'ಬಿಗ್ ಬಾಸ್' ಮನೆಗೆ ಹೋಗ್ತಿರುವ ವಿಜಯ್ ಸೂರ್ಯ ದಾಂಪತ್ಯದಲ್ಲಿ ಬಿರುಕು ? ವೈಷ್ಣವಿ ಗೌಡ ಹೆಸರು ಪ್ರಸ್ತಾಪ ಆಗಿದ್ದೇಕೆ..?

ಊಹಾಪೋಹಗಳು, ಗಾಳಿಸುದ್ದಿಗಳು ಗ್ಲಾಮರ್ ಜಗತ್ತಿನಲ್ಲಿ ಮತ್ತು ಸೆಲೆಬ್ರೆಟಿಗಳ ಜೀವನದಲ್ಲಿ ಕಾಮನ್ನೋ ಕಾಮನ್ನು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇನ್ನೂ .. ಮದುವೆಯಾಗಿದ್ದರಂತೂ ಮುಗಿದೇ ಹೋಯ್ತು. ಜೊತೆಯಲ್ಲಿ ಓಡಾಡಿದರೂ .. ಓಡಾಡದೇ ಇದ್ದರೂ .. ಹತ್ತಾರು ಮಾತು ಕೇಳಿ ಬರುತ್ತಾನೇ ಇರ್ತಾವೆ.

ಇವರ ಸಾಮಾಜಿಕ ಜಾಲತಾಣದ ಮೇಲೆ ಸಮಾಜದ ಒಂದು ವರ್ಗ ಯಾವತ್ತು ಒಂದು ಕಣ್ಣಿಟ್ಟಿರುತ್ತೆ. ಯಾಕೆಂದರೆ, ಸಿನಿಮಾ ಮಂದಿಗೆ ಮದ್ವೆ.. ಪ್ರೀತಿ.. ಬಟ್ಟೆ ಬದಲಿಸಿದಷ್ಟೇ ಸುಲಭ ಸಾಧ್ಯ. ಹೀಗಾಗಿಯೇ ಯಾವ ಕ್ಷಣದಲ್ಲಾದರೂ ಡಿವೋರ್ಸ್ ಸುದ್ದಿ ಹೊರ ಬರಬಹುದು ಎಂದು ಕಾಯುವ ಅನೇಕರು ಸೆಲೆಬ್ರೀಟಿಗಳ ಕುರಿತು ವಿಚ್ಛೇದನದ ವದಂತಿಯನ್ನೂ ಹಬ್ಬಿಸುತ್ತಾರೆ. ''ವಿಜಯ್ ಸೂರ್ಯ'' ಅವರ ವಿಚಾರದಲ್ಲಿ ಕೂಡ ಸದ್ಯ ಇದೇ ಆಗಿದೆ.

Vijay Suriya Breaks Silence on Divorce Rumors Why I Deleted My Wife s Photo

ಹೌದು, ವಿಜಯ್ ಸೂರ್ಯ.. ಕನ್ನಡ ಬೆಳ್ಳಿತೆರೆ ಮತ್ತು ಕಿರುತೆರೆಯ ಸುರಸುಂದರಾಂಗ. ''ಅಗ್ನಿಸಾಕ್ಷಿ'' ಧಾರಾವಾಹಿಯ ಮೂಲಕವೇ ಕರುನಾಡಿನೆಲ್ಲೆಡೆ ಮನೆ ಮಾತಾದ ವಿಜಯ್ ಸೂರ್ಯ ತಮ್ಮ ಅಭಿನಯದಿಂದ ಮಾತ್ರವಲ್ಲದೇ ತಮ್ಮ ಲುಕ್‌ಗಳಿಂದ ಕೂಡ ಹಲವರ ಹೃದಯ ಗೆದ್ದರು.

ಇಂಥಾ ವಿಜಯ್ ಸೂರ್ಯ 2019ರಲ್ಲಿ ಚೈತ್ರಾ ಅವರ ಜೊತೆ ಸಪ್ತಪದಿ ತುಳಿದಿದ್ದರು. ಈ ಕ್ಷಣಕ್ಕೂ ಕೂಡ ನೆಮ್ಮದಿಯಿಂದ ಚೈತ್ರಾ ಅವರ ಜೊತೆ ಸಂಸಾರ ನಡೆಸುತ್ತಿದ್ದಾರೆ. ಆದರೆ.. ''ದೃಷ್ಟಿಬೊಟ್ಟು'' ಧಾರಾವಾಹಿಯ ಈ ದತ್ತಾ ಭಾಯ್ ಸಂಸಾರದ ಮೇಲೆ ಅದ್ಯಾರದ್ದೋ ವಕ್ರದೃಷ್ಟಿ ಬಿದ್ದಂತೆ ಇದೆ.

ಇದಕ್ಕೆ ಪೂರಕವಾಗಿ ಕಳೆದ ಕೆಲ ದಿನಗಳಿಂದ ವಿಜಯ್ ಸೂರ್ಯ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಚಾಲ್ತಿಯಲ್ಲಿದೆ. ಇನ್ನೂ ವಿಜಯ್ ಸೂರ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪತ್ನಿಯ ಫೋಟೊಗಳನ್ನು ಕೂಡ ಡಿಲೀಟ್ ಮಾಡಿದ್ದಾರೆ. ಈ ಹಿನ್ನೆಲೆ ಹಬ್ಬಿರುವ ವಿಚ್ಛೇದನದ ಸುದ್ದಿಗೆ ಇನ್ನೂ ರೆಕ್ಕೆ-ಪುಕ್ಕ ಬಂದಂತಾಗಿದೆ. ವಿಜಯ್ ಸೂರ್ಯ ಎಷ್ಟೇ ಸ್ಪಷ್ಟೀಕರಣ ನೀಡಿದರು ಕೂಡ ಈ ಸುದ್ದಿ ಆಗಾಗ ಕೇಳಿ ಬರುತ್ತಲೇ ಇದೆ.

ಹೀಗಾಗಿಯೇ ಏನೋ ಈ ವಿಚಾರಕ್ಕೆ ಸಂಬಂಧಿಸಿದಂತೆ ಗುಳಿಕೆನ್ನೆಯ ಚೆಲುವ ವಿಜಯ್ ಸೂರ್ಯ ಖುದ್ದು ಮತ್ತೊಮ್ಮೆ ಉತ್ತರ ನೀಡಿದ್ದಾರೆ. ತಮ್ಮ ವಿಚ್ಚೇದನಕ್ಕೆ ಸಂಬಂಧಿಸಿದಂತೆ ''ಬಾಸ್‌ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ಕುರಿತು ಮಾತನಾಡಿರುವ ವಿಜಯ್ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ನಾನು ನನ್ನ ಪತ್ನಿಯ ಜೊತೆ ಇದ್ದ ಫೋಟೊಗಳನ್ನು ಡಿಲೀಟ್ ಮಾಡಿದ್ದೇ ಇದೆಲ್ಲದಕ್ಕೆ ಕಾರಣ ಎಂದಿದ್ದಾರೆ.

Vijay Suriya Breaks Silence on Divorce Rumors Why I Deleted My Wife s Photo

ಬದಲಾದ ಈ ಕಾಲದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ತೆಗೆದು ಹಾಕಿದರೆ ಅಲ್ಲೇನೋ ಸಮಸ್ಯೆ ಇದೆ ಎಂದೇ ಹಲವರು ಅರ್ಥ ಮಾಡಿಕೊಳ್ಳುತ್ತಾರೆ. ನನ್ನ ವಿಚಾರದಲ್ಲಿ ಕೂಡ ಹೀಗೆ ಆಗಿದೆ ಎಂದಿರುವ ವಿಜಯ್ ಸೂರ್ಯ ಸೋಶಿಯಲ್ ಮೀಡಿಯಾದಲ್ಲಿ ನಾನು ನನ್ನ ವ್ಯೆಯಕ್ತಿಕ ಬದುಕಿನ ಫೋಟೊಗಳನ್ನು ಡಿಲೀಟ್ ಮಾಡಲು ಎಐ ತಂತ್ರಜ್ಞಾನ ಕಾರಣ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.

ತಂತ್ರಜ್ಞಾನದ ದುರುಪಯೋಗ ಹೆಚ್ಚುತ್ತಿರುವ ಈ ಸಮಯದಲ್ಲಿ ನನ್ನ ಕುಟುಂಬದ ಫೋಟೊಗಳನ್ನು ಯಾರು ತಮ್ಮ ದುರುದ್ದೇಶಕ್ಕೆ ಬಳಸಿಕೊಳ್ಳಬಾರದು ಎಂದು ನಾನು ನನ್ನ ಫ್ಯಾಮಿಟಿ ಫೋಟೊಗಳನ್ನು ಡಿಲೀಟ್ ಮಾಡಿದ್ದೇನೆ ಎಂದು ಹೇಳಿರುವ ವಿಜಯ್ ಸೂರ್ಯ, ಕೇವಲ ನನ್ನ ಪತ್ನಿ ಫೋಟೊ ಮಾತ್ರ ಅಲ್ಲ ನನ್ನ ಇಡೀ ಫ್ಯಾಮಿಲಿ ಫೋಟೊಗಳನ್ನೇ ನಾನು ತೆಗೆದು ಹಾಕಿದ್ದೇನೆ ಆದರೂ ಕೂಡ ಎಲ್ಲರ ಕಣ್ಣು ಕೇವಲ ಚೈತ್ರಾ ಅವರ ಫೋಟೊದತ್ತ ಮಾತ್ರ ಹೋಗಿದೆ. ಗಮನ ಆ ಕಡೆ ಹೋಗಿ ಈ ತರಹದ ಸುದ್ದಿಗಳು ಹಬ್ಬಿವೆ ಎಂದು ಹೇಳಿದ್ದಾರೆ.

ಮುಂದುವರೆದು ಈ ಕುರಿತು ''ಬಾಸ್‌ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವಿಜಯ್ ಸೂರ್ಯ, ಮೊದಲು ಈ ಕುರಿತು ಒಂದೆರಡು ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಸುದ್ದಿಯಾಗಿತ್ತು. ಆ ನಂತರ ನೋಡ..ನೋಡುತ್ತಾ.. ಹತ್ತಾರು, ನೂರಾರು ಸುದ್ದಿಗಳು ಬಂದವು ಈ ಎಲ್ಲಾ ಸುದ್ದಿಗಳನ್ನು ವಿಡಿಯೋಗಳನ್ನು ನೋಡಿದಾಗ ನಾನು ಮತ್ತು ಚೈತ್ರಾ ನಗುತ್ತಿದ್ದೆವು ಎಂದು ಹೇಳಿರುವ ವಿಜಯ್ ಸೂರ್ಯ, ಯಾರೇ ಆಗಿರಲಿ ನಿಮಗೂ ಒಂದು ಫ್ಯಾಮಿಲಿ ಇರತ್ತೆ. ಬೇರೆಯವರ ಫ್ಯಾಮಿಲಿ ಬಗ್ಗೆ ಬರೆಯುವಾಗ ನಿಮ್ಮ ಕುಟುಂಬದ ಬಗ್ಗೆಯೂ ಸ್ವಲ್ಪ ಯೋಚನೆ ಮಾಡಿದ್ರೆ ಚೆನ್ನಾಗಿರತ್ತೆ. ಸುಮ್ಮನೇ ಲೈಕ್ಸ್​, ಶೇರ್‌ಗಾಗಿ ಮನಸಿಗೆ ಬಂದಂತೆ ಮಾಡುವುದು ಮಾತನಾಡುವುದು ಸರಿಯಲ್ಲ ಎಂದೂ ಹೇಳಿದ್ದಾರೆ.

ಇನ್ನೂ ಇದೇ ಸಮಯದಲ್ಲಿ ವೈಷ್ಣವಿ ಗೌಡ ಅವರ ಮದುವೆ ವಿಚಾರವನ್ನು ಕೂಡ ಪ್ರಸ್ತಾಪ ಮಾಡಿರುವ ವಿಜಯ್ ಸೂರ್ಯ, ವೈಷ್ಣವಿ ಗೌಡ ಅವರ ಮದುವೆಯ ದಿನ ನಾನು ಮತ್ತು ಚೈತ್ರಾ ಹೋದಾಗ ನಮ್ಮ ವಿಚ್ಛೇದನದ ವದಂತಿಯ ವಿಷಯದ ಕುರಿತು ಎಲ್ಲರಿಗೆ ವಿಚಾರ ಸ್ಪಷ್ಟವಾಗಿ ಗೊತ್ತಾಯ್ತು, ಹರಡಿದ್ದು ಸುಳ್ಳು ಸುದ್ದಿ ಎಂದು ತಿಳಿಯಿತು ಅನ್ಸುತ್ತೆ ಎಂದು ಹೇಳಿರುವ ವಿಜಯ್ ಸೂರ್ಯ, ವೈಷ್ಣವಿ ಮದುವೆ ನಂತರ ನನ್ನ ದಾಂಪತ್ಯ ಜೀವನ ಕುರಿತು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದವರು ಸುಮ್ಮನಾದರು ಎಂದು ಹೇಳಿದ್ದಾರೆ. ಅಂದ್ಹಾಗೇ ನಾಳೆ (ಸೆಪ್ಟೆಂಬರ್ 28) ''ಬಿಗ್ ಬಾಸ್'' ಕನ್ನಡದಲ್ಲಿ ಶುರುವಾಗಲಿದೆ. ಈ ಬಾರಿ ವಿಜಯ್ ಸೂರ್ಯ ಕೂಡ ಮನೆಗೆ ಹೋಗಲಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ.

More from Filmibeat

English summary
Why did Vijay Suriya wipe his social media? Get his exclusive answer on the divorce speculation. Plus, see his surprise reaction and well wishes for Vaishnavi Gowda's wedding
Read more about: bigg boss biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X