8 ವರ್ಷ ಪೂರೈಸಿದ ವಿನಯ್, ಸಂಗೀತಾ ಶೃಂಗೇರಿ ನಟಿಸಿದ್ದ 'ಹರ ಹರ ಮಹಾದೇವ'

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹರಹರ ಮಹಾದೇವ' ಧಾರಾವಾಹಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಕನ್ನಡದಲ್ಲಿ ಒಂದು ಅಮೋಘ ಪೌರಾಣಿಕ ಪ್ರಾತ್ಯಕ್ಷಿಕೆಗೆ ಸಾಕ್ಷಿಯಾಗಿ ಪ್ರಸಾರವಾದ ಈ ಧಾರಾವಾಹಿಗೆ ಬಹಳಷ್ಟು ಪ್ರೇಕ್ಷಕರಿದ್ದರು. ಜನಮನ ಗೆದ್ದಿದ್ದ ಈ ಸೀರಿಯಲ್ ಮರು ಪ್ರಸಾರವಾದಾಗಲೂ ನೋಡುಗರ ಸಂಖ್ಯೆಯೇನೂ ಕಡಿಮೆಯಾಗಿರಲಿಲ್ಲ.

ಅಂದ ಹಾಗೆ ಈ ಧಾರಾವಾಹಿ ಪ್ರಸಾರವಾಗಿ ಇಂದಿಗೆ ಎಂಟು ವರ್ಷಗಳಾಗಿದೆ. ಯಶಸ್ವಿ 8 ವರ್ಷಗಳನ್ನು ಕಂಡಿರುವ ಧಾರಾವಾಹಿ ಮತ್ತೊಮ್ಮೆ ಪ್ರಸಾರವಾದರೂ ನೋಡಲು ಸಾಕಷ್ಟು ಜನರು ಕಾತರದಿಂದ ಕಾಯುತ್ತಿರುವುದೇ ಇದರ ಗೆಲುವಿಗೆ ಉತ್ತಮ ನಿದರ್ಶನ.

Vinay Sangeeth Sringeri together Hara Hara Mahadev serial completed 8 years

ಕಥೆಗಾರಿಕೆ, ಭಾಷಾ ಸ್ಪಷ್ಟತೆ, ಉತ್ತಮ ಕೊರಿಯೋಗ್ರಾಫಿ, ನಿರ್ದೇಶನ, ಕಲಾವಿದರ ನಟನೆ ಸೇರಿದಂತೆ ಎಲ್ಲ ವರ್ಗದಲ್ಲಿಯೂ ಉತ್ತಮವೆನಿಸಿಕೊಂಡಿದ್ದ ಈ ಧಾರಾವಾಹಿ ಕನ್ನಡದ ಅತ್ಯುತ್ತಮ ಪೌರಾಣಿಕ ಧಾರಾವಾಹಿಗಳಲ್ಲಿ ಒಂದಾಗಿದೆ. ಈ ಧಾರವಾಹಿಯಲ್ಲಿ ಮುಖ್ಯ ಪಾತ್ರವಾಗಿದ್ದ ಶಿವನ ಪಾತ್ರವನ್ನು ನಟ ವಿನಯ್ ಗೌಡ ಮಾಡಿದ್ದರು.

'ಅಂಬಾರಿ' ಸೀರಿಯಲ್ ಮೂಲಕ ಮೊದಲೇ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ವಿನಯ್ 'ಹರಹರ ಮಹಾದೇವ'ದ ಮುಖಾಂತರ ಅಭಿಮಾನಿಗಳಿಗೆ ಶಿವನಂತೆಯೇ ಭಾಸವಾಗಿದ್ದರು. ಇತ್ತೀಚೆಗೆ ನಡೆದ 'ಬಿಗ್ ಬಾಸ್ 'ರಿಯಾಲಿಟಿ ಶೋನಲ್ಲಿಯೂ ಕಾಣಿಸಿಕೊಂಡಿದ್ದ ವಿನಯ್ ಕೊನೆಯ ಸುತ್ತಿನವರೆಗೂ ಇದ್ದು ಒಂಟಿ ಸಲಗ ಎಂದೇ ಕರೆಸಿಕೊಂಡಿದ್ದರು.

Vinay Sangeeth Sringeri together Hara Hara Mahadev serial completed 8 years

ಇನ್ನು ಪಾರ್ವತಿಯ ಪಾತ್ರವನ್ನು ಮಾಡಿದವರು ನಟಿ ಪ್ರಿಯಾಂಕಾ ಚಿಂಚೊಳಿ. ಮುದ್ದಾದ ಮುಖ, ಮೃದುವಾದ ಮಾತು, ಹಾವ ಭಾವ ಒಟ್ಟಿನಲ್ಲಿ ಪಾರ್ವತಿಯನ್ನೇ ತೆರೆಯ ಮೇಲೆ ತಂದಂತಿತ್ತು ಇವರ ಅಭಿನಯ. ಈ ಧಾರಾವಾಹಿ ನಂತರ ಮತ್ತಷ್ಟು ಅವಕಾಶಗಳನ್ನು ಗಳಿಸಿದ ಪ್ರಿಯಾಂಕಾ ಕನ್ನಡ, ತೆಲುಗು ಸೇರಿದಂತೆ ಬೇರೆ ಬೇರೆ ಭಾಷೆಯ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪಾರ್ವತಿಯ ಮೊದಲ ಜನ್ಮವಾಗಿದ್ದ ಸತಿಯ ಪಾತ್ರವನ್ನು ನಿಭಾಯಿಸಿದ ಸಂಗೀತಾ ಶೃಂಗೇರಿ ಕನ್ನಡಿಗರ ಚಿರಪರಿಚಿತ ನಟಿ. ತಮ್ಮ ನಟನಾ ಸಾಮರ್ಥ್ಯದಿಂದ ಸತಿಯ ಪಾತ್ರವನ್ನು ಅದ್ಭುತವಾಗಿ ನಿರೂಪಿಸಿದ್ದ ಇವರು 'ಹರಹರ ಮಹಾದೇವ' ಮುಗಿದ ಮೇಲೆ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2022ರ ಅತ್ಯುತ್ತಮ ಚಿತ್ರಗಳಲ್ಲಿ ಒಂದಾದ '777 ಚಾರ್ಲಿ'ಯ ನಾಯಕಿಯಾಗಿಯೂ ಸಂಗೀತಾ ನಟಿಸಿದ್ದರು. ಇನ್ನು ವಿನಯ್ ಗೌಡರಂತೆಯೇ ಅದೇ ಬಿಗ್ ಬಾಸ್ ಸೀಸನ್‌ನಲ್ಲಿ ಸಂಗೀತ ಶೃಂಗೇರಿಯೂ ಸ್ಪರ್ಧಿಸಿದ್ದರು.

ಹಿಂದಿ ಭಾಷೆಯಲ್ಲಿ 'ದೇವೋಂ ಕೀ ದೇವ್' ಹೆಸರಿನಲ್ಲಿ ಪ್ರಸಾರವಾಗಿದ್ದ ಧಾರಾವಾಹಿಯ ಕನ್ನಡ ಅವತರಣಿಕೆಯಾಗಿ 'ಹರಹರ ಮಹಾದೇವ' ಮೂಡಿ ಬಂದಿತ್ತು. ನಿಖಿಲ್ ಸಿಂಹ ನಿರ್ಮಾಪಕರಾಗಿದ್ದ ಈ ಧಾರಾವಾಹಿಗೆ ಉತ್ಕರ್ಷ್ ನೈತಿನಿ ಹಾಗೂ ಮಿಹಿರ್ ಭೂಟ ಕಥೆಗಾರರಾಗಿ ಕೆಲಸ ಮಾಡಿದ್ದಾರೆ. ದೀಪಕ್ ಗಾರ್ಗ್ ನಿರ್ದೇಶನದಲ್ಲಿ ಮೂಡಿಬಂದ ಧಾರಾವಾಹಿ 421 ಎಪಿಸೋಡ್‌ಗಳ ಭರ್ಜರಿ ಪ್ರಸಾರ ಕಂಡಿತ್ತು. ಒಟ್ಟಿನಲ್ಲಿ ಯಶಸ್ವೀ ಪ್ರದರ್ಶನವನ್ನು ಕಂಡು ಗೆದ್ದಿರುವ 'ಹರ ಹರ ಮಹಾದೇವ' ಧಾರಾವಾಹಿ ಸಂತಸದ ಎಂಟನೇ ವರ್ಷವನ್ನು ಪೂರೈಸಿದೆ.

More from Filmibeat

English summary
Hara Hara Mahadev which captured the hearts of television viewers through its different storylines is now eight years old:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X