For Quick Alerts
  ALLOW NOTIFICATIONS  
  For Daily Alerts

  ರಾಮನಗರಕ್ಕೆ ಬಂದು ಕನ್ನಡದಲ್ಲಿ ಡೈಲಾಗ್ ಹೇಳಿದ ವಿಜಯ್ ಸೇತುಪತಿ

  |

  ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರಾಗಿರುವ ವಿಜಯ್ ಸೇತುಪತಿ ಕನ್ನಡದಲ್ಲಿ ಈವರೆಗೆ ಒಂದೂ ಸಿನಿಮಾದಲ್ಲಿ ನಟಿಸಿಲ್ಲ. ಆದರೆ ಇತ್ತೀಚೆಗೆ ರಾಮನಗರಕ್ಕೆ ಬಂದಿದ್ದ ಅವರು ಕನ್ನಡದಲ್ಲಿ ಡೈಲಾಗ್ ಹೇಳಿದ್ದಾರೆ. ಅಲ್ಲದೆ ಕರ್ನಾಟಕದಲ್ಲಿ ಯಾವ ಸ್ಥಳ ತಮಗೆ ಇಷ್ಟವೆಂದು ಸಹ ಹೇಳಿದ್ದಾರೆ.

  ಬಿಡುಗಡೆಯಾಯ್ತು ಉಮಾಪತಿ ಮತ್ತು ಅರುಣಾಕುಮಾರಿ ವಾಟ್ಸಾಪ್ ಮೆಸೇಜ್ | Filmibeat Kannada

  ರಾಮನಗರದ ಇನ್ನೊವೇಟಿವ್ ಫಿಲಂ ಸಿಟಿಯಲ್ಲಿ ಮಾಸ್ಟರ್ ಶೆಫ್ ಕಾರ್ಯಕ್ರಮದ ಉದ್ಘಾಟನೆ ಮಾಡಿದ ವಿಜಯ್ ಸೇತುಪತಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು. ಜೊತೆಗೆ ನೆರೆದಿದ್ದವರ ಒತ್ತಾಯದ ಮೇರೆಗೆ ಕನ್ನಡದ ಒಂದು ಡೈಲಾಗ್ ಸಹ ಹೇಳಿ ರಂಜಿಸಿದರು.

  ತಾವು ನಟಿಸಿದ ಸಿನಿಮಾ ಒಂದರ ಕನ್ನಡ ಡಬ್‌ ಡೈಲಾಗ್ ಹೇಳಿದ ವಿಜಯ್ ಸೇತುಪತಿ, ''ಡೈಲಾಗ್ ಅರ್ಥ ಕೆಟ್ಟದಾಗಿದೆ. ಆದರೆ ನನಗೆ ಅದು ಬರುತ್ತದೆ ಹಾಗಾಗಿ ಹೇಳುತ್ತಿದ್ದೀನಿ. ಸಿನಿಮಾದಲ್ಲಿ ನನ್ನ ತಂಗಿ ಹೀರೋ ಜೊತೆ ಓಡಿಹೋಗಿರುತ್ತಾಳೆ ಆಗ ಹೇಳುವ ಡೈಲಾಗ್ ಇದು'' ಎಂದು ಹೇಳಿ ಸಿನಿಮಾದ ಡೈಲಾಗ್ ಹೇಳಿದರು ಸೇತುಪತಿ.

  ನನಗೆ ಮಡಿಕೇರಿ ಬಹಳ ಇಷ್ಟ: ವಿಜಯ್ ಸೇತುಪತಿ

  ನನಗೆ ಮಡಿಕೇರಿ ಬಹಳ ಇಷ್ಟ: ವಿಜಯ್ ಸೇತುಪತಿ

  ನಂತರ ನಿಮಗೆ ಕರ್ನಾಟಕದ ಯಾವ ಸ್ಥಳ ಬಹಳ ಇಷ್ಟ ಎಂದು ಕೇಳಿದ್ದಕ್ಕೆ, ನನಗೆ ಮಡಿಕೇರಿ, ಕೂರ್ಗ್ ಪ್ರದೇಶ ಬಹಳ ಇಷ್ಟವಾಗುತ್ತದೆ. ನಾನು ಮೂರು ದಿನಗಳ ಕಾಲ ಆ ಭಾಗದಲ್ಲಿ ಚಿತ್ರೀಕರಣ ಮಾಡಿದ್ದೇನೆ ಆ ಭಾಗ ನನಗೆ ಬಹಳ ಇಷ್ಟವಾಯಿತು ಎಂದಿದ್ದಾರೆ. ಕನ್ನಡದಲ್ಲಿ ಕೇಳಿದ ಪ್ರಶ್ನೆಗಳನ್ನು ಇಂಗ್ಲೀಷ್‌ಗೆ ತರ್ಜುಮೆ ಮಾಡಲು ಯತ್ನಿಸಿದಾಗ, ''ಬೇಡ ನನಗೆ ಕನ್ನಡ ಅರ್ಥವಾಗುತ್ತದೆ'' ಎಂದರು ವಿಜಯ್.

  ಇದೊಂದು ಅದ್ಭುತ ಅನುಭವ ಆಗಲಿದೆ: ವಿಜಯ್

  ಇದೊಂದು ಅದ್ಭುತ ಅನುಭವ ಆಗಲಿದೆ: ವಿಜಯ್

  ಇನ್ನು ಮಾಸ್ಟರ್ ಚೆಫ್‌ ಕಾರ್ಯಕ್ರಮದ ಬಗ್ಗೆ ಮಾತನಾಡಿದ ವಿಜಯ್ ಸೇತುಪತಿ, ''ಕಾರ್ಯಕ್ರಮದ ಸೆಟ್ ಶಂಕರ್ ಸಿನಿಮಾ ಸೆಟ್ ರೀತಿ ಅದ್ಧೂರಿಯಾಗಿದೆ. ನಾನು ಈ ಕಾರ್ಯಕ್ರಮದಲ್ಲಿ ಯಾವುದೇ ಸ್ಕ್ರಿಪ್ಟ್ ಇಲ್ಲದೆ ಕ್ಯಾಮೆರಾ ಮುಂದೆ ಮಾತನಾಡಲಿದ್ದೇನೆ. ಇದೊಂದು ಹೊಸ ರೀತಿಯ ಅದ್ಭುತ ಅನುಭವ ನನಗೆ. ಈ ಹಿಂದೆ 'ನಮ್ಮ ಊರ ಹೀರೋ' ಹೆಸರಿನ ಟಿವಿ ಶೋ ಮಾಡಿದಾಗ ನಾನು ಆತಂಕಗೊಂಡಿದ್ದೆ ಆದರೆ ಈ ಬಾರಿ ಹಾಗೆ ಇಲ್ಲ'' ಎಂದಿದ್ದಾರೆ ವಿಜಯ್ ಸೇತುಪತಿ.

  ಆಹಾರ ಮತ್ತು ಆತ್ಮಕ್ಕೆ ಸಂಬಂಧಿಸಿದ ಕಾರ್ಯಕ್ರಮ: ವಿಜಯ್

  ಆಹಾರ ಮತ್ತು ಆತ್ಮಕ್ಕೆ ಸಂಬಂಧಿಸಿದ ಕಾರ್ಯಕ್ರಮ: ವಿಜಯ್

  ಮಾಸ್ಟರ್ ಚೆಫ್‌ನಲ್ಲಿ ಭಾಗವಿಸಲಿರುವ ಸ್ಪರ್ಧಿಗಳಿಗೆ ಕಿವಿಮಾತು ಹೇಳಿದ ವಿಜಯ್ ಸೇತುಪತಿ, ''ನೀವು ಇಲ್ಲಿ ಸಾಕಷ್ಟು ಮಾತನಾಡಬಹುದು ಎಂಜಾಯ್ ಮಾಡಬಹುದು ಆದರೆ ಅಡುಗೆ ಮಾಡುವ ವಿಷಯದಲ್ಲಿ ಗಂಭೀರವಾಗಿರಲೇ ಬೇಕಾಗುತ್ತದೆ. ಈ ಕಾರ್ಯಕ್ರಮ ಕೇವಲ ಆಹಾರದ ಕಾರ್ಯಕ್ರಮವಲ್ಲ ಜೊತೆಗೆ ಆತ್ಮದ ಕಾರ್ಯಕ್ರಮ ಸಹ'' ಎಂದಿದ್ದಾರೆ ವಿಜಯ್ ಸೇತುಪತಿ.

  ಕನ್ನಡದಲ್ಲಿ ಸುದೀಪ್ ನಿರೂಪಣೆ

  ಕನ್ನಡದಲ್ಲಿ ಸುದೀಪ್ ನಿರೂಪಣೆ

  'ಮಾಸ್ಟರ್ ಚೆಫ್' ಕಾರ್ಯಕ್ರಮವು ಎಲ್ಲ ಭಾಷೆಗಳಲ್ಲಿ ಮಾಡಲಾಗುತ್ತಿದೆ. ಕನ್ನಡದಲ್ಲಿ ಸುದೀಪ್ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಈ ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ತಮನ್ನಾ, ವೆಂಕಟೇಶ್, ಹಿಂದಿಯಲ್ಲಿ ಅಕ್ಷಯ್ ಕುಮಾರ್ ನಿರೂಪಣೆ ಮಾಡಲಿದ್ದಾರೆ.

  English summary
  Actor Vijay Sethupathi came to Ramnagar to inaugurate Master Chef Tamil program. He told Kannada movie Dialogue and said he loves Madikeri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X