For Quick Alerts
  ALLOW NOTIFICATIONS  
  For Daily Alerts

  'ಅವನಿ' ಅಲ್ಲಿರಲ್ಲ, ಚಾಲೆಂಜ್ ಮಾಡ್ತೀರಾ.? ಬೇಕಾದರೆ ಬೆಟ್ ಕಟ್ಟಿ.!

  By Harshitha
  |

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ 'ಅವನಿ ಆಗಮನ' ಅಧ್ಯಾಯ ಆರಂಭ ಆಗಿದೆ.

  'ಅವನಿ ಆಗಮನ' ಪ್ರಾರಂಭ ಆಗಿ ವಾರಗಳೇ ಉರುಳಿದರೂ, ಇನ್ನೂ 'ಅವನಿ' ಮುಖ ದರ್ಶನ ವೀಕ್ಷಕರಿಗೆ ಆಗಿಲ್ಲ. ಇಷ್ಟು ದಿನ ಮಾನಸಿಕ ರೋಗಿ ಆಗಿ ಬಳಲುತ್ತಿದ್ದ 'ಅವನಿ'ಗೆ ಇದೀಗ ಆಪರೇಶನ್ ಆಗಿದೆ. 'ಅವನಿ' ಸದ್ಯ ಆರೋಗ್ಯವಾಗಿದ್ದು, ತನ್ನ ತಾಯಿ ಹಾಗೂ ಅಣ್ಣನ ಜೊತೆ ಚಿಕ್ಕವಯಸ್ಸಿನಲ್ಲಿ ಕಳೆದ ಮಧುರ ಕ್ಷಣಗಳನ್ನ ಮೆಲುಕು ಹಾಕುತ್ತಿದ್ದಾಳೆ.

  'ಅವನಿ'ಯನ್ನ ರಮಣ್ ಗೆ ಒಪ್ಪಿಸಿ, ರಮಣ್ ಕೈಹಿಡಿಯಬೇಕು ಅನ್ನೋದು ದೀಪಿಕಾ ಪ್ಲಾನ್. ಆದ್ರೆ, ಅಷ್ಟರಲ್ಲಿ ರಮಣ್ ಅಂಡ್ ಫ್ಯಾಮಿಲಿ ಅದಾಗಲೇ 'ಅವನಿ'ಯನ್ನ ಹುಡುಕಿಕೊಂಡು ಪ್ರಕೃತಿ ಆಸ್ಪತ್ರೆಗೆ ಬಂದಾಗಿದೆ.

  'ಅವನಿ'ಗೆ ಆಪರೇಶನ್ ಮಾಡಿದ ವೈದ್ಯರ ಬಳಿ ಮಾತುಕತೆ ನಡೆಸಿ, ಇನ್ನೇನು 'ಅವನಿ'ಯನ್ನ ರಮಣ್ ನೋಡಬೇಕು... ಅಷ್ಟರಲ್ಲಿ ನಿನ್ನೆಯ ಸಂಚಿಕೆ ಮುಕ್ತಾಯವಾಗಿದೆ.! ಇವತ್ತಾದರೂ, 'ಅವನಿ'ಯನ್ನ ರಮಣ್ ಭೇಟಿ ಮಾಡ್ತಾರಾ.? ನಮಗಂತೂ ಗೊತ್ತಿಲ್ಲ.

  ಆದ್ರೆ, 'ರಾಧಾ ರಮಣ' ಧಾರಾವಾಹಿಯನ್ನ ಬಿಟ್ಟೂ ಬಿಡದೆ ನೋಡುವ ವೀಕ್ಷಕರು ಮಾತ್ರ ''ಅವನಿ' ಐ.ಸಿ.ಯು ನಲ್ಲಿ ಇರಲ್ಲ. 100% ಕಿಡ್ನ್ಯಾಪ್ ಆಗಿರುತ್ತಾಳೆ. ಬೇಕಾದರೆ ಬೆಟ್ ಕಟ್ಟಿ'' ಎಂದು ಸೋಷಿಯಲ್ ಮೀಡಿಯಾದಲ್ಲಿ ಚಾಲೆಂಜ್ ಮಾಡುತ್ತಿದ್ದಾರೆ. ಆ ಕಾಮೆಂಟ್ಸ್ ಇಲ್ಲಿವೆ ನೋಡಿ....

  200% ಗ್ಯಾರೆಂಟಿ.!

  200% ಗ್ಯಾರೆಂಟಿ.!

  ''ಅವನಿ' ಆಸ್ಪತ್ರೆಯಲ್ಲಿ ಇರಲ್ಲ. ನಾನಂತೂ ಚಾಲೆಂಜ್ ಮಾಡ್ತೀನಿ'' ಅಂತ ವೀಕ್ಷಕರೊಬ್ಬರು ಕಲರ್ಸ್ ಕನ್ನಡ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ ಕಾಮೆಂಟ್ ಮಾಡಿದ್ದಾರೆ.

  ಅಯ್ಯಯ್ಯೋ.. ಸಿತಾರ ದೇವಿಗೆ 'ಅವನಿ' ಆಪರೇಶನ್ ವಿಷಯ ಗೊತ್ತಾಗೋಯ್ತು.! ಅಯ್ಯಯ್ಯೋ.. ಸಿತಾರ ದೇವಿಗೆ 'ಅವನಿ' ಆಪರೇಶನ್ ವಿಷಯ ಗೊತ್ತಾಗೋಯ್ತು.!

  ನಿಮ್ಮ ಕಥೆ ನಾವೇ ಹೇಳ್ತೀವಿ ಕೇಳಿ...

  ನಿಮ್ಮ ಕಥೆ ನಾವೇ ಹೇಳ್ತೀವಿ ಕೇಳಿ...

  ''ನಿಮ್ಮ ಸೀರಿಯಲ್ ಕಥೆ ನಾವೇ ಹೇಳ್ತೀವಿ ಕೇಳಿ... 'ಅವನಿ ಅಧ್ಯಾಯ - ಮೂರು ತಿಂಗಳು', 'ಅವನಿ ಆಗಮನ - ಮೂರು ತಿಂಗಳು', 'ಅವನಿ ಕಿಡ್ನ್ಯಾಪ್ - ನಾಲ್ಕು ತಿಂಗಳು'' ಎಂದು ವೀಕ್ಷಕರೊಬ್ಬರು 'ಅವನಿ' ಕಿಡ್ನ್ಯಾಪ್ ಆಗುವುದನ್ನು ಊಹಿಸಿ 'ಸೀರಿಯಲ್ ಕಥೆ ಎಳೆಯುತ್ತಿರುವುದರ' ಬಗ್ಗೆ ವ್ಯಂಗ್ಯವಾಡಿದ್ದಾರೆ.

  ದೀಪಿಕಾ ಪ್ಲಾನ್ ತಲೆಕೆಳಗು: ಪ್ರಕೃತಿ ಆಸ್ಪತ್ರೆಯಲ್ಲಿ ಏನಾಗುವುದೋ ಇಂದು.?ದೀಪಿಕಾ ಪ್ಲಾನ್ ತಲೆಕೆಳಗು: ಪ್ರಕೃತಿ ಆಸ್ಪತ್ರೆಯಲ್ಲಿ ಏನಾಗುವುದೋ ಇಂದು.?

  ಯಾರಾದರೂ ಡೈರೆಕ್ಟರ್ ನ ಕಿಡ್ನ್ಯಾಪ್ ಮಾಡ್ರಪ್ಪ.!

  ಯಾರಾದರೂ ಡೈರೆಕ್ಟರ್ ನ ಕಿಡ್ನ್ಯಾಪ್ ಮಾಡ್ರಪ್ಪ.!

  'ರಾಧಾ ರಮಣ' ಧಾರಾವಾಹಿಯ ಕಥೆಯನ್ನ ರಬ್ಬರ್ ಎಳೆದ ಹಾಗೆ ಎಳೆಯುತ್ತಿರುವುದನ್ನು ನೋಡಿ ನೋಡಿ ರೋಸಿ ಹೋಗಿರುವ ಪ್ರೇಕ್ಷಕರು ''ಯಾರಾದರೂ ಡೈರೆಕ್ಟರ್ ನ ಕಿಡ್ನ್ಯಾಪ್ ಮಾಡ್ರಪ್ಪ'' ಅಂತ ಫೇಸ್ ಬುಕ್ ನಲ್ಲಿ ಕೇಳಿಕೊಳ್ತಿದ್ದಾರೆ.

  ಭಪ್ಪರೇ!! 'ಅವನಿ' ಬದುಕಿರುವ ಗುಟ್ಟು ರಾಧಾ ಮುಂದೆ ರಟ್ಟು!ಭಪ್ಪರೇ!! 'ಅವನಿ' ಬದುಕಿರುವ ಗುಟ್ಟು ರಾಧಾ ಮುಂದೆ ರಟ್ಟು!

  ಕರ್ಮಕಾಂಡ.!

  ಕರ್ಮಕಾಂಡ.!

  ''ಅವನಿ' ಕಣ್ಣೀರು ತೋರಿಸ್ತಾ ಇರೋದು ಬೇರೆ ಜಾಗದಲ್ಲಿ. ರಮಣ ಒಳಗೆ ಹೋಗೋಷ್ಟರಲ್ಲಿ ಅಲ್ಲಿ ಯಾರೂ ಇರಲ್ಲ. ಕರ್ಮಕಾಂಡ'' ಅಂತ ವೀಕ್ಷಕರು ಗೊಣಗುತ್ತಿದ್ದಾರೆ.

  'ರಾಧಾ ರಮಣ' ಧಾರಾವಾಹಿಯಲ್ಲಿ ಇಂದು ರೋಚಕ ತಿರುವು: 'ಅವನಿ'ಗೆ ಏನಾಗುತ್ತೋ, ಏನೋ?'ರಾಧಾ ರಮಣ' ಧಾರಾವಾಹಿಯಲ್ಲಿ ಇಂದು ರೋಚಕ ತಿರುವು: 'ಅವನಿ'ಗೆ ಏನಾಗುತ್ತೋ, ಏನೋ?

  ಇನ್ನೂ ತಂಗಿ ಸಿಕ್ಕಿಲ್ವಾ.?

  ಇನ್ನೂ ತಂಗಿ ಸಿಕ್ಕಿಲ್ವಾ.?

  ''ಅಯ್ಯೋ ನಿಮ್ಮ ಸ್ಟೋರಿ... ನಮ್ಮ ಮನೆ ಟಿವಿ ಹಾಳಾಗಿ, ರಿಪೇರಿ ಮಾಡಿಸುವಷ್ಟರಲ್ಲಿ ಒಂದು ವಾರ ಆದರೂ ಇನ್ನೂ ನಿಮ್ಮ ತಂಗಿ ಸಿಕ್ಕಿಲ್ವಾ.?'' ಎಂದು ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ 'ರಾಧಾ ರಮಣ' ಧಾರಾವಾಹಿ ಕುರಿತು ಲೇವಡಿ ಮಾಡುತ್ತಿದ್ದಾರೆ.

  ಕೆಟ್ಟ ಧಾರಾವಾಹಿ

  ಕೆಟ್ಟ ಧಾರಾವಾಹಿ

  ''ರಾಧಾ ರಮಣ' ಕೂಡ 'ಅಗ್ನಿಸಾಕ್ಷಿ' ಧಾರಾವಾಹಿಯ ಹಾಗೆ. ಅವನಿ ಸಿಗಲ್ಲ. ನಮ್ಮ ಜನ ನೋಡುವುದನ್ನು ಬಿಡಲ್ಲ. ಇದೊಂದು ಕೆಟ್ಟ ಸೀರಿಯಲ್'' ಎಂಬ ಕಾಮೆಂಟ್ ಗಳೇ ಹೆಚ್ಚಾಗಿವೆ.

  ಇಷ್ಟು ಬೇಗ ಸಿಕ್ಕಿಬಿಟ್ರೆ.?

  ಇಷ್ಟು ಬೇಗ ಸಿಕ್ಕಿಬಿಟ್ರೆ.?

  ''ಇನ್ನೂ ಒಂದು ತಿಂಗಳು ಅವನಿ ಸಿಗಲ್ಲ. ಇಷ್ಟು ಬೇಗ ಸಿಕ್ಕರೆ ಸೀರಿಯಲ್ ಮುಗಿದು ಬಿಡತ್ತೆ'' ಅಂತ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.

  ಇಂದು ಏನಾಗುತ್ತೋ.?

  ಇಂದು ಏನಾಗುತ್ತೋ.?

  ದೀಪಿಕಾ ಪ್ಲಾನ್ ಪ್ರಕಾರ, ಅವನಿ ಕಿಡ್ನ್ಯಾಪ್ ಆಗ್ತಾಳೋ.? ಇಲ್ಲ, ರಮಣ್ - ಅವನಿ ಭೇಟಿ ಆಗುತ್ತೋ ಎಂದು ಇಂದಿನ ಸಂಚಿಕೆಯಲ್ಲಿ ಗೊತ್ತಾಗುತ್ತೆ.

  English summary
  Viewers have taken Colors Kannada Official Facebook page to express their displeasure watching Radha Ramana serial twists.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X