For Quick Alerts
  ALLOW NOTIFICATIONS  
  For Daily Alerts

  ಇಂಡಿಯನ್ ಐಡಲ್ ಫಿನಾಲೆ: ವಿಜಯ್ ದೇವರಕೊಂಡ ಕಡೆಯಿಂದ ಬಂಪರ್ ಆಫರ್

  |

  ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಹಿಂದಿ ಗಾಯನ ಸ್ಪರ್ಧೆ ಇಂಡಿಯನ್ ಐಡಲ್ ಫಿನಾಲೆ ನಡೆಯುತ್ತಿದೆ. ಕರ್ನಾಟಕದ ಯುವ ಗಾಯಕ ನಿಹಾಲ್ ತಾವ್ರೋ ಕೂಡ ಫಿನಾಲೆ ತಲುಪಿದ್ದು, ಇಂಡಿಯನ್ ಐಡಲ್-12 ಟ್ರೋಫಿ ಕನ್ನಡದ ಯುವ ಗಾಯಕನ ಪಾಲಾಗುತ್ತಾ ಎನ್ನುವ ಕುತೂಹಲ ಕನ್ನಡಿಗರಲ್ಲಿ ಮನೆಮಾಡಿದೆ.

  ಮೂಡಬಿದರಿಯ ಕಡಲಕೆರೆ ಪರಿಸರದ ನಿಹಾಲ್ ತಾವ್ರೋ ಇಂಡಿಯನ್ ಐಡಲ್ ಶೋನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರ ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಇದೀಗ ಅಂತಿಮ ಕಣದಲ್ಲಿ ಒಟ್ಟು 6 ಮಂದಿ ಗಾಯಕರಿದ್ದು, ಪ್ರಶಸ್ತಿಗಾಗಿ ಈ 6 ಮಂದಿಯ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ.

  ಈಗಾಗಲೇ ಸ್ಪರ್ಧೆ ಏರ್ಪಟ್ಟಿದ್ದು, 6 ಗಾಯಕರು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುತ್ತಿದ್ದಾರೆ. 6 ಗಾಯಕರು ಅದ್ಭುತವಾಗಿ ಹಾಡುತ್ತಿದ್ದು, ಈ ಆರರಲ್ಲಿ ಯಾರು ಗೆದ್ದು ಬೀಗ್ತಾರೆ ಎನ್ನುವ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ಸದ್ಯ ಅಂತಿಮ ಕಣದಲ್ಲಿ ಕರ್ನಾಟಕದ ನಿಹಾಲ್ ತಾವ್ರೋ, ಪವನ್ ದೀಪ್ ರಾಜನ್, ಅರುಣಿತಾ ಕಾಂಜಿಲಾಲ್, ಆಂಧ್ರಪ್ರದೇಶದ ಷಣ್ಮುಖಪ್ರಿಯಾ, ಸಾಯ್ಲಿಕಿಶೋರ್ ಕಾಂಬ್ಲಿ, ಮೊಹಮ್ಮದ್ ಡ್ಯಾನಿಶ್ ಇದ್ದಾರೆ. ಈ ಸ್ಪರ್ಧಿಗಳ ನಡುವೆ ಟ್ರೋಫಿಗಾಗಿ ಸೆಣಸಾಟ ನಡೆಯುತ್ತಿದೆ. ಮುಂದೆ ಓದಿ..

  ಗೆದ್ದ ಸ್ಪರ್ಧಿಗೆ ಟ್ರೋಫಿ ಜೊತೆಗೆ 25 ಲಕ್ಷ ರೂ. ನಗದು

  ಗೆದ್ದ ಸ್ಪರ್ಧಿಗೆ ಟ್ರೋಫಿ ಜೊತೆಗೆ 25 ಲಕ್ಷ ರೂ. ನಗದು

  ಫಿನಾಲೆ ರೌಂಡ್ ನಲ್ಲಿ ಗೆಸ್ಟ್ ಆಗಿ ಅನೇಕ ಗಣ್ಯರು ಭಾಗಿಯಾಗಿದ್ದಾರೆ. ಮಿಕಾ ಸಿಂಗ್, ಕಿಯಾರಾ ಅಡ್ವಾಣಿ, ಸಿದ್ಧಾರ್ಥ ಮಲ್ಹೋತ್ರಾ, ಅನ್ನು ಕಪೂರ್, ಜಾವೆದ್ ಅಲಿ, ಕುಮಾರ್ ಸನು, ಉದಿತ್ ನಾರಾಯಣ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದಾರೆ. ಇನ್ನು ವಿಶೇಷ ಎಂದರೆ ಗೆದ್ದ ಸ್ಪರ್ಧಿಗಳಿಗೆ ಟ್ರೋಫಿ ಜೊತೆಗೆ 25 ಲಕ್ಷ ರೂ. ನಗದು ಬಹುಮಾನ ಸಿಗಲಿದೆ.

  ಕರಣ್ ಜೋಹರ್ ಬಂಪರ್ ಆಫರ್

  ಕರಣ್ ಜೋಹರ್ ಬಂಪರ್ ಆಫರ್

  ಅಂದಹಾಗೆ 6 ಜನ ಫಿನಾಲೆ ಸ್ಪರ್ಧಿಗಳಲ್ಲಿ ಈಗಾಗಲೇ 3 ಸ್ಪರ್ಧಿಗಳಿಗೆ ಬಾಲಿವುಡ್ ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಬಂಪರ್ ಆಫರ್ ನೀಡಿದ್ದರು. ಪ್ರತಿಭಾವಂತ ಮೂರು ಸ್ಪರ್ಧಿಗಳಿಗೆ ತನ್ನ ಧರ್ಮ ಪ್ರೊಡಕ್ಷನ್ ಸಿನಿಮಾಗಳಿಗೆ ಧ್ವನಿ ನೀಡುವ ಅವಕಾಶ ನೀಡುವುದಾಗಿ ಹೇಳಿದ್ದರು. ಅದರಂತೆ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಸಿನಿಮಾಗಳಲ್ಲಿ ಹಾಡುವ ಅವಕಾಶವನ್ನು ಪವನ್ ದೀಪ್ ರಾಜನ್, ಅರುಣಿತಾ ಕಂಜಿಲಾಲ್ ಮತ್ತು ಮೊಹಮ್ಮದ್ ಡ್ಯಾನಿಶ್ ಪಡೆದಿದ್ದಾರೆ.

  ವಿಜಯ್ ದೇವರಕೊಂಡ ಕಡೆಯಿಂದ ಸಖತ್ ಆಫರ್

  ವಿಜಯ್ ದೇವರಕೊಂಡ ಕಡೆಯಿಂದ ಸಖತ್ ಆಫರ್

  ಸೌತ್ ಸ್ಟಾರ್ ವಿಜಯ್ ದೇವರಕೊಂಡ ಫಿನಾಲೆ ಸ್ಪರ್ಧಿಯೊಬ್ಬರಿಗೆ ಸಖತ್ ಸರ್ಪ್ರೈಸ್ ನೀಡಿದ್ದಾರೆ. ಫಿನಾಲೆ ತಲುಪಿರುವ ಆಂಧ್ರಪ್ರದೇಶದ ಸ್ಪರ್ಧಿ ಷಣ್ಮುಖಪ್ರಿಯಾಗೆ ವಿಜಯ್ ದೇವರಕೊಂಡ ಬೆಂಬಲ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಫಿನಾಲೆ ದಿನ ಷಣ್ಮುಖಪ್ರಿಯಾಗೆ ವಿಡಿಯೋ ಕಾಲ್ ಮಾಡಿರುವ ವಿಜಯ್ ದೇವರಕೊಂಡ ಬೆಸ್ಟ್ ವಿಶಸ್ ತಿಳಿಸಿದ್ದಾರೆ. ಷಣ್ಮುಖಪ್ರಿಯಾಗೆ ಸಖತ್ ಆಫರ್ ನೀಡಿದ್ದಾರೆ. ಫಿನಾಲೆ ಮುಗಿಸಿ ಹೈದರಾಬಾದ್ ಗೆ ವಾಪಾಸ್ ಆದ ಬಳಿಕ ತನ್ನ ಸಿನಿಮಾದಲ್ಲಿ ಹಾಡುವ ಅವಕಾಶ ಸಿಗಲಿದೆ ಎಂದು ದೇವರಕೊಂಡ ಹೇಳಿದ್ದಾರೆ. ಈ ಮೂಲಕ ಸಖತ್ ಆಫರ್ ನೀಡಿದ್ದಾರೆ.

  ದೇವರಕೊಂಡ ಮಾತಿಗೆ ಷಣ್ಮುಖಪ್ರಿಯಾ ಫುಲ್ ಖುಷ್

  ದೇವರಕೊಂಡ ಮಾತಿಗೆ ಷಣ್ಮುಖಪ್ರಿಯಾ ಫುಲ್ ಖುಷ್

  ಸುದ್ದಿ ಕೇಳಿ ಷಣ್ಮುಖ ಕುಣಿದು ಕುಪ್ಪಳಿಸಿದ್ದಾರೆ. ಇನ್ನು ದೇವರಕೊಂಡ ಇಂಡಯನ್ ಐಡಲ್ ನೋಡುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ಎಲ್ಲಾ ಸ್ಪರ್ಧಿಗಳಿಗೆ ಬೆಸ್ಟ್ ವಿಶಸ್ ತಿಳಿಸಿದ್ದಾರೆ. ಸುಮಾರು 12 ಗಂಟೆಗಳ ಅವಧಿಯ ಎಪಿಸೋಡ್ ನಲ್ಲಿ ಕೆಲವು ಪೂರ್ವ ರೆಕಾರ್ಡ್ ಮಾಡಿರುವ ತುಣುಕುಗಳನ್ನು ಪ್ರಸಾರಮಾಡಲಾಗುತ್ತಿದೆ. ಮಧ್ಯರಾತ್ರಿವರೆಗೂ ಇಂಡಿಯನ್ ಐಡಲ್ ನೇರಪ್ರಸಾರ ನಡೆಯಲಿದ್ದು, ರಾತ್ರಿ 12ಗಂಟೆಗೆ ವಿಜೇತರ ಹೆಸರು ಬಹಿರಂಗವಾಗಲಿದೆ.

  'ಇಂಡಿಯನ್ ಐಡಲ್ 12' ಬಗ್ಗೆ

  'ಇಂಡಿಯನ್ ಐಡಲ್ 12' ಬಗ್ಗೆ

  ಅಂದಹಾಗೆ ಇಂಡಿಯನ್ ಐಡಲ್ ಕಾರ್ಯಕ್ರಮವನ್ನು ಆದಿತ್ಯ ನಾರಾಯಣ್ ನಡೆಸಿಕೊಡುತ್ತಿದ್ದಾರೆ. ಇನ್ನು ಕಾರ್ಯಕ್ರಮದ ಜಡ್ಜ್ ಸ್ಥಾನದಲ್ಲಿ ಅನು ಮಲಿಕ್, ಹಿಮೇಶ್ ರೇಶಮಾಯ ಮತ್ತು ಸೋನು ಕಕ್ಕರ್ ಕುಳಿತುಕೊಂಡಿದ್ದಾರೆ. ಅದ್ದೂರಿಯಾಗಿ ನಡೆಯುತ್ತಿರುವ ಫಿನಾಲೆ ಕಾರ್ಯಕ್ರಮ ಕ್ಷಣಕ್ಷಣಕ್ಕೂ ತುಹಾಲ ಹೆಚ್ಚಾಗುತ್ತಿದ್ದು, 6 ಸ್ಪರ್ಧಿಗಳಲ್ಲಿ ಯಾರ ಪಾಲಾಗುತ್ತೆ ಟ್ರೋಫಿ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Telugu Actor Vijay Devarakonda gives surprise to Indian Idol Finale contestant Shanmuga Priya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X