'ಅಗ್ನಿಸಾಕ್ಷಿ' ವಿಜಯ್ ಸೂರ್ಯ ಈಗ 'ಕಾಮಿಡಿ ಟಾಕೀಸ್' ನಿರೂಪಕ.!
Recommended Video

ಕಲರ್ಸ್ ಕನ್ನಡ ವಾಹಿನಿಯ 'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಜನಪ್ರಿಯತೆ ಗಳಿಸಿರುವ ವಿಜಯ್ ಸೂರ್ಯ ಇದೀಗ ನಿರೂಪಕರಾಗಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿಯೇ ಪ್ರಸಾರ ಆಗುವ ಹೊಚ್ಚ ಹೊಸ ಶೋ 'ಕಾಮಿಡಿ ಟಾಕೀಸ್'ಗೆ ವಿಜಯ್ ಸೂರ್ಯ ಹೋಸ್ಟ್ ಆಗಿದ್ದಾರೆ.
ಮೊಟ್ಟ ಮೊದಲ ಬಾರಿಗೆ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತಿರುವ ವಿಜಯ್ ಸೂರ್ಯ ಸಿಕ್ಕಾಪಟ್ಟೆ ಖುಷಿ ಆಗಿರೋದಂತೂ ಸತ್ಯ. ಮುಂದೆ ಓದಿರಿ...

'ಕಾಮಿಡಿ ಟಾಕೀಸ್' ಪ್ರೋಮೋ ನೋಡಿದ್ರಾ.?
ಈಗಾಗಲೇ 'ಕಾಮಿಡಿ ಟಾಕೀಸ್' ಕಾರ್ಯಕ್ರಮದ ಪ್ರೋಮೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದು, ಅದನ್ನ ನೀವಿನ್ನೂ ನೋಡಿಲ್ಲ ಅಂದ್ರೆ, ಈ ಲಿಂಕ್ ಕ್ಲಿಕ್ ಮಾಡಿ ನೋಡಿ...

ಕ್ಲಾಸ್ ಆಗಿರುವ ಜೋಕ್ಸ್ ಇರಲಿದೆ.!
'ಕಾಮಿಡಿ ಟಾಕೀಸ್' ಕಾರ್ಯಕ್ರಮದಲ್ಲಿ 'ಕ್ಲಾಸ್ ಜೋಕ್ಸ್' ಇರಲಿದ್ಯಂತೆ. ಬೇಕಾದ್ರೆ, ನೀವೇ ಒಮ್ಮೆ ಈ ಪ್ರೋಮೋ ನೋಡಿ...

ಇಲ್ಲೂ ಸೃಜನ್ ಲೋಕೇಶ್ ಇರ್ತಾರೆ.!
'ಮಜಾ ಟಾಕೀಸ್' ಮುಗಿದ ಬಳಿಕ ಸೃಜನ್ ಲೋಕೇಶ್ ರವರನ್ನ ಮಿಸ್ ಮಾಡಿಕೊಳ್ಳುತ್ತಿರುವವರಿಗೆ ಇದೋ ಇಲ್ಲಿದೆ ಗುಡ್ ನ್ಯೂಸ್. 'ಕಾಮಿಡಿ ಟಾಕೀಸ್' ಕಾರ್ಯಕ್ರಮದಲ್ಲಿ ಸೃಜನ್ ಲೋಕೇಶ್ ತೀರ್ಪುಗಾರರ ಸ್ಥಾನದಲ್ಲಿ ಕೂರಲಿದ್ದಾರಂತೆ. ಮತ್ತೊಂದು ಪ್ರೋಮೋ ಇಲ್ಲಿದೆ, ಲಿಂಕ್ ಕ್ಲಿಕ್ ಮಾಡಿ...

ರಚಿತಾ ರಾಮ್ ಬರ್ತಾರೆ.!
ನಟ ಸೃಜನ್ ಲೋಕೇಶ್ ಜೊತೆಗೆ 'ಬುಲ್ ಬುಲ್' ಬೆಡಗಿ ರಚಿತಾ ರಾಮ್ ಕೂಡ ತೀರ್ಪುಗಾರರ ಸ್ಥಾನದಲ್ಲಿ ಇರಲಿದ್ದಾರೆ.

ಪ್ರಸಾರ ಯಾವಾಗ.?
ಈಗಾಗಲೇ 'ಕಾಮಿಡಿ ಟಾಕೀಸ್' ಕಾರ್ಯಕ್ರಮದ ಒಂದು ಸಂಚಿಕೆಯ ಚಿತ್ರೀಕರಣ ಮುಗಿದಿದ್ದು, ಪ್ರಸಾರ ಯಾವಾಗ ಎಂಬುದಿನ್ನೂ ನಿಗದಿ ಆಗಿಲ್ಲ.


Click it and Unblock the Notifications











