ಮಾದಪ್ಪಣ್ಣನ ಹೆಂಡತಿ ಲೀಲಾ ವಿಡಿಯೋ ವೈರಲ್; ಹುಡ್ಗಿನಾ ಆಂಟಿ ಮಾಡವ್ರಲ್ಲ ಅಂತ ಬೇಸರ!

By ಎಸ್ ಸುಮಂತ್

'ಅಣ್ಣಯ್ಯ' ಧಾರಾವಾಹಿಯಲ್ಲಿ ಈಗ ಹೊಸದೊಂದು ಟ್ವಿಸ್ಟ್ ನೀಡಿದ್ದಾರೆ. ಅದುವೇ ಸೀನ ಹಾಗೂ ರಶ್ಮಿ ಮದುವೆ. ವೀಕ್ಷಕರಿಗೆ ಇದೆಲ್ಲ ಮೊದಲೇ ಗೊತ್ತಿತ್ತು. ಆದರೂ ಇಭರ ಮದುವೆ ಆಗುವುದಕ್ಕೆ ಟರ್ನಿಂಗ್ ಪಾಯಿಂಟ್ ಯಾವ ಥರ ತೆಗೆದುಕೊಳ್ಳಬಹುದು ಎಂಬ ಕುತೂಹಲವಿತ್ತು. ಕಡೆಗೂ ಸೀನ, ರಶ್ಮಿ ಮದುವೆ ಆಗಿದೆ.

ಒಳ್ಳೆ ಮನೆಗೆ ತಂಗಿ ಸೊಸೆಯಾದಳಲ್ಲ ಎಂಬ ಖುಷಿ ಶಿವು ಮುಖದಲ್ಲಿ ಇದೆ. ಪಾರು ಅಮ್ಮಂದಿರಿಗೆ ಮೋಸಗಾರನಿಂದ ರಶ್ಮಿ ಬಚಾವ್ ಆದ್ಲಲ್ಲ ಎಂಬ ಸಮಾಧಾನವಿದೆ. ಈ ಮದುವೆಯಿಂದ ಮನನೊಂದಿರೋದು ಮಾತ್ರ ಸೀನ ಹಾಗೇ ಅವರ ಅವ್ವ ಲೀಲಾ. ಏನೇ ಬೇಸರವಾದ್ರೂ ಮಾದಪ್ಪಣ್ಣನ ಮಾತನ್ನ ಲೀಲಾ ಅಂಡ್ ಸೀನಾ ಮೀರುವುದಕ್ಕೆ ಸಾಧ್ಯವಿಲ್ಲ. ಅಂತ ಪರಿಸ್ಥಿತಿ ಅವರಿಬ್ಬರದ್ದು.

Viewers upset with Annaiah serial team for giving matured role to shruthi kushal

ರಶ್ಮಿ ಕಂಡರೆ ಕೆಂಡಕಾರುವ ಲೀಲಾ

ಲೀಲಾಗೂ ತನ್ನ ಮಗನನ್ನು ಮದುವೆಯಾಗುವ ಹುಡುಗಿ ಹಿಂಗೆ ಇರಬೇಕೆಂಬ ಹಲವು ಕನಸುಗಳಿದ್ದವು. ಪಿಂಕಿಯನ್ನ ಮನಸ್ಸಾರೆ ಒಪ್ಪಿದ್ದಳು. ಅವ್ವ, ಮಗನಿಗೆ ಮಾತ್ರ ಸೀನನ ಲವ್ ವಿಚಾರ ಗೊತ್ತಿತ್ತು. ಆದರೆ ಈಗ ರಶ್ಮಿ ಸೊಸೆಯಾಗಿ ಬಂದಿರೋದನ್ನ ಲೀಲಾಳಿಂದ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಅದಕ್ಕೆ ಅಡುಗೆ ಮನೆಯಿಂದಾನೇ ಮನಸ್ತಾಪವನ್ನ ತೋರಿಸೋದಕ್ಕೆ ಶುರು ಮಾಡಿದ್ದಾಳೆ. ಆದರೆ ಪಾರು ಇದ್ರೆ ರಶ್ಮಿ ಬದುಕಲ್ಲಿ ಬಿರುಗಾಳಿ ಬೀಸೋದಕ್ಕೆ ಬಿಡೋಳಲ್ಲ. ಒಮ್ಮೆ ಕಣ್ಣು ಬಿಟ್ಟಿದ್ದಕ್ಕೆ ಲೀಲಾ ಗಪ್ ಚಿಪ್ ಆಗಿದ್ದಾಳೆ.

ಲೀಲಾ ವಿಡಿಯೋ ವೈರಲ್

ಲೀಲಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಅಣ್ಣಯ್ಯ ಧಾರಾವಾಹಿಯಲ್ಲಿ ಲೀಲಾ ಪಾತ್ರ ಮಾಡಿರುವ ನಟಿಯ ಹೆಸರು ಶೃತಿ ಕುಶಾಲ್ ಅಂತ‌. ಮಾದಪ್ಪಣ್ಣನ ಹೆಂಡತಿ ಪಾತ್ರ. ಸದಾ ಸೀರೆಯುಟ್ಟು, ಜುಟ್ಟು ಕಟ್ಟಿ, ಹೂ ಸುತ್ತಿ, ಹಣೆಗೆ ದೊಡ್ಡ ಬೊಟ್ಟು ಇಟ್ಟು ಪಕ್ಕಾ ಗೃಹಿಣಿ, ಆಂಟಿಯಂತೆ ಕಾಣುವ ಪಾತ್ರವದು. ಆದರೆ ಶೃತಿ ಅಲಿಯಾಸ್ ಲೀಲಾ ರಿಯಲ್ ಲೈಫ್‌ನಲ್ಲಿ ಆ ರೀತಿ ಇಲ್ಲ. ಬದಲಿಗೆ ಇವರೇನಾ ಅವರು ಎಂಬ ಅನುಮಾನ ಮೂಡಿಸುತ್ತಾರೆ. ಇದೀಗ ಅಂಥದ್ದೇ ವಿಡಿಯೋ ಒಂದು ವೈರಲ್ ಆಗಿದೆ.


ಲೀಲಾಳನ್ನು ಕಂಡು ಫ್ಯಾನ್ಸ್ ಶಾಕ್

ಲೀಲಾಳನ್ನ ಸೋಷಿಯಲ್ ಮೀಡಿಯಾದಲ್ಲಿ ಕಂಡ ಫ್ಯಾನ್ಸ್ ಶಾಕ್ ಆಗಿದ್ದಾರೆ. ಇವರೇನಾ ಮಾದಪ್ಪಣ್ಣನ ಹೆಂಡ್ರು ಎಂದು ಕೇಳುವಂತಾಗಿದೆ. ಯಾಕಂದ್ರೆ ಶೃತಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಯವ ವಿಡಿಯೋಗಳಿಗೂ ಈಗ ಅಣ್ಣಯ್ಯ ಧಾರಾವಾಹಿಯಲ್ಲಿ ಮಾಡಿರುವ ಪಾತ್ರಕ್ಕೂ ಹೋಲಿಕೆಯನ್ನ ಮಾಡಿಕೊಂಡರು ಇದು ಅಸಾಧ್ಯ ಎನಿಸುವಷ್ಟು ವ್ಯತ್ಯಾಸ ಕಾಣಿಸುತ್ತಿದೆ. ಕಲಾವಿದರೆಂದರೆ ಹಾಗೇ ಅಲ್ವೆ, ತಮ್ಮದಲ್ಲದ ಪಾತ್ರವನ್ನೇ ಹೆಚ್ಚಾಗಿ ಪೋಷಣೆ ಮಾಡುವುದು. ಈಗ ಶೃತಿ ಕೂಡ ಅದನ್ನೇ ಮಾಡಿದ್ದಾರೆ.

ಹುಡುಗಿನ ಆಂಟಿ ಮಾಡವ್ರಲ್ಲ

ಲೀಲಾ ಅಲಿಯಾಸ್ ಶೃತಿ ಕುಶಾಲ್ ಹಾಕಿರುವ ಒಂದು ರೀಲ್ಸ್‌ಗೆ ನೂರೆಂಟು ಕಮೆಂಟ್ಸ್ ಬರ್ತಿದೆ. ವೈಟ್ ಟೀ ಶರ್ಟ್ ಹಾಗೂ ಬ್ಲೂ ಜೀನ್ಸ್‌ನಲ್ಲಿ, ಫ್ರೀ ಹೇರ್ ಬಿಟ್ಟು ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ ಲೀಲಾ. ಲೀಲಾ ಇನ್ನು ಯುವತಿ ಅನ್ನೋದು ಆ ವಿಡಿಯೋ ನೋಡಿದ ಎಂಥವರಿಗೆ ಆದರೂ ಅರ್ಥವಾಗದೆ ಇರಲಾರದು. ಆದರೆ ನೋಡಿದವರಿಗೆ ಬೇಸರ ಏನಪ್ಪ ಅಂದ್ರೆ ಇಷ್ಟು ಯಂಗ್ ಆಗಿರುವ ಶೃತಿಯನ್ನ ಅಣ್ಣಯ್ಯ ಟೀಂನವರು ಆಂಟಿ ಮಾಡಿಬಿಟ್ಟವರಲ್ಲ ಎಂಬ ಬೇಸರ ಅವರದ್ದು.

More from Filmibeat

English summary
Zee kannada Annaiah serial; Here is the details about Viewers are shocked to see Leela from the Annayya serial;
Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X