ನೆಗೆಟಿವ್ ರೋಲ್‌ನಲ್ಲಿ ಪ್ರಥಮಾ ಪ್ರಸಾದ್ ಮೋಡಿ; ಈ ನಟಿ ಕಥಕ್ ಡ್ಯಾನ್ಸರ್ ಕೂಡ ಹೌದು!

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕರಿಮಣಿ' ಧಾರಾವಾಹಿಯಲ್ಲಿ ನಾಯಕ ಕರ್ಣನ ಸೋದರತ್ತೆ ವನಜಾ ಪಾತ್ರದಲ್ಲಿ ಪ್ರಥಮಾ ಪ್ರಸಾದ್ ಅಭಿನಯಿಸುತ್ತಿದ್ದಾರೆ. ನೆಗೆಟಿವ್ ಪಾತ್ರದ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಪ್ರಥಮಾ ಪ್ರಸಾದ್ ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

ಅಂದ ಹಾಗೇ ಪ್ರಥಮಾ ಪ್ರಸಾದ್ ಅವರು ಇದೇ ಮೊದಲ ಬಾರಿಗೆ ನೆಗೆಟಿವ್ ರೋಲ್‌ನಲ್ಲಿ ನಟಿಸುತ್ತಿರುವುದಲ್ಲ. ಅಂದ ಹಾಗೇ ಇವರು ಮೊದಲ ಬಾರಿ ಖಳನಾಯಕಿಯಾಗಿ ಅಭಿನಯಿಸಿದ್ದು 'ಮನಸ್ಸೆಲ್ಲಾ ನೀನೆ' ಧಾರಾವಾಹಿಯಲ್ಲಿ. ಮೊದಲ ಬಾರಿಗೆ ಖಳನಾಯಕಿಯಾಗಿ ರಂಜಿಸಿದ ಪ್ರಥಮಾ ಪ್ರಸಾದ್ ನಂತರವೂ ಕಾಣಿಸಿದ್ದು ಖಳನಾಯಕಿಯಾಗಿ!

Vinaya Prasad daughter Prathama Prasad

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿಯೂ ನಾಯಕಿ ತಾರಿಣಿಯ ಸೋದರತ್ತೆ ಸುಮತಿ ಆಗಿ ಬಣ್ಣ ಹಚ್ಚಿದ್ದ ಅಲ್ಲೂ ನಟಿಸಿದ್ದು ನೆಗೆಟಿವ್ ರೋಲ್‌ನಲ್ಲಿ. ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ವಿನಯಾ ಪ್ರಸಾದ್ ಅವರ ಮಗಳಾಗಿರುವ ಪ್ರಥಮಾ ಪ್ರಸಾದ್ ಅವರು ನಟನೆಗೆ ಕಾಲಿಟ್ಟಿದ್ದು 'ಬೊಂಬೆಯಾಟವಯ್ಯಾ' ಧಾರಾವಾಹಿಯ ಮೂಲಕ.

ತದ ನಂತರ ಭಕ್ತಿ ಪ್ರಧಾನ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ ಈಕೆ ದೇವಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ದೇವಿ' ಧಾರಾವಾಹಿಯಲ್ಲಿ ಕೊಲ್ಲೂರು ಮೂಕಾಂಬಿಕೆಯಾಗಿ ಅಭಿನಯಿಸಿದ್ದ ಪ್ರಥಮಾ ಪ್ರಸಾದ್ ಮುಂದೆ 'ಮಹಾದೇವಿ' ಧಾರಾವಾಹಿಯಲ್ಲಿ ಸ್ಕಂದ ಮಾತೆಯಗಿ ಬಣ್ಣ ಹಚ್ಚಿದರು.

Vinaya Prasad daughter Prathama Prasad

ನಂತರ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕ ಲಕ್ಷ್ಮಣನ ಸೋದರತ್ತೆ ಪುಟ್ಟತ್ತೆಯಾಗಿ ಬಣ್ಣ ಹಚ್ಚಿದ ಪ್ರಥಮಾ ಪ್ರಸಾದ್, ಕಿರುತೆರೆಯಲ್ಲಿ ಆ ಪಾತ್ರದ ಮೂಲಕ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡರು. ಇಂದಿಗೂ 'ಪುಟ್ಟತ್ತೆ'ಯಾಗಿ ಗುರುತಿಸಿಕೊಂಡಿರುವ ಪ್ರಥಮಾ ಪ್ರಸಾದ್ 'ಅಮ್ನೋರು' ಧಾರಾವಾಹಿಯಲ್ಲಿ ಮತ್ತೆ ದೇವಿಯಾಗಿ ಕಮಾಲ್ ಮಾಡಿದರು.

ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಪ್ರಥಮಾ ಪ್ರಸಾದ್ ಈಗಾಗಲೇ ಹಿರಿತೆರೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ. ಎಂಎಂಸಿಹೆಚ್', 'ಲಕ್ಷ್ಮಿ ನಾರಾಯಣರ ಪ್ರಪಂಚಾನೇ ಬೇರೆ', 'ಚೌಕಾಬಾರ', 'ಆಚಾರ್ಯ ಶ್ರೀಶಂಕರ' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ನಟನಾ ಕಂಪನ್ನು ಪಸರಿಸಿದ್ದಾರೆ‌.

ಇನ್ನು ನಟನೆಯ ಹೊರತಾಗಿ ಪ್ರಥಮಾ ಪ್ರಸಾದ್ ಅವರು ಕಥಕ್ ನೃತ್ಯಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಜನಪ್ರಿಯ ಕಥಕ್ ನೃತ್ಯ ಕಲಾವಿದೆ ಮಾಯ ರಾವ್ ಅವರಿಂದ ಕಥಕ್ ನೃತ್ಯವನ್ನು ಶಾಸ್ತ್ರೋಕ್ತವಾಗಿ ಕಲಿತಿದ್ದಾರೆ. ಜೊತೆಗೆ ಕಥಕ್ ನೃತ್ಯಗಾರರಾಗಿರುವ ತಮ್ಮ ಗಂಡ ಸೂರ್ಯ ಅವರ ಜೊತೆಗೆ ಸಾಕಷ್ಟು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನವನ್ನುಈಕೆ ನೀಡಿದ್ದಾರೆ.

More from Filmibeat

English summary
Vinaya Prasad daughter Prathama Prasad is a Kathak dancer who is charming through negative role
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X