೆಯನ್ನು ಸ್ವಾಗತಿಸಿ ಅವರಿಗೆ ಶುಭ ಕೋರಿದ್ದಾರೆ.

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'

ಈ ಹಿಂದೆ ಜೀ ಕನ್ನಡ ವಾಹಿನಿ ಕೂಡ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಎಂಬ ಪಕ್ಕಾ ಡ್ಯಾನ್ಸ್ ಶೋಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರನ್ನು ತೀರ್ಪುಗಾರರನ್ನಾಗಿ ಆಯ್ಕೆ ಮಾಡಿತ್ತು. ಆ ವೇಳೆ ಕೂಡ ಇದೇ ರೀತಿ ಅಸಮಾದಾನ ಕೇಳಿ ಬಂದಿತ್ತು.

More from Filmibeat

English summary
Viewer's are taken there Facebook account to express there opinion about Colors Super channel's new show 'Master Dancer'. Bigg Boss kannada season 5 winner Chandan Shetty, Shruthi Hariharan and Mayuri Upadhya are judge this show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X