'ಬೃಂದಾವನ' ಧಾರಾವಾಹಿಯಿಂದ ಹೊರಬಿದ್ದಿದ್ದ ವಿಶ್ವನಾಥ್ ಹಾವೇರಿ: "ಏನಾಗಲಿ ಮುಂದೆ ಸಾಗು ನೀ" ಎಂದ ನಟ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಬೃಂದಾವನ' ಧಾರಾವಾಹಿ ಇತ್ತೀಚಿಗೆ ವಿಚಿತ್ರ ಕಾರಣಕ್ಕೆ ಸುದ್ದಿಯಾಗಿತ್ತು. ದಿಢೀರನೇ ಕತೆಯ ನಾಯಕ ಪಾತ್ರಧಾರಿ ಬದಲಾಗಿದ್ದರು. ಆಕಾಶ್ ಪಾತ್ರ ಮಾಡುತ್ತಿದ್ದ ವಿಶ್ವನಾಥ್ ಹಾವೇರಿ ಹೊರಬಂದು ವರುಣ್ ಆರಾಧ್ಯ ಆ ಪಾತ್ರ ನಿಭಾಯಿಸುತ್ತಿದ್ದಾರೆ.

ವಿಶ್ವನಾಥ್ ಹಾವೇರಿ ಇದ್ದಕ್ಕಿದಂತೆ ಧಾರಾವಾಹಿಯಿಂದ ಹೊರಬಂದಿದ್ದು ಸಾಕಷ್ಟು ಚರ್ಚೆ ಹುಟ್ಟಾಕ್ಕಿತ್ತು. ಸಾಕಷ್ಟು ಜನ ವೀಕ್ಷಕರು ಆಕಾಶ್ ಪಾತ್ರದಲ್ಲಿ ವಿಶ್ವನಾಥ್ ಅವರೇ ನಟಿಸಬೇಕು. ಪಾತ್ರಕ್ಕೆ ಅವ್ರು ಹೊಂದಿಕೊಂಡಿದ್ದರು. ದಿಢೀರನೆ ಬದಲಿಸಿದ್ದು ಸರಿಯಲ್ಲ ಎಂದಿದ್ದರು.

Vishwanath Ravindra Haveri indirectly reacts to his exit from brindavana serial

ಕತೆಯ ನಾಯಕ ಆಕಾಶ್ ಪಾತ್ರಧಾರಿ ವಿಶ್ವನಾಥ್ ಸ್ಕ್ರೀನ್‌ ಮೇಲೆ ಬಹಳ ಚಿಕ್ಕವರಂತೆ ಕಾಣುತ್ತಾರೆ. ನಾಯಕಿಗೆ ತಮ್ಮನಂತೆ ಕಾಣುತ್ತಾರೆ. ಇಬ್ಬರ ಜೋಡಿ ಚೆನ್ನಾಗಿ ಕಾಣುತ್ತಿಲ್ಲ ಎಂದು ಸೋಶಿಯಲ್‌ದಲ್ಲಿ ಕಾಮೆಂಟ್‌ಗಳು ಬಂದಿತ್ತು. ಇದೇ ಕಾರಣಕ್ಕೆ ವಿಶ್ವನಾಥ್ ಬದಲಿಗೆ ವರುಣ್ ಆರಾಧ್ಯ ಎಂಟ್ರಿ ಆಯಿತು ಎನ್ನುವ ಚರ್ಚೆ ನಡೀತಿದೆ. ಆದರೆ ಈ ಬಗ್ಗೆ ವಿಶ್ವನಾಥ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಯಾರ ಸಂಪರ್ಕಕ್ಕೂ ಸಿಗದೇ ಮುಂಬೈ ಸೇರಿದ್ದರು.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ಹಾಡು ಹಾಡಿ ವಿಶ್ವನಾಥ್ ಹಾವೇರಿ ಪೋಸ್ಟ್ ಮಾಡಿದ್ದಾರೆ. 'ಮುಸ್ಸಂಜೆ ಮಾತು' ಚಿತ್ರದ ಸೂಪರ್ ಹಿಟ್ 'ಏನಾಗಲಿ ಮುಂದೆ ಸಾಗು ನೀ ಬಯಸಿದ್ದೆಲ್ಲಾ ಸಿಗದು ಬಾಳಲಿ' ಹಾಡು ಹಾಡಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಕೆಲವರು ವಿಶ್ವನಾಥ್, ಸದ್ಯದ ಪರಿಸ್ಥಿತಿಯಲ್ಲಿ ತಮ್ಮ ನಿಜಜೀವನಕ್ಕೆ ಹತ್ತಿರವಾಗುವಂತಿರುವ ಹಾಡನ್ನು ಹಾಡಿ ಪೋಸ್ಟ್ ಮಾಡಿದ್ದಾರೆ ಎನ್ನುತ್ತಿದ್ದಾರೆ. ಈ ಮೂಲಕ ನಾವು ಬಯಸಿದ್ದು ಸಿಗಲ್ಲ, ಮುಂದೆ ಸಾಗೋಣ ಎಂದಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸಾಕಷ್ಟು ಜನ ಕಾಮೆಂಟ್ ಬಾಕ್ಸ್‌ನಲ್ಲಿ ವಿಶ್ವನಾಥ್ ಗಾಯನವನ್ನು ಮೆಚ್ಚಿಕೊಂಡಿದ್ದಾರೆ. 'ಬೃಂದಾವನ' ಧಾರಾವಾಹಿ ಕತೆಗೆ ನೀವೇ ಸೂಕ್ತ. ಮತ್ತೆ ವಾಪಸ್ ಬನ್ನಿ ಎಂದು ಮನವಿ ಮಾಡುತ್ತಿದ್ದಾರೆ. ಯಾಕೆ ದಿಢೀರನೆ ಧಾರಾವಾಹಿ ಬಿಟ್ಟು ಹೊರಬಂದಿದ್ದು. ನೀವು ಆಕಾಶ್ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಂಡಿದ್ದಿರಿ ಎನ್ನುತ್ತಿದ್ದಾರೆ.

ಇದಕ್ಕೂ ಮುನ್ನ ವಿಶ್ವನಾಥ್ ತಂದೆ ರವೀಂದ್ರ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದರು. "ವಿಶ್ವನಾಥ್ ಸದ್ಯ ಇಂಡಿಯನ್ ಐಡೆಲ್‌ಗೋಸ್ಕರ ಮುಂಬೈನಲ್ಲಿ ಇದ್ದಾನೆ. ನಾವು ಸಹ ಆತನನ್ನು ಡಿಸ್ಟರ್ಬ್ ಮಾಡ್ತಿಲ್ಲ. ಅವನ ಮೊದಲ ಆದ್ಯತೆ ಸಂಗೀತ. ಸ್ವಂತವಾಗಿ ವಿಡಿಯೋ ಆಲ್ಬಮ್‌ ಮಾಡುತ್ತಿದ್ದಾನೆ. ಇದರ ನಡುವೆ ಧಾರಾವಾಹಿ ಬಂತು. ನಮಗೂ ಆತನನ್ನು ಕೈಬಿಟ್ಟಿದ್ದು ಯಾಕೆ ಎಂದು ಕಾರಣ ಗೊತ್ತಿಲ್ಲ" ಎಂದಿದ್ದರು.

"ವಿಶ್ವನಾಥ್‌ಗೆ ನಟನೆ ಹೊಸದು. ಇದೆಲ್ಲಾ ನಮಗೆ ಗೊತ್ತಿಲ್ಲ. ಅವ್ರು ಕರೆದ್ರು ನಾವು ಹೋದ್ವಿ. ಅವನ್ನದ್ದೇ ಲೈವ್‌ಬ್ಯಾಂಡ್ ಇದೆ. ಅದರ ಕೆಲಸಗಳು ನಡೀತಿತ್ತು. ನಮಗೆ ಈ ಬಗ್ಗೆ ಯಾವುದೇ ವಿಷಾದ ಇಲ್ಲ. "ಎಲ್ಲಾ ಅವರದ್ದೇ. ನಮ್ಮದೇನು ಇರಲ್ಲ. ಹೋಗಬೇಕು, ನಟಿಸಬೇಕು ಅಷ್ಟೆ. ನೋಡಲು ಚಿಕ್ಕವನಂತೆ ಕಾಣುತ್ತಾನೆ ಎನ್ನುವ ಕಾಮೆಂಟ್ ನೋಡಿದ್ದೇವೆ. ಅವರೇ ಆಯ್ಕೆ ಮಾಡಿ ಈಗ ಬೇರೆ ಕಾರಣ ಕೊಟ್ಟರೆ ಏನು ಮಾಡುವುದು" ಎಂದು ಹೇಳಿದ್ದರು.

ಮೂಲತಃ ಗಾಯಕರಾಗಿರುವ ವಿಶ್ವನಾಥ್ ಮೊದಲಿಗೆ 'ಹಾಡು ಕರ್ನಾಟಕ' ರಿಯಾಲಿಟಿ ಶೋನಲ್ಲಿ ಭಾಗಿ ಆಗಿದ್ದರು. ಕೊರೊನಾ ಹಾವಳಿಯಿಂದ ಆ ಶೋ ಅರ್ಧಕ್ಕೆ ನಿಂತಿತ್ತು. ಬಳಿಕ ಬಿಗ್‌ಬಾಸ್ ಸೀಸನ್ 8ಕ್ಕೆ ಪ್ರವೇಶ ಪಡೆದಿದ್ದರು. 2 ತಿಂಗಳ ಕಾಲ ದೊಡ್ಮನೆಯಲ್ಲಿ ಇದ್ದರು. ಅದು ದೊಡ್ಡ ಟರ್ನಿಂಗ್ ಪಾಯಿಂಟ್ ಆಗಿತ್ತು. ಬಳಿಕ 'ಬೃಂದಾವನ' ಧಾರಾವಾಹಿಯ ನಾಯಕ ಆಕಾಶ್ ಆಗಿ ನಟಿಸೋ ಅವಕಾಶ ಸಿಕ್ಕಿತ್ತು.

35 ಜನರ ಕೂಡು ಕುಟುಂಬದ ಮುದ್ದಿನ ಮಗನಾಗಿ ವಿಶ್ವನಾಥ್‌ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. 25 ಎಪಿಸೋಡ್‌ಗಳಲ್ಲಿ ನಟಿಸಿದ್ದರು. ಆದರೆ ದಿಢೀರನೆ ಅವರ ಪಾತ್ರಕ್ಕೆ ವರುಣ್ ಆರಾಧ್ಯ ಎಂಟ್ರಿ ಕೊಟ್ಟಿದ್ದರು. ಇದು ವೀಕ್ಷಕರಿಗೂ ಅಚ್ಚರಿ ಉಂಟು ಮಾಡಿತ್ತು.

More from Filmibeat

English summary
The Reason Why Vishwanath Ravindra Haveri Quit brindavana serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X