ಕೊಟ್ಟ ಬಿಲ್ಡಪ್ ಒಂದು, ಮಾದ ಮಾಡಿದ್ದು ಮತ್ತೊಂದು: ತಲೆ ಚಚ್ಚಿಕೊಂಡ ವೀಕ್ಷಕರು.!

By Harshitha

'ಕಲರ್ಸ್ ಕನ್ನಡ' ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ 'ಅವನಿ ಅಧ್ಯಾಯ' ಹಾಗೂ 'ವಿವಾಹ ವಾರ್ಷಿಕೋತ್ಸವ' ಅಧ್ಯಾಯಗಳು ಸಮಾಪ್ತಿ ಆಯ್ತು. ಆದರೂ, ಇಲ್ಲಿಯವರೆಗೂ ನಿಜವಾದ ಅವನಿ ಮನೆಯವರಿಗೆ ಸಿಕ್ಕಿಲ್ಲ. ರಾಧಾ-ರಮಣ ವಿವಾಹ ವಾರ್ಷಿಕೋತ್ಸವ ಆಚರಿಸಲಿಲ್ಲ.

ರಾಧಾ ಹಾಗೂ ರಮಣ ಸುತ್ತ ಸುತ್ತಬೇಕಿದ್ದ ಕಥೆ, ಇದೀಗ 'ಅವನಿ' ಸುತ್ತ ಗಿರಕಿ ಹೊಡೆಯುತ್ತಿದೆ. ನಿಜವಾದ 'ಅವನಿ'ಯನ್ನ ತೋರಿಸದೆ, ಡ್ಯೂಪ್ಲಿಕೇಟ್ ಅವನಿ ಹಾಗೂ ಅವಳ ನಾಟಕಗಳನ್ನೇ ಹೈಲೈಟ್ ಮಾಡಲಾಗುತ್ತಿದೆ.

ಅವನಿ ಹೆಸರಿನಲ್ಲಿ ಮನೆಗೆ ಬಂದಿರುವ 'ಕಳ್ಳಿ' ರಾಣಿ ಮುಖವಾಡ ಬಯಲಾಗಲ್ಲ. ಸಿತಾರ ದೇವಿ ಸಿಕ್ಕಿಬೀಳಲ್ಲ ಎಂಬಂತಾಗಿದೆ ಈಗಿನ ಧಾರಾವಾಹಿಯ ಸ್ಥಿತಿ.

ಇಲ್ಲಿಯವರೆಗೂ ''ಎಲ್ಲರ ಮುಂದೆ ಸತ್ಯ ಹೇಳಿ, ರಾಣಿಯನ್ನ ವಾಪಸ್ ಕರೆದುಕೊಂಡು ಹೋಗುವೆ'' ಅಂತ ಹೇಳಿ ಬಿಲ್ಡಪ್ ಕೊಡುತ್ತಿದ್ದ ಮಾದ ಇದೀಗ ಏಕಾಏಕಿ ಉಲ್ಟಾ ಹೊಡೆದಿದ್ದಾನೆ. ಸಿತಾರ ದೇವಿ ಪ್ಲಾನ್ ಗೆ ಕೌಂಟರ್ ಪ್ಲಾನ್ ಮಾಡಿದ್ದಾನೆ.

ವೀಕ್ಷಕರಿಗೆ ಇದನ್ನೆಲ್ಲ ನೋಡಿ ನೋಡಿ ಕಿರಿಕಿರಿ ಆಗಿದೆ. ಎಂದೂ ಮುಗಿಯದ 'ರಾಧಾ ರಮಣ' ಧಾರಾವಾಹಿ ಬಗ್ಗೆ ಬೇಸರಗೊಂಡ ವೀಕ್ಷಕರು ಫೇಸ್ ಬುಕ್ ನಲ್ಲಿ ಮಾಡಿರುವ ಕೆಲ ಕಾಮೆಂಟ್ಸ್ ಇಲ್ಲಿವೆ ನೋಡಿ...

ಹೊಸ ಸ್ಕೆಚ್ ಹಾಕಿದ ಮಾದ

ಹೊಸ ಸ್ಕೆಚ್ ಹಾಕಿದ ಮಾದ

ಅವನಿ (ರಾಣಿ) ಹೆಸರಿಗೆ ಸದ್ಯ ಆಸ್ಟ್ರೇಲಿಯಾ ಪ್ರಾಜೆಕ್ಟ್ ಹೋಗಿದೆ. ಅಲ್ಲಿಗೆ, ರಾಣಿ ಕೈಯಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಇದೆ ಅಂತ ಗೊತ್ತಾದ್ಮೇಲೆ, ಮಾದ ಹೊಸ ಸ್ಕೆಚ್ ಹಾಕಿದ್ದಾನೆ. ''ಅವನಿ ಅಂದ್ರೆ ನನಗೆ ಇಷ್ಟ. ದಯವಿಟ್ಟು ಅವಳನ್ನ ನನ್ನಿಂದ ದೂರ ಮಾಡಬೇಡಿ'' ಅಂತ ರಮಣ್ ಮುಂದೆ ಮಾದ ಬೇಡಿಕೊಂಡಿದ್ದಾನೆ.

ರಮಣ್ ಒಪ್ಪಿದರೆ ಮಾದನ ಲೈನ್ ಕ್ಲಿಯರ್

ರಮಣ್ ಒಪ್ಪಿದರೆ ಮಾದನ ಲೈನ್ ಕ್ಲಿಯರ್

ಮಾದನ ಪ್ರೀತಿಗೆ ರಮಣ್ ಸಮ್ಮತಿಸಿದರೆ... ಇಡೀ ಜೀವನ ಪೂರ್ತಿ ರಾಣಿ-ಮಾದ ಕೂತು ತಿನ್ನಬಹುದು. ಹೀಗಾಗಿ, ಮಾದ ಈ ಪ್ಲಾನ್ ಮಾಡಿದ್ದಾನೆ. ಮಾದ ಹೀಗೆ ಉಲ್ಟಾ ಹೊಡೆದಿರುವುದು ದೀಪಿಕಾಗೆ ಗೊತ್ತಿಲ್ಲ. ಅಸಲಿಗೆ, ಈ ರಾಣಿ, ಮಾದ, ಸಿತಾರ ಮಾಡುತ್ತಿರುವ ನಾಟಕ ದೀಪಿಕಾ ಹಾಗೂ ದಿನಕರ್ ಗೆ ಬಿಟ್ಟರೆ ಇನ್ಯಾರಿಗೂ ಗೊತ್ತಿಲ್ಲ. ಗೊತ್ತಾಗುವುದಕ್ಕೆ ನಿರ್ದೇಶಕರು ಬಿಡುತ್ತಲೇ ಇಲ್ಲ. ಇದಕ್ಕೆ ನೋಡಿ ವೀಕ್ಷಕರಿಗೆ ಕಿರಿಕಿರಿ ಆಗಿರುವುದು.!

ಸೀರಿಯಲ್ ಬೋರಿಂಗ್.!

ಸೀರಿಯಲ್ ಬೋರಿಂಗ್.!

'ರಾಧಾ ರಮಣ' ಸೀರಿಯಲ್ ತುಂಬಾ ಬೋರಿಂಗ್ ಆಗಿದೆ. ವೀಕ್ಷಕರು ಇಂಟ್ರೆಸ್ಟ್ ಕಳೆದುಕೊಳ್ಳುತ್ತಿದ್ದಾರೆ ಅನ್ನೋದಕ್ಕೆ ಈ ಕಾಮೆಂಟ್ ಗಳೇ ಸಾಕ್ಷಿ.

ಅವನಿ ಮದುವೆ ಸ್ಟೋರಿ ಶುರುವಾಗುತ್ತೆ...

ಅವನಿ ಮದುವೆ ಸ್ಟೋರಿ ಶುರುವಾಗುತ್ತೆ...

'ರಾಧಾ ರಮಣ' ಕಥೆಯ ದಿಕ್ಕು ಹೋಗುತ್ತಿರುವುದನ್ನು ನೋಡಿದರೆ, ಮುಂದಿನ ವಾರದಿಂದ 'ಅವನಿ ಮದುವೆ ಅಧ್ಯಾಯ' ಶುರುವಾಗುತ್ತೆ ಅಂತ ಲೇವಡಿ ಮಾಡುತ್ತಿದ್ದಾರೆ ವೀಕ್ಷಕರು.

ಕರ್ಮ ಕರ್ಮ

ಕರ್ಮ ಕರ್ಮ

''ಸಿತಾರ ಆಡುವ ಆಟ ಸಾಲದು ಅಂತ ಇವನು ಬೇರೆ ಹುಟ್ಟುಕೊಂಡ, ಅಯ್ಯೋ ಕರ್ಮ ಕರ್ಮ ನೋಡುವವರಿಗೆ ಹುಚ್ಚು'' ಅಂತ ವೀಕ್ಷಕರು ತಲೆ ಚಚ್ಚಿಕೊಳ್ತಿದ್ದಾರೆ.

ಫ್ಯಾನ್ಸ್ ಗೆ ಬೇಸರ

ಫ್ಯಾನ್ಸ್ ಗೆ ಬೇಸರ

'ರಾಧಾ ರಮಣ' ಧಾರಾವಾಹಿ ಹೋಗುತ್ತಿರುವ ರೀತಿ ನೋಡಿ ಫ್ಯಾನ್ಸ್ ಗೆ ಬೇಸರ ಆಗಿದೆ. ಈಗಲೇ ನಿರ್ದೇಶಕರು ಎಚ್ಚೆತ್ತುಕೊಂಡು, ಕಥೆಗೆ ವೇಗ ಕೊಟ್ಟರೆ ಒಳಿತು. ಇಲ್ಲದಿದ್ದರೆ, ಟಿ.ಆರ್.ಪಿಯಲ್ಲಿ ಅವರಿಗೇ ಲಾಸು.!

More from Filmibeat

English summary
Viewers have taken their Facebook account to express their displeasure watching Radha Ramana serial's new twist.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X