BBK 10 Grand Finale ; ಬಿಗ್ ಬಾಸ್ ನಲ್ಲಿ ಅನಿರೀಕ್ಷಿತ ತಿರುವು, ವಿನಯ್ ಗೌಡ ಔಟ್, ನಮ್ರತಾ, ತನಿಶಾ ಶಾಕ್.
ಗಾಯಾಳು ಕಾಡಾನೆಗೆ ಮೂರು ಮದ್ದಾನೆಗಳು ಬಿಗ್ ಬಾಸ್ ನಲ್ಲಿ ತಿವಿದಿವೆ. ನಿಜಕ್ಕೂ ಇದು ನಂಬಲು ಸಾಧ್ಯವಾಗದೇ ಇದ್ದರೂ ನಂಬ್ಲೇಬೇಕು ಅನ್ನುವ ಮಾತನ್ನ ಕನ್ನಡದ ಬಿಗ್ ಬಾಸ್ ನ ಗ್ರ್ಯಾಂಡ್ ಫಿನಾಲೆ ನೋಡಿದ ಪ್ರತಿಯೊಬ್ಬರು ಹೇಳ್ತಿದ್ದಾರೆ. ಕಾಡಾನೆ ಯಾರು, ಮದ್ದಾನೆ ಯಾರು..? ನಿಮಗೆ ಈಗಾಗ್ಲೇ ಗೊತ್ತಾಗಿರಬೇಕು. ಆದರೂ ನಿಮ್ಮ ಮಾಹಿತಿಗಾಗಿ ನಾವೂ ಇಲ್ಲಿ ಹೇಳ್ತಿರೋದು ವಿನಯ್ ಗೌಡ VS ಡ್ರೋನ್ ಪ್ರತಾಪ್, ಕಾರ್ತಿಕ್ ಹಾಗೂ ಸಂಗೀತಾ ಬಗ್ಗೆ.
ನಿಮಗೆ ಗೊತ್ತು.. ವಿನಯ್ ಗೌಡ, 'ಬಿಗ್ ಬಾಸ್ ಕನ್ನಡ 10' ಕಾರ್ಯಕ್ರಮದಲ್ಲಿ 'ಆನೆ' ಎಂದೇ ಖ್ಯಾತಿ ಪಡೆದಿದ್ದವರು. ಟ್ರೋಫಿಗೆ ಮುತ್ತಿಕ್ಕೋದು ಇವರೇ ಎಂದು ಎಲ್ಲರೂ ಭಾವಿಸಿದ್ದರು ಕೂಡ. ಆದರೆ ದೊಡ್ಮನೆಯಲ್ಲಿ ವಿಲನ್ ಪಟ್ಟವನ್ನ ಅಲಂಕರಿಸಿದ್ದ ವಿನಯ್ ಗೌಡ ಆಚೆ ಬಂದಿದ್ದಾರೆ. ನಿಜಕ್ಕೂ It was Surprise Elimination. ಎಷ್ಟರ ಮಟ್ಟಿಗೆ ಅಂದರೆ ಬಿಗ್ ಬಾಸ್ ನ ಗ್ರ್ಯಾಂಡ್ ಫಿನಾಲೆ ಕಣ್ತುಂಬಿಕೊಳ್ಳಲು ಬಂದ ಮಾಜಿ ಸ್ಫರ್ಧಿಗಳ ಕಣ್ಣಲ್ಲಿಯೂ ಕೂಡ ನೀರು ಜೀನುಗಿತ್ತು

ಅಸಲಿಗೆ ಟಾಪ್ 3ನಲ್ಲಿ ವಿನಯ್ ಇದ್ದೇ ಇರ್ತಾರೆ ಎಂದು ಎಲ್ಲ ಅಂದುಕೊಂಡಿದ್ದರು.ಆದರೆ ಅಂದುಕೊಂಡಿದ್ದು ಒಂದು ಆಗಿದ್ದು ಇನ್ನೊಂದು. ವಿನಯ್ ಆಚೆ ಬಂದರು. ಈ ಕಾರಣಕ್ಕೆ ವಿನಯ್ ವಿನ್ನರ್ ಆಗ್ತಾರೆ ಅಂದುಕೊಂಡಿದ್ದೆ. ವಿನ್ನರ್ ಆಗುವ ಅರ್ಹತೆ ಅವರಿಗೆ ಇತ್ತು. ಇದು ಶಾಕಿಂಗ್ ಎಲಿಮಿನೇಷನ್. ಇದು ಫೇರ್ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು ನಮ್ರತಾ.
ಇನ್ನೂ ಕಪ್ ಮುಖ್ಯ, ಕಪ್ ನಂದೇ ಅಂತ ಯಾವಾಗಲೂ ವಿನಯ್ ಹೇಳ್ತಿದ್ದರು. ಈಗ ಔಟ್ ಆಗಿರೋದು ದೊಡ್ಡ ಶಾಕ್. ನಾನೂ ನಿರೀಕ್ಷೆ ಮಾಡಿರಲಿಲ್ಲ ಎಂದರು ತುಕಾಲಿ ಸಂತು. ಇವರಿಬ್ಬರಷ್ಟೇ ಅಲ್ಲ ವಿನಯ್ ಗೌಡ ಹೊರ ಬೀಳುತ್ತಿದ್ದಂತೆ ಮೈಕಲ್, ತನಿಷಾ ಹಾಗೂ ಇಶಾನಿ ಕೂಡ ಕಣ್ಣೀರನ್ನ ಇಟ್ಟರು.

ಕಣ್ಣೀರಿಟ್ಟ ವಿನಯ್ ಪತ್ನಿ
ಒಂದು ಮನೆಯಲ್ಲಿ ಕೆಲ ಕಾಲ ಜೊತೆಯಲ್ಲಿ ಸಮಯ ಕಳೆದವರಿಗೆ ಇಷ್ಟೊಂದು ಬೇಸರವಾಗಬೇಕಾದರೆ, ಮನೆಯಲ್ಲಿ ಜೀವನಪೂರ್ತಿ ಸಂಸಾರ ನಡೆಸಲು ಮುಂದಾದ ವಿನಯ್ ಗೌಡ ಅವರ ಪತ್ನಿಗೆ ಎಷ್ಟು ಬೇಸರವಾಗಿರಬಹುದು ಅನ್ನುವುದಕ್ಕೂ ಇದೇ ವೇದಿಕೆ ಸಾಕ್ಷಿಯಾಯಿತು. ವಿನಯ್ ಔಟ್ ಅಂತ ಗೊತ್ತಾಗುತ್ತಿದ್ದಂತೆಯೇ ಪತ್ನಿ ಅಕ್ಷತಾ ಹಾಗೂ ಪುತ್ರ ರಿಷಿ ಗದ್ಗದಿತರಾದರು. ವೇದಿಕೆಗೆ ವಿನಯ್ ಬರುತ್ತಿದ್ದಂತೆಯೇ ಪುತ್ರ ರಿಷಿ ಕಣ್ಣೀರು ಸುರಿಸಿದರು. ಅಪ್ಪನನ್ನ ಅಪ್ಪಿಕೊಂಡು ರಿಷಿ ಕಣ್ಣೀರಿಟ್ಟರು.
ಅಳುತ್ತಲೇ, ಚೆನ್ನಾಗಿ ಆಡಿದ್ದೀರಾ ಅಪ್ಪ ಎಂದರು ಮಗ ರಿಷಿ. ಪತಿಯ ಅನಿರೀಕ್ಷಿತ ನಿರ್ಗಮನವನ್ನ ನಿರೀಕ್ಷೆ ಮಾಡದ ವಿನಯ್ ಗೌಡ ಪತ್ನಿ ಅಕ್ಷತಾ ವಿನಯ್ ಬಿಗ್ ಬಾಸ್ ಜರ್ನಿಯಲ್ಲಿ ಎಲ್ಲೂ ಮೈನಸ್ ಆಗಿಲ್ಲ. ಯಾಕೆ ಅಂತ ಗೊತ್ತಿಲ್ಲ. ಎಲ್ಲರ ಮನಸ್ಸು ಗೆದ್ದಿದ್ದಾರೆ. ಅವರು ನಿಜಕ್ಕೂ ವಿನ್ನರ್. ಟಾಪ್ 2ಗೆ ಬಂದಿದ್ದರೆ ಬೇಜಾರು ಆಗ್ತಿರ್ಲಿಲ್ಲ. ಈಗ ಸ್ವಲ್ಪ ಬೇಜಾರು ಆಗ್ತಿದೆ ಎಂದು ಹೇಳಿ ವಿನಯ್ ಪತ್ನಿ ಅಕ್ಷತಾ ಕಣ್ಣೀರು ಹಾಕಿದರು.

ಕಿಚ್ಚ ಸುದೀಪ್ ಹೇಳಿದ್ದೇನು.. ?
ವಿನಯ್ ದೊಡ್ಮನೆಯಿಂದ ಆಚೆ ಬರುತ್ತಿದ್ದಂತೆ, ಎಕ್ಸ್‌ಪೆಕ್ಟ್ ದಿ ಅನ್‌ಎಕ್ಸ್‌ಪೆಕ್ಟೆಡ್ ಎಂದ ಕಿಚ್ಚ ಸುದೀಪ್ ಎಲಿಮಿನೇಷನ್ ಬಗ್ಗೆ ನಿಮ್ಮಗಳ ಜೊತೆಗೆ ಈಗಲೇ ನನಗೂ ಗೊತ್ತಾಗೋದು. ರಿಸಲ್ಟ್ ಕೂಡ ನನಗೆ ಗೊತ್ತಿರೋದಿಲ್ಲ. ಎಷ್ಟೋ ಬಾರಿ ನಿಮ್ಮ ಹಾಗೆ ನನಗೂ ಶಾಕ್ ಆಗಿದೆ ಎಂದು ಇದೇ ವೇಳೆ ಕಿಚ್ಚ ಸುದೀಪ್ ಹೇಳಿದರು.
ವಿನಯ್ ಹೇಳಿದ್ದೇನು..?
ಸಹಜವಾಘಿ ದೊಡ್ಡ ಮನೆಯ ಆನೆ ಎಂದೆ ಕರೆಯಲ್ಪಡುತ್ತಿದ್ದ ವಿನಯ್ ಗೌಡ, ಇದೆಲ್ಲವನ್ನೂ ನಿರೀಕ್ಷೆ ಮಾಡಿರಲಿಲ್ಲ. ಹೀಗಾಗಿಯೇ ಮನೆಯಿಂದ ಆಚೆ ಬಂದ ಬಳಿಕ ಮಾತನಾಡಿದ ವಿನಯ್, ಔಟ್ ಆಗಿದ್ದು ಶಾಕ್ ಆಯ್ತು. ಆದರೂ ಪರ್ವಾಗಿಲ್ಲ. ನಾನು ಪೀಪಲ್ಸ್ ಚಾಂಪಿಯನ್ ಅಂತ ಫೀಲ್ ಮಾಡ್ತೇನೆ. ತುಂಬಾ ಪ್ರೀತಿ ಕೊಟ್ಟಿದ್ದಾರೆ ಜನ. ಔಟ್ ಆಗ್ತೀನಿ ಅಂತ ನಿರೀಕ್ಷೆ ಮಾಡಿರಲಿಲ್ಲ. ಸ್ವಲ್ಪ ಬೇಜಾರಿದೆ. ಆದರೆ, ಜನರ ಪ್ರೀತಿ ಸಿಕ್ಕಿದ್ದಕ್ಕೆ ಖುಷಿ ಇದೆ ಎಂದರು ವಿನಯ್.


Click it and Unblock the Notifications











