twitter
    For Quick Alerts
    ALLOW NOTIFICATIONS  
    For Daily Alerts

    ಶ್ರೀ ಮುರಳಿ ಸಂಚಿಕೆಗೆ ಹೊಗಳಿಕೆಗಿಂತ ತೆಗಳಿಕೆಯೇ ಹೆಚ್ಚು!

    |

    Recommended Video

    Weekend with Ramesh Season 4: ನಟ ಶ್ರೀಮುರಳಿ ಸಂಚಿಕೆಯಿಂದ ಬೇಸರಗೊಂಡ ವೀಕ್ಷಕರು | FILMIBEAT KANNADA

    'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ತನ್ನದೆ ಆದ ಘನತೆ ಹೊಂದಿದೆ. ಬೇರೆ ಕಾರ್ಯಕ್ರಮಗಳಿಂದ ಈ ಕಾರ್ಯಕ್ರಮವನ್ನು ವೀಕ್ಷಕರು ವಿಭಿನ್ನವಾಗಿ ನೋಡುತ್ತಾರೆ. ಆದರೆ, ಇಂತಹ ಕಾರ್ಯಕ್ರಮ ಕೆಲವು ಬಾರಿ ತಿಳಿದೋ.. ತಿಳಿಯದೆಯೋ.. ಎಡವುತಿದೆ.

    ಕಾರ್ಯಕ್ರಮದ ಪ್ರತಿ ಸೀಸನ್ ನಲ್ಲಿ ಕೆಲವು ಸಂಚಿಕೆಗಳು ವೀಕ್ಷಕರ ಅಸಮಾದಾನಕ್ಕೆ ಕಾರಣ ಆಗುತ್ತಿದೆ. ಕಳೆದ ಶನಿವಾರ ಹಾಗೂ ಭಾನುವಾರ ನಟ ಶ್ರೀಮುರಳಿ ಅವರ ಸಂಚಿಕೆ ಪ್ರಸಾರ ಆಗಿದೆ. ಆದರೆ, ಈ ಸಂಚಿಕೆಗೆ ಹೊಗಳಿಕೆಗಿಂತ ಹೆಚ್ಚು, ತೆಗಳಿಕೆಯೇ ಬಂದಿದೆ.

    ಶ್ರೀಮುರಳಿ ಎಪಿಸೋಡ್ ಗೆ ಮುಂಚೆಯೇ ಸದ್ದು ಮಾಡ್ತಿರುವ ಈ ಹುಡುಗಿ ಯಾರು? ಶ್ರೀಮುರಳಿ ಎಪಿಸೋಡ್ ಗೆ ಮುಂಚೆಯೇ ಸದ್ದು ಮಾಡ್ತಿರುವ ಈ ಹುಡುಗಿ ಯಾರು?

    ಸಾಮಾಜಿಕ ಜಾಲತಾಣದಲ್ಲಿ ಈ ಸಂಚಿಕೆಗೆ ಬಂದಿರುವ ಅಭಿಪ್ರಾಯ ಗಮನಿಸುವುದಾದರೆ ಅದರಲ್ಲಿ ನೆಗೆಟಿವ್ ಕಾಂಮೆಟ್ಸ್ ಹೆಚ್ಚಿದೆ. ಜೀ ಕನ್ನಡ ವಾಹಿನಿ ಫೇಸ್ ಬುಕ್ ಪೇಜ್ ನಲ್ಲಿ ವೀಕ್ಷಕರ ತಮ್ಮ ಬೇಸರ ವ್ಯಕ್ತಪಡಿಸತ್ತಿದ್ದಾರೆ.

    ಶ್ರೀಮುರಳಿ ರವರ 'ವೀಕೆಂಡ್ ವಿತ್ ರಮೇಶ್' ಸಂಚಿಕೆ ಮಾಡಿದ್ದು ತಪ್ಪು.. ಸರಿ... ಎನ್ನುವುದಕ್ಕಿಂತ ಈ ಸಂಚಿಕೆ ಬಗ್ಗೆ ಕೆಲವು ಕಾರಣಕ್ಕೆ ವೀಕ್ಷಕರ ಅಸಮಾದಾನಗೊಂಡಿದ್ದಾರೆ. ಆ ಕಾರಣಗಳು ಈ ಕೆಳಗಿನಂತೆ ಇವೆ.

    ಎರಡು ದಿನದ ಸಂಚಿಕೆ ಸರಿಯೇ?

    ಎರಡು ದಿನದ ಸಂಚಿಕೆ ಸರಿಯೇ?

    ಶ್ರೀಮುರಳಿ ಸಂಚಿಕೆ ನೋಡಿದ ವೀಕ್ಷಕರ ಮೊದಲ ಪ್ರಶ್ನೆ ಎರಡು ದಿನದ ಸಂಚಿಕೆ ಸರಿಯೇ? ಎನ್ನುವುದು. ಶ್ರೀಮುರಳಿ ರವರಿಗಿಂತ ಹೆಚ್ಚು ಸಾಧನೆ ಮಾಡಿರುವ ಸಾಧಕರನ್ನು ಒಂದೇ ದಿನದ ಸಂಚಿಕೆ ಮಾಡಿ, ಈಗ ಎರಡು ಎಪಿಸೋಡ್ ಮಾಡಿರುವುದು ಏಕೆ ಎಂದಿದ್ದಾರೆ. ಇದೇ ಸೀಸನ್ ನಲ್ಲಿ ಬಂದ ಶಶಿಕುಮಾರ್, ಪ್ರೇಮ, ವಿನಯ ಪ್ರಸಾದ್ ಎಲ್ಲರೂ ಮುರಳಿ ರವರಿಗಿಂತ ಹೆಚ್ಚು ಸಾಧನೆ ಮಾಡಿದ್ದರೂ ಒಂದೇ ದಿನದ ಸಂಚಿಕೆ ಮಾಡಿದ್ದು ಯಾವ ನ್ಯಾಯ ಎನ್ನುವುದು ವೀಕ್ಷಕರ ಪಾಯಿಂಟ್.

    ಈ ಆಯ್ಕೆ ತೃಪ್ತಿ ತಂದಿಲ್ಲ

    ಈ ಆಯ್ಕೆ ತೃಪ್ತಿ ತಂದಿಲ್ಲ

    ಶ್ರೀಮುರಳಿ ಅವರ ಸಂಚಿಕೆ ಬಗ್ಗೆ ವೀಕ್ಷಕರ ಅಭಿಪ್ರಾಯ ತಿಳಿಯಲು 'ಫಿಲ್ಮಿಬೀಟ್ ಕನ್ನಡ' ಒಂದು ಪೋಲ್ ಏರ್ಪಡಿಸಿತ್ತು. ಇದರಲ್ಲಿ ಅನೇಕ ವೀಕ್ಷಕರು ತಮ್ಮ ಉತ್ತರ ನೀಡಿದ್ದಾರೆ. 43 % ಜನರು ''ಈ ಆಯ್ಕೆ ತೃಪ್ತಿ ತಂದಿಲ್ಲ'' ಎಂದರೆ, 29 % ಜನರು 'ಎರಡು ದಿನ ಬೇಕಾಗಿರಲಿಲ್ಲ' ಹಾಗೂ ಉಳಿದ 28 % ಜನರು 'ಇದು ಒಳ್ಳೆಯ ಆಯ್ಕೆ' ಎಂದಿದ್ದಾರೆ.

    'ಚಂದ್ರ ಚಕೋರಿ' ಸಿನಿಮಾಗೆ ಮುರಳಿ ಆಯ್ಕೆಯ ಹಿಂದಿದೆ ರೋಚಕ ಸಂಗತಿ 'ಚಂದ್ರ ಚಕೋರಿ' ಸಿನಿಮಾಗೆ ಮುರಳಿ ಆಯ್ಕೆಯ ಹಿಂದಿದೆ ರೋಚಕ ಸಂಗತಿ

    ತಿಂಗಳಿಗೆ 10 ಸಾವಿರ ರೂಪಾಯಿ ನಿಮಗೆ ಅಷ್ಟೇನಾ....?

    ತಿಂಗಳಿಗೆ 10 ಸಾವಿರ ರೂಪಾಯಿ ನಿಮಗೆ ಅಷ್ಟೇನಾ....?

    ಮುಂಬೈನಲ್ಲಿ ನಟನೆ ಕಲಿಯುವಾಗ ತಮ್ಮ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದ ಶ್ರೀಮುರಳಿ 30 ದಿನಕ್ಕೆ, 10 ಸಾವಿರ ಅಷ್ಟೇ ಹಣ ಇರುತ್ತಿತ್ತು. ಅದರಲ್ಲಿ 4500 ಸಾವಿರ ಬಾಡಿಗೆ ನೀಡಿದರೆ, 5500 ಉಳಿಯುತ್ತಿತ್ತು. ಅದರಲ್ಲಿ ಮೂರೊತ್ತು ಊಟ ಮಾಡಲು ಆಗುತ್ತಿರಲಿಲ್ಲ, ಎರಡೊತ್ತು ಊಟ ಮಾಡುತ್ತಿದ್ದೆ ಎಂದರು. ಇದನ್ನು ಕೇಳಿದ ವೀಕ್ಷಕರು 10 ವರ್ಷದ ಹಿಂದೆ 10 ಸಾವಿರ ಇದ್ದರೂ ಕಷ್ಟ ಎಂದರೆ ಏನು ಮಾಡುವುದು ಎಂದಿದ್ದಾರೆ.

    ಮುರಳಿ ಸಾಧನೆ ಬಗ್ಗೆ ಜನರ ಪ್ರಶ್ನೆ

    ''ಶ್ರೀಮುರಳಿ ಒಬ್ಬ ಪ್ರತಿಭಾವಂತ ನಟ. ಅವರ ಬಗ್ಗೆ ಅಭಿಮಾನ ಇದೆ. ಅವರ ಸಿನಿಮಾ ಪಯಣ, ಅದರ ಏಳು ಬೀಳು ನಿಜಕ್ಕೂ ಮೆಚ್ಚುವ ವಿಷಯ. ಆದರೂ ಅವರನ್ನು ಸಾಧಕರ ಸೀಟ್ ಮೇಲೆ ಕೂರಿಸುವ ಅಗತ್ಯ ಇತ್ತೆ. ಒಂದು ದೊಡ್ಡ ಸಿನಿಮಾ ಹಿನ್ನಲೆಯ ಕುಟುಂಬದಲ್ಲಿ ಹುಟ್ಟಿ, ಒಂದಷ್ಟು ಸಿನಿಮಾ ಮಾಡಿದ್ದು, ಸಾಧನೆಯೇ.?'' ಎನ್ನುವುದು ಒಂದಷ್ಟು ವೀಕ್ಷಕರ ನೇರ ಪ್ರಶ್ನೆಗಳು.

    ಸಿನಿಮಾ ಮಾತ್ರ ಸಾಧನೆಯೇ?

    ಸಿನಿಮಾ ಮಾತ್ರ ಸಾಧನೆಯೇ?

    ''ಹತ್ತು ಹನ್ನೊಂದು ಸಿನಿಮಾ ಮಾಡುವುದು ಸಾಧನೆಯೇ..? 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಎಲ್ಲ ವರ್ಗದ ಸಾಧಕರನ್ನು ಗುರುತಿಸಬೇಕು. ಅದು ಬಿಟ್ಟು ಸಿನಿಮಾ ಸಾಧಕರೇ ಹೆಚ್ಚಾಗುತ್ತಿದ್ದಾರೆ. ಈ ಬಾರಿ ಕೂಡ ಅದೇ ಮುಂದುವರೆಯುತ್ತಿದೆ. ಹೀಗಾಗಿ ಇದು 'ವೀಕೆಂಡ್ ವಿತ್ ಫಿಲ್ಮ್ ಸ್ಟಾರ್' ಅಲ್ಲ 'ವೀಕೆಂಡ್ ವಿತ್ ರಮೇಶ್' ಎಂದು ಜನರು ಎಚ್ಚರಿಸುತ್ತಿದ್ದಾರೆ.

    ನಿಜವಾದ ಸಾಧಕರು ಎಷ್ಟೋ ಜನ ಇದ್ದಾರೆ

    ನಿಜವಾದ ಸಾಧಕರು ಎಷ್ಟೋ ಜನ ಇದ್ದಾರೆ

    ನಿಜವಾದ ಸಾಧನೆ ಮಾಡಿ, ಕರ್ನಾಟಕದ ಹೆಸರನ್ನು ದೇಶ ಮಟ್ಟದಲ್ಲಿ ಮೆರೆಸಿದ ಸಾಧಕರು ಅನೇಕರು ಇದ್ದಾರೆ. ಅದರನ್ನು ಸಾಧಕರ ಸೀಟ್ ಮೇಲೆ ಕೂರಿಸಿ. ಆದರೆ ಅದನ್ನು ಬಿಟ್ಟು ಕಾರ್ಯಕ್ರಮದ ಮೇಲೆ ನಮಗೆ ಹೆಚ್ಚು ಪ್ರೀತಿ ಇದೆ. ಅದನ್ನು ಕಳೆದುಕೊಳ್ಳಬೇಡಿ ಎನ್ನುವುದು ವೀಕ್ಷಕರ ಮನವಿ ಆಗಿದೆ.

    ಜೀ ಕನ್ನಡ ವಾಹಿನಿ ಉತ್ತರ ನೀಡುತ್ತದೆಯೇ..?

    ಜೀ ಕನ್ನಡ ವಾಹಿನಿ ಉತ್ತರ ನೀಡುತ್ತದೆಯೇ..?

    ಈ ರೀತಿಯ ಅನೇಕ ಪ್ರಶ್ನೆಗಳನ್ನು ಜೀ ಕನ್ನಡ ವಾಹಿನಿಯ ಮುಂದೆ ವೀಕ್ಷಕರು ಇಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರ ಪ್ರತಿಕ್ರಿಯೆಯನ್ನು ವಾಹಿನಿ ಸೂಕ್ಷವಾಗಿ ಗಮನಿಸುತ್ತದೆ. ಈಗ ಬಂದಿರುವ ವೀಕ್ಷಕರ ಪ್ರಶ್ನೆಗೆ, ಬೇಸರಕ್ಕೆ ಏನು ಉತ್ತರ ನೀಡತ್ತಾರೆ ಎಂದು ಕಾದು ನೋಡಬೇಕಿದೆ.

    English summary
    Viewers unhappy with Kannada actor SriMurali Weekend With Ramesh 4 episode.
    Monday, May 20, 2019, 15:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X