'ಮದುವೆ ಆಗಬೇಡಿ ಖುಷಿಯಾಗಿರಿ' ಎಂದು ಹಾಡಿದ ನಟ ನಾಗಚೈತನ್ಯ!
ಅಬ್ಬಬ್ಬ ಸದ್ಯಕ್ಕಂತೂ ನಟಿ ಸಮಂತಾ ಮತ್ತು ನಾಗಚೈತನ್ಯ ಏನೆ ಮಾಡಿದರು, ಏನೆ ಮಾತನಾಡಿದರು ಅದು ಅವರ ವಿಚ್ಛೇದನದ ವಿಚಾರಕ್ಕೆ ನೇರವಾಗಿ ಸುತ್ತಿಕೊಳ್ಳುತ್ತದೆ. ಇಬ್ಬರು ಬೇರಾದ ಬಳಿಕ, ತಮ್ಮ ಸಿನಿಮಾ ಮತ್ತು ನಿತ್ಯದ ಚಟುವಟಿಕೆಗಳಿಗಿಂತಲೂ, ವಿಚ್ಛೇದನದ ವಿಚಾರವಾಗಿ ಸುದ್ದಿ ಆಗುತ್ತಿದ್ದಾರೆ. ಅವರ ಪ್ರತಿ ಹೆಜ್ಜೆಯಲ್ಲೂ ಜನ ವಿಚ್ಛೇದನದ ವಿಚಾರವನ್ನೇ ಹುಡುಕುತ್ತಾರೆ.
ಇತ್ತೀಚೆಗಷ್ಟೇ ನಾಗ ಚೈತನ್ಯ ಬೇರೆ ಹುಡುಗಿಯ ಜೊತೆಗೆ ಓಡಾಟ ನಡೆಸಿದ್ದಾರೆ ಎನ್ನುವ ಸುದ್ದಿಗಳು ಹಬ್ಬಿದ್ದವು. ಜೊತೆಗೆ ಸಮಂತಾ, ನಾಗಚೈತನ್ಯ ವಿಚ್ಛೇದಕ್ಕೆ ಕಾರಣ ಏನು ಎನ್ನುವುದು ಕೂಡ ಚರ್ಚೆ ಆಗಿದೆ. ಸಮಂತಾ ಪರೋಕ್ಷವಾಗಿ ತಮ್ಮ ವಿಚ್ಚೇದನದ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಅವು ಕೂಡ ವೈರಲ್ ಆಗಿವೆ.
ಈಗ ಮತ್ತೆ ಈ ವಿಚಾರಕ್ಕೆ ನಟ ನಾಗಚೈತನ್ಯ ಪುಷ್ಟಿ ಕೊಟ್ಟಿದ್ದಾರೆ. ನಾಗಚೈತನ್ಯ "ಡೋಂಟ್ ಮ್ಯಾರಿ ಬೀ ಹ್ಯಾಪಿ" ಎಂದು ಹಾಡಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ನಾಗಚೈತನ್ಯ ಈ ಹಾಡು ಹಾಡಿದ್ದು ಮದುವೆ ಮುರಿದು ಕೊಂಡು ನಾಗಚೈತನ್ಯ ಸಂತೋಷವಾಗಿ ಇದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಇದೇ ಹಾಡು ನಾಗಚೈತನ್ಯ ಹಾಡಿದ್ದೇಕ?
ನಟ ನಾಗಚೈತ್ಯ ಸದ್ಯ ಬಂಗಾರಾಜು ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿ ಕೊಂಡಿದ್ದಾರೆ. ಇದೇ ಸಂಕ್ರಾಂತಿ ಹಬ್ಬಕ್ಕೆ ಚಿತ್ರ ರಿಲೀಸ್ ಆಗಲಿದೆ. ತೆಲುಗಿನ ಜೀ ವಾಹಿನಿಯಲ್ಲಿ ಬಂಗಾರಾಜು ಚಿತ್ರದ ಕುರಿತಾದ ಪ್ರಚಾರ ಕಾರ್ಯಕ್ರಮದಲ್ಲಿ ನಾಗಚೈನ್ಯ, ನಾಗಾರ್ಜುನ್ ಮತ್ತು ಚಿತ್ರ ತಂಡ ಭಾಗಿ ಆಗಿದೆ. ಈ ವೇಳೆ ಚಿತ್ರ ತಂಡವನ್ನು ಎರಡು ತಂಡಗಳನ್ನಾಗಿ ಮಾಡಿ ಹಾಡುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಆಗ ನಾಗಚೈತನ್ಯ ಈ ಹಾಡನ್ನು ಹಾಡುವ ಸಂದರ್ಭ ಎದುರಾಗಿದೆ. ಹಾಗ ವಿಧಿ ಇಲ್ಲದೆ ಇದೇ ಹಾಡನ್ನು ನಾಗಚೈತನ್ಯ ಮತ್ತು ತಂಡ ಹಾಡ ಬೇಕಾಯಿತು.

ಕಾಕತಾಳಿಯವಾಗಿ 'Don't Marry' ಎಂದ ನಾಗಚೈತ್ಯ!
ಸದ್ಯ ನಾಗಚೈತನ್ಯ ಮದುವೆ ಮುರಿದು ಬಿದ್ದಿದೆ ಹಾಗಾಗಿ ಈ ಹಾಡನ್ನು ಅವರು ಹಾಡಿದ್ದು ಒಂದು ರೀತಿ ಕಾಕತಾಳಿಯವೇ ಸರಿ. ಹಾಡಿ ಈ ಸ್ಪರ್ಧೆ ವಿಭಿನ್ನವಾಗಿದೆ. ಸ್ಕ್ರೀನ್ ಮೇಲೆ ಒಂದು ಫೊಟೋವನ್ನು ಹಾಕಲಾಗುತ್ತದೆ. ಆ ಫೊಟೋ ಯಾವ ಹಾಡಿಗೆ ಸಂಬಂಧ ಪಟ್ಟಿದ್ದು ಎಂದು ಗುರುತಿಸಿ ಆ ಹಾಡನ್ನು ಹಾಡಬೇಕು. ಈ ವೇಳೆ ನಾಗ ಚೈತನ್ಯ ಟೀಮ್‌ಗೆ, ನಾಗಾರ್ಜುನ್ ಅಭಿನಯದ 'ಮನ್ಮಥುಡು' ಚಿತ್ರದ 'ಡೋಂಟ್ ಮ್ಯಾರಿ, ಬೀ ಹ್ಯಾಪಿ' ಎನ್ನುವ ಹಾಡಿನ ಫೋಟೊ ಸಿಗುತ್ತದೆ. ಆಗ ನಾಗಚೈತನ್ಯ ತಮ್ಮ ತಂಡದೊಂದಿಗೆ ಸೇರಿ ಈ ಹಾಡನ್ನು ಹಾಡುತ್ತಾರೆ. ಆದರೆ ಈ ಹಾಡಿನ ಪ್ರೋಮೊ ರಿಲೀಸ್ ಆಗಿದ್ದೇ ತಡ ಎಲ್ಲೆ ವೈರಲ್ ಆಗಿದೆ. ನಾಗಚೈತನ್ಯ ಈ ಹಾಡು ಹಾಡಿದ್ದರ ಬಗ್ಗೆ ಎಲ್ಲರೂ ಅಚ್ಚರಿಗೊಂಡಿದ್ದಾರೆ.
ವೈರಲ್ ಆಗಿತ್ತು ನಾಗಚೈತನ್ಯ ದಕ್ಷ ನಗರ್ಕರ್ ವಿಡಿಯೋ!
ಬಂಗಾರ್‌ರಾಜು ನಟಿ ದಕ್ಷ ನಗರ್ಕರ್ ಹಾಗೂ ನಟ ನಾಗಚೈತನ್ಯ ವಿಡಿಯೋ ಒಂದು ಇತ್ತೀಚೆಗೆ ಸಿಕ್ಕಾ ಪಟ್ಟೆ ವೈರಲ್ ಆಗಿತ್ತು. ನಾಗಚೈತನ್ಯ ಅವರನ್ನು ನೋಡಿ ದಕ್ಷ ಸ್ಮೈಲ್ ಕೊಟ್ಟಿದ್ದರು. ಆ ನಗು ನೋಡಿ ನಾಗಚೈತನ್ಯ ಕರಿಗಿ ನೀರಾಗಿ ಬಿಟ್ಟರು. ಇಬ್ಬರ ಕಣ್ಣಿನ ನೋಟಗಳು ಬದಲಾಗಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಆ ವಿಡಿಯೋ ಹೊರ ಬರುತ್ತಿದ್ದ ಹಾಗೆ ಸಿಕ್ಕಾ ಪಟ್ಟೆ ವೈರಲ್ ಆಗಿತ್ತು. ಇದು ನಾಗಚೈತನ್ಯ ಬಗ್ಗೆ ಹೊಸ ಗಾಸಿಪ್ ಹಬ್ಬಿಸಿದೆ.

ಮತ್ತೊಂದು ಮದುವೆ ಆಗುತ್ತಾರ ನಾಗಚೈತನ್ಯ?
ಸಮಂತಾ ಮತ್ತು ನಾಗಚೈತನ್ಯ ದೂರಾಗಿ ಹೆಚ್ಚು ಸಮಯ ಕಳೆದಿಲ್ಲ. ಅದಾಗಲೇ ನಾಗಚೈತನ್ಯ ಹೆಸರು ಬೇರೆಯವರ ಜೊತೆಗೆ ಕೇಳಿ ಬರುತ್ತಿದೆ. ಸಮಂತಾ ಬಗ್ಗೆ ಈ ರೀತಿ ವಿಚಾರಗಳು ಕೇಳಿ ಬಂದಿಲ್ಲ. ಆದರೆ ನಾಗಚೈತನ್ಯ ವಿಚಾರದಲ್ಲಿ ಹೆಚ್ಚಾಗಿ ಬೇರೆ ನಟಿಯರ ಹೆಸರು ಕೇಳಿ ಬರುತ್ತಿದೆ. ಹಾಗಾಗಿ ನಾಗ ಚೈತನ್ಯ ಏನಾದರು ತೆರೆ ಮರೆಯಲ್ಲಿ ಮತ್ತೊಂದು ಮದುವೆಗೆ ಸಜ್ಜಾಗುತ್ತಿದ್ದಾರಾ ಎನ್ನುವ ಗುಸು, ಗುಸು ಕೂಡ ಕೇಳಿ ಬರುತ್ತಿದೆ.


Click it and Unblock the Notifications











