Vinay Gowda Eliminated: ಟ್ರೋಫಿಗಾಗಿ ಸ್ಟ್ರಾಂಗ್ ಸ್ಪರ್ಧಿಯಾಗಿದ್ದ ವಿನಯ್ ಗೌಡ ಎಲಿಮಿನೇಟ್: ಶಾಕ್‌ನಲ್ಲಿ ಫೈನಲಿಸ್ಟ್‌ಗಳು!
ಬಿಗ್‌ಬಾಸ್ ಕನ್ನಡ ಸೀಸನ್ ಹತ್ತರ ಗ್ರ್ಯಾಂಡ್ ಫಿನಾಲೆ ಸಂಭ್ರಮ ಶುರುವಾಗಿದೆ. ಶನಿವಾರ (ಜನವರಿ 27) ಹಾಗೂ ಭಾನುವಾರ (ಜನವರಿ 28) ಎರಡೂ ದಿನ ಫಿನಾಲೆ ಸಂಚಿಕೆ ನಡೆಯುತ್ತಿದೆ. ಮಾಜಿ ಬಿಗ್ ಬಾಸ್ ಸ್ಪರ್ಧಿಗಳು, ಅವರ ಕುಟುಂಬಸ್ಥರು ವೇದಿಕೆಯಲ್ಲಿ ಸುದೀಪ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಅದ್ದೂರಿ ಮನರಂಜನೆ ನೀಡಿದ್ದ ಶೋ ಮುಕ್ತಾಯವಾಗಿದೆ.
ಬಿಗ್ ಬಾಸ್ ಫೈನಲ್‌ನಲ್ಲಿ ಒಟ್ಟು ಆರು ಮಂದಿಯಿದ್ದು, ಫಿನಾಲೆಯಲ್ಲಿ ಒಬ್ಬೊಬ್ಬರೆ ಎಲಿಮಿನೇಟ್ ಆಗುತ್ತಿದ್ದಾರೆ. ಮನೆಯಿಂದ ಫಿನಾಲೆ ವೇದಿಕೆಗೆ ಹೋಗಲಿದ್ದಾರೆ. ಈಗಾಗಲೇ ತುಕಾಲಿ ಸಂತೋಷ್, ವರ್ತೂರು ಸಂತೋಷ್ ಫಿನಾಲೆಯಲ್ಲಿ ಔಟ್ ಆಗಿದ್ದರು. ಈಗ ವಿನಯ್ ಗೌಡ ಫೈನಲ್‌ನಿಂದ ಎಲಿಮಿನೇಟ್ ಆಗಿದ್ದಾರೆ. ಈ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಫೈನಲ್ ಸ್ಟೇಜ್‌ನಲ್ಲಿ ಆನೆ ಎಲಿಮಿನೇಟ್ !
ಸಂಗೀತಾ ಶೃಂಗೇರಿ, ವಿನಯ್ ಗೌಡ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್, ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಬಿಗ್ ಫಿನಾಲೆಗೆ ಬಂದಿದ್ದಾರೆ. 6 ಮಂದಿ ಫೈನಲಿಸ್ಟ್‌ಗಳಲ್ಲಿ ವಿನಯ್ , ಸಂಗೀತಾ ಮತ್ತು ಕಾರ್ತಿಕ್ ಟ್ರೋಫಿ ಗೆಲ್ಲುತ್ತಾರೆ ಎನ್ನಲಾಗಿತ್ತು. ಇನ್ನು, ಮೊದಲಿನಿಂದಲೂ ಬಿಗ್ ಬಾಸ್ ಮನೆಯಲ್ಲಿ ತಾನೇ ಟ್ರೋಫಿ ಗೆಲ್ಲೋದು ಎನ್ನುತ್ತಿದ್ದ ವಿನಯ್ ಗೌಡ ತಮ್ಮ ಅಗ್ರೆಸಿವ್ ನೇಚರ್‌ನಿಂದ ಸಕತ್ ವಿವಾದ ಮತ್ತು ಜಗಳಕ್ಕೆ ಕಾರಣರಾಗಿದ್ದರು.
ಮನೆಯಲ್ಲಿ ತಮ್ಮ ನಾಲಿಗೆ ಮೇಲೆ ಹಿಡಿತವಿಲ್ಲ ಎಂಭ ಕಾರಣಕ್ಕೆ ಹೆಚ್ಚು ಟೀಕೆಗೆ ಒಳಗಾಗಿದ್ದರು ವಿನಯ್ ಗೌಡ. ಇವರು ಮನೆಯಲ್ಲಿ ನಡೆದುಕೊಂಡ ರೀತಿ ಹೊರಗಡೆ ಕೂಡ ಚರ್ಚೆಯಾಗಿತ್ತು. ಇದಕ್ಕೆ ಬಳೆ ವಿವಾದ ಸಾಕ್ಷಿ. ಫೈನಲ್‌ನಲ್ಲಿ ಟ್ರೋಫಿ ಎತ್ತಲಿದ್ದಾರೆ ಎಂಬ ವಿಶ್ವಾಸವಿತ್ತು. ಅವರು ಈಗ ಫಿನಾಲೆಯ ಕೊನೆಯ ಕ್ಷಣದಲ್ಲಿ ಎಲಿಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಗೆಲ್ಲೋದು ಸಮರ್ಥರಾ... ಅಸಮರ್ಥರಾ?
ಬಿಗ್ ಬಾಸ್ ಮನೆಗೆ ಈ ಬಾರಿ ವೋಟಿಂಗ್ ಮಾಡುವ ಮೂಲಕ ಸಮರ್ಥರು ಹಾಗೂ ಅಸಮರ್ಥರು ಎಂಬ ಎರಡು ಗುಂಪುಗಳಾಗಿ ಸ್ಪರ್ಧಿಗಳು ಕಾಲಿಟ್ಟಿದ್ದರು. ಸ್ನೇಹಿತ್ ಗೌಡ, ವಿನಯ್ ಗೌಡ, ನಮ್ರತಾ ಗೌಡ, ಸ್ನೇಕ್ ಶ್ಯಾಮ್, ಗೌರೀಶ್ ಅಕ್ಕಿ, ತುಕಾಲಿ ಸಂತೋಷ್, ಭಾಗ್ಯ, ಸಿರಿ, ಮೈಕಲ್, ನೀತು ವನಜಾಕ್ಷಿ, ಇಶಾನಿ ಸಮರ್ಥರಾಗಿ ಬಿಗ್ ಬಾಸ್ ಮನೆಗೆ ಬಂದಿದ್ದರು. ವರ್ತೂರು ಸಂತೋಷ್, ಕಾರ್ತಿಕ್, ಸಂಗೀತಾ ಶೃಂಗೇರಿ, ತನಿಷಾ ಕುಪ್ಪಂಡ, ರಕ್ಷಕ್, ಡ್ರೋನ್ ಪ್ರತಾಪ್ ಅಸಮರ್ಥರಾಗಿ ಎಂಟ್ರಿ ಕೊಟ್ಟಿದ್ದರು.

ಇನ್ನು, ದೊಡ್ಮನೆಗೆ ಅಸಮರ್ಥರಾಗಿ ಎಂಟ್ರಿ ಕೊಟ್ಟ ಗುಂಪಿನ ಸಂಖ್ಯೆಯೇ ದೊಡ್ಡದಿದೆ. ಸಮರ್ಥರಾಗಿ ಎಂಟ್ರಿ ಕೊಟ್ಟವರಲ್ಲಿ ಸದ್ಯ ವಿನಯ್ ಹಾಗೂ ತುಕಾಲಿ ಸಂತೋಷ್ ಮಾತ್ರ ಉಳಿದುಕೊಂಡಿದ್ದರು. ಅಸಮರ್ಥರಾಗಿ ಕಾರ್ತಿಕ್, ಸಂಗೀತಾ, ವರ್ತೂರು ಸಂತೋಷ್, ಪ್ರತಾಪ್ ನಾಲ್ಕು ಮಂದಿ ಇದ್ದರು. ಇವರಲ್ಲಿ ಸಮರ್ಥರ ಗುಂಪಿನ ವಿನಯ್ ಹಾಗೂ ತುಕಾಲಿ ಸಂತೋಷ್ ಫೈನಲ್‌ನಲ್ಲಿ ಎಲಿಮಿನೇಟ್ ಆಗಿದ್ದಾರೆ.
ಇದು ಎಲ್ಲರಿಗೂ ಶಾಕ್ ನೀಡಿದೆ. ಅದರಲ್ಲೂ ಫೈನಲಿಸ್ಟ್ ಆಗಿದ್ದ ಡ್ರೋನ್ ಪ್ರತಾಪ್ ಸಕತ್ ಶಾಕ್‌ಗೆ ಒಳಗಾಗಿದ್ದಾರೆ. ಟ್ರೋಫಿ ಗೆದ್ದೆ ಗೆಲ್ಲುವೇ ಎಂದು ಸವಾಲು ಹಾಕಿದ್ದ ವಿನಯ್ ಕೊನೆಗೂ ಎಲಿಮಿನೇಟ್ ಆಗಿದ್ದಾರೆ. ಇದನ್ನು ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications











