ಜೂನಿಯರ್ ಶಿವಣ್ಣನನ್ನು ಕರೆ ತಂದ ವಾಹಿನಿ ಮೇಲೆ ವೀಕ್ಷಕರ ಉರಿಗಣ್ಣು!
'ಕನ್ನಡ ಕೋಗಿಲೆ ಸೀಸನ್ 2' ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಬಾರಿಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಜೂನಿಯರ್ ಶಿವರಾಜ್ ಕುಮಾರ್ ಎಂದು ಕಲರ್ಸ್ ಸೂಪರ್ ವಾಹಿನಿ ಬಿಂಬಿಸಿದೆ. ಆದರೆ, ವೀಕ್ಷಕರಿಗೆ ಮಾತ್ರ ಇದು ಸ್ವಲ್ಪವೂ ಇಷ್ಟವಾಗಿಲ್ಲ.
ಇಸ್ಮಾಯಿಲ್ ಎಂಬ ಬೆಳಗಾವಿಯ ಪ್ರತಿಭೆ ಜೂನಿಯರ್ ಶಿವರಾಜ್ ಕುಮಾರ್ ಆಗಿದ್ದಾರೆ. ಈ ಪ್ರತಿಭೆಗೆ ಕಲರ್ಸ್ ಸೂಪರ್ ವಾಹಿನಿ ತಮ್ಮ 'ಕನ್ನಡ ಕೋಗಿಲೆ ಸೀಸನ್ 2' ಅವಕಾಶ ನೀಡಿದೆ. ಆದರೆ, ವೀಕ್ಷಕರ ಕಡೆಯಿಂದ ಇದಕ್ಕೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿದೆ.
ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪೇಜ್ ನಲ್ಲಿ ಜೂನಿಯರ್ ಶಿವರಾಜ್ ಕುಮಾರ್ ವಿಡಿಯೋ ಹಂಚಿಕೊಂಡಿದ್ದಾರೆ. ಆ ವಿಡಿಯೋಗೆ ಬಂದಿರುವ ಕಮೆಂಟ್ಸ್ ಗಳನ್ನು ಗಮನಿಸದರೆ ಸಾಕು ವೀಕ್ಷಕರ ಅಸಮಾಧಾನ ಯಾವ ಮಟ್ಟಕ್ಕೆ ಇದೆ ಎಂಬುದು ತಿಳಿಯುತ್ತದೆ.
ಕೆಲವೇ ಕೆಲವು ವೀಕ್ಷರನ್ನು ಬಿಟ್ಟರೆ ನೂರಕ್ಕೆ 90 ರಷ್ಟು ವೀಕ್ಷಕರು ಜೂನಿಯರ್ ಶಿವಣ್ಣನ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅವರ ನಟನೆ, ಲುಕ್, ಸ್ಟೈಲ್ ಯಾವುದೂ ಶಿವಣ್ಣನ ರೀತಿ ಇಲ್ಲ ಎನ್ನುವುದು ವೀಕ್ಷಕರ ಅಭಿಪ್ರಾಯ. ಮುಂದೆ ಓದಿ....

ಒಂದು ಚೂರು ಶಿವಣ್ಣ ತರ ಇಲ್ಲ
''ಕಲರ್ಸ್ ಸೂಪರ್ ಚಾನಲ್ ನಿಮ್ಗೆ ಮಾಡೋಕ್ಕೆ ಕೆಲಸ ಇಲ್ವಾ. ಶಿವಣ್ಣ ಸರ್ ತರ ಒಂದು ಚೂರು ಇಲ್ಲ. ಆದರೂ ಇಷ್ಟೊಂದು ಬಿಲ್ಡಪ್ ಕೊಡುತ್ತಾ ಇದ್ದೀರಾ. ಇವನನ್ನು ಯಾರು ಕರೆದುಕೊಂಡು ಬಂದಿದ್ದು. ಶಿವಣ್ಣ ಎಂದ ತಕ್ಷಣ, ಅವರ ತರ ಇರೋಕ್ಕೆ ಸಾಧ್ಯ ಇಲ್ಲ.'' - ವೀಕ್ಷಕರ ಕಮೆಂಟ್.

ಟ್ಯಾಲೆಂಟ್ ಗೆ ಬೆಲೆ ಕೊಡಿ
''ನಿಮ್ಮ ಕಾರ್ಯಕ್ರಮಗಳು ಹಿಟ್ ಆಗುತ್ತಿಲ್ಲ ಎಂಬ ಕಾರಣಕ್ಕೆ ಆಕ್ಟರ್ ತರ ಇರೋ ಜೂನಿಯರ್ ಕರೆದುಕೊಂಡು ಬಂದು ಬರ್ತಿರಾ. ಟ್ಯಾಲೆಂಟ್ ಗೆ ಬೆಲೆ ಕೊಡಿ. ಟಿ ಆರ್ ಪಿ ಗಾಗಿ ಈ ಶೋ ಮಾಡಬೇಡಿ. ಹೋಲಿಕೆ ಮಾಡುವುದಕ್ಕೂ ಒಂದು ಮೌಲ್ಯ ಇದೆ.'' - ವೀಕ್ಷಕರ ಕಮೆಂಟ್.

ಶಿವಣ್ಣ ಅವರ ಮರೀಯಾದೆ ಕಳೆಯಬೇಡಿ
''ಶಿವಣ್ಣ ಹತ್ತಿರ ಇರುವ ಒಂದು ಕ್ಯಾರೆಕ್ಟರ್ ಕೂಡ ಇವನ ಬಳಿ ಇಲ್ಲ. ಸುಮ್ಮನೆ ಬಿಲ್ಡಪ್ ಮಾಡುತ್ತಾ ಇದ್ದಾನೆ. ಶಿವಣ್ಣ ಅವರ ಮರೀಯಾದೆ ಕಳೆಯಬೇಡಿ. ಯಾವ ಕಡೆಯಿಂದ ಇವನು ನಿಮಗೆ ಜೂನಿಯರ್ ಶಿವಣ್ಣ ತರ ಕಾಣುತ್ತಿದ್ದಾನೆ. ಜೂನಿಯರ್ ದರ್ಶನ್ ಆದರೂ ಚೂರು ನೋಡೋಕ್ಕೆ ಆ ತರ ಇದ್ದ. ಆದರೆ ಇವನು ಶಿವಣ್ಣ ತರ ಕಾಣುತ್ತಿಲ್ಲ.'' - ವೀಕ್ಷಕರ ಕಮೆಂಟ್.

ತಮ್ಮನ್ನೇ ತಾವು ನಟನಾಗಿ ಬದಲಿಸಿಕೊಳ್ಳುವುದು
''ದಯವಿಟ್ಟು ಕ್ಷಮಿಸಿ. ಶಿವಣ್ಣನ ತರ ಇದ್ದೀವಿ ಅಂತ್ತಾನೋ, ದುಡ್ಡು ಸಂಪಾದನೆಗಾಗಿಯೋ ಈ ರೀತಿ ಮಾಡೋದಲ್ಲ. ಕಲಾವಿದರ ಮೇಲಿನ ಅಭಿಮಾನಕ್ಕೆ ಅವರ ರೀತಿ ಡ್ರೆಸ್, ಹೇರ್ ಸ್ಟೈಲ್ ಮಾಡುತ್ತೇವೆ. ಆದರೆ, ತಮ್ಮನ್ನೇ ತಾವು ಒಬ್ಬ ನಟನಾಗಿ ಬದಲಿಸಿಕೊಳ್ಳುವುದು ಎಂದರೆ, ಅದು ಕಲಾವಿದರ ಮೇಲೆ ಇಟ್ಟರುವ ಪ್ರೀತಿ ಅಭಿಮಾನ. ಹಾಗಾಗಿ ಹಣ ಸಂಪಾದನೆಯ ದೃಷ್ಟಿಯಿಂದ ಈ ರೀತಿ ಮಾಡಬೇಡಿ.'' ' - ವೀಕ್ಷಕರ ಕಮೆಂಟ್.

ಫೇಸ್ ಸ್ವಲ್ಪ ಓಕೆ.. ಆದರೆ, ನಟನೆ ಚೆನ್ನಾಗಿಲ್ಲ...
''ಫೇಸ್ ಸ್ವಲ್ಪ ಓಕೆ . ಆದರೆ, ನಟನೆ ಚೆನ್ನಾಗಿಲ್ಲ. ನಿಮ್ದು ಶಿವಣ್ಣನ ಮಾನ ಮಾರಿಯಾದೆ ತಗಿಯುವುದಕ್ಕೆ ಬಂದಿದ್ದೀರಾ?. ಶಿವಣ್ಣನ ರೀತಿ ಸ್ವಲ್ಪವೂ ಹೋಲಿಕೆ ಇಲ್ಲ. ನಿಂಗೆ ಜೂನಿಯರ್ ಆಗಕ್ಕೆ ಇನ್ಯಾರೂ ಸಿಗಲಿಲ್ವಾ Very bad . ಕೊಡಂಗಿ ಕರ್ಕೊಂಡು ಬಂದು ಶಿವಣ್ಣ ಎನ್ನುತ್ತಾರೆ'' ಈ ರೀತಿಯಲ್ಲಿ ವೀಕ್ಷಕರು
ಕೆಲವೇ ಕೆಲವರ ಮೆಚ್ಚುಗೆ
ಇಷ್ಟೊಂದು ನೆಗೆಟಿವ್ ಕಾಮೆಂಟ್ಸ್ ಗಳ ನಡುವೆ ಅಲ್ಲೊಂದು ಇಲ್ಲೊಂದು ಒಳ್ಳೆಯ ಮಾತುಗಳು ಸಹ ಬಂದಿವೆ. ಜೂನಿಯರ್ ಶಿವರಾಜ್ ಕುಮಾರ್ ಆಗಿರುವ ಇಸ್ಮಾಯಿಲ್ ನಟನೆಯನ್ನು ಕೆಲವೇ ಕೆಲವರು ಮೆಚ್ಚಿಕೊಂಡಿದ್ದಾರೆ.


Click it and Unblock the Notifications











