For Quick Alerts
  ALLOW NOTIFICATIONS  
  For Daily Alerts

  ಮೇ 2 ರಂದು ಕಿರುತೆರೆಯಲ್ಲಿ ಪ್ರಸಾರವಾಗ್ತಿದೆ ವಿನೋದ್ ಪ್ರಭಾಕರ್ 'ಶ್ಯಾಡೊ'

  |

  ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ಸೂಪರ್ ಹಿಟ್ ಚಿತ್ರ 'ಶ್ಯಾಡೊ' ಕಿರುತೆರೆಯಲ್ಲಿ ಪ್ರದರ್ಶನ ಕಾಣ್ತಿದೆ. ಫೆಬ್ರವರಿ 5 ರಂದು ತೆರೆಕಂಡಿದ್ದ ಶ್ಯಾಡೊ ಸಿನಿಮಾ ಈಗ ಕಿರುತೆರೆಗೆ ಲಗ್ಗೆಯಿಟ್ಟಿದೆ.

  ಕನ್ನಡದ ನಂಬರ್ ವನ್ ಮನರಂಜನಾ ವಾಹಿನಿ ಜೀ ಕನ್ನಡ ಮೊದಲನೇ ಲಾಕ್ ಡೌನ್ ನಂತರ ಬಿಡುಗಡೆಯಾದ 'ಶ್ಯಾಡೊ' ಚಿತ್ರವನ್ನು ಮೇ 2 ರಂದು ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಯೋಜಿಸಿದೆ.

  'ಮಹಾನಾಯಕ' ಧಾರಾವಾಹಿ ಪ್ರಸಾರದ ಸಮಯ ಬದಲಾವಣೆ'ಮಹಾನಾಯಕ' ಧಾರಾವಾಹಿ ಪ್ರಸಾರದ ಸಮಯ ಬದಲಾವಣೆ

  'ಶ್ಯಾಡೊ' ಕನ್ನಡದ ಜನಪ್ರಿಯ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರ ಪವರ್ ಫುಲ್ ಪರ್ಫಾರ್ಮೆನ್ಸ್ ಪ್ರೇಕ್ಷಕರನ್ನು ಸೆಳೆದಿತ್ತು. ಥಿಯೇಟರ್ ಗಳಲ್ಲಿ ಸಿನಿಮಾ ಬಿಡುಗಡೆಯಾದ ಕೂಡಲೇ ಕನ್ನಡ ಸಿನಿ ಪ್ರೇಕ್ಷಕರು ಅಭೂತಪೂರ್ವವಾಗಿ ಈ ಚಿತ್ರವನ್ನು ಸ್ವಾಗತಿಸಿ ಬೆಂಬಲಿಸಿದರು.

  ಮೇ 2ರಂದು ಭಾನುವಾರ ಸಂಜೆ 7.30 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ವಿನೋದ್ ಪ್ರಭಾಕರ್ ಅಭಿನಯದ ಈ ಕುತೂಹಲಕಾರಿ ಆಕ್ಷನ್ ಚಿತ್ರವಾಗಿದೆ.

  'ಶ್ಯಾಡೊ' ಕಥಾಹಂದರ

  ಇದರಲ್ಲಿ ಶ್ರೀಸಾಮಾನ್ಯನೊಬ್ಬ ತನ್ನ ನೆರಳು ತಪ್ಪಿಹೋಗಿದೆ ಎಂದು ಪೊಲೀಸರಿಗೆ ದೂರು ನೀಡುತ್ತಾನೆ. ಎಲ್ಲರನ್ನೂ ಈ ದೂರು ಗೊಂದಲದಲ್ಲಿ ಮುಳುಗಿಸುತ್ತದೆ. ಆದರೂ ಪೊಲೀಸರು ಈ ಕುರಿತು ತನಿಖೆ ನಡೆಸಲು ಪ್ರಾರಂಭಿಸುತ್ತಾರೆ. ಅದು ಸಂಭವನೀಯ ಹತ್ಯಾ ಪ್ರಯತ್ನವಾಗಿರುತ್ತದೆ. ಇದೊಂದು ರಿವೆಂಜ್ ಆಕ್ಷನ್ ಚಿತ್ರವಾಗಿದ್ದು ಪ್ರೀತಿ, ಕೌಟುಂಬಿಕ ಸೆಂಟಿಮೆಂಟ್ ಹಾಗೂ ಸಸ್ಪೆನ್ಸ್ ಹೊಂದಿದೆ.

  ಈ ಚಿತ್ರದಲ್ಲಿ ಆಕ್ಷನ್ ಹೀರೋ ವಿನೋದ್ ಪ್ರಭಾಕರ್, ಹಿಂದಿ ಹಾಗೂ ಪಂಜಾಬಿ ಚಿತ್ರಗಳ ಖ್ಯಾತ ನಟಿ ಶೋಭಿತಾ ರಾಣಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಗೌಡ ನಿರ್ದೇಶನದ ಈ ಚಿತ್ರವನ್ನು ಚಕ್ರವರ್ತಿ ಸಿ.ಎಚ್. ನಿರ್ಮಿಸಿದ್ದಾರೆ.

  English summary
  Vinod Prabhakar starrer 'Shadow' will premiere at World Television Premiere on May 2 in Zee Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X