»   » ಪ್ರಿಯಾಂಕ ಸೃಷ್ಟಿಸಿದ ಗಾಸಿಪ್ ಬಗ್ಗೆ ವಿಜಯ್ ಸೂರ್ಯ ಏನು ಹೇಳುತ್ತಾರೋ..?

ಪ್ರಿಯಾಂಕ ಸೃಷ್ಟಿಸಿದ ಗಾಸಿಪ್ ಬಗ್ಗೆ ವಿಜಯ್ ಸೂರ್ಯ ಏನು ಹೇಳುತ್ತಾರೋ..?

Posted By:
Subscribe to Filmibeat Kannada

'ಅಗ್ನಿಸಾಕ್ಷಿ' ಧಾರಾವಾಹಿ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್. ಈ ಧಾರಾವಾಹಿಯ ಪ್ರತಿ ಪಾತ್ರಗಳು ಜನರಿಗೆ ಬಹಳ ಇಷ್ಟ. ಅದರಲ್ಲೂ ಸಿದ್ಧಾರ್ಥ್, ಸನ್ನಿಧಿ ಹಾಗೂ ಚಂದ್ರಿಕಾ ಪಾತ್ರಗಳು ಧಾರಾವಾಹಿಯ ಹೈಲೈಟ್ ಆಗಿವೆ.

ಈಗ ಇದೇ ಧಾರಾವಾಹಿಯ ಕಲಾವಿದರು ಬೇರೆಯದ್ದೇ ವಿಷಯಕ್ಕೆ ಸುದ್ದಿ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಬಂದಿದ್ದ ನಟಿ ಪ್ರಿಯಾಂಕ ಒಂದು ಹೇಳಿಕೆ ನೀಡಿದ್ದರು. ನಟ ವಿಜಯ್ ಸೂರ್ಯ ಬಗ್ಗೆ ಪ್ರಿಯಾಂಕಾ ನೀಡಿದ್ದ ಹೇಳಿಕೆ ಎಲ್ಲರ ತಲೆಗೆ ಹುಳ ಬಿಟ್ಟಂಗಾಗಿದೆ.

ಈಗ ಇದೇ ಕಾರ್ಯಕ್ರಮದಲ್ಲಿ ನಟ ವಿಜಯ್ ಸೂರ್ಯ ಸಹ ಭಾಗಿಯಾಗಲಿದ್ದಾರೆ. ಕಳೆದ ಸಂಚಿಕೆಯಲ್ಲಿ ಪ್ರಿಯಾಂಕ ರಿಂದ ಉಂಟಾಗಿದ್ದ ಗೊಂದಲಕ್ಕೆ ವಿಜಯ್ ಸೂರ್ಯ ಸ್ಪಷ್ಟನೆ ಕೊಡ್ತಾರಾ ಎಂಬ ಕುತೂಹಲ ಮೂಡಿದೆ. ಮುಂದೆ ಓದಿ...

'ಸೂಪರ್ ಟಾಕ್ ಟೈಂ' ನಲ್ಲಿ ಸಿದ್ಧಾರ್ಥ್

ಕಲರ್ಸ್ ಸೂಪರ್' ವಾಹಿನಿಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಈಗ ನಟ ವಿಜಯ್ ಸೂರ್ಯ ಆಗಮಿಸಿದ್ದು, ಪ್ರಿಯಾಂಕ ಅವರ ಬಗ್ಗೆ ಏನು ಹೇಳಬಹುದು ಎಂಬ ಕುತೂಹಲ ಹುಟ್ಟಿಸಿದೆ.

ಏನಿದು ಕಥೆ?

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ಕಳೆದ ಸಂಚಿಕೆಯಲ್ಲಿ, ''ಇವತ್ತು ನಿಮ್ಮ ಸ್ವಯಂವರ ಆದರೆ ನಿಮ್ಮ ಪ್ರಕಾರ ಯಾವ ಮೂರು ಹೀರೋಗಳು ಇರಲೇಬೇಕು.!'' ಎಂಬ ಅಕುಲ್ ಪ್ರಶ್ನೆಗೆ ನಟಿ ಪ್ರಿಯಾಂಕ ನಟ ದರ್ಶನ್, ನಟ ಸುದೀಪ್ ಹಾಗೂ ನಟ ವಿಜಯ್ ಸೂರ್ಯ ಇರಲೇಬೇಕು ಎಂದಿದ್ದರು.

ಆಶ್ಚರ್ಯ ಆಗಿತ್ತು

ಪ್ರಿಯಾಂಕ ಕೊಟ್ಟ ಈ ಉತ್ತರದಿಂದ ಎಲ್ಲರಿಗೂ ಆಶ್ಚರ್ಯ ಆಗಿತ್ತು. ಅಲ್ಲದೆ ಸ್ವತಃ ಕಾರ್ಯಕ್ರಮದ ನಿರೂಪಕ ಅಕುಲ್ ಸಹ ಪ್ರಿಯಾಂಕಾ ಉತ್ತರ ಕೇಳಿ ಧಂಗಾಗಿದ್ದರು.

ಪ್ರಿಯಾಂಕ ಬಗ್ಗೆ ಪ್ರಶ್ನೆ ಕೇಳ್ತಾರಾ

ಹಿಂದಿನ ವಾರ ಪ್ರಿಯಾಂಕ ಕೊಟ್ಟ ಉತ್ತರ ಕೇಳಿರುವ ಅಕುಲ್ ಆ ವಿಷಯವನ್ನು ವಿಜಯ ಸೂರ್ಯ ಅವರ ಮುಂದೆ ಇಟ್ಟರೂ ಇಡಬಹುದು.

ನಿಜ ಜೀವನದಲ್ಲಿ 'ಅಗ್ನಿಸಾಕ್ಷಿ' ಚಂದ್ರಿಕಾಗೆ ವಿಜಯ್ ಸೂರ್ಯ ಮೇಲೆ ಕಣ್ಣು.!

ಪ್ರೋಮೋ ನೋಡಿ

'ಸೂಪರ್ ಟಾಕ್ ಟೈಂ' ಕಾರ್ಯಕ್ರಮದ ವಿಜಯ್ ಸೂರ್ಯ ಅವರ ಸಂಚಿಕೆಯ ಪ್ರೋಮೋ ಈಗಾಗಲೇ ಹೊರಬಂದಿದೆ. ಅಂದಹಾಗೆ, ಈ ಕಾರ್ಯಕ್ರಮ ಇದೇ ಗುರುವಾರ ರಾತ್ರಿ 9 ಗಂಟೆಗೆ 'ಕಲರ್ಸ್ ಸೂಪರ್' ವಾಹಿನಿಯಲ್ಲಿ ಪ್ರಸಾರ ಆಗಲಿದೆ.

English summary
Agnisakshi serial fame actor 'Vijay Suriya' takes part in Colors Super channel's popular show Super Talk Time.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada