ಮಹಿ ಹತ್ತಿರ ಬಂದ್ರೆ ಗೌರಿಗೆ ನಾಚಿಕೆ: ಇದನ್ನ ನೋಡಿದ ವೀಕ್ಷಕರ ಪಿತ್ತ ನೆತ್ತಿಗೇರಿದೆ.!

By Harshitha

Recommended Video

ಗೌರಿ-ಮಹೇಶಂದು ಇದೇನ್ ಕರ್ಮ ಗುರೂ ...!!| Filmibeat Kannada

ಭಾರತೀಯ ಕಿರುತೆರೆ ಲೋಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಂಚಿಕೆಗಳನ್ನು ಪ್ರಸಾರ ಮಾಡಿದ ಧಾರಾವಾಹಿಗಳ ಪಟ್ಟಿಯಲ್ಲಿ 'ಪುಟ್ಟಗೌರಿ ಮದುವೆ' ಸೇರ್ಪಡೆ ಆಗಿದೆ. ಬಹುಶಃ ಕನ್ನಡ ಕಿರುತೆರೆಯಲ್ಲಿ ಎಂದೂ ಮುಗಿಯದ ಧಾರಾವಾಹಿ ಅಂದ್ರೆ ಅದು 'ಪುಟ್ಟಗೌರಿ ಮದುವೆ'ಯೇ ಇರಬೇಕು.!

ಪುಟ್ಟಗೌರಿ ದೊಡ್ಡಗೌರಿ ಆಗಿ, ಮಹಿ ಹಿಮನ ಮದುವೆ ಆಗಿ, ಈಗ ವಾಪಸ್ ಗೌರಿ ಕಡೆಗೆ ಮಹಿ ಹೃದಯ ವಾಲಿದೆ. ಈ ಗ್ಯಾಪಲ್ಲಿ ಕಿಡ್ನ್ಯಾಪ್ ಆಗಿ ಕಾಡಿಗೆ ಹೋಗಿ ಪ್ರಾಣಿಗಳೆಲ್ಲಾ ಬಂದು ಹೋದ್ವು. ಕ್ಯಾನ್ಸರ್ ಎಪಿಸೋಡ್ ಕೂಡ ಮುಗಿಯಿತು. ಆದ್ರೆ, 'ಪುಟ್ಟಗೌರಿ ಕಥೆ' ಇನ್ನೂ ಮುಗಿದಿಲ್ಲ.

ನೋಡ ನೋಡುತ್ತಲೇ 'ಪುಟ್ಟಗೌರಿ ಮದುವೆ' ಧಾರಾವಾಹಿಯ 1650 ಸಂಚಿಕೆಗಳು ಉರುಳಿವೆ. ಸುಮಾರು ಐದು ವರ್ಷಗಳಿಂದ ಪುಟ್ಟಗೌರಿ ಕಥನ ನೋಡಿ ನೋಡಿ ವೀಕ್ಷಕರ ತಲೆ ಕೆಟ್ಟು ಹೋಗಿದೆ.

ಸದ್ಯ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಗೌರಿ ಖುಷಿ ಆಗಿದ್ದಾಳೆ. ಮಹಿ ಹತ್ತಿರ ಬಂದರೆ ನಾಚಿಕೆ ಪಟ್ಟುಕೊಳ್ತಿದ್ದಾರೆ. ಇದನ್ನ ನೋಡಿದ ವೀಕ್ಷಕರಿಗೆ ಖುಷಿ ಆಗಿದ್ಯಾ.? ಊಹೂಂ...

ಕಲರ್ಸ್ ಕನ್ನಡ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ 'ಪುಟ್ಟಗೌರಿ ಧಾರಾವಾಹಿ' ಬಗ್ಗೆ ಬೇಸರ ವ್ಯಕ್ತಪಡಿಸಿ ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಅಂಥ ಕೆಲ ಕಾಮೆಂಟ್ ಗಳ ಕಲೆಕ್ಷನ್ ಇಲ್ಲಿದೆ ಓದಿರಿ...

ಬೆಂಕಿ ಹಾಕ...

ಬೆಂಕಿ ಹಾಕ...

''ಮೊದಲು 'ಪುಟ್ಟಗೌರಿ ಮದುವೆ' ಸೀರಿಯಲ್ ಮುಗಿಸಿ. ಈ ಧಾರಾವಾಹಿಗೆ ಬೆಂಕಿ ಹಾಕ'' ಅಂತೆಲ್ಲಾ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

ನೈತಿಕತೆ ಇಲ್ಲ.!

ನೈತಿಕತೆ ಇಲ್ಲ.!

''ಕಲರ್ಸ್ ಕನ್ನಡ ವಾಹಿನಿಗೆ ನೈತಿಕತೆ ಇಲ್ಲ. ಈ ಧಾರಾವಾಹಿಯಿಂದ ತಪ್ಪು ಸಂದೇಶ ರವಾನೆ ಆಗುತ್ತಿದೆ'' ಎಂಬುದು ನೆಟ್ಟಿಗರ ಅಭಿಪ್ರಾಯ.

ಕಿರಿಕಿರಿ ತರುವ ಸೀರಿಯಲ್

ಕಿರಿಕಿರಿ ತರುವ ಸೀರಿಯಲ್

''ಈ ಧಾರಾವಾಹಿ ಕಿರಿಕಿರಿ ತಂದಿದೆ. ಇದನ್ನ ಆದಷ್ಟು ಬೇಗ ಮುಗಿಸಿ. ಇಲ್ಲ ಅಂದ್ರೆ ಸೀರಿಯಲ್ ನ ನಟ-ನಟಿಯರು ಗೌರವ ಕಳೆದುಕೊಳ್ಳುತ್ತಾರೆ'' ಅಂತಿದ್ದಾರೆ ವೀಕ್ಷಕ ಮಹಾಪ್ರಭುಗಳು.

ಇನ್ನೂ ಅನುಮಾನ ಕಾಡುತ್ತಿದೆ.!

ಇನ್ನೂ ಅನುಮಾನ ಕಾಡುತ್ತಿದೆ.!

''ಇನ್ನೂ ಪುಟ್ಟಗೌರಿ ಬದುಕಿದ್ದಾಳಾ.? ಹುಲಿ, ಹಾವು ಕಚ್ಚಿ ತಿನ್ಲಿಲ್ವಾ.? ಗೌರಿ ಹೇಗೆ ಬದುಕಿದಳು.?'' ಎಂಬ ಅನುಮಾನ ವೀಕ್ಷಕರಿಗೆ ಇನ್ನೂ ಕಾಡುತ್ತಿದೆ.

ಎಲ್ಲರ ಪ್ರಶ್ನೆ ಒಂದೇ.!

ಎಲ್ಲರ ಪ್ರಶ್ನೆ ಒಂದೇ.!

ಕಲರ್ಸ್ ಕನ್ನಡ ವೀಕ್ಷಕರು ಸದ್ಯ ಕೇಳುತ್ತಿರುವ ಪ್ರಶ್ನೆ ಒಂದೇ... ಅದು ''ಸೀರಿಯಲ್ ಯಾವಾಗ ಮುಗಿಯುತ್ತೆ.?'' ಅಂತ ಇದಕ್ಕೆ ಧಾರಾವಾಹಿಯ ನಿರ್ದೇಶಕರೇ ಉತ್ತರ ಕೊಡಬೇಕು.

More from Filmibeat

English summary
Colors Kannada Channel Viewers have taken their Facebook page to express their displeasure towards 'Puttagowri Maduve' serial. Take a look at the Viewers Comments.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X