ಅಂತು 'ಮಾಸ್ಟರ್ ಡ್ಯಾನ್ಸರ್' ವೇದಿಕೆ ಏರಿದ ಡ್ಯಾನ್ಸ್ ರಾಜ
Recommended Video

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಾಸ್ಟರ್ ಡ್ಯಾನ್ಸರ್' ಕಾರ್ಯಕ್ರಮಕ್ಕೆ ಈಗ ಇಬ್ಬರು ವಿಶೇಷ ಅತಿಥಿಗಳು ಆಗಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಇದೀಗ ಹಿರಿಯ ನಟಿ ಲೀಲಾವತಿ ಹಾಗೂ ಅವರ ಪುತ್ರ ನಟ ವಿನೋದ್ ರಾಜ್ ಭಾಗಿಯಾಗಿದ್ದಾರೆ.
ನಟ ವಿನೋದ್ ರಾಜ್ ಬಹಳ ಒಳ್ಳೆಯ ಡ್ಯಾನ್ಸರ್. ಈ ಕಾರಣದಿಂದ ಅವರು ಕಾರ್ಯಕ್ರಮದ ತೀರ್ಪುಗಾರ ಆಗಬೇಕು ಎಂಬ ಬಯಕೆ ಅಭಿಮಾನಿಗಳಲ್ಲಿ ಇತ್ತು. ಕಾರ್ಯಕ್ರಮದ ಪ್ರಾರಂಭದ ವೇಳೆ ಸಾಮಾಜಿಕ ಜಾಲತಾಣಗಳಲ್ಲಿಯೂ ವಿನೋದ್ ರಾಜ್ ಬಗ್ಗೆ ಕೂಗು ಇತ್ತು. ಆದರೆ ಈಗ ಅಂತಿಮವಾಗಿ ಈ ಕಾರ್ಯಕ್ರಮಕ್ಕೆ ವಿನೋದ್ ರಾಜ್ ಅವರನ್ನು ಕರೆ ತರುವಲ್ಲಿ 'ಮಾಸ್ಟರ್ ಡ್ಯಾನ್ಸರ್' ಟೀಂ ಯಶಸ್ವಿಯಾಗಿದೆ. ಕಾರ್ಯಕ್ರಮದ ಪೂರ್ಣ ತೀರ್ಪಗಾರರಾಗಿ ಮಾಡದಿದ್ದರು, ಅತಿಥಿ ತೀರ್ಪುಗಾರನಾಗಿ ಮಾಡಿದೆ.

ವಿನೋದ್ ರಾಜ್ ಅವರ ಈ ವಿಶೇಷ ಸಂಚಿಕೆಯ ಪ್ರೋಮೋ ಕೂಡ ಹೊರ ಬಂದಿದೆ. ಕಾರ್ಯಕ್ರಮದಲ್ಲಿ ಅವರ ಫೇಮಸ್ ಹಾಡಾಗಿರುವ 'ಅಮ್ಮ ಅಮ್ಮ..' ಹಾಡಿಗೆ ನೃತ್ಯ ಮಾಡಲಾಗಿದೆ. ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪೇಜ್ ನಲ್ಲಿ ವಿನೋದ್ ರಾಜ್ ಆಗಮನ ಕಂಡ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. ಅಂದಹಾಗೆ, ಈ ಸಂಚಿಕೆ ಇಂದು ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ.


Click it and Unblock the Notifications











