Just In
Don't Miss!
- News
ಕೆಂಪೇಗೌಡ ಏರ್ಪೋರ್ಟ್ಗೆ ಆರೋಗ್ಯ ಮಾನ್ಯತೆ ಪ್ರಮಾಣಪತ್ರ
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟಾಪ್ ಗೇರಿದ ಕಲರ್ಸ್ ಕನ್ನಡ ಟಿ.ಆರ್.ಪಿ: ಎಲ್ಲ 'ಕಿರಿಕ್ ಪಾರ್ಟಿ' ಕರಾಮತ್ತು.!
ಮನರಂಜನಾ ವಾಹಿನಿಗಳಂದ್ರೆ ಪ್ರತಿನಿತ್ಯ, ಪ್ರತಿ ಕ್ಷಣ ಮನರಂಜನೆ ನೀಡುತ್ತಲೇ ಇರಬೇಕು. ವೀಕ್ಷಕರಿಗೆ ಬಗೆ ಬಗೆಯ ಮನರಂಜನೆ ನೀಡಲು ಹತ್ತಾರು ಚಾನೆಲ್ ಗಳು ಹುಟ್ಟಿಕೊಂಡಿವೆ. ಎಂಟರ್ಟೇನ್ಮೆಂಟ್ ವಿಚಾರದಲ್ಲಿ ದಿನದಿಂದ ದಿನಕ್ಕೆ ಸ್ಪರ್ಧೆ ಕೂಡ ಹೆಚ್ಚಾಗುತ್ತಿದೆ. ಒಂದ್ಕಾಲದಲ್ಲಿ ಮನರಂಜನೆ ವಿಷಯದಲ್ಲಿ ಉದಯ ವಾಹಿನಿಯನ್ನ ಟಚ್ ಮಾಡಲು ಯಾರಿಂದಲೂ ಸಾಧ್ಯ ಆಗುತ್ತಿರಲಿಲ್ಲ. ಆದ್ರೀಗ, ಕಾಲ ಬದಲಾಗಿದೆ.
ಬ್ಲಾಕ್ ಬಸ್ಟರ್ ಸಿನಿಮಾಗಳು, ಹೊಸ ಹೊಸ ಧಾರಾವಾಹಿಗಳು, ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ವೀಕ್ಷಕರನ್ನ ಸೆಳೆಯುತ್ತಿರುವ ಕಲರ್ಸ್ ಕನ್ನಡ ವಾಹಿನಿ ಸದ್ಯ ಟಿ.ಆರ್.ಪಿ ಎಂಬ ಮಹಾ ಯುದ್ಧದಲ್ಲಿ ಗೆಲುವಿನ ನಗೆ ಬೀರಿದೆ.
ಹಾಗೆ, ಟಿ.ಆರ್.ಪಿ ಯುದ್ಧದಲ್ಲಿ ಕಲರ್ಸ್ ಕನ್ನಡ ಜಯಶಾಲಿ ಆಗಲು ಮುಖ್ಯ ಕಾರಣ 'ಕಿರಿಕ್ ಪಾರ್ಟಿ' ಎಂಬುದು ಅಷ್ಟೇ ಸತ್ಯ. ಮುಂದೆ ಓದಿರಿ...

'ಕಲರ್ಸ್ ಕನ್ನಡ' ವೀಕ್ಷಕರ ಸಂಖ್ಯೆ ಹೆಚ್ಚಿಸಿದ 'ಕಿರಿಕ್ ಪಾರ್ಟಿ'
ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿ, ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ 'ಕಿರಿಕ್ ಪಾರ್ಟಿ' ಸಿನಿಮಾ ಕಲರ್ಸ್ ಕನ್ನಡ ವಾಹಿನಿಯ ವೀಕ್ಷಕರ ಸಂಖ್ಯೆಯನ್ನ ನಾಲ್ಕು ಪಟ್ಟು ಹೆಚ್ಚು ಮಾಡಿದೆ ಅಂದ್ರೆ ನೀವು ನಂಬಲೇಬೇಕು.

BARC ರಿಪೋರ್ಟ್ ನೋಡಿ...
'ಕಿರಿಕ್ ಪಾರ್ಟಿ' ಸಿನಿಮಾ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆದಾಗ ವೀಕ್ಷಕರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಅದಕ್ಕೆ ಸಾಕ್ಷಿ BARC INDIA ಪ್ರಕಟ ಮಾಡಿರುವ ಈ ರಿಪೋರ್ಟ್.

ಹಿಂದಿನ ನಾಲ್ಕು ವಾರಗಳಿಗೆ ಹೋಲಿಸಿದರೆ....
BARC INDIA ರಿಪೋರ್ಟ್ ಪ್ರಕಾರ, ಶನಿವಾರ ('ಕಿರಿಕ್ ಪಾರ್ಟಿ' ಸಿನಿಮಾ ಪ್ರಸಾರ ಆದ ದಿನ) ಸಂಜೆ 19:57 ರಿಂದ ರಾತ್ರಿ 23:37 ರವರೆಗೆ ಕಲರ್ಸ್ ಕನ್ನಡ ವಾಹಿನಿ 4645 Viewership ರೇಟಿಂಗ್ ದಾಖಲಿಸಿದೆ. ಅದರ ಹಿಂದಿನ ನಾಲ್ಕು ವಾರಗಳ ಸರಾಸರಿ Viewership ರೇಟಿಂಗ್ 1,182. ಅಲ್ಲಿಗೆ, 'ಕಿರಿಕ್ ಪಾರ್ಟಿ' ಕರಾಮತ್ತಿನಿಂದ ಕಲರ್ಸ್ ಕನ್ನಡ ವೀಕ್ಷಕರ ಸಂಖ್ಯೆ ಹೆಚ್ಚಾಗಿರುವುದು ಸ್ಪಷ್ಟ.

ಟಿ.ಆರ್.ಪಿ ಎಲ್ಲೂ 'ಕಲರ್ಸ್ ಕನ್ನಡ' ಕಿಂಗ್
Viewership ರೇಟಿಂಗ್ ಮಾತ್ರ ಅಲ್ಲ, ಟಿ.ಆರ್.ಪಿ ರೇಟಿಂಗ್ ನಲ್ಲೂ ಕಲರ್ಸ್ ಕನ್ನಡ 'ಕಿಂಗ್' ಆಗಿದೆ.

ಟಾಪ್ ಗೇರಿದ ಕಲರ್ಸ್ ಕನ್ನಡ
BARC INDIA ರಿಪೋರ್ಟ್ ಪ್ರಕಾರ, 34ನೇ ವಾರ ಕಲರ್ಸ್ ಕನ್ನಡ ವಾಹಿನಿ ಒಟ್ಟು 435510 (ವೀಕ್ಲಿ ಇಂಪ್ರೆಶನ್) ದಾಖಲಿಸಿ ನಂಬರ್ ಒನ್ ಸ್ಥಾನ ಪಡೆದಿದೆ.

ಎರಡನೇ ಸ್ಥಾನದಲ್ಲಿ ಜೀ ಕನ್ನಡ ವಾಹಿನಿ
ಒಟ್ಟು 266581 (ವೀಕ್ಲಿ ಇಂಪ್ರೆಶನ್) ದಾಖಲಿಸಿ ಜೀ ಕನ್ನಡ ವಾಹಿನಿ ಎರಡನೇ ಸ್ಥಾನ ಕಾಯ್ದುಕೊಂಡಿದೆ.

ನಂತರದ ಸ್ಥಾನಗಳು
ಮೂರನೇ ಸ್ಥಾನ - ಉದಯ ಮೂವೀಸ್ - 193930
ನಾಲ್ಕನೇ ಸ್ಥಾನ - ಉದಯ ಟಿವಿ - 177747
ಐದನೇ ಸ್ಥಾನ - ಸ್ಟಾರ್ ಸುವರ್ಣ - 165660

ಎರಡು ಬಾರಿ ಪ್ರಸಾರ ಆಗಿತ್ತು 'ಕಿರಿಕ್ ಪಾರ್ಟಿ'
ಆಗಸ್ಟ್ 19 ರಂದು ರಾತ್ರಿ 8 ಗಂಟೆಗೆ ಹಾಗೂ ಆಗಸ್ಟ್ 20 ರಂದು ಸಂಜೆ 4 ಗಂಟೆಗೆ 'ಕಿರಿಕ್ ಪಾರ್ಟಿ' ಸಿನಿಮಾ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಿತ್ತು.

ರಕ್ಷಿತ್ ಶೆಟ್ಟಿ ಫುಲ್ ಖುಷ್
BARC INDIA ನೀಡಿರುವ ರಿಪೋರ್ಟ್ ನೋಡಿ 'ಕಿರಿಕ್ ಪಾರ್ಟಿ' ಚಿತ್ರದ ಹೀರೋ ರಕ್ಷಿತ್ ಶೆಟ್ಟಿ ಸಂತಸಗೊಂಡಿದ್ದಾರೆ.