ಹೊಸ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರ ಮುಂದೆ ನಟಿ ವಿನಯಾ ಪ್ರಸಾದ್

By ಅನಿತಾ ಬನಾರಿ

ಬಿಗ್ ಬಾಸ್ ನಂತರ ಆರಂಭವಾಗುತ್ತಿರುವ ಹೊಸ ಧಾರಾವಾಹಿಯಲ್ಲಿ ನಟಿ ವಿನಯಾ ಪ್ರಸಾದ್ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ನಟಿ ವಿನಯಾ ಪ್ರಸಾದ್ ಕಿರುತೆರೆಗೆ ಬಂದು ಬಹು ದೊಡ್ಡ ಹೆಸರನ್ನು ಮಾಡಿದ್ದಾರೆ. ಬೆಳ್ಳಿತೆರೆಯಲ್ಲಿ ದಶಕಗಳ ಕಾಲ ಜನಮನ ರಂಜಿಸಿರುವ ಈ ಕಲಾವಿದೆ ಇದೀಗ ಕಿರುತೆರೆಯಲ್ಲಿ ಕಾಲಿಟ್ಟು ಐದಾರು ವರ್ಷಗಳೇ ಸಂದಿವೆ.

'ಪಾರು' ಧಾರಾವಾಹಿ ಅಖಿಲಾಂಡೇಶ್ವರಿಯಾಗಿ ಸತತ ಐದು ವರ್ಷಗಳ ಕಾಲ ಕಿರುತೆರೆ ಪ್ರೇಕ್ಷಕರ ಮನೆಗೆದ್ದ ಕಲಾವಿದೆ ನಟಿ ವಿನಯಾ ಪ್ರಸಾದ್. ಈ ಧಾರಾವಾಹಿ ಹಾಗೂ ಅಖಿಲಾಂಡೇಶ್ವರಿ ಎಂಬ ಪಾತ್ರ ಅವರಿಗೆ ಬಹು ದೊಡ್ಡ ಹೆಸರು ತಂದುಕೊಟ್ಟಿತು. ಜೊತೆಗೆ ಕಿರುತೆರೆ ಪ್ರೇಕ್ಷಕರ ಒಂದು ದೊಡ್ಡ ಅಭಿಮಾನಿ ಬಳಗವೇ ಅಖಿಲಾಂಡೇಶ್ವರಿ ಆಲಿಯಾಸ್ ವಿನಯಾ ಪ್ರಸಾದ್ ಅವರಿಗೆ ದೊರೆಯಿತು.

Vinaya Prasad returned to television with Kannada serial Vadhu

59 ವರ್ಷದ ಹಿರಿಯ ಕಲಾವಿದೆ ನಟಿ ವಿನಯಾ ಪ್ರಸಾದ್ ಕನ್ನಡವಷ್ಟೇ ಅಲ್ಲದೆ ತಮಿಳು ತೆಲುಗು ಮಲಯಾಳಂ ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿರುವ ಬಹುಭಾಷಾ ನಟಿ. 'ಯಾರಿಗೂ ಹೇಳ್ಬೇಡಿ', 'ಗೌರಿ ಗಣೇಶ', 'ಕರುಳಿನ ಕೂಗು', 'ಗಣೇಶನ ಮದುವೆ', 'ಶ್ರೀರಾಂಪುರ ಪೊಲೀಸ್ ಸ್ಟೇಷನ್', 'ಮಿಡಿದ ಶ್ರುತಿ', 'ನಾನೆಂದು ನಿಮ್ಮವನು' ಮುಂತಾದ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಇವರು ನಾಟಕ ಕಲಾವಿದೆ ಅಷ್ಟೇ ಅಲ್ಲದೆ ಗಾಯಕಿ ಕೂಡ ಹೌದು.

ನಟಿ ವಿನಯಾ ಪ್ರಸಾದ್ ಹಾಗೂ ನಟ ಅನಂತ್ ನಾಗ್ ಅವರ ಕಾಂಬಿನೇಷನ್ ಅನ್ನು ಕನ್ನಡ ಪ್ರೇಕ್ಷಕರು ಮನಸಾರೆ ಮೆಚ್ಚಿದ್ದಾರೆ. 'ಮಣಿಚಿತ್ರತಾರ', 'ಚಂದ್ರಮುಖಿ', 'ಒರು ಪ್ರಣಯಕಲತು' ಹೀಗೆ ಹಲವು ಅನ್ಯ ಭಾಷಾ ಸಿನಿಮಾಗಳಿಂದ ತಮಿಳು ಮಲಯಾಳಂ ಪ್ರೇಕ್ಷಕರಿಗೂ ಚೆನ್ನಾಗಿ ಪರಿಚಯವಿದ್ದಾರೆ.

'ಪಾರು' ಧಾರಾವಾಹಿ ಮೂಲಕ ಬೆಳ್ಳಿತೆರೆಯಿಂದ ಕಿರುತೆರೆಗೆ ಕಾಲಿಟ್ಟ ನಟಿ ವಿನಯಾ ಪ್ರಸಾದ್ ಅಖಿಲಾಂಡೇಶ್ವರಿ ಎಂಬ ಖಡಕ್ ಪಾತ್ರದ ಮೂಲಕ ಕಿರುತೆರೆ ಜನಮನ ಗೆದ್ದಿದ್ದರು. ಅಖಿಲಾಂಡೇಶ್ವರಿ ಎನ್ನುವ ಖಡಕ ಯಜಮಾನಿಯ ಮನೆ ಹಾಗೂ ಮನೆತನದ ಕಥೆ ಇದಾಗಿತ್ತು. ಈ ಧಾರಾವಾಹಿಯಲ್ಲಿ ಕಲಾವಿದ ವಿನಯಾ ಪ್ರಸಾದ್ ಅಷ್ಟೇ ಅಲ್ಲದೆ, ನಟ ನಿರ್ದೇಶಕ ಎಸ್ ನಾರಾಯಣ್, ಶರತ್ ಪದ್ಮನಾಭ, ಪ್ರಸ್ತುತ ಬಿಗ್ ಬಾಸ್ ಸ್ಪರ್ಧಿಯಾಗಿರುವ ಮೋಕ್ಷಿತಾ ಪೈ ಮುಂತಾದವರು ನಟಿಸಿದ್ದರು.

ಕಲಾವಿದೆ ವಿನಯ ಪ್ರಸಾದ್ ಧಾರಾವಾಹಿಗಳಷ್ಟೇ ಅಲ್ಲದೆ ಕಿರುತೆರೆಯ ಹಲವಾರು ಜಾಹೀರಾತುಗಳಲ್ಲಿಯೂ ಇತ್ತೀಚಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅದಾದ ಮೇಲೆ ಸುಮಾರು ಒಂದು ವರ್ಷದ ಕಾಲ ಯಾವುದೇ ಕಿರುತೆರೆ ಅಥವಾ ಹಿರಿತೆರೆಯಲ್ಲಿ ಕಾಣಿಸಿಕೊಳ್ಳದ ನಟಿ ವಿನಯಾ ಪ್ರಸಾದ್ ಇದೀಗ ಹೊಸದೊಂದು ಧಾರಾವಾಹಿಯಲ್ಲಿ ಹೊಸ ಪಾತ್ರದ ಮೂಲಕ ಮತ್ತೆ ಕಿರುತೆರೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಮುಗಿದ ನಂತರ ಹೊಸದೊಂದು ಧಾರಾವಾಹಿ ಆರಂಭವಾಗಲಿದೆ. ಈ ಧಾರಾವಾಹಿಯಲ್ಲಿ ನಟಿ ವಿನಯಾ ಪ್ರಸಾದ್ ಅವರು ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಂದಿದೆ. ನಟಿ ವಿನಯಾ ಪ್ರಸಾದ್ ಅವರು 'ವಧು' ಎಂಬ ಧಾರಾವಾಹಿಯಲ್ಲಿ ವಿಭಿನ್ನ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಮೂಲಕ ಮಗದೊಂದು ಧಾರಾವಾಹಿ ಮೂಲಕವೇ ಜನರಿಗೆ ಹತ್ತಿರವಾಗುತ್ತಿದ್ದಾರೆ ಕಲಾವಿದ ವಿನಯಾ ಪ್ರಸಾದ್.

ಹೌದು, 'ವಧು' ಎಂಬ ಧಾರಾವಾಹಿಯಲ್ಲಿ ಬೇರೆ ಯಾವೆಲ್ಲ ಕಲಾವಿದರು ನಟಿಸುತ್ತಿದ್ದಾರೆ ಹಾಗೂ ನಟಿ ವಿನಯಾ ಪ್ರಸಾದ್ ಅವರ ಪಾತ್ರ ಯಾವ ರೀತಿಯದ್ದಾಗಿರುತ್ತದೆ ಎಂಬ ಕುತೂಹಲ ಈಗಾಗಲೇ ಕಿರುತೆರೆ ಪ್ರೇಕ್ಷಕರಲ್ಲಿ ಅದರಲ್ಲೂ ನಟಿ ವಿನಯಾ ಪ್ರಸಾದ್ ಅವರ ಅಭಿಮಾನಿಗಳಲ್ಲಿ ಮೂಡಿದೆ. 'ಪಾರು' ಧಾರಾವಾಹಿ ನಂತರ ಬಹುಬೇಗ ಹೊಸ ಧಾರಾವಾಹಿಯೊಂದಿಗೆ ಕಂಬ್ಯಾಕ್ ಮಾಡುತ್ತಿರುವ ವಿನಯಾ ಪ್ರಸಾದ ಅವರ ಪಾತ್ರ ಯಾವ ರೀತಿ ಜನಮನ ಗೆಲ್ಲಲಿದೆ ಎಂಬುದನ್ನು ನೋಡಬೇಕಿದೆ.

More from Filmibeat

English summary
Vinaya Prasad returned to television with the serial vadhu;
Read more about: vinaya prasad serial tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X