Vijay Surya: ಭಿನ್ನ ಕತೆಯೊಂದಿಗೆ ವೀಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ ವಿಜಯ್ ಸೂರ್ಯ

By ಪೂರ್ವ

ಅಗ್ನಿಸಾಕ್ಷಿ' ಧಾರಾವಾಹಿ ಮುಗಿದು ಎರಡು ವರ್ಷಗಳಾಯ್ತು. ಇಂದು ಕೂಡ ಜನರು ಆ ಧಾರಾವಾಹಿಯನ್ನು ನೆನಪಿಟ್ಟುಕೊಂಡಿದ್ದಾರೆ. ಇಂದು ಕೂಡ 'ಅಗ್ನಿಸಾಕ್ಷಿ' ಸೀರಿಯಲ್ ಕಲಾವಿದರು ಸಿಕ್ಕರೆ ಜನರು ಅವರ ಪಾತ್ರದ ಹೆಸರಿನಿಂದ ಕರೆಯುತ್ತಾರೆ. ಸಿದ್ದಾರ್ಥ್ ಪಾತ್ರಕ್ಕೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿತ್ತು, ಅದರಲ್ಲೂ ಸಿದ್ದಾರ್ಥ್ - ಸನ್ನಿಧಿ ಜೋಡಿಯನ್ನು ಮರೆಯುವಂತಿಲ್ಲ. ಸಿದ್ದಾರ್ಥ್ ಪಾತ್ರದಿಂದಾಗಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಗಳಿಸಿಕೊಂಡ ನಟ ವಿಜಯ್ ಸೂರ್ಯ ಅವರು ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರಂತೆ.

'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ 7 ವರ್ಷಗಳ ಕಾಲ ಕಿರುತೆರೆಯಲ್ಲಿ ಸದ್ದು ಮಾಡಿದವ್ರು ನಟ ವಿಜಯಸೂರ್ಯ. ನಂತರ ಒಂದೆರಡು ಸಿನಿಮಾ ಮಾಡಿದ ಈ ಗುಳಿಕೆನ್ನೆ ಚಲುವ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ಪ್ರೇಮಲೋಕ ಧಾರಾವಾಹಿಯಲ್ಲಿ ಲೀಡ್​ ರೋಲ್​ ಮೂಲಕ ಮಿಂಚಿದ್ರು. ಆದ್ರೆ ಕಾರಣಾಂತರದಿಂದ ಆ ಧಾರಾವಾಹಿ ಬೇಗ ವೈಂಡಪ್​ ಆಯ್ತು. ಪ್ರೇಮಲೋಕದ ನಂತರ ವಿಜಿ ಆಗಾಗ ಗೆಸ್ಟ್​ ರೋಲ್​ ಮೂಲಕ ವೀಕ್ಷಕರಿಗೆ ದರ್ಶನ ಕೊಡ್ತಿದ್ರು. ವಿಜಿ ಎಲ್ಲ್​ ಹೋದ್ರೂ ಅಂತಾ ತಡಕಾಡ್ತಿದ್ದ ನಮಗೆ ಸಿಕ್ಕ ಸುದ್ದಿ ಡಾಕ್ಟರ್​ ಕರ್ಣ. ಎಸ್ ಈ ಬಗ್ಗೆ ಎಲ್ಲಿಯೂ ಗುಟ್ಟುಬಿಟ್ಟು ಕೊಡದೇ ಸೈಲೆಂಟ್​ ಆಗಿ ಬರೋಕೆ ಸಜ್ಜಾಗಿದ್ದಾರೆ ವಿಜಯ್​ಸೂರ್ಯ. ಯೆಸ್​ ನಟ ವಿಜಯ್​ ಸೂರ್ಯ ಹೊಸ ಪ್ರಾಜೆಕ್ಟ್​ ಮೂಲಕ ನಿಮ್ಮ ಮುಂದೆ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದ್ದಾರೆ.

ಡಾಕ್ಟರ್‌​ ಕರ್ಣ ಎಂಬ ಹೊಸ ಧಾರವಾಹಿಯಲ್ಲಿ ಲೀಡ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರಿಕರಣ ಭರದಿಂದ ಸಾಗಿದೆ. ಡಾಕ್ಟರ್‌​ ಕರ್ಣ ಒಂದು ಕ್ರೈಮ್​ ಥ್ರಿಲರ್​ ಕತೆಯಾಗಿದ್ದು, ರಾಮ್‌ಜೀ ಅವ್ರ ಬ್ಯಾನರನಲ್ಲಿ ಈ ಧಾರಾವಾಹಿ ಮೂಡಿಬರುತ್ತಿದೆ. ಜೀ ಕನ್ನಡದಲ್ಲಿ ಸದ್ದು ಮಾಡಲು ಸಜ್ಜಾಗಿರುವ ಡಾಕ್ಟರ್​ ಕರ್ಣನ ಕೆಲವು ಪಾತ್ರಗಳಿಗೆ ಕಾಸ್ಟಿಂಗ್​ ನಡಿತಾಯಿದೆ. ಈಗಾಗಲೇ ಫಸ್ಟ್​ ಪ್ರೊಮೋ ರೆಡಿಯಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದ್ರೇ ಕೆಲವೇ ದಿನಗಳಲ್ಲಿ ವೀಕ್ಷಕರ ಮನೆಯಲ್ಲಿ ರಾರಾಜಿಸಲಿದ್ದಾನೆ ಡಾಕ್ಟರ್​ ಕರ್ಣ. ಇನ್ನು ಕತೆಗೆ ಬರೋದಾದ್ರೇ 'ಡಾಕ್ಟರ್​ ಕರ್ಣ' ಇದು ಮರಾಠಿಯ 'ದೇವ್​ ಮನುಸ್​' ಎಂಬ ಧಾರಾವಾಹಿಯ ರಿಮೇಕ್​ ಸೀರಿಯಲ್​ ಎನ್ನಲಾಗುತ್ತಿದ್ದು. ಜೀ ಮರಾಠಿಯಲ್ಲಿ ಧೂಳು​ ಎಬ್ಬಿಸಿದ 'ದೇವ್​ ಮನುಸ್​' ನೈಜ್ಯ ಘಟನೆ ಆಧಾರಿತ ಧಾರಾವಾಹಿ.

Vijay Surya Acting In Lead Role In Doctor Karna Serial

ಸಂತೋಷ್ ಪೋಲ್ ಎಂಬ ಕ್ರಿಮಿನಲ್​ನ ಕತೆ. ಸತಾರಾ ಪಟ್ಟಣದಲ್ಲಿ ನಕಲಿ ವೈದ್ಯನಾಗಿ ಅಭ್ಯಾಸ ಮಾಡಿದ ಈತ 13 ವರ್ಷಗಳಲ್ಲಿ 6 ಜನರನ್ನ ಕೊಲೆ ಮಾಡಿದ್ದ. ಇವನ ಕೃತ್ಯಕ್ಕೆ ಬಲಿಯಾದವರೆಲ್ಲ ಹೆಣ್ಣು ಮಕ್ಕಳೆ. ಈ ಸತ್ಯ ಘಟನೆ ಇಟ್ಕೊಂಡು ಮಾಡಿದ 'ದೇವ್​ ಮನುಸ್' ಸೂಪರ್​ ಹಿಟ್​ ಆಯ್ತು. ಈಗ ಇದೇ ಕತೆ ಕನ್ನಡಕ್ಕೆ ಕರ್ಣನ ಅವತಾರದಲ್ಲಿ ಬರ್ತಿದ್ದು, ಡಾಕ್ಟರ್​ ಕರ್ಣನಾಗಿ ವಿಜಯಸೂರ್ಯ ಕಾಣಿಸಿಕೊಳ್ಳಲಿದ್ದಾರೆ.

ಸದ್ಯ ಜೀ ಕನ್ನಡದಲ್ಲಿ ಪುಟ್ಟಕ್ಕನ ಮಕ್ಕಳು, ಹಿಟ್ಲರ್​ ಕಲ್ಯಾಣ, ಗಟ್ಟಿಮೇಳ, ಪಾರು ಹೀಗೇ ಸಾಕಷ್ಟು ವಿಭಿನ್ನ ಸೀರಿಯಲ್​ಗಳು ವೀಕ್ಷಕರ ಫೇವರೇಟ್​ ಲಿಸ್ಟ್​ನಲ್ಲಿವೆ. ಸಸ್ಪೆನ್ಸ್​ ಥ್ರೀಲ್ಲರ್​ ಕತೆಯಾಗಿರುವ ಡಾಕ್ಟರ್​ ಕರ್ಣ ಯಾವರೀತಿ ಮೋಡಿ ಮಾಡ್ತಾನೆ ಅನ್ನೋದ ಕಾದು ನೋಡ್ಬೇಕು. ಡಾಕ್ಟರ್ ಕರ್ಣ' ಎಂಬ ಹೊಸ ಧಾರಾವಾಹಿಯ ನಾಯಕನಾಗಿ ವಿಜಯ್ ಸೂರ್ಯ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಶುರುವಾಗುತ್ತಿರುವ ಈ ಧಾರಾವಾಹಿಯನ್ನು ಕೆ ಎಸ್ ರಾಮ್‌ಜೀ ನಿರ್ದೇಶನ ಮಾಡುತ್ತಿದ್ದಾರಂತೆ. ಗಗನ ಎಂಟರ್ಪ್ರೈಸಸ್ ನಿರ್ಮಾಣ ಸಂಸ್ಥೆಯಲ್ಲಿ ಈ ಧಾರಾವಾಹಿ ನಿರ್ಮಾಣವಾಗುತ್ತಿದೆ.

ವಿಜಯ್ ಸೂರ್ಯ ಈ ಹಿಂದೆ 'ಲಕ್ಷ್ಮೀ ಬಾರಮ್ಮ' , 'ಪ್ರೇಮಲೋಕ' ಹಾಗೂ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಬಣ್ಣಹಚ್ಚಿದ್ದರು. ಡಾಕ್ಟರ್ ಕರ್ಣ ಇವರ 5ನೇ ಕನ್ನಡ ಧಾರಾವಾಹಿಯಾಗಿದೆ. ಆದರೆ 'ಜೊತೆ ಜೊತೆಯಲಿ', 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು. ಬಹಳ ದಿನಗಳ ನಂತರದಲ್ಲಿ ವಿಜಯ್ ಸೂರ್ಯ ಅವರನ್ನು ಮತ್ತೆ ಟಿವಿ ಪರದೆಯಲ್ಲಿ ನೋಡಲು ಪ್ರೇಕ್ಷಕರು ತುಂಬ ಕಾತುರದಿಂದಿದ್ದಾರೆ. ಆದರೆ ಈ ಬಗ್ಗೆ ವಿಜಯ್ ಸೂರ್ಯ ಆಗಲೀ, ವಾಹಿನಿಯಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Recommended Video

Raveena Tandon | KGF 2 | ರವೀನಾ, ರಮಿಕಾಸೇನ್ ಆಗಿದ್ದು ಹೇಗೆ | Ramika Sen | Yash

More from Filmibeat

English summary
Agnisakshi fame Vijay Surya acting in a lead role in serial Doctor Karna. Here is more detail about the serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X