ಎರಡನೇ ಮದುವೆಯಾಗಿ ನಾಲ್ಕು ವರ್ಷದ ನಂತರ ಎರಡನೇ ಬಾರಿ ತಂದೆಯಾದ ಬಿಗ್ ಬಾಸ್ ಸ್ಫರ್ಧಿ

''ಬಿಗ್ ಬಾಸ್‌''ಗೆ ಅದಕ್ಕೆ ಆದ ಇತಿಹಾಸ ಇದೆ. ಬೇರೆ ಬೇರೆ ಭಾಷೆಯಲ್ಲಿ ಇಲ್ಲಿಯವರೆಗೆ ಹಲವು ವರ್ಷಗಳ ಕಾಲ ''ಬಿಗ್ ಬಾಸ್'' ಪ್ರಸಾರವನ್ನು ಕಂಡಿದೆ. ಆ ಪೈಕಿ ಸಲ್ಮಾನ್ ಖಾನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ''ಬಿಗ್ ಬಾಸ್'' ಬೇರೆ ಎಲ್ಲಾ ಭಾಷೆಗಳಲ್ಲಿನ ''ಬಿಗ್ ಬಾಸ್‌''ಗಿಂತ ವಯಸ್ಸಿನಲ್ಲಿ ಹಿರಿಯ. ಹಿಂದಿಯಲ್ಲಿ ''ಬಿಗ್ ಬಾಸ್'' 19 ವಸಂತ ಪೂರೈಸಿದ್ದರೆ ಕನ್ನಡದಲ್ಲಿ ''ಬಿಗ್ ಬಾಸ್‌''ಗೆ ಈಗ ಹದಿಮೂರನೇ ಹರೆಯಕ್ಕೆ ಕಾಲಿಡುತ್ತಿದೆ.

ಇನ್ನೂ ತೆಲುಗು ಮತ್ತು ತಮಿಳು ''ಬಿಗ್ ಬಾಸ್'' 09 ವರ್ಷದಾದ್ದರೆ ಮಲಯಾಳಂನ ''ಬಿಗ್‌ ಬಾಸ್'' ಕಳೆದ 07 ವರ್ಷಗಳಿಂದ ಪ್ರಸಾರವಾಗುತ್ತಿದೆ. ಇಂತಹ ಹಿನ್ನೆಲೆ ಹೊಂದಿರುವ ಈ ''ಬಿಗ್ ಬಾಸ್'' ಮನೆಗೆ ಇಲ್ಲಿಯವರೆಗೆ ಹಲವಾರು ಜನ ಆಯಾ ಭಾಷೆಗಳಲ್ಲಿ ಸ್ಫರ್ಧಿಯಾಗಿ ಹೋಗಿದ್ದಾರೆ. ಕೆಲವರು ಗೆದ್ದು ಸೋತಿದ್ದಾರೆ. ಇನ್ನೂ ಕೆಲವರು ಸೋತು ಗೆದ್ದಿದ್ದಾರೆ. ಆ ಪೈಕಿ ವಿವಿಯನ್ ಡಿಸೇನಾ ಕೂಡ ಒಬ್ಬರು.

Twice the Blessing Bigg Boss Vivian Dsena and Nouran Aly Welcome a Baby Boy

ಇವರ ತಂದೆ ಕ್ರಿಶ್ಚಿಯನ್, ತಾಯಿ ಹಿಂದೂ. ವಿಶೇಷ ಅಂದರೆ 2019ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು ವಿವಿಯನ್ ಡಿಸೇನಾ. ''ಪ್ಯಾರ್ ಕೀ ಯೇ ಏಕ್ ಕಹಾನಿ''..''ಮಧುಬಾಲ - ಏಕ್ ಇಷ್ಕ್ ಏಕ್ ಜುನೂನ್'' ..''ಶಕ್ತಿ - ಅಸ್ತಿತ್ವ ಕೆ ಎಹ್ಸಾಸ್ ಕೀ''..''ಸಿರ್ಫ್ ತುಮ್'' ಇವರ ಕೆಲ ಜನಪ್ರಿಯ ಧಾರಾವಾಹಿಗಳು.

ಇನ್ನು 2024-25ರಲ್ಲಿ ಹಿಂದಿಯ ''ಬಿಗ್ ಬಾಸ್'' ಸೀಸನ್ 18ರಲ್ಲಿ ಭಾಗವಹಿಸಿದ್ದ ವಿವಿಯನ್ ಮನೆಯಲ್ಲಿ 107 ದಿನ ಇದ್ದರು. ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು.

ಇಂಥಾ ವಿವಿಯನ್ ಡಿಸೇನಾ ತಮ್ಮ ಅಭಿಮಾನಿಗಳಿಗೆ ಮತ್ತು ತಮ್ಮ ಸೋಶಿಯಲ್ ಮೀಡಿಯಾ ಹಿಂಬಾಲಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಎರಡನೇ ಬಾರಿ ತಂದೆಯಾಗಿದ್ಧಾರೆ. ಮುದ್ದಾದ ಗಂಡು ಮಗುವನ್ನು ತಮ್ಮ ಪ್ರಪಂಚಕ್ಕೆ ಸ್ವಾಗತಿಸಿದ್ದಾರೆ.

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ವಿವಿಯನ್ ಸ್ವಲ್ಪ ಸಮಯದವರೆಗೆ ಲೈಮ್‌ಲೈಟ್‌ನಿಂದ ದೂರವಿದ್ದೆ... ಅದಕ್ಕೊಂದು ಬಲವಾದ ಕಾರಣವಿತ್ತು. ಕೆಲವು ಕಥೆಗಳನ್ನು ಜಗತ್ತಿಗೆ ಸಾರುವ ಮೊದಲು, ಅದನ್ನು ನಾವು ಅನುಭವಿಸಬೇಕು ಎಂದು ಹೇಳಿದ್ಧಾರೆ.

Twice the Blessing Bigg Boss Vivian Dsena and Nouran Aly Welcome a Baby Boy

ಸದ್ಯ ವಿವಿಯನ್ ಡಿಸೇನಾ ಅವರಿಗೆ ಹಲವರು ಶುಭಾಶಯ ಕೋರುತ್ತಿದ್ಧಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲ ರುಬಿನಾ ದಿಲೈಕ್.. ಭಾರತಿ ಸಿಂಗ್.. ಅಲಿ ಗೋನಿ.. ದ್ರಷ್ಟಿ ಧಾಮಿ ಸೇರಿದಂತೆ ಕಿರುತೆರೆಯ ಹಲವರು ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಅಂದ್ಹಾಗೇ ವಿವಿಯನ್ ಡಿಸೇನಾಗೆ ಇದು ಎರಡನೇ ಮದುವೆ. ಈ ಮೊದಲು ಕಿರುತೆರೆಯ ಚೆಲುವೆ ವಾಹ್ಬಿಜ್ ದೊರಾಬ್ಜಿ ಅವರನ್ನು ವಿವಿಯನ್ ಮದುವೆಯಾಗಿದ್ದರು.''ಪ್ಯಾರ್ ಕೀ ಯೇ ಏಕ್ ಕಹಾನಿ'' ಧಾರಾವಾಹಿಯಲ್ಲಿ ಜೊತೆಯಲ್ಲಿ ಅಭಿನಯಿಸುತ್ತಾ ಪ್ರೀತಿಯಲ್ಲಿ ಬಿದ್ದಿದ್ದ ಇಬ್ಬರು 2013ರ ಜನವರಿ 7ರಂದು ಅದ್ಧೂರಿಯಾಗಿ ಮದುವೆಯ ಬಂಧನಕ್ಕೊಳಗಾಗಿದ್ದರು.

ಆದರೆ ಈ ಸಂಬಂಧ ಕೇವಲ ಮೂರು ವರ್ಷಕ್ಕೆ ಹಳಿಸಿತು. 2016ರಲ್ಲಿ ಬೇರೆಯಾದ ಇಬ್ಬರು ಪ್ರತ್ಯೇಕವಾಗಿ ವಾಸ ಮಾಡಲು ಶುರು ಮಾಡಿದರು. 2017ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರಾದರೂ ಕಾನೂನು ಹೋರಾಟ ನಾಲ್ಕು ವರ್ಷದವರೆಗೆ ನಡೆಯಿತು. ಕೊನೆಯದಾಗಿ 2021ರ ಡಿಸೆಂಬರ್ 18ರಂದು ವಾಹ್ಬಿಜ್ ದೊರಾಬ್ಜಿ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆಯುವಲ್ಲಿ ವಿವಿಯನ್ ಯಶಸ್ವಿಯಾದರು.

ವಾಹ್ಬಿಜ್ ದೊರಾಬ್ಜಿ ಅವರಿಂದ ದೂರವಾದ ಮರು ವರ್ಷವೇ ತಮ್ಮ ಸಂದರ್ಶನಕ್ಕೆ ಬಂದಿದ್ದ ಈಜಿಪ್ಟ್ ಮೂಲದ ಪತ್ರಕರ್ತೆ ನೂರನ್ ಅಲಿ ಅವರಿಗೆ ಮನಸೋತ ವಿವಿಯನ್ 2022ರಲ್ಲಿ ಮದುವೆಯಾದರು. ಮರು ವರ್ಷ ಹೆಣ್ಣು ಮಗುಗೆ ಜನ್ಮವನ್ನು ನೀಡಿದ ವಿವಿಯನ್ ಮತ್ತು ನೂರನ್ ಅಲಿ ತಾವು ಪೋಷಕರಾಗಿ ಬಡ್ತಿ ಪಡೆದಿರುವ ವಿಚಾರವನ್ನು ಒಂದು ವರ್ಷ ಮುಚ್ಚಿಟ್ಟಿದ್ದರು. ಇವರಿಗೆ ಮಗು ಆದ ವಿಚಾರ ಹೊರ ಜಗತ್ತಿಗೆ ಗೊತ್ತಾಗಿದ್ದು ಇವರು ''ಬಿಗ್ ಬಾಸ್'' ಮನೆಯಲ್ಲಿದ್ದಾಗಲೇ.

ಹೀಗೆ. ತಮ್ಮ ಖಾಸಗಿ ಜೀವನವನ್ನು ಯಾವಾಗಲೂ ಗೌಪ್ಯವಾಗಿಡಲು ಬಯಸುವ ವಿವಿಯನ್ ಡಿಸೇನಾ ಪತ್ನಿ ನೌರನ್ ಅಲಿ ಅವರಿಗೆ ಈಗ ಗಂಡು ಮಗು ಜನಿಸಿದೆ ಎಂಬ ಸಿಹಿ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ.

More from Filmibeat

English summary
Bigg Boss star Vivian Dsena and wife Nouran Aly have welcomed their second child. Get the details on the couple’s newest addition here!
Read more about: biggboss pregnant ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X