ಬಿಗ್ ಬಾಸ್ ನಿರ್ಧಾರಕ್ಕೆ ವೀಕ್ಷಕರು ಬೇಸರ: ಬೇಡಿಕೆಯಿಟ್ಟ ಸಾಮಾನ್ಯ ಜನರು

ಕಿರುತೆರೆ ಪ್ರೇಕ್ಷಕರು ಭಾರಿ ಕುತೂಹಲದಿಂದ ಕಾಯುತ್ತಿರುವ 'ಬಿಗ್ ಬಾಸ್-7'ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಕಿಚ್ಚ ಸುದೀಪ್ ನಡೆಸಿ ಕೊಡುವ ಬಿಗ್ ಬಾಸ್ ಈಗಾಗಲೆ 6 ಸೀಸನ್ ಅನ್ನು ಯಶಸ್ವಿಯಾಗಿ ಮುಗಿಸಿದೆ. ಈಗ 7ನೇ ಸೀಸನ್ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಈಗಾಗಲೆ ಬಿಗ್ ಬಾಸ್ ಪ್ರೋಮೋ ಶೂಟ್ ಕೂಡ ಆಗಿ ಪ್ರಸಾರವಾಗುತ್ತಿದೆ. ಇನ್ನೇನು ಕೆಲವೆ ದಿನಗಳಲ್ಲಿ ಬಿಗ್ ಬಾಸ್ ಪ್ರಾರಂಭವಾಗಲಿದೆ. ಆದ್ರೆ ಈ ಬಾರಿಯ ಬಿಗ್ ಬಾಸ್ ನ ಬಿಗ್ ಬದಲಾವಣೆ ಅಂದ್ರೆ ಕಾಮನ್ ಮ್ಯಾನಗಳಿರುವುದಿಲ್ಲ. ಸೆಲೆಬ್ರಿಟಿಗಳು ಮಾತ್ರ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರೆ.

ಹಾಗಾಗಿ ವೀಕ್ಷಕರು ಸಾಮಾನ್ಯ ಜನರಿಗೂ ಅವಕಾಶ ಕೊಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಸೆಲೆಬ್ರಿಟಿಗಳಿಗೆ ಮಾತ್ರವಲ್ಲ ಈ ಶೋ, ಸಾಮಾನ್ಯರಿಗೂ ಅವಕಾಶ ಸಿಗಬೇಕೆಂದು ವೀಕ್ಷಕರು ಒತ್ತಾಯ ಮಾಡುತ್ತಿದ್ದಾರೆ.

ಸಾಮಾನ್ಯರಿಗೆ ಅವಕಾಶ ಕೊಡಿ

ಸಾಮಾನ್ಯರಿಗೆ ಅವಕಾಶ ಕೊಡಿ

"ಜನ ಸಾಮಾನ್ಯರಿಗೆ ಈ ಒಂದು ವೇದಿಕೆಯಲ್ಲಿ ಅವಕಾಶ ಕೊಡಿ ಸರ್. ಆಗ ಜನರ ಮೆಚ್ಚುಗೆ ಇನ್ನು ಜಾಸ್ತಿಯಾಗುವುದು ಎಂಬ ಭಾವನೆ. ಜನಸಾಮಾನ್ಯರು ಬೇಕೆ ಬೇಕು. ಸೆಲೆಬ್ರಿಟಿಗಳಿಗೆ ಮಾತ್ರ ಜಾಗವಲ್ಲ. ಜನಸಾಮಾನ್ಯರು ಬೇಕು. ಸೆಲೆಬ್ರಿಟಿ ಆಗುವ ಮುನ್ನ ಅವರು ಸಾಮಾನ್ಯ ಜನರೆ. ಹಾಗಾಗಿ ಸಾಮಾನ್ಯರಿಗೆ ವೇದಿಕೆ ಬೇಕು ನಿಮ್ಮ ಅಭಿಪ್ರಾಯ ಸ್ವಲ್ಪ ಬದಲಾಯಿಸಿ ಒಂದು ಅವಕಾಶ ಕೊಡಿ"

ಜನಸಾಮಾನ್ಯರನ್ನು ಸೆಲೆಬ್ರಿಟಿ ಆಗಿ ಮಾಡಿ

ಜನಸಾಮಾನ್ಯರನ್ನು ಸೆಲೆಬ್ರಿಟಿ ಆಗಿ ಮಾಡಿ

"ಸೆಲೆಬ್ರಿಟಿಗಳನ್ನು ಸೆಲೆಬ್ರಿಟಿಯಾಗಿ ಮಾಡುವುದು ಮುಖ್ಯವಲ್ಲ. ಜನಸಾಮಾನ್ಯರಿಗೆ ಒಂದು ಅವಕಾಶ ಕೊಟ್ಟು ಸೆಲೆಬ್ರಿಟಿ ಮಾಡುವುದು ತುಂಬಾ ಮುಖ್ಯ ಅಂತ ನನ್ನ ಅಭಿಪ್ರಾಯ. ಕಲರ್ಸ್ ಕನ್ನಡದವರು ಜನಸಾಮಾನ್ಯರಿಗೂ ಅವಕಾಶ ಒದಸಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ" ಸಾಮಾನ್ಯರು ಸಾಮಾಜಿಕ ಜಾಲತಾಣದಲ್ಲಿ ಕೇಳಿಕೊಳ್ಳುತ್ತಿದ್ದಾರೆ.

ಎಷ್ಟೋ ಪ್ರತಿಭೆಗಳು ಇದ್ದಾರೆ

ಎಷ್ಟೋ ಪ್ರತಿಭೆಗಳು ಇದ್ದಾರೆ

"ಜನಸಾಮಾನ್ಯರು ಅವಕಾಶ ಕೊಡಬೇಕಿತ್ತು. ಎಷ್ಟೋ ಪ್ರತಿಭೆಗಳು ಇದ್ದವು. ಅವರಿಗೆ ಉತ್ತಮವಾದ ಬೆಳವಣಿಗೆ ಸಿಗುತ್ತಿತ್ತು. ಆದರೆ ಜನ ಸಾಮಾನ್ಯರು ಇರದಿದ್ದರೆ ಈ ಶೋ ನಡೆಯುವುದು ಕಷ್ಟ ಅನಿಸುತ್ತೆ. ಜನಸಾಮಾನ್ಯರನ್ನು ನೀವು 3 ಬಾರಿ ತಂದು ಈಗ ತರಲಿಲ್ಲ ಅಂದ್ರೆ ಎಷ್ಟೋ ಜನರಿಗೆ ಬೇಸರವಾದಿತು"

ವ್ಯಾಲ್ಯೂ ಕಳೆದುಕೊಳ್ಳಬಹುದು

ವ್ಯಾಲ್ಯೂ ಕಳೆದುಕೊಳ್ಳಬಹುದು

"ಜನಸಾಮಾನ್ಯರಿಗೆ ಅವಕಾಸ ಕೊಡಲಿಲ್ಲ ಅಂದ್ರೆ ಬಿಗ್ ಬಾಸ್ ರಿಯಾಲಿಟಿ ಶೋ ವ್ಯಾಲ್ಯೂ ಕಳೆದುಕೊಳ್ಳಬಹುದು ಅಥವಾ ಟಿ ಆರ್ ಪಿ ಕಡಿಮೆಯಾದರೆ ಆಗಬಹುದು. ಜನಸಾಮಾನ್ಯರಿಗೂ ಅವಕಾಶ ಕೊಟ್ಟರೆ ಟಿ ಆರ್ ಪಿ ಜಾಸ್ತಿ ಆಗಬಹುದು. ಇನ್ನು ಹೆಚ್ಚು ಜನಮೆಚ್ಚುಗೆ ಕಾರ್ಯಕ್ರಮ ಆಗುತ್ತೆ"

More from Filmibeat

English summary
Viewers are demanding the Common people allow to Bigg Boss season-7
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X