ವೀಕ್ಷಕರ ಆಸೆ ಫಲಿಸಿತು : 'ಸರಿಗಪಮ'ಗೆ ವಿಜಯ ಪ್ರಕಾಶ್ ಕಮ್ ಬ್ಯಾಕ್

Recommended Video

Sa Re Ga Ma Pa Lil Champs - Season 16: ಅಂತೂ ಅಭಿಮಾನಿಗಳ ಆಸೆ ಈಡೇರಿಸಿದ ವಿಪಿ ಮಾಸ್ಟರ್

ಗಾಯಕ ವಿಜಯ ಪ್ರಕಾಶ್ ರನ್ನು ಸರಿಗಮಪ ಕಾರ್ಯಕ್ರಮದ ವೀಕ್ಷಕರು ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ಅಂತಹ ಅಭಿಮಾನಿಗಳಿಗೆ ಖುಷಿಯಾಗುವ ಸುದ್ದಿ ಬಂದಿದೆ.

ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ಹಂಸಲೇಖ, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್ ಹಾಗೂ ವಿಜಯ ಪ್ರಕಾಶ್ ತೀರ್ಪುಗಾರರಾಗಿದ್ದಾರೆ. ಈ ಪೈಕಿ ವಿಜಯ ಪ್ರಕಾಶ್ ಕಳೆದ ಐದಾರು ವಾರಗಳಿಂದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರಲಿಲ್ಲ.

ಏನರ್ಜಿ ಬೂಸ್ಟರ್, ಕವಿತೆ ಮಾಸ್ಟರ್ ಆಗಿದ್ದ ವಿಜಯ ಪ್ರಕಾಶ್ ಕಾರ್ಯಕ್ರಮಕ್ಕೆ ಜೋಷ್ ನೀಡುತ್ತಿದ್ದರು. ಅವರಿಗಾಗಿ ಅಭಿಮಾನಿಗಳು ಕಾದು ಕಾದು ಸುತ್ತಾಗಿದ್ದರು. ಆದರೆ, ಇದೀಗ ಅಭಿಮಾನಿಗಳ ಆಸೆ ಈಡೇರಿದೆ. ಅಂತೂ ವಿಜಯ ಪ್ರಕಾಶ್ ಕಾರ್ಯಕ್ರಮಕ್ಕೆ ಮರಳಿಸಿದ್ದಾರೆ. ಮುಂದೆ ಓದಿ...

ಮನೆಗೆ ಮರಳಿದ ವಿಜಯ ಪ್ರಕಾಶ್

ಸರಿಗಮಪ ಕಾರ್ಯಕ್ರಮಕ್ಕೆ ಗಾಯಕ ವಿಜಯ ಪ್ರಕಾಶ್ ವಾಪಸ್ ಬಂದಿದ್ದಾರೆ. ತಮ್ಮ ಆಗಮನದ ಶುಭ ಸುದ್ದಿಯನ್ನ ಅವರೇ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ''ಸ್ನೇಹಿತರೆ ! ಮನೆಗೆ ಮರಳಿ ಬಂದಾಯ್ತು'' ಎಂದು ಬರೆದಿದ್ದಾರೆ. ಸ್ನೇಹಿತ ಹಾಗೂ ಮತ್ತೊಬ್ಬ ತೀರ್ಪುಗಾರರಾದ ರಾಜೇಶ್ ಕೃಷ್ಣನ್ ಜೊತೆಗೆ ಫೋಟೋ ತೆಗೆದುಕೊಂಡಿದ್ದಾರೆ.

ಕಾರ್ಯಕ್ರಮಕ್ಕೆ ಬಂತು ಹೊಸ ಜೋಷ್

ಕಾರ್ಯಕ್ರಮಕ್ಕೆ ಬಂತು ಹೊಸ ಜೋಷ್

ತಮ್ಮ ಲವಲವಿಕೆಯ ಮೂಲಕ ಕಾರ್ಯಕ್ರಮದಲ್ಲಿ ಏನರ್ಜಿ ಬೂಸ್ಟರ್, ಕವಿತೆ ಮಾಸ್ಟರ್ ಎಂಬ ಬಿರುದನ್ನು ವಿಜಯ್ ಪ್ರಕಾಶ್ ಪಡೆದಿದ್ದಾರೆ. ಈಗ ಅವರ ಆಗಮನ ಇಡೀ ಸೆಟ್ ಗೆ ಹೊಸ ಜೋಷ್ ನೀಡಿದೆ. ಕಾರ್ಯಕ್ರಮದ ತಂಡ ವಿಪಿ ಜೊತೆಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮ ಪಟ್ಟಿದೆ.

ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದ ಅಭಿಮಾನಿಗಳು

ಕಳೆದ ಐದಾರ ವಾರಗಳಿಂದ ಸರಿಗಮಪ ಕಾರ್ಯಕ್ರಮಕ್ಕೆ ವಿಜಯ ಪ್ರಕಾಶ್ ಬರದೆ ಇದ್ದದನ್ನು ಗಮನಿಸಿದ ಅಭಿಮಾನಿ ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದರು. ನೀವು ಏಕೆ ಕಾರ್ಯಕ್ರಮಕ್ಕೆ ಬರುತ್ತಿಲ್ಲ?. ಅದಷ್ಟು ಬೇಗ ಕಾರ್ಯಕ್ರಮಕ್ಕೆ ಬನ್ನಿ ಎಂದು ಕೇಳಿಕೊಂಡಿದ್ದರು. ಅದೇ ರೀತಿ ವಿಪಿ ಕಮ್ ಬ್ಯಾಕ್ ಮಾಡಿದ್ದಾರೆ.

ಇದೇ ವಾರ ಪ್ರಸಾರ ಆಗುತ್ತದೆ

ಇದೇ ವಾರ ಪ್ರಸಾರ ಆಗುತ್ತದೆ

ಅಭಿಮಾನಿಗಳ ಈ ಟ್ವೀಟ್ ಗಳಿಗೆ ಗಾಯಕ ವಿಜಯ ಪ್ರಕಾಶ್ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ಕಾರ್ಯಕ್ರಮಕ್ಕೆ ಪಕ್ಕಾ ಬರುತ್ತಿದ್ದೇನೆ ಎಂದು ಭರವಸೆ ನೀಡಿದ್ದಾರೆ. ಜೊತೆಗೆ ಯಾಕೆ ಇಷ್ಟೊಂದು ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯ ಆಗಿಲ್ಲ ಎನ್ನುವ ಕಾರಣ ಕೂಡ ನೀಡುತ್ತಾರಂತೆ. ಶನಿವಾರ ಹಾಗೂ ಭಾನುವಾರ ಸಂಜೆ 8 ಗಂಟೆಗೆ ಕಾರ್ಯಕ್ರಮ ಪ್ರಸಾರ ಆಗಲಿದೆ.

More from Filmibeat

English summary
Singer Vijay Prakash came back to Zee Kannada channels 'Saregamapa 16' show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X