'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಡಿ ಬಾಸ್ ದರ್ಶನ್ ಬರಲೇಬೇಕು!

By Naveen

Recommended Video

'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಯಾರು ಬರಬೇಕು ? | Filmibeat Kannada

ಕಳೆದ ವಾರ ಶುರು ಆಗಿರುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಇದೊಂದು ಟಾಕ್ ಶೋ ಆಗಿದ್ದು, ಸಿಕ್ಕಾಪಟ್ಟೆ ತರ್ಲೆ ತಮಾಷೆ ಕಾರ್ಯಕ್ರಮದ ತುಂಬ ತುಂಬಿದೆ. ಪ್ರತಿ ವಾರ ಇಬ್ಬರು ಅತಿಥಿಗಳು ಈ ಕಾರ್ಯಕ್ರಮಕ್ಕೆ ಬರಲಿದ್ದು ಪ್ರತಿ ವಾರ ಯಾರು ಶಿವಣ್ಣ ಮುಂದೆ ಕುಳಿತುಕೊಳ್ಳುತ್ತಾರೆ ಎಂಬ ನಿರೀಕ್ಷೆ ಹೆಚ್ಚಿದೆ. 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಗುರುಕಿರಣ್ ಅವರಿಂದ ಶುಭಾರಂಭವಾಗಿದೆ.

ಅಂದಹಾಗೆ, 'ನಂ 1 ಯಾರಿ ವಿತ್ ಶಿವಣ್ಣ'ಕ್ಕೆ ಕನ್ನಡದ ಯಾವ ಸ್ಟಾರ್ ನಟರು ಬರಬೇಕು ಎಂಬ ಪ್ರಶ್ನೆಯನ್ನು 'ಫಿಲ್ಮಿಬೀಟ್ ಕನ್ನಡ' ಒಂದು ಪೋಲ್ ಮಾಡಿ ಓದುಗರ ಮುಂದೆ ಇಟ್ಟಿತ್ತು. ಸ್ಯಾಂಡಲ್ ವುಡ್ ನಟರಾದ ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್, ಯಶ್ ಮತ್ತು ಗಣೇಶ್ ಅವರ ಹೆಸರನ್ನು ಆಯ್ಕೆಯಾಗಿ ನೀಡಲಾಗಿತ್ತು. ಅದೇ ರೀತಿ ನೂರಾರೂ ಜನರು ಇದರಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅದರಲ್ಲಿ ಹೆಚ್ಚಿನ ಸಂಖ್ಯೆಯ ಜನರು ದರ್ಶನ್ ಅವರನ್ನು ಈ ಕಾರ್ಯಕ್ರಮದಲ್ಲಿ ನೋಡಲು ಬಯಸುತ್ತಿದ್ದಾರೆ. ಮುಂದೆ ಓದಿ...

ದರ್ಶನ್ 39 %

ದರ್ಶನ್ 39 %

ಶೇಕಡ 39 ರಷ್ಟು ಜನರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಕಾರ್ಯಕ್ರಮಕ್ಕೆ ಬರಬೇಕು ಎಂದು ಹೇಳಿದ್ದಾರೆ. ಈ ಮೂಲಕ ಅತಿ ಹೆಚ್ಚು ವೀಕ್ಷಕರ ಅಭಿಪ್ರಾಯ ಕೂಡ ಇದೇ ಆಗಿದೆ. ಕರುನಾಡ ಚಕ್ರವರ್ತಿ ಮತ್ತು ಡಿ ಬಾಸ್ ಇಬ್ಬರನ್ನು ಒಟ್ಟಿಗೆ ನೋಡಬೇಕು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ.

ಸುದೀಪ್ 28 %

ಸುದೀಪ್ 28 %

'ದಿ ವಿಲನ್' ಸಿನಿಮಾದಲ್ಲಿ ಒಂದಾಗಿರುವ ಶಿವರಾಜ್ ಕುಮಾರ್ ಮತ್ತು ಸುದೀಪ್ ಜೋಡಿ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿಯೂ ಒಂದಾಗಬೇಕು ಎಂದು ಶೇಕಡ 28 ವೀಕ್ಷಕರು ಬಯಸಿದ್ದಾರೆ.

ಪುನೀತ್ ರಾಜ್ ಕುಮಾರ್ 20 %

ಪುನೀತ್ ರಾಜ್ ಕುಮಾರ್ 20 %

'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಇರಬೇಕು ಎನ್ನುವುದು ಶೇಕಡ 20 ರಷ್ಟು ಜನರ ಅಭಿಪ್ರಾಯವಾಗಿದೆ. ಅಣ್ಣ - ತಮ್ಮ ಇಬ್ಬರನ್ನು ಈ ಕಾರ್ಯಕ್ರಮದಲ್ಲಿ ನೋಡಬೇಕು ಎಂಬುದು ಅಭಿಮಾನಿಗಳ ಆಸೆ ಆಗಿದೆ.

ಯಶ್ ಮತ್ತು ಗಣೇಶ್

ಯಶ್ ಮತ್ತು ಗಣೇಶ್

ಉಳಿದಂತೆ ಶೇಕಡ 10 ರಷ್ಟು ಜನರು ನಟ ಯಶ್ ಅವರನ್ನು, ಶೇಕಡ 3 ರಷ್ಟು ಜನರು ಗಣೇಶ್ ಅವರನ್ನು 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ನೋಡಲು ಇಷ್ಟಪಟ್ಟಿದ್ದಾರೆ.

ಫೇಸ್ ಬುಕ್ ಪೇಜ್ ನಲ್ಲಿ

ಫೇಸ್ ಬುಕ್ ಪೇಜ್ ನಲ್ಲಿ

ಇದರ ಜೊತೆಗೆ 'ಫಿಲ್ಮಿಬೀಟ್ ಕನ್ನಡ'ದ ಫೇಸ್ ಬುಕ್ ಪೇಜ್ ನಲ್ಲಿ ಸಹ ನೂರಾರೂ ಜನರು ಕಮೆಂಟ್ ಮಾಡಿದ್ದಾರೆ. ಅದರಲ್ಲಿ ಬಹುಪಾಲು ಜನರು ದರ್ಶನ್ ಈ ಕಾರ್ಯಕ್ರಮಕ್ಕೆ ಬರಬೇಕು. ಶಿವಣ್ಣ ಮತ್ತು ದರ್ಶನ್ ಅವರನ್ನು ಒಂದೇ ಒಟ್ಟಿಗೆ ನೋಡಬೇಕು ಎಂದು ಹೇಳಿದ್ದಾರೆ.

ಮುಂದಿನ ಸಂಚಿಕೆಯಲ್ಲಿ

ಮುಂದಿನ ಸಂಚಿಕೆಯಲ್ಲಿ

'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಎರಡನೇ ಸಂಚಿಕೆಯಲ್ಲಿ ನಟ ಶರಣ್, ಚಿಕ್ಕಣ್ಣ ಮತ್ತು ತರುಣ್ ಸುಧೀರ್, ಮೂರನೇ ಸಂಚಿಕೆಯಲ್ಲಿ ನಟ ಶ್ರೀಮುರಳಿ ಮತ್ತು ನಿರ್ದೇಶಕ ನರ್ತನ್, ನಾಲ್ಕನೇ ಸಂಚಿಕೆಯಲ್ಲಿ ಶೃತಿ ಹರಿಹರನ್ ಮತ್ತು ಶ್ರದ್ಧಾ ಶ್ರೀನಾಥ್ ಇರಲಿದ್ದಾರೆ.

ಪ್ರತಿ ಭಾನುವಾರ ಪ್ರಸಾರ

ಪ್ರತಿ ಭಾನುವಾರ ಪ್ರಸಾರ

'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ಪ್ರತಿ ಭಾನುವಾರ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ವಿಯು(viu) ಅಪ್ ನಲ್ಲಿಯೂ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ.

More from Filmibeat

English summary
Viewers want to see Darshan in Star Suvarna's new show 'No1 yari with Shivanna' program.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X