twitter
    For Quick Alerts
    ALLOW NOTIFICATIONS  
    For Daily Alerts

    ಪಕ್ಕದ ಮನೆ ಮಗು ಹುಟ್ಟಿ ಒಂದನೇ ಕ್ಲಾಸ್ ಸೇರಿದರೂ, 'ಅಗ್ನಿಸಾಕ್ಷಿ' ಕಥೆ ಮಾತ್ರ ಮುಂದಕ್ಕೆ ಹೋಗಿಲ್ಲ.!

    |

    ಈ ಮೆಗಾ ಸೀರಿಯಲ್ ಗಳ ಹಣೆಬರಹವೇ ಇಷ್ಟು. ಸರಿಯಾಗಿ ಕಥೆ ಇರಲ್ಲ. ಕಥೆ ಇದ್ದರೂ, ಅದರಲ್ಲಿ ಗಟ್ಟಿತನ ಇರಲ್ಲ. ಆದರೂ, ಸಂಚಿಕೆಗಳನ್ನು ಎಲಾಸ್ಟಿಕ್ ನಂತೆ ಎಳೆಯುವ ಸಲುವಾಗಿ ಏನೇನೋ ಟ್ವಿಸ್ಟ್ ಗಳನ್ನು ನೀಡಲಾಗುತ್ತೆ. ಕೊನೆಗೆ ಆ ಟ್ವಿಸ್ಟ್ ಠುಸ್ ಅಂದ್ಮೇಲೆ, ಕಥೆ ಎಲ್ಲಿಂದ ಶುರುವಾಗಿರುತ್ತೋ, ಅಲ್ಲಿಗೆ ಬಂದು ನಿಲ್ಲುತ್ತೆ.

    ಸದ್ಯ ಕನ್ನಡ ಮನರಂಜನಾ ವಾಹಿನಿಗಳಲ್ಲಿ ಪ್ರಸಾರ ಆಗುತ್ತಿರುವ ಬಹುತೇಕ ಧಾರಾವಾಹಿಗಳದ್ದೂ ಇದೇ ಕಥೆ-ವ್ಯಥೆ. ಅದರಲ್ಲಿ 'ಅಗ್ನಿಸಾಕ್ಷಿ' ಪ್ರಮುಖವಾದದ್ದು. 'ಅಗ್ನಿಸಾಕ್ಷಿ' ಸೀರಿಯಲ್ ಶುರುವಾಗಿ ವರ್ಷಗಳೇ ಉರುಳಿವೆ. ಆದರೂ, ಧಾರಾವಾಹಿಯ ಕಥೆಗೆ ಪೂರಕವಾಗಿರುವ 'ಅಮಾವಾಸ್ಯೆ-ಹುಣ್ಣಿಮೆ' ಇನ್ನೂ ಬಂದಿಲ್ಲ.!

    ಒಂದೇ ಮನೆಯಲ್ಲಿ ಇದ್ದರೂ, ಚಂದ್ರಿಕಾ ಮೇಲೆ ಸಿದ್ಧಾರ್ಥನಿಗೆ ಅನುಮಾನ ಬಂದಿಲ್ಲ. ಪದೇ ಪದೇ ರೌಡಿಗಳು ಅಟ್ಟಹಾಸ ಮೆರೆಯುತ್ತಿದ್ದರೂ, ಸತ್ಯ ಮಾತ್ರ ಬಯಲಾಗಿಲ್ಲ. ಇದನ್ನೆಲ್ಲ ನೋಡಿ ನೋಡಿ ಬೇಸೆತ್ತಿರುವ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಛೀಮಾರಿ ಹಾಕುತ್ತಿದ್ದಾರೆ. ಬೇಕಾದ್ರೆ ನೀವೇ ಕೆಲ ಕಾಮೆಂಟ್ ಗಳನ್ನು ನೋಡಿರಿ...

    ಕಥೆ ಮಾತ್ರ ಅಲ್ಲೇ ಇದೆ.!

    ಕಥೆ ಮಾತ್ರ ಅಲ್ಲೇ ಇದೆ.!

    'ಅಗ್ನಿಸಾಕ್ಷಿ' ಸೀರಿಯಲ್ ಕಥೆ ಬಗ್ಗೆ ವೀಕ್ಷಕರು ಯಾವ ರೀತಿ ಲೇವಡಿ ಮಾಡುತ್ತಿದ್ದಾರೆ ಅನ್ನೋದಕ್ಕೆ ಈ ಕಾಮೆಂಟ್ ಉತ್ತಮ ಉದಾಹರಣೆ. ''ಪಕ್ಕದ ಮನೆಯಲ್ಲಿ ಮಗು ಹುಟ್ಟಿ, ಅದು ಒಂದೇ ಕ್ಲಾಸ್ ಸೇರಿದರೂ.. ಅಗ್ನಿಸಾಕ್ಷಿ ಕಥೆ ಮಾತ್ರ ಅಲ್ಲೇ ಇದೆ. ಮಗು ಐದನೇ ಕ್ಲಾಸ್ ಗೆ ಬಂದರೂ ಸೀರಿಯಲ್ ಮುಗಿದಿರಲ್ಲ'' ಅನ್ನೋದು ವೀಕ್ಷಕರ ಅಭಿಪ್ರಾಯ.

    ಯೂ ಟ್ಯೂಬ್ ಟ್ರೆಂಡಿಂಗ್ ನಲ್ಲಿ 'ಅಗ್ನಿಸಾಕ್ಷಿ'ಯ 3 ನಿಮಿಷ ತುಣುಕುಯೂ ಟ್ಯೂಬ್ ಟ್ರೆಂಡಿಂಗ್ ನಲ್ಲಿ 'ಅಗ್ನಿಸಾಕ್ಷಿ'ಯ 3 ನಿಮಿಷ ತುಣುಕು

    ಯಾವಾಗ ಮುಗಿಯುತ್ತೋ.?!

    ಯಾವಾಗ ಮುಗಿಯುತ್ತೋ.?!

    ''ಈ ಧಾರಾವಾಹಿ ಯಾವಾಗ ಮುಗಿಯುತ್ತೋ.. ವರ್ಸ್ಟ್ ಸೀರಿಯಲ್'' ಅಂತೆಲ್ಲಾ ವೀಕ್ಷಕರು ಕಲರ್ಸ್ ಕನ್ನಡ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲೇ ಕಾಮೆಂಟ್ ಮಾಡಿದ್ದಾರೆ.

    'ಅಗ್ನಿಸಾಕ್ಷಿ'ಯಲ್ಲಿ ರೋಚಕ ಟ್ವಿಸ್ಟ್: ತಾಯಿಯ ಕೈ ಸೇರಿದ ಆಯುಷಿ.!'ಅಗ್ನಿಸಾಕ್ಷಿ'ಯಲ್ಲಿ ರೋಚಕ ಟ್ವಿಸ್ಟ್: ತಾಯಿಯ ಕೈ ಸೇರಿದ ಆಯುಷಿ.!

    ಸಾಕ್ರೀ ನಿಮ್ಮ ಸಂದೇಶ ಸಮಾಜಕ್ಕೆ.!

    ಸಾಕ್ರೀ ನಿಮ್ಮ ಸಂದೇಶ ಸಮಾಜಕ್ಕೆ.!

    ''ಐದು ವರ್ಷದಿಂದ ಚಂದ್ರಿಕಾ ಏನು ಅಂತ ಅರ್ಥ ಮಾಡಿಕೊಳ್ಳದ ದಡ್ಡ ಸಿದ್ಧಾರ್ಥ. ಬರೀ ಕೊಲ್ಲುವುದೇ ಚಂದ್ರಿಕಾ ಜೀವನ.. ನಿಮ್ಮ ಧಾರಾವಾಹಿಯಿಂದ ಸಮಾಜಕ್ಕೆ ಸಿಗುತ್ತಿರುವ ಸಂದೇಶ ಸಾಕು'' ಅಂತಿದ್ದಾರೆ ವೀಕ್ಷಕರು.

    ವಾಕರಿಕೆ ಬರುತ್ತಿದೆ.!

    ವಾಕರಿಕೆ ಬರುತ್ತಿದೆ.!

    ''ಅತಿಯಾದರೆ ಅಮೃತವೂ ವಿಷ'' ಎಂಬಂತೆ 'ಅಗ್ನಿಸಾಕ್ಷಿ' ಧಾರಾವಾಹಿ ಸಾಗುತ್ತಿರುವ ರೀತಿ ವೀಕ್ಷಕರಿಗೆ ವಾಕರಿಕೆ ತರಿಸುತ್ತಿದೆ. ಬೇಗ ಸೀರಿಯಲ್ ಮುಗಿಸಿ ಎಂದು ಕಲರ್ಸ್ ವಾಹಿನಿಯವರಿಗೆ ವೀಕ್ಷಕರು ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದಾರೆ.

    ಮೊದಲು ನಿಲ್ಲಿಸಿ.!

    ಮೊದಲು ನಿಲ್ಲಿಸಿ.!

    ''ಮೊದಲು ಈ ಧಾರಾವಾಹಿಯನ್ನು ನಿಲ್ಲಿಸಿ. ಸೀರಿಯಲ್ ಮುಂದಕ್ಕೆ ಹೋಗುತ್ತಲೇ ಇಲ್ಲ. ಹುಣ್ಣಿಮೆ ಇನ್ನೂ ಬರ್ತಾನೇ ಇಲ್ಲ ಅಂತಾವ್ರೆ ವೀಕ್ಷಕರು.

    ಮನೆ ಹಾಳು ಮಾಡೋದು ಹೇಗೆ ಅಂತ ಕಲಿಯಬಹುದು.!

    ಮನೆ ಹಾಳು ಮಾಡೋದು ಹೇಗೆ ಅಂತ ಕಲಿಯಬಹುದು.!

    ''ಈ ಸೀರಿಯಲ್ ನಲ್ಲಿ ಯಾವಾಗಲೂ ಚಂದ್ರಿಕಾರನ್ನೇ ಗೆಲ್ಲಿಸುತ್ತೀರಾ. ಈ ಧಾರಾವಾಹಿ ನೋಡಿದರೆ, ಒಂದು ಮನೆ ಹಾಳು ಮಾಡೋದು ಹೇಗೆ ಅಂತ ಕಲಿಯಬಹುದು. ಉದ್ಧಾರ ಅಂತೂ ಆಗಲ್ಲ'' ಅನ್ನೋದು ವೀಕ್ಷಕರ ಅಭಿಪ್ರಾಯ.

    ಕಾಮೆಂಟ್ ಮಾಡಿ...

    ಕಾಮೆಂಟ್ ಮಾಡಿ...

    'ಅಗ್ನಿಸಾಕ್ಷಿ' ಧಾರಾವಾಹಿಯನ್ನು ನೀವು ನೋಡ್ತಿದ್ದೀರಾ.? ಈ ಸೀರಿಯಲ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ..

    English summary
    Viewers have taken Colors Kannada Official Facebook page to express their displeasure on Agnisakshi serial.
    Wednesday, January 9, 2019, 16:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X