»   » ನಿರೂಪಕಿ ಅನುಶ್ರೀ ಕಂಡರೆ ಎಲ್ಲರಿಗೂ ಯಾಕಪ್ಪ ಇಷ್ಟೊಂದು ಕೋಪ.!

ನಿರೂಪಕಿ ಅನುಶ್ರೀ ಕಂಡರೆ ಎಲ್ಲರಿಗೂ ಯಾಕಪ್ಪ ಇಷ್ಟೊಂದು ಕೋಪ.!

Posted By:
Subscribe to Filmibeat Kannada

ಕನ್ನಡದ ಸ್ಟಾರ್ ನಿರೂಪಕಿಯರ ಪೈಕಿ ಅನುಶ್ರೀ ಕೂಡ ಒಬ್ಬರು. ಯಾವುದೇ ದೊಡ್ಡ ಟಿವಿ ಕಾರ್ಯಕ್ರಮ ಇದ್ದರೂ, ಅಲ್ಲಿ ಅನುಶ್ರೀ ಮೈಕ್ ಹಿಡಿದು ಬಂದರನೇ ಆ ಕಾರ್ಯಕ್ರಮಕ್ಕೆ ಒಂದು ಕಳೆ ಬರುತ್ತೆ. ಅದಕ್ಕೆ ಅನ್ಸುತ್ತೆ ಅಂಕರ್ ಅಂದ್ರೆ ಅನುಶ್ರೀ.. ಅನುಶ್ರೀ ಅಂದ್ರೆ ಅಂಕರ್ ಎನ್ನುವ ರೀತಿ ಆಗಿದೆ.

'ಜೀ ಕನ್ನಡ' ವಾಹಿನಿಯ 'ಸರಿಗಮಪ ಸೀಸನ್-13' ಕಾರ್ಯಕ್ರಮದ ನಿರೂಪಕಿಯಾಗಿದ್ದ ಅನುಶ್ರೀ ಈಗ 'ಡ್ಯಾನ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮಕ್ಕೂ ನಿರೂಪಕಿಯಾಗಿ ಮುಂದುವರೆದಿದ್ದಾರೆ. ಇದು ಅನೇಕ ವೀಕ್ಷಕರ ಕೋಪಕ್ಕೆ ಕಾರಣವಾಗಿದೆ.

ಹೀಗಾಗಿ, ಫೇಸ್ ಬುಕ್ ನಲ್ಲಿ ಅನುಶ್ರೀ ಬಗ್ಗೆ ಅನೇಕ ವೀಕ್ಷಕರು ತಮ್ಮ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ಅಷ್ಟಕ್ಕೂ, ಅನುಶ್ರೀ ಮಾಡಿದ ತಪ್ಪೇನು? ಮುಂದೆ ಓದಿ....

ವೀಕ್ಷಕರ ಬೇಸರ

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದ ನಿರೂಪಣೆಯನ್ನು ಅನುಶ್ರೀ ಮಾಡುತ್ತಿದ್ದು, ಇದು ಅನೇಕ ವೀಕ್ಷಕರಿಗೆ ಬೇಸರ ತಂದಿದೆ. ಜೊತೆಗೆ 'ಜೀ ಕನ್ನಡ' ವಾಹಿನಿಯ ಫೇಸ್ ಬುಕ್ ಪೇಜ್ ನಲ್ಲಿ ಅನೇಕರು ತಮ್ಮ ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ.

ನೋಡಿ ನೋಡಿ ಸಾಕಾಗಿದೆ

ಅನುಶ್ರೀ ಒಳ್ಳೆಯ ನಿರೂಪಕಿ. ಆದರೆ ಅವರನ್ನು ಪದೇ ಪದೇ ನೋಡಿ ನೋಡಿ ನಮಗೆ ಸಾಕಾಗಿದೆ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.

ಮುಕ್ತಿ ಕೊಡಿ

ಎಲ್ಲ ಓಕೆ ಆದರೆ ಅನುಶ್ರೀ ಅವರ ನಿರೂಪಣೆಯಿಂದ ಮುಕ್ತಿ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ವೀಕ್ಷಕರೊಬ್ಬರು ಹೇಳಿದ್ದಾರೆ.

ಬದಲಾಯಿಸಿ

ದಯವಿಟ್ಟು ಕಾರ್ಯಕ್ರಮ ಅಂಕರ್ ಬದಲಾಯಿಸಿ ಎಂದು ಕೆಲವರು ಮನವಿ ಮಾಡಿದ್ದಾರೆ.

ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ

ಅನುಶ್ರೀ ಬಿಟ್ಟರೆ ಬೇರೆ ಯಾರು ಇಲ್ವಾ...? ಹೊಸ ಪ್ರತಿಭೆಗಳಿಗೂ ಒಂದು ಅವಕಾಶ ನೀಡಬಹುದಲ್ವಾ ಅಂತ ಕಾರ್ಯಕ್ರಮದ ನೋಡುಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಅನುಶ್ರೀ ಬೆಸ್ಟ್

ಕೆಲವರು ಅನುಶ್ರೀ ನೋಡುವುದಕ್ಕೆ ಬೋರ್ ಆಗುತ್ತದೆ ಅಂತ ಹೇಳಿದ್ರೆ, ಇನ್ನೂ ಕೆಲವರು ಅನುಶ್ರೀ ಬೆಸ್ಟ್ ಅಂಕರ್ ಅವರಿಗಾಗಿ ನಾವು ಈ ಕಾರ್ಯಕ್ರಮ ನೋಡುತ್ತೇವೆ ಅಂತಾನೂ ಹೇಳಿದ್ದಾರೆ.

English summary
Viewers are taken there Facebook account to express there opinion about Zee Kannada Channel's anchor Anushree.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada