'ಪಾಪಾ ಪಾಂಡು' ಜೊತೆಗೆ 'ಸಿಲ್ಲಿ ಲಲ್ಲಿ' ಕೂಡ ಬರಲಿ: ಇದು ವೀಕ್ಷಕರ ಅಭಿಲಾಷೆ.!

By Harshitha

ಹದಿನೈದು ವರ್ಷಗಳ ಬಳಿಕ 'ಪಾಪಾ ಪಾಂಡು' ಮತ್ತೆ ನಿಮ್ಮನೆಗೆ ಬರ್ತಿದ್ದಾರೆ. ಹೆಂಡತಿ ಕೈಯಲ್ಲಿ ಮೊಟಕಿಸಿಕೊಂಡು, ತಳ್ಳಿಸಿಕೊಂಡು, ಬಿದ್ದು-ಒದ್ಡಾಡುತ್ತಿದ್ದ 'ಪಾಪಾ ಪಾಂಡು' ಇದೀಗ ಮತ್ತೊಮ್ಮೆ ನಿಮ್ಮನ್ನೆಲ್ಲ ನಕ್ಕು-ನಲಿಸಲು ಸಿದ್ಧವಾಗಿದ್ದಾರೆ.

ಜುಲೈ 2 ರಿಂದ 'ಪಾಂಡು' ಕಥೆ ನೋಡಿ 'ಅಯ್ಯೋ ಪಾಪ' ಅಂತ ಹೇಳುವ ಕೆಲಸ ನಿಮ್ಮದು. ಯಾಕಂದ್ರೆ, ಕಲರ್ಸ್ ಸೂಪರ್ ವಾಹಿನಿಯಲ್ಲಿ ಜುಲೈ 2 ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 10 ಗಂಟೆಗೆ ಹೊಚ್ಚ ಹೊಸ ಕಥೆಯೊಂದಿಗೆ 'ಪಾಪಾ ಪಾಂಡು' ಧಾರಾವಾಹಿ ಪ್ರಸಾರ ಆಗಲಿದೆ.

'ಪಾಪಾ ಪಾಂಡು' ಜೊತೆಗೆ 'ಸಿಲ್ಲಿ ಲಲ್ಲಿ' ಧಾರಾವಾಹಿ ಕೂಡ ಪ್ರಸಾರ ಆಗಲಿ, 'ಸಿಲ್ಲಿ ಲಲ್ಲಿ' ಧಾರಾವಾಹಿಗೂ ಸಿಹಿ ಕಹಿ ಚಂದ್ರು ಹೊಸ ರೂಪ ಕೊಡಲಿ ಅಂತ ವೀಕ್ಷಕರು ಕೇಳಿಕೊಳ್ತಿದ್ದಾರೆ.

Viewers want Silli Lalli serial along with Paapa Pandu

ಹದಿನೈದು ವರ್ಷಗಳ ಹಿಂದೆ 'ಪಾಪಾ ಪಾಂಡು' ಎಷ್ಟು ಜನಪ್ರಿಯತೆ ಪಡೆದಿತ್ತೋ, ಅಷ್ಟೇ ಜನಪ್ರಿಯತೆ ಗಳಿಸಿದ್ದ ಧಾರಾವಾಹಿ 'ಸಿಲ್ಲಿ ಲಲ್ಲಿ'.

''ಸರ್ಜರಿ ಹಾಗೂ ಭರ್ಜರಿಯಲ್ಲಿ ವೆರಿ ವೆರಿ ಫೇಮಸ್'' ಅಂತ ಬಡಾಯಿ ಕೊಚ್ಚಿಕೊಳ್ಳುವ ಡಾ.ವಿಠಲ್ ರಾವ್, ''ನನ್ನ ನಂಬಿ ಪ್ಲೀಸ್ ಪ್ಲೀಸ್'' ಎಂದು ಬೇಡಿಕೊಳ್ಳುವ ಲಲ್ಲಿ ಅಲಿಯಾಸ್ ಸಮಾಜ ಸೇವಕಿ ಲಲಿತಾಂಬ, ಸದಾ ಪುಸ್ತಕ ಓದುವ ಸಿಲ್ಲಿ ಅಲಿಯಾಸ್ ಕಥಾಲೇಖಕಿ ಶ್ರೀಲತಾ, 'ನಗರದ ಯುವ ಪ್ರೇಮಿ'ಗಳಾದ ಪಲ್ಲಿ ಹಾಗೂ ಸೂಜಿ, 'ಸೂಪರ್ ಸುಪ್ರೀಂ ಐಡಿಯಾ' ಕೊಡುವ ರಂಗನಾಥ, 'ಡಾಕ್ಟ್ರೇ..' ಎಂದು ಓಡಿ ಬರುವ ಎಸ್.ಎಂ.ಎಲ್... ಇಂತಹ ಪಾತ್ರಗಳಿಂದ ಕೂಡಿದ ಧಾರಾವಾಹಿಯೇ 'ಸಿಲ್ಲಿ ಲಲ್ಲಿ'.

ವಿಜಯ ಪ್ರಸಾದ್ ನಿರ್ದೇಶನದ ಹಾಸ್ಯದ ಹೊನಲನ್ನೇ ಹರಿಸುತ್ತಿದ್ದ 'ಸಿಲ್ಲಿ ಲಲ್ಲಿ' ಧಾರಾವಾಹಿಯನ್ನ ಚಿಕ್ಕ ಮಕ್ಕಳಿನಿಂದ ಹಿಡಿದು ವಯಸ್ಸಾದ ಅಜ್ಜಿ-ತಾತನವರೆಗೂ ಎಲ್ಲರೂ ನೋಡಿ ಆನಂದಿಸುತ್ತಿದ್ದರು.

ಜನಪ್ರಿಯತೆ ಗಳಿಸಿದ್ದ 'ಸಿಲ್ಲಿ ಲಲ್ಲಿ' ಧಾರಾವಾಹಿ 'ಪಾಪಾ ಪಾಂಡು' ಅಂತೆ ಮತ್ತೆ ಕಿರುತೆರೆಗೆ ವಾಪಸ್ ಬರಲಿ ಅಂತ ವೀಕ್ಷಕರು ಕಲರ್ಸ್ ಸೂಪರ್ ವಾಹಿನಿ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ ಕಾಮೆಂಟ್ ಮಾಡುತ್ತಿದ್ದಾರೆ.

ಸಿಹಿ ಕಹಿ ಚಂದ್ರು, ನಿರ್ದೇಶಕ ವಿಜಯ ಪ್ರಸಾದ್ ಹಾಗೂ ಕಲರ್ಸ್ ಕನ್ನಡ ವಾಹಿನಿ ಮನಸ್ಸು ಮಾಡಿದರೆ 'ಸಿಲ್ಲಿ ಲಲ್ಲಿ' ಧಾರಾವಾಹಿಗೆ ನೂತನ ಟಚ್ ಕೊಡುವುದಕ್ಕೆ ಹೆಚ್ಚು ಸಮಯ ಬೇಕಾಗಲ್ಲ.

'ಪಾಪಾ ಪಾಂಡು' ಅಂತೆ 'ಸಿಲ್ಲಿ ಲಲ್ಲಿ' ಧಾರಾವಾಹಿ ವಾಪಸ್ ಬರಲಿ ಅಂತ ನೀವೂ ಭಾವಿಸುತ್ತೀರಾ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ಸ್ ಮೂಲಕ.

More from Filmibeat

English summary
Colors Kannada Viewers are expressing their pleasure to watch 'Silli Lalli' serial along with 'Paapa Pandu' season 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X