ಹೊಸ ಧಾರಾವಾಹಿ ಭಾರ್ಗವಿ LLB ಬಗ್ಗೆ ಅಪಸ್ವರ ಯಾಕೆ ಗೊತ್ತಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ 'ಭಾರ್ಗವಿ LLB' ಧಾರಾವಾಹಿ ಶುರುವಾಗಿದೆ. ಪ್ರೋಮೋಗಳ ಮೂಲಕವೇ ಬಹಳ ನಿರೀಕ್ಷೆಗಳನ್ನ ಹುಟ್ಟುಹಾಕಿತ್ತು. ಈಗಾಗಲೇ ಶುರುವಾಗಿ ಒಂದು ವಾರವೂ ಆಗಿದೆ. ಆದರೆ ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ. ನಟಿ ಭಾರ್ಗವಿ ಜೋರು ಫೈಟ್ ಮಾಡ್ತಾಳೆ, ಅನ್ಯಾಯವನ್ನ ಕಂಡರೆ ಮೆಟ್ಟಿ ನಿಲ್ಲುತ್ತಾಳೆ. ಕಥೆಯೂ ಸ್ಟ್ರಾಂಗ್ ಆಗಿಯೇ ಇದೆ. ಆದರೂ ವೀಕ್ಷಕರಿಗೆ ಬೇಸರವಾಗಿದೆ. ಅದಕ್ಕೆ ಕಾರಣವೂ ಇದೆ.
ಸ್ವಪ್ನ ಕೃಷ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಜೀ ಕನ್ನಡದಲ್ಲಿ 'ಸತ್ಯ' ಧಾರಾವಾಹಿಯಲಿ ಡೈರೆಕ್ಷನ್ ಗತ್ತು ತೋರಿಸಿದವರು. ಸತ್ಯ ಪಾತ್ರಧಾರಿ ಗೌತಮಿಗೆ ಒಂದು ಬ್ರೇಕ್ ನೀಡಿದವರು. ಇದೀಗ ಮತ್ತೊಂದು ಸ್ಟ್ರಾಂಗ್ ಕಥೆಯೊಂದಿಗೆ ಕಮ್ ಬ್ಯಾಕ್ ಆಗಿದ್ದಾರೆ. ಅದೇ ಭಾರ್ಗವಿ LLB.

ಹೀರೋಯಿನ್ ಇಲ್ಲಿ ಹೀರೋ
'ಭಾರ್ಗವಿ LLB' ಧಾರಾವಾಹಿ ಒಂದು ಮಹಿಳಾ ಪ್ರಧಾನ ಧಾರಾವಾಹಿ. ಇಲ್ಲಿ ಅಪ್ಪನ ಮರ್ಯಾದೆಯನ್ನು ಕಾಪಾಡಿಕೊಳ್ಳಲು ಮಗಳು ಹೋರಾಡುವ ಕಥೆ. ಹೀಗಾಗಿ ನಾಯಕಿಯೇ ಇಲ್ಲಿ ಬಹಳ ಮುಖ್ಯ. ಅಪ್ಪನ ಮಗಳು ಕೂಡ ಹೀಗಾಗಿಯೇ ಧೈರ್ಯ ಜಾಸ್ತಿ. ಮೊದಲ ಎಪಿಸೋಡ್‌ನಲ್ಲಿಯೇ ನಮಗೆ ನಾಯಕಿಯ ಶಕ್ತಿ, ಉಗ್ರವತಾರ ಕಂಡಿದೆ. ಇನ್ಮೇಲೂ ಅದೇ ರೀತಿಯ ಕಾಳಿ ಅವತಾರದಲ್ಲಿ ಕಾಣಿಸಲಿದ್ದಾಳೆ. ಜೊತೆಗೆ ದುಷ್ಮನ್ ಮನೆಗೆ ಸೊಸೆಯಾಗಿ ಹೋಗುವ ಸಾಧ್ಯತೆಯೂ ಇದೆ.
ಲಾಯರ್ ಕಥೆಯೇ ಇಲ್ಲಿ ಹೈಲೇಟ್
ಈ ಧಾರಾವಾಹಿಯ ಹೆಸರೇ 'ಭಾರ್ಗವಿ LLB' ಅಂದ್ರೆ ಲಾಯರ್ ಕಥೆ. ಒಬ್ಬ ಲಾಯರ್ ಆದ್ರೆ ನ್ಯಾಯದ ವಿರುದ್ಧ ಹೋರಾಡುವುದು. ವಾಸ್ತವದ ಜಗತ್ತಿನಲ್ಲಿಯೇ ಎಷ್ಟೋ ಸತ್ಯಗಳು ಅಸತ್ಯಗಳ ಜೊತೆಗೆ ಮುಚ್ಚಿ ಹೋಗಿವೆ. ಎಷ್ಟೋ ಜನ ನ್ಯಾಯ ಸಿಗದೆ ಒದ್ದಾಡುತ್ತಿದ್ದಾರೆ. ಹೀಗಿರುವಾಗ ಲಾಯರ್ ಆದ ಭಾರ್ಗವಿ ನ್ಯಾಯಕ್ಕಾಗಿ ಗಟ್ಟಿಧ್ವನಿ ಎತ್ತಬೇಕಿದೆ. ಅದರಲ್ಲೂ ಧಾರಾವಾಹಿಯಲ್ಲಿ ಕೋರ್ಟ್ ಸೀನ್ ಎಲ್ಲರನ್ನ ಸೆಳೆಯುತ್ತದೆ. ಅದಕ್ಕೆ ಉದಾಹರಣೆಯಾಗಿ ಟಿ.ಎನ್. ಸೀತಾರಾಮ್ ಅವರ ಧಾರಾವಾಹಿಗಳು ನಿಲ್ಲುತ್ತವೆ.

ವೀಕ್ಷಕರಿಗೆ ಸೀರಿಯಲ್ ಬಗ್ಗೆ ಬೇಸರ
ಪ್ರೋಮೋ ಬಂದಾಗ, ಸ್ವಪ್ನ ಕೃಷ್ಣ ಅವರು ಕಮ್ ಬ್ಯಾಕ್ ಎಂದಾಗ ನಿರೀಕ್ಷೆಗಳು ಸಹಜವಾಗಿಯೇ ಹೆಚ್ಚಾಗಿತ್ತು. ಪ್ರೋಮೋಗಳನ್ನು ನೋಡಿದಾಗ ವಾವ್ ಎನಿಸಿತ್ತು. ಆದ್ರೆ ಶುರುವಾದ ಒಂದೇ ವಾರಕ್ಕೆ ವೀಕ್ಷಕರ ನಿರೀಕ್ಷೆ ಹುಸಿಯಾಗಿದೆ. ವೀಕ್ಷಕರಿಗೆ ಬೇಸರ ತರಿಸಿದೆ. ಅದಕ್ಕೆ ಕಾರಣ ಸೀರಿಯಲ್ ಮೂಡಿ ಬರುತ್ತಿರುವ ರೀತಿ. ಹಾಗಂತ ಒಂದೇ ವಾರಕ್ಕೆ ಜಡ್ಜ್ ಮಾಡೋದಕ್ಕೆ ಸಾಧ್ಯವಿಲ್ಲದೆ ಇದ್ದರು, ಮೊದಲ ವಾರದಲ್ಲಿಯೇ ವೀಕ್ಷಕರನ್ನ ಸೆಳೆಯಬೇಕಾದ ಅನಿವಾರ್ಯತೆಯೂ ಇಂದಿನ ಕಾಂಪಿಟೇಷನ್ ಜಗತ್ತಿನಲ್ಲಿದೆ. ಹೀಗಾಗಿ ವೀಕ್ಷಕರ ಕೈನಲ್ಲಿರೋ ರಿಮೋಟ್ ವರ್ಕ್ ಆಗದೆ ಇರುವಂತೆ ನೋಡಿಕೊಳ್ಳಲು ಕಥೆಯನ್ನು ನಿರೀಕ್ಷಿಸಿದಂತೆಯೇ ಕೊಡಬೇಕಾಗುತ್ತದೆ.
ಸತ್ಯ ಸೀರಿಯಲ್ ಸೀನ್ಸ್ ರಿಪೀಟ್
ಅಷ್ಟಕ್ಕೂ ಸ್ವಪ್ನ ಕೃಷ್ಣ ಅವರ ಸೀರಿಯಲ್ ಒಂದೇ ವಾರಕ್ಕೆ ನೋಡುಗರಿಗೆ ಬೇಸರ ಮಾಡಿದ್ದೇಕೆ ಗೊತ್ತಾ..? ಆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೊಂದು ಟ್ರೋಲ್ ಪೋಸ್ಟ್ ಓಡಾಡುತ್ತಿದೆ. ಅದರಲ್ಲಿ ಭಾರ್ಗವಿ ಸೀರಿಯಲ್‌ನಲ್ಲೂ ಸತ್ಯ ರಿಫ್ಲೆಕ್ಷನ್ ಕಾಣಿಸ್ತಾ ಇದೆ. ಇದರಲ್ಲಿ ಕಥೆ ಬೇರೆ, ಚಾನೆಲ್ ಬೇರೆ, ಪಾತ್ರಧಾರಿಗಳು ಬೇರೆ. ಆದರೂ ಸತ್ಯಳನ್ನೇ ನೆನಪಿಸುತ್ತಿದೆ ಧಾರಾವಾಹಿ ಸಾಗುತ್ತಿರುವ ರೀತಿ ಎಂದು ಹಲವರು ಕಮೆಂಟ್ ಹಾಕುತ್ತಿದ್ದಾರೆ.


Click it and Unblock the Notifications











