For Quick Alerts
  ALLOW NOTIFICATIONS  
  For Daily Alerts

  ಇದಕ್ಕೆ ನೋಡಿ ಎಚ್.ಡಿ.ದೇವೇಗೌಡ ಅಂದ್ರೆ ವೀಕ್ಷಕರಿಗೆ ಗೌರವ, ಪ್ರೀತಿ, ಹೆಮ್ಮೆ.!

  By Harshitha
  |

  ಇಲ್ಲಿಯವರೆಗೂ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅನೇಕ ತಾರೆಯರು ಸಾಧಕರ ಸೀಟ್ ಮೇಲೆ ಕೂತು ತಮ್ಮ ಜೀವನದ ಫ್ಲ್ಯಾಶ್ ಬ್ಯಾಕ್ ನೋಡಿದ್ದಾರೆ. ಚಲನಚಿತ್ರ ತಾರೆಯರನ್ನು ಹೊರತು ಪಡಿಸಿ, ರಾಜಕಾರಣಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರವರ ಸಂಚಿಕೆ ಅನೇಕರಿಗೆ ಇಷ್ಟವಾಗಿದೆ.

  'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಎಚ್.ಡಿ.ದೇವೇಗೌಡ ರವರ ಸಂಚಿಕೆ ನೋಡಿದ ಮೇಲಂತೂ ವೀಕ್ಷಕರಿಗೆ ಎಚ್.ಡಿ.ದೇವೇಗೌಡ ರವರ ಮೇಲೆ ಪ್ರೀತಿ, ಗೌರವ, ಹೆಮ್ಮೆ ಹೆಚ್ಚಾಗಿದೆ. ಅದಕ್ಕೆ ಸಾಕ್ಷಿ ವೀಕ್ಷಕರೊಬ್ಬರು ಫೇಸ್ ಬುಕ್ ನಲ್ಲಿ ಬರೆದಿರುವ ಈ ಸಾಲುಗಳು -

  * ಮಾಜಿ ಪ್ರಧಾನಿ ಮಣ್ಣಿನ ಮಗ ಎಚ್.ಡಿ.ದೇವೇಗೌಡರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನೋಡಿ ತಿಳಿದಿದ್ದು...

  1. ರಮೇಶ್ ರವರಿಗೆ ದೇವೇಗೌಡರು ಕೇಳಿದ ಮೊದಲನೆ ಮಾತು - "ನೀವೆಲ್ಲಿ ಕುತ್ಕೋತಿರಿ?"

  - ಮತ್ತೊಬ್ಬರ ಮೇಲಿನ ಕಾಳಜಿ

  2. ಎಸ್.ಎಂ. ಕೃಷ್ಣ ಅವರ ಪಶ್ಚಾತ್ತಾಪದ ಮಾತುಗಳು - "ನಾವು ದೇವೇಗೌಡರನ್ನ ಸೋಲಿಸಬಾರದಿತ್ತು" ಎಂದಾಗ ಗೌಡರು ಅವರಿಗೆ ಕೈ ಮುಗಿದದ್ದು

  - ಕ್ಷಮಿಸುವ/ಶತ್ರುವಿನಲ್ಲಿ ಪಶ್ಚಾತ್ತಾಪದ ಭಾವ ಮೂಡಿಸಿ ಅವರನ್ನು ಗೆಲ್ಲುವುದು.

  3. ದೇವೇಗೌಡರು ತಮ್ಮ ಪತ್ನಿಗೆ ಹೇಳಿದ್ದು - "ನೀವು ಬಂದ್ರಾ? ಅಯೋ ನಾನೇ ಕರ್ಕೊಂಡು ಬರ್ತ್ತಿದ್ನಲ್ಲ" (ಇದುವರೆಗೂ ಯಾವ ಸಾಧಕರು ತನ್ನವರಿಗೆ ಹೇಳಿರಲಿಲ್ಲ)

  - ಪತ್ನಿಯ ಮೇಲಿನ ಪ್ರೀತಿ ಹಾಗು ಕಾಳಜಿ.

  4. ದೂರದ ಪಂಜಾಬ್ ರಾಜ್ಯದ ರೈತರು ತಮ್ಮ ಒಂದು 'ಭತ್ತದ ತಳಿಗೆ' ದೇವೇಗೌಡರ ಹೆಸರಿಟ್ಟಿರುವುದು

  - ಎಂದು ಹೇಳಿಕೊಳ್ಳದ ಗೌಡರ ಹೇಳದೆ ಮಾಡುವ ಗುಣ.

  5. ಕೃಷ್ಣಾ ನೀರಾವರಿ ಯೋಜನೆಯ ಹುಟ್ಟು ಹಾಕಿ ತನ್ನ ಸ್ವಜಾತಿಯವರಲ್ಲದ ಜನ ಹಾಗೂ ರೈತರಿರುವ ಜಿಲ್ಲೆಗಳಿಗಾಗಿ ಹೋರಾಡಿ ನೀರಾವರಿ ಯೋಜನೆಯ ಕಟ್ಟಿದ್ದು ಹಾಗೂ ಎಂದಿಗೂ ಮಾರ್ಕೆಟಿಂಗ್ ಮಾಡದೇ ಇರುವುದು

  - ಜಾತ್ಯತೀತತೆ ಹಾಗೂ ಕಾರ್ಯ ದಕ್ಷತೆ

  6. "ಮೋದಿಯವರು ನನ್ನನು, ನನ್ನ ನಡೆ ನುಡಿಗಳನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ಯಾಕಂದರೆ ಬದುಕಿರುವವರಲ್ಲಿ ನಾನೊಬ್ಬನೇ ಅಕ್ಟಿವ್ ಮಾಜಿ ಪ್ರಧಾನಿ, ಆದರೆ ನನ್ನನು ಏನು ಮಾಡಲಾಗುವುದಿಲ್ಲ"

  - ಈ ವಯಸ್ಸಿನಲ್ಲಿ ಅವರ ಆತ್ಮವಿಶ್ವಾಸ

  7. "ನಾನು ಕನ್ನಡಿಗ" - ಭಾಷಾಭಿಮಾನಿ

  8. ''ಹೆಂಡತಿ ಮಕ್ಕಳ ಬಗ್ಗೆ ಬಹುವಚನದಲ್ಲಿ ಮಾತಾಡುವುದು"

  ಉದಾ: ಕುಮಾರಸ್ವಾಮಿ ಅವರು"

  - ಕಿರಿಯರನ್ನೂ ಗೌರವಿಸುವ ಗುಣ

  9. "ಕೊಲೆ, ಸುಲಿಗೆ, ಆತ್ಮಹತ್ಯೆ...ಇದೆಲ್ಲಾ ನೋಡಕ್ಕಾ ನನ್ ಬದಕಿರೋದು"

  - ಮರುಗುವ ಗುಣ

  10. ಯೋಗ, ಆಹಾರ ಪದ್ಧತಿ, ದೈವ ಭಕ್ತಿ, ಕಾಳಜಿ, ಚಿಂತನೆ, ಕುಟುಂಬ ನಿರ್ವಹಣೆ, ಛಲ, ಸೋಲದ/ಗೆಲ್ಲುವ ಆತ್ಮವಿಶ್ವಾಸ ಹೊಂದಿರುವ *85*ರ ಚೇತನ

  - ಶಾರೀರ ಹಾಗು ಶರೀರದ ಆರೋಗ್ಯ ನೋಡಿಕೊಳ್ಳುವ ಗುಣ

  ಯಾರು ಏನೇ ಹೇಳಲಿ ನನಗೆ ನನ್ನ ಏಕೈಕ ಕನ್ನಡದ ಪ್ರಧಾನಿಯ ಬಗ್ಗೆ ಹೆಮ್ಮೆ ಹಾಗೂ ಗೌರವ ಹೆಚ್ಚಾಯಿತು.

  ಇಂತಿ,
  ಮಂಜು ಕೆಎಲ್ಎಂ
  ಕೊರಟಗೆರೆ

  English summary
  EX Prime Minister, Politician, JDS Leader, HD Devegowda had taken part in Zee Kannada Channel's popular show 'Weekend With Ramesh 3'. Here is the Viewers opinion on the episode.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X