»   » ಕನ್ನಡ ಚಿತ್ರರಂಗದಲ್ಲಿ ಹಬ್ಬಿರುವ ಲೇಟೆಸ್ಟ್ ಗಾಸಿಪ್ ಯಾವುದು ಗೊತ್ತಾ.?

ಕನ್ನಡ ಚಿತ್ರರಂಗದಲ್ಲಿ ಹಬ್ಬಿರುವ ಲೇಟೆಸ್ಟ್ ಗಾಸಿಪ್ ಯಾವುದು ಗೊತ್ತಾ.?

Posted By:
Subscribe to Filmibeat Kannada
Vijay Raghavendra, Kannada Actor revealed the Gossip that has spread in Kannada Film Industry

''ಒಬ್ಬರು ಸಿಂಗರ್ ಜೊತೆ ಒಬ್ಬರು ಆಕ್ಟರ್ ಡೇಟಿಂಗ್ ಮಾಡ್ತಿದ್ದಾರಂತೆ'' - ಕನ್ನಡ ಚಿತ್ರರಂಗದಲ್ಲಿರುವ ಎಲ್ಲರ ಕಿವಿಗೂ ಬಿದ್ದಿರುವ ಲೇಟೆಸ್ಟ್ ಗಾಸಿಪ್ ಅಂದ್ರೆ ಇದೇ.!

ಹಾಗಂತ ಸ್ವತಃ ನಟ ವಿಜಯ್ ರಾಘವೇಂದ್ರ ಹೇಳಿದರು. ಆದ್ರೆ, ಆ ಸಿಂಗರ್ ಯಾರು, ಆ ಆಕ್ಟರ್ ಯಾರು ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಡಲಿಲ್ಲ. ಅಷ್ಟಕ್ಕೂ, ಇದನ್ನೆಲ್ಲ ವಿಜಯ್ ರಾಘವೇಂದ್ರ ಹೇಳಿದ್ದು, 'ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ.

ಚಿತ್ರರಂಗಕ್ಕೆ ಬರುವ ಮುನ್ನವೇ ರಮ್ಯಾ-ವಿಜಯ್ ರಾಘವೇಂದ್ರಗೆ ಪರಿಚಯವಿತ್ತು!

Vijay Raghavendra revealed the gossip that he had heard in Kannada Film Industry recently

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಜಯ್ ರಾಘವೇಂದ್ರ 'ಇಂಡಸ್ಟ್ರಿಯ ಗಾಸಿಪ್' ಕುರಿತು ಬಾಯಿಬಿಟ್ಟಿದ್ದು 'ದಿಢೀರ್ ಬೆಂಕಿ' ಸುತ್ತಿನಲ್ಲಿ.!

ಗಣೇಶ್ ಗೆ ಸಿಕ್ಕ ಗೋಲ್ಡನ್ ಅವಕಾಶ ವಿಜಯ್ ರಾಘವೇಂದ್ರ ಪಾಲಾಗಿದಿದ್ರೆ.?!.

''ಇಂಡಸ್ಟ್ರಿ ಬಗ್ಗೆ ನೀವು ಕೇಳಿದ ಇತ್ತೀಚಿನ ಗಾಸಿಪ್ ಯಾವುದು.?'' ಎಂದು ನಿರೂಪಕ ಅಕುಲ್ ಬಾಲಾಜಿ ಪ್ರಶ್ನೆ ಕೇಳಿದರು. ಅದಕ್ಕೆ, ''ಹೆಸರು ಹೇಳುವುದಿಲ್ಲ, ಒಬ್ಬರು ಸಿಂಗರ್, ಒಬ್ಬರು ಆಕ್ಟರ್ ನ ಡೇಟ್ ಮಾಡ್ತಿದ್ದಾರೆ ಅಂತ ಕೇಳಿದೆ'' ಎಂದು ವಿಜಯ್ ರಾಘವೇಂದ್ರ ಹೇಳಿದರು.

ಆ ಸಿಂಗರ್ ಯಾರು.? ಡೇಟಿಂಗ್ ಮಾಡುತ್ತಿರುವ ಆ ಆಕ್ಟರ್ ಯಾರು.? ಎಂಬ ಪ್ರಶ್ನೆ ಸದ್ಯ ವೀಕ್ಷಕರ ತಲೆಯಲ್ಲಿ ಕೊರೆಯುತ್ತಿದೆ.

English summary
Kannada Actor Vijay Raghavendra revealed the gossip that he had heard in Kannada Film Industry recently in Colors Super Channel's popular show 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada