Vikas Uthaiah: ಕೊಡಗಿನ ಕುವರ 'ಅಣ್ಣಯ್ಯ' ಧಾರಾವಾಹಿಯ ಶಿವಣ್ಣ ಬಗ್ಗೆ ನಿಮಗೆಷ್ಟು ಗೊತ್ತು?

By ಎಸ್ ಸುಮಂತ್

ಜೀ ಕನ್ನಡದಲ್ಲಿ ಹೊಸದಾಗಿ ಶುರುವಾಗಿರುವ ಧಾರಾವಾಹಿ 'ಅಣ್ಣಯ್ಯ'. ನಾಲ್ಕು ತಂಗಿಯರನ್ನು ಸಾಕಿ, ಸಲಹಿ ಒಂದೊಳ್ಳೆ ಭವಿಷ್ಯ ರೂಪಿಸುವಲ್ಲಿ ಅಣ್ಣಯ್ಯನ ಪಾತ್ರ ಎಷ್ಟರಮಟ್ಟಿಗೆ ಮಹತ್ವವಾದದ್ದು ಎಂಬುದನ್ನೂ ತಿಳಿಸುವ ಧಾರಾವಾಹಿ. ಶಿವಣ್ಣನಿಗೆ ತಂಗಿಯರೆಂದರೆ ಜವಾಬ್ದಾರಿ, ಪ್ರೀತಿ. ತನಗೇನೆ ಕಷ್ಟ ಬಂದರೂ ಸಹಿಸಿಕೊಂಡು, ತಂಗಿಯಂದಿರ ಸುಖ ಶಾಂತಿಯನ್ನೇ ನೋಡುತ್ತಾನೆ.

ಶಿವಣ್ಣನಿಗೆ ಅತ್ತೆ ಮಗಳು ಪಾರ್ವತಿ ಎಂದರೆ ಪ್ರೀತಿ ಜಾಸ್ತಿ. ಪಾರುಗು ಅಷ್ಟೇ ಶಿವಣ್ಣನ ಮೇಲೆ ಬೆಟ್ಟದಷ್ಟು ಪ್ರೀತಿ ಇದೆ. ಆದರೆ ಅದ್ಯಾವುದನ್ನು ಹೇಳಿಕೊಳ್ಳುವುದಕ್ಕೆ ಆಗುತ್ತಿಲ್ಲ. ಇನ್ನು ಪಾರ್ವತಿ ಅಪ್ಪನಿಗೆ ಶಿವಣ್ಣನ ಮೇಲೆ ಅದೇನೋ ಕೋಪ. ಯಾವಾಗಲೂ ಸೇಡು ತೀರಿಸಿಕೊಳ್ಳುವ ಬಗ್ಗೆಯೇ ಪ್ಲ್ಯಾನ್ ಮಾಡುತ್ತಾ ಇರುತ್ತಾನೆ.

Vikash Uthaiah Biography Know the age career and more of Annaiah famed actor

ಅಣ್ಣಯ್ಯನ ಒಳ್ಳೆಯತನದ ಪ್ರೀತಿ, ಪ್ರಾಮಾಣಿಕ ಪ್ರೀತಿ ಮುಂದೆ ಪಾರು ಅಪ್ಪನ ಕೆಡುಕುತನ ನಡೆಯುವುದಿಲ್ಲ. ಹಾಗಾದ್ರೆ ಅಣ್ಣಯ್ಯನ ಪಾತ್ರ ಮಾಡಿರುವ ಶಿವಣ್ಣ ಯಾರು..? ಮುಂಚೆ ಏನಾಗಿದ್ರು ಎಂಬ ಮಾಹಿತಿ ಇಲ್ಲಿದೆ.

ಅಣ್ಣಯ್ಯ ಕೊಡಗಿನ ಕುವರ

ಜೀ ಕನ್ನಡದಲ್ಲಿ ಬರುತ್ತಿರುವ 'ಅಣ್ಣಯ್ಯ' ಧಾರಾವಾಹಿಯ ಶಿವಣ್ಣ ಮೂಲತಃ ಕೊಡಗಿನವರು. ಇವರ ಹೆಸರು ವಿಕಾಸ್ ಉತ್ತಯ್ಯ. ಕೊಡಗಿನವರಾದರೂ ಪಕ್ಕಾ ಗ್ರಾಮೀಣ ಭಾಷೆಯಲ್ಲಿ ಮಾತನಾಡುತ್ತಾರೆ. ಧಾರಾವಾಹಿಯ ಪಾತ್ರಕ್ಕೆ ಹಳ್ಳಿ ಭಾಷೆಯೇ ಬೇಕಾದರೂ ಎಲ್ಲಿಯೂ ತಬ್ಬಿಬ್ಬಾಗದೆ ಅದ್ಭುತವಾಗಿ ಮಾತನಾಡುತ್ತಾರೆ, ನಟಿಸುತ್ತಾರೆ. ತಂಗಿಯರ ಕಾಳಜಿ ತೋರುವ ಅಣ್ಣಯ್ಯ ಎಲ್ಲರಿಗೂ ಇಷ್ಟವಾಗಿದ್ದಾರೆ.

ಅಣ್ಣಯ್ಯ ಶೈನಿಂಗ್ ಹೀರೋ

ವಿಕಾಸ್ ಉತ್ತಯ್ಯ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಮಿಂಚುತ್ತಾ ಇದ್ದಾರೆ. 2014ರಿಂದ ಕೂಡ ಇನ್‌ಸ್ಟಾಗ್ರಾಂ ಬಳಕೆ ಮಾಡುತ್ತಿದ್ದಾರೆ. ಕಾಲೇಜು ದಿನಗಳ ಫೋಟೊ, ಫ್ರೆಂಡ್ ಜೊತೆಗಿನ ಫೋಟೋಗಳನ್ನೇ ಹೆಚ್ಚು ಹಾಕಿದ್ದಾರೆ. ಕೂರ್ಗ್ ಡ್ಯಾನ್ಸ್, ಫ್ಯಾಮಿಲಿ ಫೋಟೋಸ್ ಹೀಗೆ ಒಂದಷ್ಟು ಮೆಮೋರೀಸ್ ಇರುವಂತ ಫೋಟೋಗಳನ್ನು ವಿಕಾಸ್ ಉತ್ತಯ್ಯ ಸೋಷಿಯಲ್ ಮೀಡಿಯಾದಲ್ಲಿ ಕಾಣಬಹುದು. ಫಾಲೋವರ್ಸ್ ಕೂಡ ಹೆಚ್ಚಾಗ್ತಾನೆ ಇದ್ದು, ಸದ್ಯಕ್ಕೆ 37 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ರೀಚ್ ಮಾಡಿದ್ದಾರೆ.

Vikash Uthaiah Biography Know the age career and more of Annaiah famed actor

ವಿಭಿನ್ನ ಪಾತ್ರಗಳ ಮೂಲಕ ಪರಿಚಯ

ವಿಕಾಸ್ ಉತ್ತಯ್ಯ, 'ಅಣ್ಣಯ್ಯ' ಧಾರಾವಾಹಿಗೆ ಬರುವುದಕ್ಕೂ ಮುನ್ನವೇ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರವನ್ನೇ ನಿರ್ವಹಿಸಿ ಬಂದಿದ್ದಾರೆ. 'ಕನಸಿನ ಮಳೆಯಾದಳು', 'ಆನ', 'ಮೇರಿ', 'ದ್ವಂದ್ವಂ ದ್ವಯಂ' ಹೀಗೆ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಈಗ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ವಿಕಾಸ್ ಅಭಿನಯಕ್ಕೆ ಕಿರುತೆರೆ ವೀಕ್ಷಕರು ಚಪ್ಪಾಳೆ ತಟ್ಟಿದ್ದಾರೆ. ಅಣ್ಣಯ್ಯ ಅಂದ್ರೆ ಹೀಗಿರಬೇಕು ಎನ್ನುತ್ತಿದ್ದಾರೆ. ತಂಗಿಯರ ಜವಾಬ್ದಾರಿ ಯಾವತ್ತಿಗೂ ಭಾರ ಎಂದುಕೊಳ್ಳದೆ ಎಷ್ಟು ಜವಾಬ್ದಾರಿಯಿಂದ ನಿರ್ವಹಿಸುವ ಅಣ್ಣಯ್ಯನನ್ನ ಎಲ್ಲರು ಮೆಚ್ಚಿದ್ದಾರೆ.

ರಂಗಭೂಮಿ ಕಲಾವಿದ ಶಿವಣ್ಣ

ವಿಕಾಸ್ ಉತ್ತಯ್ಯ ರಂಗಭೂಮಿ ಕಲಾವಿದ ಕೂಡ. ಈ ಮೊದಲು ಥಿಯೇಟರ್ ನಲ್ಲಿ ತರಬೇತಿ ಪಡೆದಿದ್ದಾರೆ. ಒಂದಷ್ಟು ಸ್ಟೇಜ್ ಶೋಗಳನ್ನು ನೀಡಿದ್ದಾರೆ. ಆ ಸ್ಟೇಜ್ ಶೋಗಳ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಂಗಭೂಮಿಯಿಂದ ಬಂದವರಿಗೆ ಯಾವುದೇ ಪಾತ್ರ ಕೊಟ್ಟರು ಸಲೀಸಲಾಗಿ ಮಾಡುತ್ತಾರೆ ಎಂಬುದು ಅನುಭಸ್ಥರ ಮಾತು. ವಿಕಾಸ್ ಉತ್ತಯ್ಯ ವಿಚಾರದಲ್ಲೂ ಅದೇ ಆಗಿದೆ. ಹೀಗಾಗಿಯೇ ಭಾಷೆಯ ಸೊಗಡು ಬೇರೆಯದ್ದೇ ಆದರೂ ಅದ್ಭುತವಾಗಿ ಪ್ರಾಕ್ಟೀಸ್ ಮಾಡಿ ಮಾತನಾಡುತ್ತಾರೆ. ನಟನೆಯಲ್ಲೂ ವಾವ್ ಎನಿಸಿಕೊಂಡಿದ್ದಾರೆ. ಕೊಡಗಿನ ಕುವರ ಸದ್ಯಕ್ಕೆ ಜೀ ಕನ್ನಡದ ಅಣ್ಣಯ್ಯನಾಗಿ ಕಿರುತೆರೆ ಮಮ್ಮಿಯಂದಿರನ್ನು ಗೆದ್ದಿದ್ದಾರೆ.

More from Filmibeat

English summary
Here is the details about Annaiah serial hero real life.
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X