ದಾರಿ ತಪ್ಪುತ್ತಿದೆ 'ರಾಧಾ ರಮಣ' ಕಥೆ: ವೀಕ್ಷಕರದ್ದು ಬರೀ ವ್ಯಥೆ.!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಅದೇ 'ವಿವಾಹ ವಾರ್ಷಿಕೋತ್ಸವ'.
ರಮಣ್ ತಂಗಿ ಅನ್ವಿತಾ, ರಾಧಾ ಅಣ್ಣ ಆದಿತ್ಯ ಚೆನ್ನಾಗಿರಲಿ ಎಂಬ ಕಾರಣಕ್ಕೆ ರಾಧಾ-ರಮಣ್ ಮದುವೆಯ ಕಾಂಟ್ರ್ಯಾಕ್ಟ್ ಮಾಡಿಕೊಂಡರು. ಆದ್ರೀಗ 'ವಿವಾಹ ವಾರ್ಷಿಕೋತ್ಸವ' ನಡೆಯುತ್ತಿದೆ.
ಮನೆಗೆ ಅವನಿ ಹೆಸರಿನಲ್ಲಿ ಸೇರಿಕೊಂಡಿರುವ ರಾಣಿ ಬಗ್ಗೆ ದಿನಕ್ಕೊಂದು ಕಂಪ್ಲೇಂಟ್ ಬರುತ್ತಲೇ ಇದೆ. ಹೀಗಿದ್ದರೂ, ಅದ್ಯಾವುದಕ್ಕೂ ರಮಣ್ ತಲೆ ಕೆಡಿಸಿಕೊಳ್ಳುತ್ತಿಲ್ಲ. ರಮಣ್ ತಲೆಯಲ್ಲಿ ಡೌಟ್ ಕೂಡ ಬರುತ್ತಿಲ್ಲ.
''ಅವನಿ (ರಾಣಿ) ತೊದಲುತ್ತಿಲ್ಲ. ಚೆನ್ನಾಗಿ ಮಾತನಾಡಿದ್ದನ್ನ ನಾನೇ ಕೇಳಿಸಿಕೊಂಡೆ'' ಅಂತ ಅನ್ವಿತಾ ಹೇಳಿದರೂ ಅದನ್ನ ಒಪ್ಪಲು ರಮಣ್ ರೆಡಿ ಇಲ್ಲ. ಅವನಿ (ರಾಣಿ) ಸುಳ್ಳು ಹೇಳುತ್ತಿರುವುದು ಅನ್ವಿತಾ, ರಾಧಾಗೆ ಗೊತ್ತು. ಆದರೂ, ಅವರಿಬ್ಬರ ಯೋಚನಾಶೈಲಿಯೇ ವಿಭಿನ್ನ.!
ಪ್ರತಿದಿನ ಇದೇ ವ್ಯಥೆಯನ್ನ ನೋಡಿ ನೋಡಿ ವೀಕ್ಷಕರಿಗೂ ಬೇಸರ ಆಗಿದೆ. ಮುಂದಕ್ಕೆ ಹೋಗದ 'ರಾಧಾ ರಮಣ' ಕಥೆ ಬಗ್ಗೆ ವೀಕ್ಷಕರು ಕಲರ್ಸ್ ಕನ್ನಡ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ ಕಾಮೆಂಟ್ ಮಾಡಿದ್ದಾರೆ. ಮುಂದೆ ಓದಿರಿ...

ಮದುವೆ ಒಪ್ಪಂದ ಏನಾಯ್ತು.?
ಸೀರಿಯಲ್ ನೋಡುವ ವೀಕ್ಷಕರು ಎಷ್ಟು ಬುದ್ಧಿವಂತರಾಗಿರುತ್ತಾರೆ, ಅನ್ನೋದಕ್ಕೆ ಈ ಕಾಮೆಂಟ್ ಗಳೇ ಸಾಕ್ಷಿ. ಮದುವೆ ಒಪ್ಪಂದ ಮರೆತು ರಾಧಾ-ರಮಣ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವುದು ಹೇಗೆ.? ತೊದಲುವ ವಿಷಯವನ್ನ ಸ್ಪಷ್ಟವಾಗಿ ಹೇಳಿದರೂ, ರಾಧಾ-ರಮಣಗೆ ಅರ್ಥ ಆಗುತ್ತಿಲ್ಲ. ಅವರಿಬ್ಬರು ಸ್ವಲ್ಪ ಬುದ್ಧಿವಂತರು ಅನ್ನೋದನ್ನ ತೋರಿಸಿ ಎಂದು ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.

ಕಥೆ ದಾರಿ ತಪ್ಪುತ್ತಿದೆ
''ರಮಣ್ ಫ್ಯಾಮಿಲಿ ಸೆಂಟಿಮೆಂಟ್ ಅಂತ ತೋರಿಸಿ, ಈಗ ಫ್ಯಾಮಿಲಿ ವಿರುದ್ಧ ಕೂಗಾಡುವ ಹಾಗೆ ರಮಣ್ ಆಗಿದ್ದಾರೆ. ಕಥೆ ದಾರಿ ತಪ್ಪುತ್ತಿದೆ'' ಅಂತಿದ್ದಾರೆ ವೀಕ್ಷಕರು.

ಮದುವೆ ಮಾಡಬಹುದಿತ್ತು.!
''ರಾಧಾ-ರಮಣ್ ಗೆ ಮದುವೆ ಆಗದೆ ವಿವಾಹ ವಾರ್ಷಿಕೋತ್ಸವ ನಡೆಯುತ್ತಿದೆ. ವಿವಾಹ ವಾರ್ಷಿಕೋತ್ಸವ ಬದಲು ಮದುವೆ ಮಾಡಬಹುದಿತ್ತು'' ಅನ್ನೋದು ವೀಕ್ಷಕರ ಲೆಕ್ಕಾಚಾರ.

ಇಂದು ಏನಾಗುತ್ತೋ.?
''ಅವನಿ ನಮ್ಮ ಮುಂದೆ ನಾಟಕ ಮಾಡ್ತಿದ್ದಾಳೆ. ಅವಳು ತೊದಲುವುದಿಲ್ಲ'' ಅಂತ ಅನ್ವಿತಾ ಹೇಳಿದ್ದಕ್ಕೆ ಮಾತಿಗೆ ಮಾತು ಬೆಳೆದು ಅನ್ವಿತಾ ಕಪಾಳಕ್ಕೆ ಹೊಡೆಯಲು ರಮಣ್ ಮುಂದಾಗಿದ್ದಾರೆ. ಇಂದು ಇನ್ನೇನು ಅವಾಂತರ ಕಾದಿದೆಯೋ.?


Click it and Unblock the Notifications











