ಅಮ್ಮಂದಿರ ಜೊತೆಗೆ ಹಾಡಿದ ವಿಜಯ ಪ್ರಕಾಶ್ ಮತ್ತು ಅರ್ಜುನ್ ಜನ್ಯ
Recommended Video

'ಸರಿಗಮಪ ಸೀಸನ್ 14' ಕಾರ್ಯಕ್ರಮ ಅನೇಕ ವಿಶೇಷತೆಗಳನ್ನು ಹೊಂದಿತ್ತು. ಅದರಲ್ಲಿಯೂ ಕಾರ್ಯಕ್ರಮದಲ್ಲಿ ತೀರ್ಪುಗಾರರಾದ ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಅವರ ತಾಯಂದಿರು ಸೆಮಿ ಫೈನಲ್ ಸಂಚಿಕೆಗೆ ಆಗಮಿಸಿ ಮಕ್ಕಳ ಹಾಡು ಕೇಳಿ ಆನಂದಿಸಿದರು.
ವಿಜಯ್ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಇಬ್ಬರಿಗೆ ಸರ್ಪೈಸ್ ನೀಡುವ ಉದ್ದೇಶದಿಂದ ಅವರಿಗೆ ತಿಳಿಯದಂತೆ ಅವರ ಅಮ್ಮಂದಿರನ್ನು ಕಾರ್ಯಕ್ರಮಕ್ಕೆ ಕರೆ ತರಲಾಗಿತ್ತು. ಇದ್ದಕ್ಕಿದ್ದ ಹಾಗೆ, ಶೋ ನಲ್ಲಿ ತಮ್ಮ ತಾಯಂದಿರನ್ನು ನೋಡಿ ಇಬ್ಬರು ಖುಷಿ ಆದರು. ಆ ಸಂದರ್ಭ ನೋಡುಗರಿಗೆ ತುಂಬ ಇಷ್ಟ ಆಗುವಂತೆ ಇತ್ತು.
ಇನ್ನು ವಿಜಯ್ ಪ್ರಕಾಶ್ ಜೊತೆ ಸೇರಿ ಅವರ ತಾಯಿ ಹಾಡು ಹಾಡಿದರು. ಮಗನೇ ಹಾಡಿದ್ದ 'ಗೊಂಬೆ ಹೇಳುತೈತೆ..' ಹಾಗೂ 'ಬೆಳಗೆದ್ದು..' ಹಾಡಿಗೆ ವಿಪಿ ತಾಯಿ ಧ್ವನಿ ನೀಡಿದರು. ಅಮ್ಮ ಮಗ ಇಬ್ಬರ ಜೋಡಿಯ ಹಾಡುಗಳು ಸಖತ್ ಖುಷಿ ಕೊಟ್ಟಿತ್ತು.

ಅರ್ಜುನ್ ಜನ್ಯ ಅವರ ತಾಯಿ ಸಹ ಮಗನ ಜೊತೆಗೆ ಹಾಡು ಹಾಡಿದರು. ಅರ್ಜುನ್ ಅವರ ಸಂಗೀತದ 'ಮಾಣಿಕ್ಯ' ಸಿನಿಮಾದ 'ಜೀವ ಜೀವ..' ಹಾಗೂ 'ಮುಕುಂದ ಮುರಾರಿ' ಸಿನಿಮಾದ 'ನೀನೇ ರಾಮ ನೀನೇ ಶಾಮ...' ಹಾಡನ್ನು ಗುನುಗಿದರು. ಇನ್ನು 'ಸರಿಗಮಪ ಸೀಸನ್ 14' ಅನ್ನು ಎಲ್ಲ ಅಪ್ಪ ಅಮ್ಮನಿಗಾಗಿ ಸಮರ್ಪಣೆ ಮಾಡಲಾಗಿದೆ.


Click it and Unblock the Notifications











