Vijay Surya: ಪ್ರಿಯಾಂಕಾ ಉಪೇಂದ್ರ ಜೊತೆ ನಟಿಸುತ್ತಿದ್ದಾರಾ ವಿಜಯ್ ಸೂರ್ಯ?

By ಪ್ರಿಯಾ ದೊರೆ

ಸದ್ಯ ಕಿರುತೆರೆ ನಟ ವಿಜಯ್ ಸೂರ್ಯ, ಸಿನಿಮಾಗಳನ್ನೂ ನಟಿಸುತ್ತಿದ್ದಾರೆ. 'ಅಗ್ನಿಸಾಕ್ಷಿ' ಬಳಿಕ ವಿಜಯ್ ಅಷ್ಟಾಗಿ ಯಾವುದೇ ಧಾರಾವಾಹಿಯಲ್ಲಿ ನಟಿಸಲಿಲ್ಲ. ಆದರೂ ಆತನಿಗೆ ದೊಡ್ಡ ಮಹಿಳಾ ಅಭಿಮಾನಿ ಬಳಗವಿದೆ.

ಸಾಕಷ್ಟು ಮಹಿಳಾ ಮಣಿಗಳ ಹೃದಯ ಕದ್ದಿದ್ದರು ಈ ನಟ. ಇವರನ್ನು ತೆರೆ ಮೇಲೆ ನೋಡುವುದಕ್ಕೇನೆ ಸಖತ್ ಖುಷಿ ಕೊಡುವಂಥದ್ದು. 'ಪ್ರೇಮಲೋಕ'ದ ಬಳಿಕ ಮರೆಯಾದ ವಿಜಯ್ ಸೂರ್ಯ ಆಗಾಗ ಅತಿಥಿ ಪಾತ್ರದಲ್ಲಿ ವಿಸಿಟ್ ಕೊಡುತ್ತಿರುತ್ತಾರೆ. ಈಗ ಮತ್ತೊಂದು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ವಿಜಯ್ ಸೂರ್ಯ.

Vijay Suriya Acted with Priyanka Upendra in Detective Teekshna

ಸಿದ್ಧಾರ್ಥ್ ಪಾತ್ರದಲ್ಲಿ ಮಿಂಚಿದ ನಟ

ವಿಜಯ್ ಸೂರ್ಯ, ಸಿದ್ದಾರ್ಥ್ ಪಾತ್ರದ ಮೂಲಕ ಚಿರಪರಿಚಿತರಾಗಿದ್ದರು. ಈಗ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಹೊಸ ಧಾರಾವಾಹಿ ಶುರುವಾಗಿದ್ದು, ಈಗ ತೆಲುಗಿನಲ್ಲೂ ಮಿಂಚುತ್ತಿದ್ದಾರೆ. ಗುಳಿಕೆನ್ನೆ ಚೆಲುವ ನಟ ವಿಜಯ್ ಸೂರ್ಯ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ನಟನಾಗುವ ಆಸೆಯಿಂದ ಮುಂಬೈಗೆ ಹಾರಿದ್ದರು. ಅಲ್ಲಿ ಸುಭಾಷ್ ಘಾಯ್ ಸ್ಕೂಲ್‌ನಲ್ಲಿ ಡೈರೆಕ್ಷನ್ ಕೋರ್ಸ್ ಮಾಡಿದರು. ಬೆಂಗಳೂರು ಮೆಗಾ ಮಾಡೆಲ್ ಹಂಟ್ - 2011ನ ವಿಜೇತರಾದವರು. ಅಲ್ಲಿಂದ ಮರಳಿದ ಮೇಲೆ ಸಿಹಿ ಕಹಿ ಗೀತಾರವರ 'ಪಾರ್ವತಿ ಪರಮೇಶ್ವರ' ಸೀರಿಯಲ್‌ನಲ್ಲೂ ಒಂದು ಚಿಕ್ಕ ಪಾತ್ರದಲ್ಲಿ ಅಭಿನಯಿಸಿದರು.

ಸಿನಿಮಾ, ಧಾರಾವಾಹಿಗಳಲ್ಲಿ ನಟನೆ

'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ವಿಜಯ್ ನಾಯಕನ ಪಾತ್ರದಲ್ಲಿ ಮಿಂಚಿದರು. ಸತತ ಏಳು ವರ್ಷಗಳ ಕಾಲ ಆ ಧಾರಾವಾಹಿಯಲ್ಲಿ ನಟಿಸಿದ ವಿಜಯ್ ಸೂರ್ಯ, ಮದುವೆಯಾದ ಮೇಲೆ ಕಿರುತೆರೆಯಿಂದ ಮಾಯವಾದರು. ನಂತರ ವಿಜಯ್ ಸೂರ್ಯ ಕೆಲ ಚಿತ್ರಗಳಿಗೆ ಬಣ್ಣ ಹಚ್ಚಿದರು. 'ಕ್ರೇಜಿಲೋಕ', 'ಇಷ್ಟಕಾಮ್ಯ', 'ಸ', 'ಕದ್ದುಮುಚ್ಚಿ', 'ಲಕ್ನೌ ಟು ಮುಂಬೈ' ಚಿತ್ರಗಳಲ್ಲಿ ನಟಿಸಿದರು. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ 'ಪ್ರೇಮಲೋಕ' ಧಾರಾವಾಹಿಯಲ್ಲಿ ಲೀಡ್ ರೋಲ್ ಮೂಲಕ ಮಿಂಚಿದರು. ಆದರೆ ಕಾರಣಾಂತರದಿಂದ ಆ ಧಾರಾವಾಹಿ ಬೇಗ ಮುಕ್ತಾಯವಾಗಿತ್ತು. ಬಳಿಕ ವಿಜಿ ಧಾರಾವಾಹಿಗಳಲ್ಲಿ ಅತಿಥಿ ಪಾತ್ರಗಳಲ್ಲಿ ವೀಕ್ಷಕರಿಗೆ ದರ್ಶನ ಕೊಡುತ್ತಿದ್ದರು. 'ಲಕ್ಷ್ಮೀ ಬಾರಮ್ಮ', 'ಜೊತೆ ಜೊತೆಯಲಿ' ಸೇರದಂತೆ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು.

ಪ್ರಿಯಾಂಕಾ ಜೊತೆ ವಿಜಯ್ ಸೂರ್ಯ

ಇದೀಗ ಕಳೆದ ಆರೇಳು ತಿಂಗಳಿನಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ವಿಜಯ್ ಸೂರ್ಯ, ಸಂಗಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಸ್ಟಾರ್ ಹಾಡುಗಾರನಾಗಿದ್ದಾರೆ. ತೆಲುಗಿನಲ್ಲಿ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಎಂಬ ಹೆಸರಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಧಾರಾವಾಹಿಗಳ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿಯಾಗುತ್ತಿದ್ದಾರೆ. ವಿಜಯ್ ಸೂರ್ಯ ಈಗ ಸ್ಯಾಂಡಲ್‌ವುಡ್‌ನಲ್ಲಿ ಆಕ್ಟೀವ್ ಆಗಿದ್ದಾರೆ. ನಟಿ ಪ್ರಿಯಾಂಕ ಉಪೇಂದ್ರ ಅವರ 50ನೇ ಚಿತ್ರದಲ್ಲಿ ವಿಜಯ್ ಸೂರ್ಯ ಕಾಣಿಸಿಕೊಳ್ಳುತ್ತಿದ್ದಾರೆ.

Vijay Suriya Acted with Priyanka Upendra in Detective Teekshna

'ಡಿಟೆಕ್ಟಿವ್ ತೀಕ್ಷ್ಣ'ದಲ್ಲಿ ವಿಜಯ್

ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾಗ ತೆಗೆದ ಕೆಲ ಫೋಟೋ ಹಾಗೂ ವೀಡಿಯೋಗಳನ್ನು ವಿಜಯ್ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದರೆ ವಿಜಯ್ ಸೂರ್ಯ ಕೂಡ ಪ್ರಿಯಾಂಕಾ ನಟನೆಯ'ಡಿಟೆಕ್ಟಿವ್ ತೀಕ್ಷ್ಣ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಊಹಿಸಲಾಗಿದೆ. ತ್ರಿವಿಕ್ರಮ ರಘು ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಾಧ್ಯತೆಯಿದೆ.

More from Filmibeat

English summary
actor vijay suriya in priyanka upendra's Detective Teekshna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X