Lakshmibaramma: ಮತ್ತೊಂದು ಮದುವೆಗೆ ಒಪ್ಪಿದ ವೈಷ್ಣವ್; ಯಶವಂತ್ ಬಗ್ಗೆ ಇನ್ನಿಲ್ಲದ ಅನುಮಾನ!
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಸದ್ಯ ಲಕ್ಷ್ಮೀ ಕೀರ್ತಿಯ ಮನೆಯಲ್ಲಿಯೇ ಆಶ್ರಯ ಪಡೆದಿದ್ದಾಳೆ. ಇಂದು ಸರಿ ಹೋಗುತ್ತೆ, ನಾಳೆ ಸರಿಯಾಗುತ್ತೆ ಎಂಬ ಭರವಸೆಯಿಂದಾನೇ ಲಕ್ಷ್ಮೀ ಕಾಯುತ್ತಿದ್ದಾಳೆ. ಅತ್ತ ಆಗಾಗ ಕೀರ್ತಿಗೆ ನೆನಪಿನ ಶಕ್ತಿ ಬಂದು ಹಾಗೇ ಮರೆಯಾಗುತ್ತಿದೆ. ಗೊಂಬೆಯಾಗಿದ್ದಾಗ ಲಕ್ಷ್ಮೀ ಸದ್ಯಕ್ಕೆ ನೋವನ್ನ ಮರೆಸುವುದೇ ಕೀರ್ತಿ. ಆದರೆ ಈಗ ಲಕ್ಷ್ಮೀ ಬದುಕು ಮತ್ತೊಮ್ಮೆ ಸೂತ್ರವಿಲ್ಲದ ಗಾಳಿಪಟದಂತೆ ಆಗಿದೆ.
ಕೀರ್ತಿ, ಲಕ್ಷ್ಮೀ ಹಾಗೂ ವೈಷ್ಣವ್ ಗಾಗಿ ಮನೆಯೊಂದನ್ನ ಕಟ್ಟುತ್ತಾ ಇದ್ದಳು. ಅದಕ್ಕೆ ರೂಫ್ ಕಟ್ಟೋದಕ್ಕೆ ಲಕ್ಷ್ಮೀ ಕೂಡ ಸಹಾಯ ಮಾಡಲು ನಿಂತಳು. ಆದರೆ ರೂಫ್ ಸರಿಯಾಗಿ ಕೂರದೆ ಮನೆ ಬಿದ್ದು ಹೋಯ್ತು. ತಾಳಿ ಸರ ಕೂಡ ಇತ್ತೀಚೆಗೆ ಇನ್ನೇನು ಕಟ್ ಆಗಿ ಬೀಳಬೇಕಿತ್ತು. ಬಚಾವ್ ಆಯ್ತು. ಇದೆಲ್ಲವೂ ವೈಷ್ಣವ್ ಹಾಗೂ ಲಕ್ಷ್ಮೀ ಸಂಬಂಧಕ್ಕೆ ಏನೋ ಸಮಸ್ಯೆಯನ್ನೇ ಸೂಚಿಸಿತ್ತು. ಈಗ ಅದೇ ಆಗಿದೆ.

ಕಾವೇರಿ ಪ್ಲ್ಯಾನ್ ಆದರೂ ಏನು?
ಕಾವೇರಿಗೆ ಮಗ ಸದಾ ತನ್ನ ಮಾತನ್ನೇ ಕೇಳಬೇಕು. ತನ್ನ ಕಂಟ್ರೋಲ್ ನಲ್ಲಿಯೇ ಇರಬೇಕು ಎಂಬ ದುರಾಸೆ. ಅದೇ ಕಾರಣಕ್ಕೆ ಈಗ ಲಕ್ಷ್ಮೀ ಮತ್ತು ವೈಷ್ಣವ್ ಮದುವೆಯನ್ನು ಮುರಿಯುತ್ತಿದ್ದಾಳೆ. ಜೈಲಿನಿಂದ ಹೊರ ಬಂದಿದ್ದೇ ತಡ, ಲಕ್ಷ್ಮೀಯನ್ನ ಮನೆಯಿಂದ ಹೊರಗೆ ಹಾಕಿದಳು. ಈಗ ಮತ್ತೊಬ್ಬ ಸೊಸೆ ತರಲು ಹೊರಟಿದ್ದಾಳೆ.
ವೈಷ್ಣವ್ ಕೂಲ್ ಕೂಲ್
ಕಾವೇರಿಯ ನಿರ್ಧಾರವನ್ನು ಕೇಳಿ ಮನೆಯವರಿಗೆಲ್ಲಾ ಶಾಕ್ ಆಗಿದೆ. ಇದನ್ನೇ ಈಗ ವೈಷ್ಣವ್ ಮುಂದೆ ಮಾತಾಡ್ತಾ ಇದಾರೆ. ಈಗಲಾದ್ರೂ ಮಾತಾಡು ವೈಷ್ಣವ್ ಎಂದರೆ ವೈಷ್ಣವ್ ಮಾತಾಡುವುದಕ್ಕೆ ಸಿದ್ಧವಿಲ್ಲ. ಒಂದೇ ಮಾತಲ್ಲಿ ಎಲ್ಲರ ಬಾಯನ್ನು ಮುಚ್ಚಿಸಿಬಿಟ್ಟ. ಅಮ್ಮನ ನಿರ್ಧಾರವೇ ಫೈನಲ್ ಎಂದು ಬಿಟ್ಟ. ಅಮ್ಮನಿಗೆ ಗೊತ್ತಿದೆ ಒಳ್ಳೆಯದು ಯಾವುದಿ ಅನ್ನೋದನ್ನ ಹೇಳಿ ಸುಮ್ಮನೆ ಆದ. ನಂಗು ಮತ್ತೊಂದು ಮದುವೆಗೆ ಒಪ್ಪಿಗೆ ಇದೆ ಎಂಬ ಸೂಚನೆ ನೀಡಿದ. ಇದನ್ನು ಕೇಳಿ ಮನೆಯವರು ಅಕ್ಷರಶಃ ಶಾಕ್ ಆದರು.
ಲಕ್ಷ್ಮೀ ವಿಷಯ ಕೇಳಿ ಶಾಕ್
ಕೀರ್ತಿ ಮನೆಯಲ್ಲಿದ್ದ ಲಕ್ಷ್ಮೀ ಕಿವಿಗೂ ಈ ವಿಚಾರ ಮುಟ್ಟಿತ್ತು. ವೈಷ್ಣವ್ ನನ್ನು ಹುಡುಕಿಕೊಂಡು ಓಡಿ ಬಂದಳು. ಅವಳ ಅಸಹಾಯಕತೆಯನ್ನು ಕಂಡು ಕಾವೇರಿ ಖುಷಿ ಪಟ್ಟಳು. ಆದರೆ ವೈಷ್ಣವ್ ಕಲ್ಲಾಗಿ ನಿಂತಿದ್ದ. ಲಕ್ಷ್ಮೀ ತಾನೂ ಕೇಳಿದ ವಿಷಯ ಸುಳ್ಳಾಗಿರಲಿ ಎಂದು ಬಯಸಿದ್ದಳು. ಆದರೆ ವೈಷ್ಣವ್ ನಡೆ ಅವಳಿಗೂ ದಿಗಿಲು ಮುಟ್ಟಿಸಿದೆ. ವೈಷ್ಣವ್ ಮತ್ತೊಂದು ಮದುವೆಗೆ ರೆಡಿ ಎಂದೇ ಬಿಟ್ಟ.
ಡೈರೆಕ್ಟರ್ ಮೇಲೆ ಅನುಮಾನ
ಇದೆಲ್ಲವನ್ನು ಕಂಡ ವೀಕ್ಷಕರಿಗೆ ಒಂದು ದೊಡ್ಡ ಪ್ರಶ್ನೆ ಕಾಡುತ್ತಿದೆ. ಅದುವೆ ನಿರ್ದೇಶಕರು ಏನನ್ನು ಹೇಳಲು ಹೊರಟಿದ್ದಾರೆ ಎಂಬುದು. ಸಮಾಜಕ್ಕೆ ಯಾವ ಸಂದೇಶ ನೀಡುತ್ತಾ ಇದ್ದಾರೆ ಎಂದು. ನಿರ್ದೇಶಕ ಯಶವಂತ ಪಾಂಡುರಂಗ ಈ ಮೊದಲು ಕನ್ನಡತಿ ಧಾರಾವಾಹಿಯನ್ನ ನಿರ್ದೇಸದನ ಮಾಡಿದ್ದವರು. ಆ ಧಾರಾವಾಹಿ ಎಂದಿಗೂ ಹಾದಿ ತಪ್ಪಿರಲಿಲ್ಲ. ಕಥೆ ಮುಗಿದಾಗ ಒಳ್ಳೆಯ ರೀತಿಯಲ್ಲಿಯೇ ಎಂಡಿಂಗ್ ತೆಗೆದುಕೊಂಡಿತ್ತು. ಆದರೆ ಲಕ್ಷ್ಮೀಬಾರಮ್ಮ ಎಲ್ಲೆಲ್ಲಿಯೋ ಸಾಗುತ್ತಿದೆ. ಹೀಗಾಗಿ ಇದು ನಿಜಕ್ಕೂ ನೀವೇನಾ ಕನ್ನಡತಿ ನಿರ್ದೇಶಕರು ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ವೀಕ್ಷಕರು.


Click it and Unblock the Notifications











