ನಟಿ ಚಿತ್ರಾ ಅನುಮಾನಾಸ್ಪದ ಸಾವು: ವರದಿ ಸಲ್ಲಿಸಿದ ಪೊಲೀಸರು

ತಮಿಳು ಟಿವಿ ಧಾರಾವಾಹಿ ನಟಿ ವಿಜೆ ಚಿತ್ರಾರ ಮೃತ ದೇಹವು ಕೆಲವು ತಿಂಗಳ ಹಿಂದೆ ಚೆನ್ನೈನ ಐಶಾರಾಮಿ ಹೋಟೆಲ್‌ ಕೋಣೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

2020 ಡಿಸೆಂಬರ್ 09 ರಂದು ವಿಜೆ ಚಿತ್ರಾ ಸಾವಿನ ಸುದ್ದಿ ಹೊರಬಿದ್ದಿತ್ತು. ಚಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಪೊಲೀಸರು ಸಹ ಇದೊಂದು ಆತ್ಮಹತ್ಯೆಯೇ ಎಂದು ವರದಿ ನೀಡಿದ್ದಾರೆ. ಆದರೆ ಆತ್ಮಹತ್ಯೆಗೆ ಕಾರಣ ಏನೆಂಬ ಪ್ರಶ್ನೆಗೂ ಸಹ ವರದಿಯಲ್ಲಿ ಉತ್ತರ ನೀಡಿದ್ದಾರೆ ಚೆನ್ನೈ ಪೊಲೀಸರು.

ಸಾವಿನ ದಿನ ಚಿತ್ರಾ ತನ್ನ ತಾಯಿಯೊಂದಿಗೆ ಜಗಳ ಮಾಡಿದ್ದರು ಎಂಬ ಅಂಶ ಬೆಳಕಿಗೆ ಬಂದಿತ್ತು. ಅದಾದ ಬಳಿಕ ಚಿತ್ರಾಳ ಪತಿ ಚಿತ್ರೀಕರಣದ ಸೆಟ್‌ಗೆ ಬಂದು ಚಿತ್ರಾ ಜೊತೆ ಜಗಳ ಮಾಡಿದ್ದರು ಎಂಬ ಅಂಶ ಗೊತ್ತಾಗಿತ್ತು. ಚಿತ್ರಾಗೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಇತ್ತು ಎಂಬ ಸುದ್ದಿಯೂ ಹರಿದಾಡಿತ್ತು. ಹಾಗಾಗಿ ಚಿತ್ರಾ ಸಾವಿಗೆ ಕಾರಣ ಯಾರೆಂಬ ಕುತೂಹಲ ಏರ್ಪಟ್ಟಿತ್ತು.

 VJ Chitra Suicide Case: Police Submit Investigation Report

ಪ್ರಕರಣದ ತನಿಖೆ ನಡೆಸಿ ತನಿಖಾ ವರದಿಯನ್ನು ಮದ್ರಾಸ್ ಹೈಕೋರ್ಟ್‌ ಗೆ ಚೆನ್ನೈ ಪೊಲೀಸರು ಸಲ್ಲಿಸಿದ್ದು, ಚಿತ್ರಾ ಳ ಪತಿ ಹೇಮಂತ್ ಕುಮಾರ್ ಅವರ ಸಂದೇಹ ಪ್ರವೃತ್ತಿಯಿಂದ ಮನನೊಂದು ಚಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತನಿಖೆಯ ವೇಳೆಯೇ ಡಿಸೆಂಬರ್ 15 ರಂದು ಪೊಲೀಸರು ಹೇಮಂತ್ ಕುಮಾರ್ ಅನ್ನು ಬಂಧಿಸಿದ್ದರು. ಚಿತ್ರಾ ಗೆ ವ್ಯಕ್ತಿಯೊಬ್ಬನೊಂದಿಗೆ ಅಕ್ರಮ ಸಂಬಂಧ ಇದೆ ಎಂದು ಹೇಮಂತ್ ಶಂಕಿಸಿ, ಸಾಕಷ್ಟು ಬಾರಿ ಜಗಳವಾಡಿದ್ದು ತನಿಖೆಯಿಂದ ಗೊತ್ತಾಗಿತ್ತು. ಚಿತ್ರಾ ಆತ್ಮಹತ್ಯೆ ಮಾಡಿಕೊಂಡ ದಿನವೂ ಸಹ ಹೇಮಂತ್ ಆಕೆಯೊಂದಿಗೆ ಜಗಳವಾಡಿ ಹೋಟೆಲ್‌ನಿಂದ ಹೊರಗೆ ಹೋಗಿದ್ದ ಎಂದು ಪೊಲೀಸರು ವರದಿಯಲ್ಲಿ ಹೇಳಿದ್ದಾರೆ.

More from Filmibeat

English summary
Chennai police submit investigation report to court in VJ Chitra suicide case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X