ರಮಣ್ ಕೈಗೆ 'ಅವನಿ' ಸಿಗಲ್ಲ: ಧಾರಾವಾಹಿ ಮುಗಿಯಲ್ಲ.!

By Harshitha

Recommended Video

ರಾಧಾ ರಮಣ ನೋಡಿ ರೊಚ್ಚಿಗೆದ್ದ ನೆಟ್ಟಿಗರು | Filmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ 'ರಾಧಾ ರಮಣ' ಧಾರಾವಾಹಿಯಲ್ಲಿ 'ಅವನಿ ಆಗಮನ' ಅಧ್ಯಾಯ ಆರಂಭ ಆಗಿ ವಾರಗಳೇ ಉರುಳಿವೆ. ಆದರೆ ಇನ್ನೂ, 'ಅವನಿ' ದರ್ಶನ ವೀಕ್ಷಕರಿಗೆ ಆಗಿಲ್ಲ. ಕುಟುಂಬದವರ ಕೈಗೂ ಇನ್ನೂ 'ಅವನಿ' ಸಿಕ್ಕಿಲ್ಲ.

'ಅವನಿ'ಗೆ ಆಪರೇಷನ್ ಮುಗಿದ್ಮೇಲೆ, ಆಸ್ಪತ್ರೆಯಿಂದಲೇ ಆಂಬ್ಯುಲೆನ್ಸ್ ಮೂಲಕ ಆಕೆಯನ್ನ ರುದ್ರ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾನೆ. ಆಂಬ್ಯುಲೆನ್ಸ್ ಹಿಂದೆ ರಮಣ್ ಓಡಿ ಹೋಗಿ, ಆಂಬ್ಯುಲೆನ್ಸ್ ಹತ್ತಿದರೂ ಪ್ರಯೋಜನ ಆಗಲಿಲ್ಲ. 'ಅವನಿ' ರಮಣ್ ಕೈಗೆ ಸಿಗಲಿಲ್ಲ.

ಬೇರೆ ದಾರಿ ಕಾಣದೆ, ರಮಣ್ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕುತಂತ್ರಿ ಸಿತಾರ ದೇವಿಗೆ ಸದ್ಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂಥ ಅನುಭವ ಆಗಿದೆ. ಇತ್ತ ರುದ್ರ ಚಾಲನೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಪಂಚರ್ ಆಗಿ ದೇವಸ್ಥಾನವೊಂದರ ಮುಂಭಾಗ ಸೇರಿದೆ.

ಹೀಗೆ, ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು, ಧಾರಾವಾಹಿಯ ಕಥೆಯನ್ನು ರಬ್ಬರ್ ಎಳೆದ ಹಾಗೆ ಎಳೆಯುತ್ತಿರುವುದನ್ನ ನೋಡಿ ನೋಡಿ ವೀಕ್ಷಕರಿಗೆ ಬೇಸರ ಆಗಿದೆ. ''ರಮಣ್ ಕೈಗೆ ಅವನಿ ಸಿಗಲ್ಲ. ಧಾರಾವಾಹಿ ಮುಗಿಯಲ್ಲ'' ಎಂದು ವೀಕ್ಷಕರು 'ಕಲರ್ಸ್ ಕನ್ನಡ' ಅಫೀಶಿಯಲ್ ಫೇಸ್ ಬುಕ್ ಪುಟದಲ್ಲೇ ಕಾಮೆಂಟ್ ಮಾಡುತ್ತಿದ್ದಾರೆ. ಮುಂದೆ ಓದಿರಿ...

ಕೈಗೆ ಸಿಗಲ್ಲ, ಹುಡುಕಾಟ ನಿಲ್ಲಲ್ಲ.!

ಕೈಗೆ ಸಿಗಲ್ಲ, ಹುಡುಕಾಟ ನಿಲ್ಲಲ್ಲ.!

''ರಮಣ್ ಕೈಗೆ ಅವನಿ ಸಿಗಲ್ಲ. ಹುಡುಕಾಟ ನಿಲ್ಲಲ್ಲ. ಧಾರಾವಾಹಿ ಮುಗಿಯುವುದಿಲ್ಲ ಎಂಬುದು ನಮಗೆ ಗೊತ್ತು'' ಎಂದು ವೀಕ್ಷಕರು ಕಲರ್ಸ್ ಕನ್ನಡ ವಾಹಿನಿಯ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲೇ ವ್ಯಂಗ್ಯವಾಡುತ್ತಿದ್ದಾರೆ.

ಗೋಳು ಕೇಳೋರು ಯಾರು ಇಲ್ಲವೇ.?

ಗೋಳು ಕೇಳೋರು ಯಾರು ಇಲ್ಲವೇ.?

'ರಾಧಾ ರಮಣ' ಧಾರಾವಾಹಿ ಕಥೆ ಸಾಗುತ್ತಿರುವ ರೀತಿ ನೋಡಿ ಸಿಟ್ಟಾದ ವೀಕ್ಷಕರು ಮಾಡಿರುವ ತರಹೇವಾರಿ ಕಾಮೆಂಟ್ಸ್ ಇಲ್ಲಿದೆ ನೋಡಿ...

ಶತಮಾನ ಕಳೆದರೂ ಸಿಗುವುದು ಅನುಮಾನ

ಶತಮಾನ ಕಳೆದರೂ ಸಿಗುವುದು ಅನುಮಾನ

''ಬಹುಶಃ ಅವನಿ ನೋಡಬೇಕು ಅಂದ್ರೆ ಇನ್ನೂ ಸಾವಿರಾರು ವರ್ಷ ಕಾಯಿರಿ. ಶತಮಾನ ಕಳೆದರೂ ಸಿಗುವುದು ಅನುಮಾನ'' ಎಂದು ವೀಕ್ಷಕರು ಫೇಸ್ ಬುಕ್ ನಲ್ಲಿ ಲೇವಡಿ ಮಾಡಿದ್ದಾರೆ.

ನಿಮ್ಮ ಅಭಿಪ್ರಾಯ ಏನು.?

ನಿಮ್ಮ ಅಭಿಪ್ರಾಯ ಏನು.?

'ರಾಧಾ ರಮಣ' ಧಾರಾವಾಹಿ ಹಾಗೂ ಅವನಿ ಅಧ್ಯಾಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು.? ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Viewers have taken Colors Kannada Official Facebook page to express their displeasure watching Radha Ramana serial twists.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X