Annayya: 'ಅಣ್ಣಯ್ಯ' ಧಾರಾವಾಹಿ ನೋಡಿ 'ಪಾರು' ನೆನಪಿಸಿಕೊಂಡ ಫ್ಯಾನ್ಸ್; ಯಾಕೆ ಗೊತ್ತಾ?
ಜೀ ಕನ್ನಡದಲ್ಲಿ 'ಅಣ್ಣಯ್ಯ' ಧಾರಾವಾಹಿ ಎಲ್ಲರ ಮನಸ್ಸನ್ನು ಗೆದ್ದಿದೆ. ಅದರಲ್ಲೂ ರೌಡಿ ಬೇಬಿ ಕಮ್ ಬ್ಯಾಕ್ ಆದಂತ ಧಾರಾವಾಹಿ ಇದಾಗಿದೆ. 'ಗಟ್ಟಿಮೇಳ' ಧಾರಾವಾಹಿ ಮುಗಿದ ಮೇಲೆ ನಿಶಾ ಅವರನ್ನ ಫ್ಯಾನ್ಸ್ ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ತಾ ಇದ್ರು. ಆದರೆ ಅದಕ್ಕೆ ತಕ್ಕ ಹಾಗೇ ಅಭಿಮಾನಿಗಳಿಗೆ ಬೇಸರವನ್ನೇ ಮಾಡಿಸದಂತೆ ಕಮ್ ಬ್ಯಾಕ್ ಆದ್ರೂ. ಅಣ್ಣಯ್ಯ ಧಾರಾವಾಹಿಯಲ್ಲಿ ಡಾಕ್ಟರ್ ಪಾರ್ವತಿಯಾಗಿ ಕಾಣಿಸಿಕೊಂಡರು.
ನಿಶಾ ಅವರಿಗೆ ಆ ಗತ್ತು ಬಹಳ ಚೆನ್ನಾಗಿ ಒಪ್ಪುತ್ತದೆ. ರೌಡಿ ಬೇಬಿ ರೀತೊ ಎಲ್ಲರಿಗೂ ಅವಾಜ್ ಹಾಕಿಕೊಂಡು ಓಡಾಡುವುದಕ್ಕೇನೆ ಚೆಂದ. ಈಗ ಮತ್ತೆ ಅದೇ ಗತ್ತಿನ ಮೂಲಕ ಕಮ್ ಬ್ಯಾಕ್ ಆಗಿದ್ದಾರೆ. ಆದರೆ ಈ ಬಾರಿ ಜವಾಬ್ದಾರಿ ಜಾಸ್ತಿ ಇದೆ. ಗಂಡನ ಮನೆಯವರನ್ನೆಲ್ಲ ಕಾಪಾಡಬೇಕಾದ ಅನಿವಾರ್ಯತೆ ಇದೆ. ಪಾರು ಗಂಡನ ಮನೆಯವರಿಗೆ ತನ್ನ ತಂದೆಯೇ ವಿಲನ್. ತಂದೆ-ಮಗಳ ಜುಗಲ್ ಬಂದಿಯಿಂದಾಗಿ ವೀಕ್ಷಕರಿಗೆ ಪಾರು ಧಾರಾವಾಹಿ ನೆನಪಾಗಿದೆ.

ಸತ್ಯ ತಿಳಿಸಲು ಪ್ರಯತ್ನ
ರಶ್ಮಿಗೆ ನೋಡಿರುವ ಹುಡುಗ ವೀರಭದ್ರ ಸೃಷ್ಟಿಸಿರುವವನು ಎಂಬುದು ಪಾರು ಅಮ್ಮಂದಿರಿಗೆ ತಿಳಿದಿದೆ. ಆದರೆ ಈ ಸತ್ಯವನ್ನು ಶಿವುಗೆ ತಿಳಿಸುವುದಕ್ಕೆ ಅತ್ತೆಯಂದಿರು ತುಂಬಾನೇ ಪ್ರಯತ್ನ ಪಟ್ಟರು. ನೋಟಿನಲ್ಲೆಲ್ಲಾ ಬರೆದುಕೊಡುವುದಕ್ಕೆ ಪ್ರಯತ್ನಿಸಿದರು. ಆದರೆ ಅದು ಸಾಧ್ಯವೇ ಆಗಲಿಲ್ಲ. ಇದೀಗ ಪಾರು ಮನೆಗೆ ಬಂದಿದ್ದಾಳೆ, ಸತ್ಯ ಹೇಳುವ ಎಲ್ಲಾ ಪ್ರಯತ್ನಗಳು ನಡೆದರು ಅದು ಗಳಿಗೆ ಕೂಡಿ ಬರುತ್ತಿಲ್ಲ.
ತಂದೆಗೆ ಕೌಂಟರ್ ಕೊಟ್ಟ ಮಗಳು
ವೀರಭದ್ರ ಎಷ್ಟು ಕೆಟ್ಟವನು, ತನ್ನ ಅಣ್ಣ ಅದಕ್ಕೆಲ್ಲ ಎಷ್ಟು ಬೆಂಬಲ ನೀಡ್ತಾನೆ ಎಂಬುದು ಪಾರುಗೇ ಚೆನ್ನಾಗಿಯೇ ಅರಿವಿದೆ. ಹೀಗಾಗಿಯೇ ಮನೆಗೆ ಬಂದಾಗೆಲ್ಲಾ ತನ್ನ ತಂದೆಗೆ ಟಾಂಟ್ ಕೊಡುತ್ತಾ ಇರುತ್ತಾಳೆ. ಈಗ ಮನೆಗೆ ಬಂದಾಗಲೂ ಏನೊ ಅನುಮಾನ ಮೂಡಿದೆ. ಅಮ್ಮನನ್ನ ಎದುರಿಸಿ ಇಟ್ಟುಕೊಂಡಿರುವಂತೆ ಫೀಲ್ ಇದೆ. ಮದುವೆ ಮನೆಗೆ ಹೆಂಡತಿಯರು ಬಂದರೆ ಸತ್ಯವೆಲ್ಲಿ ಹೊರಗೆ ಬಂದುಬಿಡುತ್ತೋ ಎಂಬ ಭಯಕ್ಕೆ, ಶಿವ ಪಾರ್ವರಿ ಮುಂದೆ ಅವರ ತಂದೆಗೆ ಹುಷಾರಿಲ್ಲ ಅಂತ ಸುಳ್ಳು ಹೇಳಿಸಿದ್ದಾನೆ. ಇಲ್ಲೇನೋ ಸರಿ ಇಲ್ಲ ಎಂಬುದನ್ನು ಅರಿತ ಪಾರು ಅಮ್ಮಂದಿರನ್ನ ಹೊರಗೆ ಕರೆದುಕೊಂಡು ಹೋಗಿದ್ದಾಳೆ.
ರಶ್ಮಿ ಮದುವೆಗೆ ಸಾಲದ ಹೊರೆ
ಶಿವು ತಂಗಿಯರ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದಾನೆ. ಈಗ ರಶ್ಮಿ ಮದುವೆ ಗೊತ್ತಾಗಿರೋದಕ್ಕೆ ಗಂಡಿನವರು ಕೇಳಿದಂತೆ ಮದುವೆ ಮಾಡಿಕೊಡಲು ಈಗಾಗಲೇ ಐದು ಲಕ್ಷ ಸಾಲ ಮಾಡಿದ್ದಾನೆ. ಗಂಡಿನ ಮನೆಯವರು ವರದಕ್ಷಿಣೆ ಕೇಳ್ತಾರೆ ಎಂಬುದು ಗೊತ್ತಾದರೆ ಪಾರು ಸಹಿಸೋದಿಲ್ಲ ಅಂತ ಎಲ್ಲವನ್ನು ಮುಚ್ಚಿಟ್ಟು ಸಾಲ ತೆಗೆದುಕೊಳ್ಳಿತ್ತಿದ್ದಾನೆ. ಈಗ ವೀರಭದ್ರ ಮತ್ತೆ ಹೇಳಿಕೊಟ್ಟು ಇನ್ನೈದು ಲಕ್ಷ ಸಾಲ ಮಾಡುವಂತೆ ಹೇಳಿದ್ದಾನೆ. ಪಾರುಗೆ ಬೇಗ ಸತ್ಯ ತಿಳಿದರೆ ಶಿವು ಬಚಾವ್ ಆಗ್ತಾನೆ.
ಅಣ್ಣಯ್ಯ ಕಂಡು ಪಾರು ನೆನಪು
ಈ ಧಾರಾವಾಹಿಯನ್ನು ನೋಡುತ್ತಿರುವ ವೀಕ್ಷಕರಿಗೆ ಜೀ ಕನ್ನಡದಲ್ಲಿ ಈ ಹಿಂದೆ ಬರುತ್ತಿದ್ದ ಪಾರು ಧಾರಾವಾಹಿ ನೆನಪಾಗಿದೆ. ಯಾಕಂದ್ರೆ ಇಲ್ಲಿ ಖಳನಾಯಕನಾಗಿರುವ ವೀರಭದ್ರ ಅಲ್ಲಿ ಮುಗ್ಧತೆಯ ಹನುಮಂತು ಆಗಿದ್ರು. ದೊಡ್ಮನೆಯಲ್ಲಿ ಡ್ರೈವರ್ ಕೆಲಸ ಮಾಡುತ್ತಿದ್ದರು. ಅಂದು ಕೂಡ ಹನುಮಂತು ಮಗಳ ಹೆಸರು ಪಾರುನೇ ಆಗಿತ್ತು. ಇಲ್ಲಿಯೂ ಪಾರುನೇ ಆಗಿದ್ದಾಳೆ. ಆದರೆ ಕ್ಯಾರೆಕ್ಟರ್ ವಿಭಿನ್ನ. ರಫ್ ಅಂಡ್ ಟಫ್. ಅದಕ್ಕೆ ಪಾರು ಕಾರ್ ಡ್ರೈವರ್ ಹನುಮಂತು ಶಾಕ್ ಅಂತ ಕಮೆಂಟ್ ಹಾಕ್ತಾ ಇದಾರೆ.


Click it and Unblock the Notifications











