Lakshana: ಭೂಪತಿ- ನಕ್ಷತ್ರ ಕಥೆಗೆ ಅಂತ್ಯ ಹಾಡಿ ಎಂದು ಕೇಳುತ್ತಿರುವ ವೀಕ್ಷಕರು
'ಲಕ್ಷಣ' ಧಾರಾವಾಹಿ ಮೊದಮೊದಲು ಎಲ್ಲರಿಗೂ ಸಹ ಇಷ್ಟವಾಗುತ್ತಿತ್ತು. ಆದರೆ ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯಿತು ಎಂಬ ಗಾದೆಯಂತೆ ಯಾರು ತಾನೇ ಕಥೆಯನ್ನು ಅಷ್ಟೊಂದು ಎಳೆದುಕೊಂಡು ಹೋದರೆ ನೋಡುತ್ತಾರೆ. ಇದನ್ನು ವೀಕ್ಷಕರು ಸ್ವತಃ ಹೇಳುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ಪ್ರೊಮೋ ಹಾಕಿದಾಗ ಯಾವಾಗ ಈ ಧಾರಾವಾಹಿ ಮುಗಿಯುತ್ತದೆ ಎಂದು ಕೇಳುತ್ತಿದ್ದಾರೆ. ಅಷ್ಟರಮಟ್ಟಿಗೆ ಬೇಸರ ತರಿಸಿದೆ.
ಈಗ ಮೌರ್ಯ ಹಾಗೂ ಶ್ವೇತಾ ಮದುವೆ ನಡೆದಿದ್ದು ಕಥೆಯನ್ನ ಇನ್ನಷ್ಟು ಎಳೆದುಕೊಂಡು ಹೋಗುತ್ತಿದ್ದಾರೆ. ಮೂರು ದಿನಗಳಲ್ಲಿ ಮುಗಿಸುವ ಸನ್ನಿವೇಶವನ್ನು ಒಂದು ವಾರಗಟ್ಟಲೆ ಎಳೆದುಕೊಂಡು ಹೋಗುತ್ತಿರುವುದು ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ. ಆದಷ್ಟು ಬೇಗ ಸ್ಟೋರಿಯನ್ನ ಮುಗಿಸಿ ಎಂದು ಕೇಳುತ್ತಿದ್ದಾರೆ.

ಮೊದಲು ನಕ್ಷತ್ರ ಯಾವುದೋ ಒಂದು ವಠಾರದಲ್ಲಿ ಇದ್ದು ತುಂಬಾ ಚೆನ್ನಾಗಿ ಜೀವನವನ್ನ ಸಾಧಿಸುತ್ತಿದ್ದಳು. ನಂತರ ಅವಳು ಒಂದು ಎಫ್‌ಎಂ ಸ್ಟೇಷನ್‌ನಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಭೂಪತಿ ಮೇಲೆ ಅವಳಿಗೆ ಲವ್ವಾಗಿತ್ತು. ಆದರೆ ಶ್ವೇತಾಳನ್ನು ಭೂಪತಿ ಇಷ್ಟಪಡುತ್ತಿದ್ದ ಕೊನೆಗೆ ನಕ್ಷತ್ರಳನ್ನು ಮದುವೆಯಾದನು. ಅಲ್ಲಿಯವರೆಗೂ ಕಥೆ ಚೆನ್ನಾಗಿಯೇ ಸಾಗುತ್ತಿತ್ತು.
ಡೇವಿಲ್ ಕ್ಯಾರೆಕ್ಟರ್ ಹಿಡಿದು ಜಗ್ಗಾಟ
ಕಥೆಯಲ್ಲಿ ಡೆವಿಲ್ ಕ್ಯಾರೆಕ್ಟರ್ ಹಿಡಿದು ಈ ಜಗ್ಗಾಟವನ್ನ ಮಾಡಲಾಗುತ್ತಿದೆ. ಈ ಕಡೆ ಡೆವಿಲ್ ಯಾರು ಎಂದು ತಿಳಿಯುವಷ್ಟರಲ್ಲಿ ಅಲ್ಲೊಂದು ಟ್ವಿಸ್ಟ್ ಕೊಟ್ಟು ವೀಕ್ಷಕರು ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ಇದರಿಂದಾಗಿ ಜನರು ಬೇಸತ್ತು ಹೋಗಿದ್ದಾರೆ. ಈಗ ಶ್ವೇತಾ, ಮೌರ್ಯನನ್ನು ಮದುವೆಯಾಗಿದ್ದು ಧಾರಾವಾಹಿಯನ್ನು ಮತ್ತಷ್ಟು ಎಳೆದುಕೊಂಡು ಹೋಗುತ್ತಿದ್ದಾರೆ. ಅದಕ್ಕಾಗಿ ಇನ್ನೆಷ್ಟು ದಿನ ಈ ರೀತಿ ತೋರಿಸುತ್ತೀರಾ ಎಂದು ಕೇಳಿದ್ದಾರೆ.
ಒಂದೇ ಒಂದು ವಿಷಯವನ್ನು ವಾರಗಟ್ಟಲೆ ಎಳೆದುಕೊಂಡು ಹೋಗುತ್ತಿರುವುದು ಜನರಿಗೆ ಇಷ್ಟವಿಲ್ಲ. ನಕ್ಷತ್ರ ಹಾಗೂ ಭೂಪತಿ ಮದುವೆ ಮಾಡುವಂತೆ ತೋರಿಸಿ ಶ್ವೇತಾ- ಭೂಪತಿಯನ್ನು ಮದುವೆಯಾಗಲು ಅಣಿಯಾಗಿದ್ದಳು. ಇದನ್ನು ವಾರಗಟ್ಟಲೆ ತೋರಿಸಿ ಬೇಸರ ತರಿಸಿ ಕೊನೆಗೆ ಮೌರ್ಯ ಮದುವೆಯಾದನು. ಇದನ್ನೆಲ್ಲಾ ನೋಡಿ ವೀಕ್ಷಕರು ಬೇಸರ ಮೂಡಿಸಿದ್ದಾರೆ. ಹೇಗಾದರೂ ಮಾಡಿ ಕೊನೆಗೊಂದು ಅಂತ್ಯ ನೀಡಿ ಧಾರವಾಹಿಯನ್ನ ಬೇಗ ಮುಗಿಸಿ ಎನ್ನುತ್ತಿದ್ದಾರೆ.

ಕೆಲವರಿಗೆ ಇಷ್ಟ ಕೆಲವರಿಗೆ ಕಷ್ಟ
ಲಕ್ಷಣ ಧಾರಾವಾಹಿಯನ್ನು ಕೆಲವರು ಇಷ್ಟಪಟ್ಟು ನೋಡುತ್ತಿದ್ದಾರೆ. ಇನ್ನೂ ಕೆಲವರು ಧಾರವಾಹಿಯನ್ನು ಮುಗಿಸಿ ಎಂಬ ಸಲಹೆಯನ್ನು ನೀಡುತ್ತಿದ್ದಾರೆ. ಅತಿ ಹೆಚ್ಚು ಜನರು ಧಾರಾವಾಹಿ ಮುಗಿಸಬೇಕು ಎನ್ನುತ್ತಿದ್ದಾರೆ. ಸದ್ಯಕ್ಕೆ ಕಲರ್ಸ್ ಕನ್ನಡದಲ್ಲಿ ಹೊಸ ಹೊಸ ಧಾರಾವಾಹಿ ಬಂದಿದ್ದು ಲಕ್ಷಣ ಧಾರಾವಾಹಿಗೆ ಕೊನೆಯ ಆದ್ಯತೆ ನೀಡಲಾಗಿದೆ.
ಟಿಆರ್‌ಪಿಯಲ್ಲೂ ಲಕ್ಷಣ ಸಾಧನೆ ಅಷ್ಟಕಷ್ಟೆ. ಈಗ ಕೊನೆಯ ಸ್ಥಾನಕ್ಕೆ ಕುಸಿದಿದೆ. ಜನರು ಯಾರು ಸಹ ಧಾರಾವಾಹಿಯನ್ನು ಮೆಚ್ಚಿಕೊಂಡು ನೋಡುತ್ತಿಲ್ಲ. ಪ್ರತಿದಿನವೂ ಧಾರಾವಾಹಿ ಕಥೆಯನ್ನು ಎಳೆದುಕೊಂಡು ಹೋಗುತ್ತಿದ್ದಾರೆ. ಸ್ಕ್ರಿಪ್ಟ್ ಚೆನ್ನಾಗಿ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಪ್ರೇಕ್ಷಕರ ಮಾತಿಗೆ ಮನ್ನಣೆಯನ್ನು ಕೊಟ್ಟು ಧಾರಾವಾಹಿಯನ್ನ ತಂಡ ಮುಗಿಸುತ್ತಾ ಕಾದು ನೋಡಬೇಕಿದೆ.


Click it and Unblock the Notifications











