twitter
    For Quick Alerts
    ALLOW NOTIFICATIONS  
    For Daily Alerts

    ಸಹ ಸ್ಪರ್ಧಿ ಮೇಲೆ ಹಲ್ಲೆ: ಬಿಗ್‌ಬಾಸ್ ಮನೆಯಿಂದ ಹೊರದಬ್ಬಿಸಿಕೊಂಡ ವಿಕಾಸ್

    |

    ಎಲಿಮಿನೇಶನ್ ಮುಖಾಂತರ ಬಿಗ್‌ಬಾಸ್ ಮನೆಯಿಂದ ಸ್ಪರ್ಧಿಗಳು ಹೊರಬರುವುದು ಸಾಮಾನ್ಯ ಪ್ರತಿಕ್ರಿಯೆ. ಆದರೆ ಕೆಲವೊಮ್ಮೆ ಸ್ಪರ್ಧಿಗಳು ತಮ್ಮ ಕೆಟ್ಟ ನಡವಳಿಕೆಯಿಂದಾಗಿಯೂ ಬಿಗ್‌ಬಾಸ್ ಮನೆಯಿಂದ ಹೊರದಬ್ಬಿಸಿಕೊಳ್ಳುತ್ತಾರೆ.

    ಹಿಂದಿ ಬಿಗ್‌ಬಾಸ್ ನಲ್ಲಿ ಆಗಾಗ್ಗೆ ಸ್ಪರ್ಧಿಗಳ ಕೆಟ್ಟ ನಡವಳಿಕೆಯಿಂದ ಬಿಗ್‌ಬಾಸ್ ಆಯೋಜಕರು ಸ್ಪರ್ಧಿಗಳ ಮೇಳೆ ಕಠಿಣ ಕ್ರಮ ಕೈಗೊಳ್ಳುತ್ತಲೇ ಇರುತ್ತಾರೆ. ಇದೀಗ ಬಿಗ್‌ಬಾಸ್ ಸೀಸನ್ 14 ರಲ್ಲಿ ಇಂಥಹುದೇ ಘಟನೆ ನಡೆದಿದೆ.

    ವಿಕಾಸ್ ಮತ್ತು ಆರ್ಶಿ ಜಗಳಕ್ಕೆ ಇಳಿದಿದ್ದರು. ಇಬ್ಬರ ಜಗಳ ತಾರಕಕ್ಕೆ ಏರಿತು. ವಿಕಾಸ್ ಹಾಗೂ ಆರ್ಶಿ ಪರಸ್ಪರ ಕೈ-ಕೈ ಮಿಲಾಯಿಸಿದರು ಸಹ, ಆಗ ಸಹ ಸ್ಪರ್ಧಿಗಳು ಜಗಳ ಬಿಡಿಸಿದರು. ವಿಕಾಸ್ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರ್ಶಿ ಆರೋಪಿಸಿದರು.

     Vikas Gupta Out Of Bigg Boss For Pushing Arshi Into Pool

    ನಂತರವೂ ವಿಕಾಸ್ ಮತ್ತು ಆರ್ಶಿ ಜಗಳ ಹಾಗೆಯೇ ಮುಂದುವರೆಯಿತು, ಜಗಳದ ನಡುವೆ ಕುಟುಂಬ ಸದಸ್ಯರ ಬಗ್ಗೆಯೂ ಮಾತುಗಳು ಆಡಲಾಯಿತು, ಕೊನೆಗೆ ವಿಕಾಸ್, ಆರ್ಶಿಯನ್ನು ಸ್ವಮ್ಮಿಂಗ್ ಪೂಲ್‌ಗೆ ತಳ್ಳಿ, ಕೆಟ್ಟದಾಗಿ ಬೈದರು.

    ಇತರೆ ಸ್ಪರ್ಧಿಗಳು ವಿಕಾಸ್ ಅನ್ನು ಸಮಾಧಪಡಿಸಿದರೆ, ಇನ್ನು ಕೆಲವರು ಆರ್ಶಿಯನ್ನು ಸಮಾಧಾನಪಡಿಸಿದರು. ಆರ್ಶಿ ಅಳುತ್ತಾ, ಕ್ಯಾಮೆರಾ ಮುಂದೆ, ವಿಕಾಸ್ ವಿರುದ್ಧ ದೂರುಗಳನ್ನು ಹೇಳಿದರು. ಕೊನೆಗೆ ಬಿಗ್‌ಬಾಸ್ ವಿಕಾಸ್‌ರದ್ದು ತಪ್ಪು ಎಂದು ಪರಿಗಣಿಸಿ ಅವರನ್ನು ಬಿಗ್‌ಬಾಸ್ ಮನೆಯಿಂದ ಹೊರಗೆ ಹಾಕಿದರು.

    'ನಾನು ಕೋಪೋದ್ರೇಕಗೊಳ್ಳುವಂತೆ ಮಾಡಲಾಯಿತು' ಎಂದು ವಿಕಾಸ್ ಹೇಳಿದರು, ಆದರೆ ಇದಕ್ಕೆ ಉತ್ತರಿಸಿದ ಬಿಗ್‌ಬಾಸ್, 'ಕೋಪೋದ್ರೇಕಗೊಳಿಸುವುದು ಆಟದ ಒಂದು ತಂತ್ರ' ಎಂದು ಉತ್ತರಿಸಿದರು. ಕೊನೆಗೆ ವಿಕಾಸ್ ಕೆಟ್ಟ ನಡವಳಿಕೆಯಿಂದ ಬಿಗ್‌ಬಾಸ್‌ನಿಂದ ಹೊರಗೆ ಹೋಗಬೇಕಾಯಿತು.

    ಆ ನಂತರ ಆರ್ಶಿಯ ತಂತ್ರ ಕೆಟ್ಟದಾಗಿತ್ತು, ಆಕೆ ಬೇಕೆಂದೇ ವಿಕಾಸ್ ಉದ್ರೇಕಗೊಳ್ಳುವಂತೆ ಮಾತನಾಡಿ, ಆತ ಹಲ್ಲೆ ಮಾಡುವಂತೆ ಮಾಡಿ, ಆತನನ್ನು ಬಿಗ್‌ಬಾಸ್ ಮನೆಯಿಂದ ಹೊರಗೆ ಹಾಕಿಸಿದಳು ಎಂದು ಕೆಲವು ಸ್ಪರ್ಧಿಗಳು ಮಾತನಾಡಿಕೊಂಡರು.

    English summary
    Vikas Gupta out of Bigg Boss for pushing fellow lady contestant Arshi into the pool and getting physical with her.
    Tuesday, December 15, 2020, 15:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X