ವಿಜಯ್ ಮತ್ತು ಅರುಣ್ ಇಬ್ಬರಲ್ಲೂ ಸ್ವಾರ್ಥ ಇರಲಿಲ್ಲ
ಆದರೆ ವಿಜಯ್ ರಾಘವೇಂದ್ರ ನಾನು ನಮಸ್ಕರಿಸಲ್ಲ. ಆದರೆ ಬಿಗ್ ಬಾಸ್ ಆಶೀರ್ವಾದ ಪಡೆಯುತ್ತೀನಿ ಎಂದರು. ಇನ್ನೊಂದು ಸಂದರ್ಭದಲ್ಲಿ ಋಷಿಕುಮಾರ ಸ್ವಾಮಿಗಳು ಭಿನ್ನವಾದ ಕಥೆಯನ್ನು ಹೇಳಿದರು. ಅದೇನೆಂದರೆ ಈ ಕಾರ್ಯಕ್ರಮದಿಂದ ಹೊದಬಿದ್ದ ಬಳಿಕ ಅವರ ಜೀವನ ಅಕ್ಷರಶಃ ಬೀದಿಗೆ ಬಿದ್ದಿರುವುದು.
ನಾನು ಡಾನ್ಸ್ ಮಾಡಿದ್ದನ್ನು, ಇಲ್ಲಿ ಕುಣಿದಿದ್ದನ್ನು, ಹುಡುಗಿಯರ ಜೊತೆ ಆಟ ಆಡಿದ್ದನ್ನು ನೋಡಿದವರು ನನ್ನನ್ನು ಹತ್ತಿರ ಸೇರಿಸುತ್ತಿಲ್ಲ. ನಾನು ಮಾಡಿದ ತಪ್ಪಾದರೂ ಏನು? ಎಂದು ಪ್ರಶ್ನಿಸಿದರು. ನನಗಾಗಿ ನಾನು ಕುಣಿಯಲಿಲ್ಲ. ಹಸಿದಿದ್ದ ಮಕ್ಕಳ ಹೊಟ್ಟೆ ತುಂಬಿಸಲು ಕುಣಿಯಬೇಕಾಗಿತ್ತು. ಅದಕ್ಕಾಗಿ ಕುಣಿದೆ.

ಎಲ್ಲರೂ ಕುಣಿದು ಕುಪ್ಪಳಿಸಿ ಫೈನಲ್ ಪಂದ್ಯಕ್ಕೆ ಮೆರುಗು ತರುತ್ತಿದ್ದರೆ ಚಂದ್ರಿಕಾ ಮಾತ್ರ ಮೌನಕ್ಕೆ ಶರಣಾಗಿದ್ದದ್ದು ಎದ್ದು ಕಾಣುತ್ತಿತ್ತು. ವೇದಿಕೆ ಬಳಿ ಕುಳಿತಿದ್ದ ಅವರು ಕೇವಲ ಮುಗುಳ್ನಗೆಗಷ್ಟೇ ಸೀಮಿತವಾಗಿದ್ದರು.
ಇನ್ನೇನು ಅಂತಿಮ ಕ್ಷಣಗಳು ಹತ್ತಿರವಾಗುತ್ತಿದ್ದಂತೆ ಅರುಣ್ ಪ್ರಶಸ್ತಿ ನನಗಿಂತಲೂ ವಿಜಯ್ ಸಿಕ್ಕರೆ ಹೆಚ್ಚು ಸಂತೋಷ ಎಂದರು. ಇದೇ ಮಾತನ್ನು ವಿಜಯ್ ಸಹ ಹೇಳಿದರು. ನನಗಿಂತಲೂ ಹೆಚ್ಚು ಅರ್ಹತೆ ಇರುವುದು ಅರುಣ್ ಅವರಿಗೆ ಎಂದರು. ಇಬ್ಬರಲ್ಲೂ ಯಾವುದೇ ಸ್ವಾರ್ಥ ಕಾಣಿಸುತ್ತಿರಲಿಲ್ಲ.


Click it and Unblock the Notifications











