ಸ್ನೇಹಾ-ಸಿಹಿ ಸಾವು!; ಮುಖ್ಯ ಪಾತ್ರಗಳೇ ಸತ್ತು ಹೋದರೆ ಕಥೆ ಸಾಗುವುದು ಹೇಗೆ?
ಜೀ ಕನ್ನಡದಲ್ಲಿ ಬರುವ ಎಲ್ಲಾ ಧಾರಾವಾಹಿಗಳು ಹಿಟ್ ಧಾರಾವಾಹಿಗಳೇ. ಒಂದಕ್ಕಿಂತ ಒಂದು ಚೆನ್ನಾಗಿದ್ದಾವೆ. ಹೊಸದಾಗಿ ಶುರುವಾದ ಯಾವ ಧಾರಾವಾಹಿಯೂ ಜನರ ಮನಸ್ಸು ಗೆಲ್ಲದೇ ಸೋತಿಲ್ಲ. ಅದರಲ್ಲೂ ವರ್ಷಾನುಗಟ್ಟಲೇ ಪ್ರಸಾರ ಆಗಿರುವ ಧಾರಾವಾಹಿಗಳೇ ಹೆಚ್ಚು. ಸದ್ಯ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಹಲವು ವರ್ಷಗಳಿಂದ ಪ್ರಸಾರವಾಗುತ್ತಲೇ ಇದೆ. ಇಲ್ಲಿಯ ತನಕ ಕಥೆಯಲ್ಲಿ ಬೇಸರವೇ ಆಗಿಲ್ಲ.
ಇನ್ನು 'ಸೀತರಾಮ' ಧಾರಾವಾಹಿ ಶುರುವಾಗಿ ಕೂಡ ವರ್ಷಗಳೇ ಕಳೆದಿದೆ. ಸೀರಿಯಲ್ ನೋಡ್ತಾ ಇದ್ರೆ ಇತ್ತೀಚೆಗೆ ಶುರುವಾಗಿದ್ಯೇನೋ ಅನ್ನಿಸುತ್ತೆ. ಸಿಹಿಯೇ ಮುಖ್ಯ ಪಾತ್ರಧಾರಿ. ಅಮ್ಮ ಮಗಳ ಬಾಂಧವ್ಯಕ್ಕೆ ವೀಕ್ಷಕರು ಫಿದಾ ಆಗಿದ್ರು. ಆದರೆ ಈಗ ಎರಡು ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳೇ ಸಾವನ್ನಪ್ಪುತ್ತಿವೆ. ಇದು ಎಲ್ಲರಿಗೂ ಶಾಕ್ ನೀಡಿದೆ. ಹಾಗಾದ್ರೆ ಕಥೆ ಮುಂದುವರೆಯುವುದು ಹೇಗೆ ಎನ್ನುವ ಪ್ರಶ್ನೆಗಳು ಕಾಡುತ್ತಿವೆ.

ಸ್ನೇಹಾಗೆ ಆಕ್ಸಿಡೆಂಟ್
ಪುಟ್ಟಕ್ಕನ ಮಗಳು ಸ್ನೇಹಾಗೆ ಮನೆಯಲ್ಲಿರೋದು ಬಂಗಾರಮ್ಮ ಅಲ್ಲ ಅನ್ನೋದು ಗೊತ್ತಾಗಿದೆ. ತನ್ನ ಅತ್ತೆಯನ್ನು ಕೂಡಿ ಹಾಕಿದ್ದ ಜಾಗಕ್ಕೆ ಹೋಗಿ ಕಾಪಾಡಿ ಆಗಿದೆ. ಇದು ಸಿಂಗಾರಮ್ಮನಿಗೆ ತಿಳಿದು ಸ್ನೇಹಾ ಹಾಗೂ ಬಂಗಾರಮ್ಮನಿಗೆ ಆಕ್ಸಿಡೆಂಟ್ ಮಾಡಿಸಲು ಪ್ಲ್ಯಾನ್ ಮಾಡಿದ್ದಾಳೆ. ಇದು ಬಂಗಾರಮ್ಮನ ತಾಯಿಗೂ ಗೊತ್ತಾಗಿದೆ. ಮೊಮ್ಮಗ ಕಂಠಿಗೆ ವಿಷಯ ಮುಟ್ಟಿಸಿದ್ದಾಳೆ. ಆದರೆ ಕಂಠಿ ಹೋಗುವುದರೊಳಗಾಗಿ ನಡೆಯಬಾರದ ಘಟನೆ ನಡೆದು ಹೋಗಿದೆ.
ಮೊದಲೇ ಕ್ಲೂ ಕೊಟ್ಟಿದ್ದ ಸಂಜನಾ
ಕಳೆದ ಕೆಲವು ದಿನಗಳ ಹಿಂದಷ್ಟೇ ಸೀರಿಯಲ್‌ಗೆ ವಿದಾಯ ಹೇಳುತ್ತಿರುವ ಬಗ್ಗೆ ಸಂಜನಾ ಬುರ್ಲಿ ಕ್ಲೂ ಕೊಟ್ಟಿದ್ದರು. ಪಾತ್ರ ಬದಲಾದರೆ ಆ ಪಾತ್ರಕ್ಕೆ ಯಾರೂ ಬರಬಹುದು ಎಂದು ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ವೀಕ್ಷಕರು ತಲೆ ಕೆಡಿಸಿಕೊಂಡಿದ್ದರು. ಸಪೋರ್ಟಿಂಗ್ ಕ್ಯಾರೆಕ್ಟರ್‌ಗಳಿಗೆ ಸುಲಭವಾಗಿ ರಿಪ್ಲೇಸ್ ಮಾಡಬಹುದು. ಆದರೆ ಮುಖ್ಯ ಪಾತ್ರಗಳು ಬದಲಾದರೆ ಅಲ್ಲಿಗೆ ಅಂತ್ಯ ಮಾಡಿದರೆ ಫ್ಯಾನ್ ಫಾಲೋವರ್ಸ್ ಹಾಗೇ ಉಳಿಯುತ್ತಾರೆ. ಮೇನ್ ಕ್ಯಾರೆಕ್ಟರ್‌ಗಳ ರಿಪ್ಲೇಸ್ ಆದಾಗ ಫ್ಯಾನ್ಸ್ ಕೂಡ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ ಸ್ನೇಹಾ ಪಾತ್ರವನ್ನು ಆಕ್ಸಿಡೆಂಟ್ ಮಾಡಿಸುವ ಮೂಲಕವೇ ಅಂತ್ಯ ಮಾಡಿದ್ದಾರೆ ಎನಿಸುತ್ತಿದೆ.
ಸೀತಾರಾಮದಲ್ಲಿ ಸಿಹಿಯೇ ಮುಖ್ಯ
ಇನ್ನು ಜೀ ಕನ್ನಡದಲ್ಲಿಯೇ ಬರುತ್ತಿರುವ ಮತ್ತೊಂದು ಧಾರಾವಾಹಿ ಸೀತಾರಾಮ. ಗಂಡನಿಲ್ಲ ತವರು ಮನೆಯವರ ಬೆಂಬಲವಿಲ್ಲದೆ ತಾನೇ ದುಡಿದು ಮಗಳನ್ನ ಹೇಗೆ ಸಾಕುತ್ತಿದ್ದಾಳೆ ಎಂಬ ಸ್ಫೂತಿದಾಯಕ ಕಥೆಯಾಗಿತ್ತು. ಈಗ ಸೀತಾ ಮತ್ತು ರಾಮ ಮದುವೆಯೂ ಆಗಿದೆ. ಸಿಹಿಯನ್ನ ತನ್ನ ಮಗಳೆಂದು ಒಪ್ಪಿಕೊಂಡು ಆಗಿದೆ. ಆದರೆ ಹೊಸದೊಂದು ಪ್ರೋಮೋ ಬಿಟ್ಟು ನೋಡುಗರಿಗೆ ದಿಗಿಲು ಬಡಿಸಿದ್ದಾರೆ. ಸಿಹಿಗೆ ಆಕ್ಸಿಡೆಂಟ್ ಆಗಿದೆ. ಅದೊಂದು ಕನಸಿನ ಲೋಕದ ಥರವೇ ಸೃಷ್ಟಿ ಮಾಡಿದ್ದಾರೆ. ಇದೊಂದು ಕನಸು ಅಂತಾನೇ ವೀಕ್ಷಕರು ಅಂದಾಜಿಸುತ್ತಿದ್ದಾರೆ. ಆದರೆ ಸೀತಾರಾಮ ಬದುಕಲ್ಲಿ ಹೊಸ ಲಾಲಿ ಅನ್ನೋ ಕ್ಯಾಪ್ಶನ್ ಕೂಡ ಹಾಕಿದ್ದಾರೆ.
ಮುಂದೆ ಕಥೆ ಹೇಗೆ?
'ಪುಟ್ಟಕ್ಕನ ಮಕ್ಕಳು' ಹಾಗೂ 'ಸೀತಾರಾಮ' ಈ ಎರಡು ಧಾರಾವಾಹಿಯಲ್ಲೂ ಸ್ನೇಹಾ, ಸಿಹಿ ಪ್ರಮುಖ ಪಾತ್ರಧಾರಿಗಳಾಗಿದ್ದರು. ಸ್ನೇಹಾ ಸತ್ತರೆ ಬರೀ ಸಹನಾ, ಸುಮಾ ಮೇಲೆ ಕಥೆ ತೆಗೆದುಕೊಂಡು ಹೋಗುವುದು ಕಷ್ಟ. ಇನ್ನು ಸೀತಾರಾಮದಲ್ಲಿ ಸಿಹಿಯ ಮೇಲೆ ಕಥೆ ಚೆನ್ನಾಗಿ ಹೋಗ್ತಾ ಇತ್ತು. ಬಾಡಿಗೆ ತಾಯಿ ವಿಚಾರ. ಈಗ ಸಿಹಿಯೇ ಇಲ್ಲದೇ ಹೋದರೆ ಮತ್ತೊಂದು ಮಗುವಿನ ಆಗಮನದ ಮೇಲೆ ಕಥೆ ಸಾಗಬೇಕಾಗುತ್ತದೆ. ಆ ಕಥೆ ವೀಕ್ಷಕರನ್ನು ಹೇಗೆ ಹಿಡಿದಿಡುತ್ತೋ ಗೊತ್ತಿಲ್ಲ. ಈ ಎರಡು ಅಪ್ಡೇಟ್ ಸೀರಿಯಲ್ ಪ್ರೇಮಿಗಳಿಗೆ ಶಾಕ್ ನೀಡಿದೆ. ಎರಡೂ ಧಾರಾವಾಹಿ ಬಹಳ ಬೇಗ ಮುಕ್ತಾಯವಾಗುತ್ತಾ ಕಾದು ನೋಡಬೇಕಿದೆ.


Click it and Unblock the Notifications











